ಕುರಿ ಮೇಯಿಸಲು ಆಭರಣ ಹಾಕಿಕೊಂಡು ಹೋಗಿದ್ದ ವೃದ್ಧೆಯ ಜೀವ ತೆಗೆದು, ಚಿನ್ನಾಭರಣ ದೋಚಿದವ ಅರೆಸ್ಟ್​ ಆಗಿದ್ದು ಹೇಗೆ?

ಯಾವ ಸುಳಿವು ಇಲ್ಲದ ಕೇಸ್ ಬೆನ್ನುಬಿದ್ದ ಚನ್ನರಾಯಪಟ್ಟಣ ಪೊಲೀಸರು ದನದ ವ್ಯಾಪಾರಕ್ಕೆ ಬಂದವನ ಮೇಲೆ ಇದ್ದ ಸಣ್ಣದೊಂದು ಅನುಮಾನದ ಜಾಡು ಹಿಡಿದು ಹೋದಾಗ ವೃದ್ದೆಯ ಕೊಲೆ ಕೇಸ್ ಬಯಲಾಗಿದೆ.

ಕುರಿ ಮೇಯಿಸಲು ಆಭರಣ ಹಾಕಿಕೊಂಡು ಹೋಗಿದ್ದ ವೃದ್ಧೆಯ ಜೀವ ತೆಗೆದು, ಚಿನ್ನಾಭರಣ ದೋಚಿದವ ಅರೆಸ್ಟ್​ ಆಗಿದ್ದು ಹೇಗೆ?
ವೃದ್ಧೆಯ ಜೀವ ತೆಗೆದು, ಚಿನ್ನಾಭರಣ ದೋಚಿದವ ಅರೆಸ್ಟ್​ ಆಗಿದ್ದು ಹೇಗೆ?
Follow us
ಮಂಜುನಾಥ ಕೆಬಿ
| Updated By: ಸಾಧು ಶ್ರೀನಾಥ್​

Updated on: Dec 20, 2023 | 6:20 PM

ಆ ಊರಿನ ಜನರು ಅಕ್ಷರಶಃ ಹೆದರಿದ್ದಾರೆ. ಮನೆಯಿಂದ ಆಚೆ ಬರೋಕೆ ಹೆಂಗಸರು ಭಯ ಪಡ್ತಿದ್ದಾರೆ, ಜಮೀನಿನ ಬಳಿಗೆ ಹೋಗೋಕೆ ಆಗ್ತಿಲ್ಲ, ಒಡವೆ ಧರಿಸಿ ಆಚೆ ಕಡೆ ಓಡಾಡೋಕೆ ಸಾಧ್ಯವಾಗ್ತಿಲ್ಲ ಅದೇನೋ ಭಯ….ಅದ್ಯಾಕೋ ಆತಂಕ..ಇದಕ್ಕೆಲ್ಲಾ ಕಾರಣವಾಗಿದ್ದು ನವೆಂಬರ್ 19ರಂದು ನಡೆದಿದ್ದ ಅದೊಂದು ಘಟನೆ, ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ಶೆಟ್ರುಕೊಪ್ಪಲು ಗ್ರಾಮದ ಸರೋಜಮ್ಮ ಕುಟುಂಬ ಬಡತನದಲ್ಲಿದ್ದರೂ ಹಸು ಕರು ಅಂತಾ ಸಾಕಿಕೊಂಡು ಇದ್ದ ಸ್ವಲ್ಪ ಜಮೀನಿನಲ್ಲಿ ಕೃಷಿ ಮಾಡಿಕೊಂಡು ಚನ್ನಾಗಿದ್ರು. ವರ್ಷದ ಹಿಂದೆ ಸರೋಜಮ್ಮನ ಪತಿ ಮೃತಪಟ್ಟಿದ್ದರಿಂದ ಬೆಂಗಳೂರಿನಲ್ಲಿದ್ದ ಮಗ ವಾಪಸ್ ಬಂದು ತಾಯಿ ಜೊತೆ ಊರಿನಲ್ಲೇ ವಾಸವಾಗಿದ್ದ.

ಅದೆಷ್ಟೇ ಕಷ್ಟ ಆದರೂ ಕೂಡ ಅಮ್ಮನನ್ನ ಎಂದೂ ಮನೆ ಕೆಲಸ ಅದೂ ಇದು ಅಂತಾ ಕೆಲಸ ಮಾಡಿಸದೆ ತಾನು ಮತ್ತು ತನ್ನ ಪತ್ನಿ ಇಬ್ಬರೂ ಸೇರಿ ಕೆಲಸ ಮಾಡಿಕೊಂಡಿದ್ದರು. ಅಕಸ್ಮಾತ್ ತಾವು ಎಲ್ಲಿಗಾದರೂ ಹೋದ್ರೆ ಮಾತ್ರ ಮನೆಯಲ್ಲಿದ್ದ ಜಾನುವಾರುಗಳನ್ನ ಮೇಯಿಸೋದು ಅವುಗಳಿಗೆ ನೀರುಣಿಸೋ ಕೆಲಸ ಸರೋಜಮ್ಮನದ್ದಾಗುತ್ತಿತ್ತು. ಹೀಗಿರುವಾಗ ನವೆಂಬರ್ 19ರ ಭಾನುವಾರ ಹೊಳೆನರಸೀಪುರ ತಾಲ್ಲೂಕಿನ ಹಳ್ಳಿಮೈಸೂರಿನಲ್ಲಿ ಪತ್ನಿಯ ಸಂಬಂಧಿಕರೊಬ್ಬರ ಮನೆಯ ಗೃಹಪ್ರವೇಶ ಇದ್ದುದರಿಂದ ಪತ್ನಿ ಜೊತೆಗೆ ಮಗ ನಾರಾಯಣ ಕೂಡ ಹೋಗಿದ್ದ.

ಮನೆಯಲ್ಲಿ ಬೇರೆ ಯಾರೂ ಇಲ್ಲದ ಕಾರಣ ಅಂದು ಸರೋಜಮ್ಮನೇ ತನ್ನ ಹಸುಗಳನ್ನ ಜಮೀನಿನ ಕಡೆಗೆ ಮೇಯಿಸಲು ಕರೆದುಕೊಂಡು ಹೋಗಿದ್ದರು ಅಷ್ಟೇ. ಮಧ್ಯಾಹ್ನ 1-30ಕ್ಕೆಲ್ಲಾ ಕೆರೆ ಏರಿಯ ಕಡೆಗೆ ಹೋದಾಕೆ ಕೇವಲ ಎರಡು ಗಂಟೆ ಅಂತರದಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ರು. ಅದೇ ದಾರಿಯಲ್ಲಿ ಹೋಗುತ್ತಿದ್ದವರಾರೋ ಮರದ ಕೆಳಗೆಲ್ಲೋ ಮಹಿಳೆ ಬಿದ್ದಿರೋದನ್ನ ನೋಡಿದಾಗ ನಡೆದಿರೋ ಅನಾಹುತ ಅರಿವಿಗೆ ಬಂದಿತ್ತು. ತಲೆಗೆ ಗಂಭೀರ ಸ್ವರೂಪದ ಗಾಯವಾಗಿ ಕಿವಿಯಿಂದ ರಕ್ತ ಸೋರುತ್ತಿತ್ತು.

ಕಿವಿಯಲ್ಲಿದ್ದ ಓಲೆ, ಕೊರಳಿನಲ್ಲಿದ್ದ ಸರ.. ಯಾವುದೂ ಕೂಡ ಮೈಮೇಲೆ ಇರಲಿಲ್ಲ. ಅಲ್ಲಿಗೆ ಯಾರೋ ಹಂತಕರು ಒಡವೆ ಸಲುವಾಗಿ 65 ವರ್ಷ ಪ್ರಾಯದ ಸರೋಜಮ್ಮರಿಗೆ ಮನಬಂದಂತೆ ಥಳಿಸಿ ಕೊಲೆ ಮಾಡಿ ಚಿನ್ನದ ಆಭರಣ ಕಸಿದುಕೊಂಡು ಹೋಗಿರೋದು ಅಲ್ಲಿ ಗೊತ್ತಾಗಿ ಹೋಗಿತ್ತು. ಕೂಡಲೆ ಊರ ಜನರು ಅರಕಲಗೂಡು ಪೊಲೀಸರಿಗೆ ವಿಚಾರ ಮುಟ್ಟಿಸಿದ್ದಾರೆ.

ಸ್ಥಳಕ್ಕೆ ಬಂದ ಪೊಲೀಸ್ ಅಧಿಕಾರಿಗಳು ಸ್ಥಳ ಮಹಜರ್ ನಡೆಸಿ ಕೊಲೆ ಕೇಸ್ ದಾಖಲಿಸಿಕೊಂಡು ತನಿಖೆಗಿಳಿದಿದ್ದರು. ವರ್ಷದ ಹಿಂದೆ ತಂದೆಯನ್ನ ಕಳೆದುಕೊಂಡಿದ್ದ ಮಗ ಇದೀಗ ತಾಯಿಯ ಬರ್ಬರ ಹತ್ಯೆಯಿಂದ ಬೆಚ್ಚಿಬಿದ್ದಿದ್ದ. ಮಗ ನೀಡಿದ ದೂರು ಸ್ವೀಕಾರ ಮಾಡಿದ ಪೊಲೀಸರು ತನಿಖೆಗಿಳಿದಿದ್ರು. ಅತ್ತ ಚಿನ್ನಕ್ಕಾಗಿ ನಡೆದು ಹೋದ ಆ ಬರ್ಬರ ಹತ್ಯೆಯ ಸುತ್ತಮುತ್ತಲ ಊರಿನ ಜನರನ್ನು ಬೆಚ್ಚಿಬೀಳುವಂತೆ ಮಾಡಿ, ಈಗಲೂ ಕೂಡ ಜನರು ಮನೆಯಿಂದ ಹೊರ ಬರಲು ಭಯ ಪಡುವಂತೆ ಮಾಡಿದೆ.

ಸಣ್ಣ ಸುಳಿವೂ ಬಿಡದೆ ನಡೆದು ಹೋಗಿತ್ತು ವೃದ್ದೆ ಸರೋಜಮ್ಮ ಹತ್ಯೆ: ವೃದ್ದೆ ಸರೋಜಮ್ಮ ಎಂದೂ ಕೂಡ ದನಕರುಗಳನ್ನ ಮೇಯಿಸಲು ಜಮೀನು ಬಳಿ ಹೋಗ್ತಿರಲಿಲ್ಲ. ವಯಸ್ಸಾದ ತಾಯಿಯ ಕೈಯಲ್ಲಿ ಕೆಲಸ ಮಾಡಿಸಬಾರದು ಅಂತಾ ಮಗನೇ ಎಲ್ಲವನ್ನು ನೋಡಿಕೊಳ್ತಿದ್ದ. ಆದ್ರೆ ಅಂದು ಗೃಹ ಪ್ರವೇಶದ ನಿಮಿತ್ತ ಬೇರೆ ಊರಿಗೆ ಪತ್ನಿ ಸಮೇತ ಹೋಗಿದ್ದರಿಂದ ತಾಯಿಯೇ ಆ ಕೆಲಸ ಮಾಡಬೇಕಾಗಿತ್ತು. ಅದಕ್ಕಾಗಿ ಜಮೀನಿನ ಬಳಿ ಹೋಗಿದ್ದ ವೃದ್ದೆ ನಿಗೂಢ ರೀತಿಯಲ್ಲಿ ಕೊಲೆಯಾಗಿ ಹೋಗಿದ್ರು.

ಯಾರೊಂದಿಗೂ ಜಗಳ ಇಲ್ಲ, ಯಾರೊಟ್ಟಿಗೂ ದ್ವೇಷ ಇಲ್ಲ, ಮೈತುಂಬಾ ಭಾರೀ ಬೆಲೆಬಾಳುವ ಚಿನ್ನಾಭರಣವೂ ಕೂಡ ಇರ್ಲಿಲ್ಲ. ಇದ್ದ ಅಲ್ಪಸ್ವಲ್ಪ ಚಿನ್ನಾಭರಣದ ಮೇಲೆ ಕಣ್ಣು ಹಾಕಿದ್ದ ಹಂತಕ ಅಲ್ಲಿ ಚಿನ್ನಕ್ಕಾಗಿ ಅಮಾಯಕಿಯ ಪ್ರಾಣ ತೆಗೆದಿದ್ದ. ನಿರ್ಜನ ಪ್ರದೇಶದಲ್ಲಿ ಸಿಕ್ಕ ವೃದ್ದೆಯನ್ನ ಹಲ್ಲೆ ಮಾಡಿ ಕೊಂದಿದ್ದ ಪಾಪಿಗಳು ಆಭರಣ ದೋಚಿ ಎಸ್ಕೇಪ್ ಆಗಿದ್ರು. ಕೊಲೆಗಡುಕರು ಸಣ್ಣ ಸುಳಿವು ಕೂಡ ಬಿಡದೆ ಅಲ್ಲಿಂದ ಎಸ್ಕೇಪ್ ಆಗಿದ್ರು, ಕೊಲೆ ನಡೆದಿದೆ – ಆದ್ರೆ ಕೊಲೆ ಮಾಡಿದವರು ಯಾರು ಎನ್ನೋದಕ್ಕೆ ಯಾವುದೇ ಸುಳಿವಿಲ್ಲ. ಹಾಗಾಗಿಯೇ ಸವಾಲಾಗಿದ್ದ ಕೇಸ್ ಬೆನ್ನು ಬಿದ್ದ ಪೊಲೀಸರಿಗೆ ಸಿಕ್ಕಿತ್ತು ಅದೊಬ್ಬ ದಳ್ಳಾಳಿಯ ಸುಳಿವು.

ಹಸು ಖರೀದಿಗೆ ಬಂದವನಿಂದ ನಡೆದು ಹೋಗಿತ್ತು ಹತ್ಯೆ… ಮನೆಯಲ್ಲಿ ಅಷ್ಟೇನು ಜಮೀನು ಇರ್ಲಿಲ್ಲ. ಹಾಗಾಗಿಯೇ ಹೈನುಗಾರಿಕೆ ಮಾಡಲೆಂದು ನಾಲ್ಕೈದು ಹಸು ಕಟ್ಟಿಕೊಂಡಿದ್ದ ಸರೋಜಮ್ಮ ಕುಟುಂಬ ಅದರಿಂದಲೇ ಬದುಕು ಕಟ್ಟಿಕೊಂಡಿದ್ದರು. ಸರೋಜಮ್ಮ ಕೂಡ ಮಗನಿಗೆ ನೆರವಾಗುತ್ತಾ ಸಹಕಾರಿಯಾಗಿದ್ರು, ಆದ್ರೆ ಸರೋಜಮ್ಮ ಕೊಲೆಯಾಗೋ ಮೂರ್ನಾಲ್ಕು ದಿನಗಳ ಹಿಂದೆ ಸರೋಜಮ್ಮ ಮನೆ ಬಳಿ ಬಂದಿದ್ದ ದಳ್ಳಾಳಿ ರವಿಕುಮಾರ್ ಎಂಬಾತ ನಿಮ್ಮ ಹಸು ನನಗೆ ಬೇಕು ಕೊಡಿ ಎಂದು ವ್ಯಾಪಾರ ಮಾತನಾಡಿದ್ದ.

ನಮ್ಮ ಬಳಿ ಇರೋದೇ ಮೂರ್ನಾಲ್ಕು ಹಸು ಅವು ನಮಗೇ ಬೇಕು ನಾವು ಕೊಡೋದಿಲ್ಲ ಎಂದು ಸರೋಜಮ್ಮ ಹೇಳಿದ್ದಾರೆ, ಆದ್ರೆ ಇಷ್ಟಕ್ಕೆ ಸುಮ್ಮನಾಗದ ರವಿಕುಮಾರ್ ಪದೇ ಪದೆ ಬಂದು ಹಸು ನನಗೆ ಬೇಕು ಕೊಡಿ ಕೊಡಿ ಎಂದು ಒತ್ತಾಯ ಮಾಡಿದ್ನಂತೆ, ಆದ್ರೆ ಈ ವ್ಯವಹಾರ ಅಂತಿಮ ಆಗೋ ಮೊದಲೇ ಸರೋಜಮ್ಮ ಬಲಿಯಾಗಿ ಹೋಗಿದ್ರು, ಅಲ್ಲಿಗೆ ಹಸು ವ್ಯಾಪಾರ ವ್ಯವಹಾರದಲ್ಲಿ ನಡೆದ ಕಿತಾಪತಿಯಿಂದ ಏನಾದ್ರು ಹತ್ಯೆ ನಡೆದಿದ್ಯಾ ಎನ್ನೋ ಸಣ್ಣದೊಂದು ಅನುಮಾನ ಹಾಗೂ ಹಸು ವ್ಯಾಪಾರಕ್ಕೆ ಬಂದಿದ್ದವನ ಸುಳಿವು ಆಧರಿಸಿ ಪೊಲೀಸರು ತನಿಖೆಗೆ ಇಳಿದಾಗ ಅಲ್ಲಿ ಸತ್ಯ ಬಯಲಾಗಿ ಹೋಗಿತ್ತು, ದಳ್ಳಾಳಿ ಕೆಲಸ ಮಾಡಿದ್ರೆ ಸಿಗೋ ಪುಡಿಗಾಸಿಗಿಂತಾ ವೃದ್ಧೆಯನ್ನೇ ಮುಗಿಸಿದ್ರೆ ಒಂದೇ ಏಟಿಗೆ ಲಕ್ಷ ಲಕ್ಷ ಹಣ ಸಿಗುತ್ತೆ ಎಂದು ದುರಾಸೆಪಟ್ಟಿದ್ದ ಆ ನೀಚ ವೃದ್ದೆಯನ್ನೇ ಬಲಿ ಪಡೆದುಬಿಟ್ಟಿದ್ದ.

ಚಿನ್ನಾಭರಣಕ್ಕಾಗಿ ನಡೆದು ಹೋಯ್ತು ಹತ್ಯೆ ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ಕಾರೇಹಳ್ಳಿಯ ರವಿಕುಮಾರ್ ದನಕರುಗಳನ್ನ ಕೊಳ್ಳೋದು ಮಾರೋದು ಮಾಡುತ್ತಾ ಒಂದಷ್ಟು ಆದಾಯ ಗಳಿಸಿ ಜೀವನ ಮಾಡ್ತಿದ್ದ ದಳ್ಳಾಳಿ, ಯಾರಾದ್ರು ಹಸು ಮಾರೋರಿದ್ರೆ ಅದನ್ನ ತಾನು ಹಣ ಕೊಟ್ಟು ಖರೀದಿ ಮಾಡೋದು ಬಳಿಕ ಹೆಚ್ಚಿನ ಹಣಕ್ಕೆ ಮಾರಾಟ ಮಾಡಿ ಲಾಭ ಗಳಿಸೋದು ಮಾಡ್ತಿದ್ದ, ಅದೇ ರೀತಿಯಲ್ಲಿ ನವೆಂಬರ್ ಮೊದಲ ವಾರದಲ್ಲಿ ಶೆಟ್ರುಕೊಪ್ಪಲು ಕಡೆಗೆ ಬಂದಿದ್ದ ಈ ಪಾಪಿ ರವಿಕುಮಾರ್ ಸರೋಜಮ್ಮರ ಹಸುಗಳನ್ನ ನೋಡಿ ವ್ಯಾಪಾರದ ಮಾತುಕತೆ ನಡೆಸಿದ್ದಾನೆ.

ಹಸು ಮಾಲಕಿ ಸರೋಜಮ್ಮಳನ್ನೆ ಮುಗಿಸಿ ಬಿಟ್ಟರೆ ಆಕೆಯ ಕೊರಳು, ಕಿವಿಯಲ್ಲಿರೋ ಬಂಗಾರದ ಆಭರಣ ತನ್ನದಾಗುತ್ತೆ ಒಂದೇ ಏಟಿಗೆ ಲಕ್ಷ ಲಕ್ಷ ಹಣ ಸಿಗುತ್ತೆ. ಈ ಗೋಳಾಟ ಪರದಾಟ ಯಾರಿಗೆ ಬೇಕು ಎಂದು ಖತರ್ನಾಕ್ ಪ್ಲಾನ್ ಮಾಡಿದ್ದ, ಅದಕ್ಕಾಗಿ ಹೊಂಚು ಹಾಕಿ ಕಾದಿದ್ದಾನೆ, ನವೆಂಬರ್ 18ರಂದು ಮಹಿಳೆ ದನ ಮೇಯಿಸಲು ಬರಬಹುದು ಎಂದು ಜಮೀನಿನ ಬಳಿ ಬೆಳಿಗ್ಗೆಯೇ ಬಂದು ಕಾದು ಕುಳಿತಿದ್ದ ಪಾಪಿ ಅಂದೇ ಆಕೆಯನ್ನ ಮುಗಿಸೋಕೆ ಸ್ಕೆಚ್ ಹಾಕಿದ್ದನಂತೆ, ಅಂದು ಬೆಳಿಗ್ಗೆಯೇ ಸರೋಜಮ್ಮನ ಬಾಮೈದ ರಾಮಚಂದ್ರ ಜಮೀನಿನ ಕಡೆಗೆ ಹೋಗಿದ್ದಾಗ ಅಲ್ಲೇ ಒಂಟಿಯಾಗಿ ಕುಳಿತಿದ್ದ ರವಿ ಕುಮಾರ್ ಕಂಡು ಯಾರು ನೀನು ಎಂದು ಮಾತನಾಡಿಸಿದ್ದಾರೆ.

ಅದಕ್ಕೆ ನಾನು ಸರೋಜಮ್ಮನ ಹಸು ಖರೀದಿ ಮಾಡಲು ಬಂದಿದ್ದೀನಿ, ಅವರ ಹಸುವನ್ನ ನೋಡಲು ನನ್ನ ಹೆಂಡತಿ ಬರ್ತಾಳೆ ಅವಳು ನೋಡಿ ಅಂತಿಮಗೊಳಿಸಿದ್ರೆ ವ್ಯಾಪಾರ ಮುಗೀತು ಎಂದಿದ್ದನಂತೆ. ನಿಮ್ಮದು ಯಾವ ಊರು ಎಂದಿದ್ದಕ್ಕೆ ಕಾರೆಹಳ್ಳಿಯ ರವಿಕುಮಾರ್, ತನ್ನದು ನಾಗಲಾಪುರ ಎಂದು ಸುಳ್ಳು ಹೇಳಿದ್ದಾನೆ. ಆದ್ರೆ ಹಸು ಮೇಯಿಸಲು ಇಲ್ಲಿಗೆ ಸರೋಜಮ್ಮ ಬರೋದಿಲ್ಲ, ನೀನು ಇಲ್ಲಿ ಯಾಕೆ ಕಾಯ್ತೀಯಾ ಎಂದಾಗ ಬರ್ತಾರೆ ಎಂದು ಹೇಳಿದ್ದನಂತೆ.

ಆ ಕ್ರೂರಿ ಅಲ್ಲೇ ಕಾದು ಕುಳಿತಿದ್ದ, ಆದರೆ ಅಂದು ಸರೋಜಮ್ಮ ಜಮೀನಿನ ಬಳಿ ಬರದೇ ಇದ್ದುದರಿಂದ ರವಿಕುಮಾರ್ ಅಲ್ಲಿಂದ ವಾಪಸ್ ಹೋಗಿದ್ದಾನೆ. ಆದ್ರೆ ಮರುದಿನ ಮಗ ಸೊಸೆ ಕಾರ್ಯಕ್ರಮವೊಂದಕ್ಕೆ ಸಂಬಂಧಿಕರ ಮನೆಗೆ ಹೋಗಿದ್ದರಿಂದ ಹಸುಗಳಿಗೆ ನೀರು ಕುಡಿಸಿ ಮೇವು ಹಾಕಲೆಂದು ಬಂದ ಸರೋಜಮ್ಮಳನ್ನ ಅಡ್ಡಗಟ್ಟಿದ ಪಾಪಿ ರವಿಕುಮಾರ್ ತಲೆಗೆ ದೊಣ್ಣೆಯಿಂದ ಹೊಡೆದು ಕೊಂದಿದ್ದಾನೆ. ಕೆಳಗೆ ಉರುಳಿಬಿದ್ದಾಕೆಯನ್ನ ಅಲ್ಲೇ ಸಮೀಪದ ನೆಡುತೋಪಿನ ಸಮೀಪ ಎಳೆದೊಯ್ದು ಕಿವಿಯಲ್ಲಿದ್ದ ಓಲೆ, ಮಾಟಿ, ಕೊರಳಿನಲ್ಲಿದ್ದ ತಾಳಿ, ಚಿನ್ನದ ಗುಂಡಿನ ಸರ ಎಲ್ಲವನ್ನು ಕಸಿದುಕೊಂಡು ಅಲ್ಲಿಂದ ಎಸ್ಕೇಪ್ ಆಗಿದ್ದ.

ಮತ್ತಷ್ಟು ಓದಿ: ಕಾರಿಗೆ ಅಡ್ಡ ಬಂದ ಪ್ರಾಣಿಯನ್ನು ತಪ್ಪಿಸಲು ಹೋಗಿ ಅಪಘಾತ, ಐವರು ಸಾವು

ಯಾವ ಸಣ್ಣ ಸುಳಿವು ಇಲ್ಲದ ಕೇಸ್ ಬೆನ್ನುಬಿದ್ದ ಪೊಲೀಸರು ದನದ ವ್ಯಾಪಾರಕ್ಕೆ ಬಂದವನ ಮೇಲೆ ಇದ್ದ ಸಣ್ಣದೊಂದು ಅನುಮಾನದ ಜಾಡು ಹಿಡಿದು ಹೋದಾಗ ವೃದ್ದೆಯ ಕೊಲೆ ಕೇಸ್ ಬಯಲಾಗಿದೆ. ದನಗಳ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಾ ನೆಮ್ಮದಿಯಾಗಿದ್ದ ರವಿಕುಮಾರ್ ಎಂದೂ ಕೂಡ ಇಂತಹ ಹೀನಕೃತ್ಯಕ್ಕೆ ಕೈ ಹಾಕಿದವನಲ್ಲ. ಆದ್ರೆ ವರ್ಷಗಳಿಂದ ದನದ ವ್ಯಾಪಾರ ಮಾಡ್ತಿದ್ದೀನಿ, ಆದ್ರೆ ಕೈ ತುಂಬ ಕಾಸು ಸಿಕ್ತಿಲ್ಲ ಎನ್ನೋ ಕೊರಗಿನಲ್ಲಿದ್ದವನಿಗೆ ದುಸಾರೆ ಹತ್ತಿಕೊಂಡಿತ್ತು. ಹೇಗೂ ಈಗೆ ವೃದ್ದೆ ಯಾರೂ ಇಲ್ಲದಾಗ ಕೊಲೆಮಾಡಿ ಆಭರಣ ದೋಚಿದ್ರೆ ಲಕ್ಷ ಲಕ್ಷ ಹಣ ಸಿಗುತ್ತೆ ಎಂದು ಆಸೆಗೆ ಬಿದ್ದಿದ್ದ ಹಾಗಾಗಿಯೇ ಒಂಟಿಯಾಗಿ ಸಿಕ್ಕ ಮಹಿಳೆಯನ್ನ ಕೊಂದು ಚಿನ್ನಾಭರಣ ದೋಚಿ ಅದನ್ನ ಗಿರವಿ ಇಟ್ಟು ಹಣ ಪಡೆದುಕೊಂಡು ಮಜಾ ಮಾಡೋಕೆ ಶುರುಮಾಡಿದ್ದ.

ಆದ್ರೆ ಮಾಡಿದ ಪಾಪ ಕೃತ್ಯ ಆತನ ಬೆನ್ನಟ್ಟಿ ಬಂದಿತ್ತು, ಕೊಲೆ ಕೇಸ್ ದಾಖಲಿಸಿಕೊಂಡು ತನಿಖೆಗಿಳಿದಿದ್ದ ಪೊಲೀಸರು ಆರೋಪಿಯನ್ನ ಬಂಧಿಸಿ ಕರೆತಂದಿದ್ದಾರೆ. ದನದ ವ್ಯಾಪಾರಕ್ಕೆ ಬಂದು ವ್ಯವಹಾರ ಕುದುರದೆ ಹೋದಾಗ ಹೇಗಾದರೂ ಸರಿ ತನಗೆ ಆದಾಯ ಬೇಕು ಎನ್ನೋ ಹಠಕ್ಕೆ ಬಿದ್ದವನು ವೃದ್ದೆಯನ್ನೇ ಮುಗಿಸಿ ಹಣ ಸಂಪಾದನೆ ಮಾಡೋಕೆ ಹೋಗಿ ಇದೀಗ ಕಂಬಿ ಹಿಂದೆ ಸೇರಿದ್ದಾನೆ.

ಈ ಹಿಂದೆ ಸರ ಕಳೆದುಕೊಂಡಾಕೆಯ ಪ್ರಾಣ ಈ ಬಾರಿ ಉಳಿಯಲಿಲ್ಲ

ಮೈಮೇಲೆ ಒಂದಷ್ಟು ಒಡವೆ ಹಾಕಿಕೊಂಡು ಓಡಾಡುತ್ತಿದ್ದ ಸರೋಜಮ್ಮ ಕೆಲ ವರ್ಷಗಳ ಹಿಂದೆ ಸಂಬಂಧಿಕರ ಮನೆಗೆಂದು ಹೊಳೆನರಸೀಪುರಕ್ಕೆ ಹೋಗಿದ್ರು, ಈ ವೇಳೆ ರಸ್ತೆಯಲ್ಲಿ ಹೋಗೋ ವೇಳೆ ಯಾರೋ ಕಿಡಿಗೇಡಿಗಳು ಈಕೆಯ ಕೊರಳಿನಲ್ಲಿದ್ದ ಸರವನ್ನ ಕಸಿದು ಎಸ್ಕೇಪ್ ಆಗಿದ್ದರಂತೆ, ಅಯ್ಯೋ ಸರ ಹೋದ್ರೆ ಹೋಯ್ತು ಜೀವ ಉಳೀಯಿತಲ್ಲ ಎಂದು ಪೊಲೀಸರಿಗೆ ದೂರು ಕೊಟ್ಟಿದ್ದ ಸರೋಜಮ್ಮ ಸುಮ್ಮನಾಗಿದ್ರು.

ಆ ಪ್ರಕರಣದಲ್ಲಿ ಕಳೆದುಕೊಂಡ ಚಿನ್ನ ಮರಳಿ ಸಿಕ್ಕಿರಲಿಲ್ಲ. ಆದ್ರೆ ಈಗ ಚಿನ್ನದ ಜೊತೆಗೆ ಪ್ರಾಣವೇ ಹೋಗಿದೆ, ಅದೇ ಭಯದಲ್ಲಿ ಮನೆಯಿಂದ ಹೊರ ಹೋಗಲು ಭಯಪಡ್ತಿದ್ದ ಸರೋಜಮ್ಮ ಮನೆಯಲ್ಲಿದ್ದರೂ ಕೂಡ ಅನಿವಾರ್ಯವಾಗಿ ಮನೆಯಿಂದ ಹೊರ ಬಂದಾಗ ದನದ ವ್ಯಾಪಾರಕ್ಕೆ ಬಂದವನು ವ್ಯವಹಾರ ಮಾತಾಡೋ ನೆಪದಲ್ಲಿ ಬಂದು ಜೀವ ತೆಗೆದಿದ್ದಾನೆ, ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನಲ್ಲೂ ವೃದ್ದೆಯನ್ನ ಹತ್ಯೆ ಮಾಡಿ ಚಿನ್ನಾಭರಣ ದೋಚಿದ ಘಟನೆ ನಡೆದಿರುವಾಗ ಅದು ಮಹಿಳೆಯರನ್ನು ಬೆಚ್ಚಿಬೀಳುವಂತೆ ಮಾಡಿದೆ. ಮಹಿಳೆಯರು ತಮ್ಮ ಚಿನ್ನಾಭರಣ ಧರಿಸಿ ಮನೆಯಿಂದ ಹೊರ ಬರಲು ಜೀವ ಭಯಪಡುವಂತಾಗಿದೆ, ಯಾರು ಯಾವಾಗ ತಮ್ಮೊಳಗಿನ ರಾಕ್ಷಸ ಬುದ್ದಿ ಹೊರ ಹಾಕ್ತಾರೆ ಯಾವಾಗ ಯಾರು ಪಾತಕಿಗಳಾಗ್ತಾರೆ ಎನ್ನೋ ಆತಂಕದಿಂದ ಮಹಿಳೆಯರು ದಿನ ಕಳೆಯುವಂತಾಗಿರೋದು ನಿಜಕ್ಕು ದುರಂತವೇ ಸರಿ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಬಿಜೆಪಿ ಆಂತರಿಕ ಕಚ್ಚಾಟ ನೆಚ್ಚಿಕೊಂಡು ಸರ್ಕಾರ ನಡೆಸುತ್ತಿಲ್ಲ: ಶಿವಕುಮಾರ್
ಬಿಜೆಪಿ ಆಂತರಿಕ ಕಚ್ಚಾಟ ನೆಚ್ಚಿಕೊಂಡು ಸರ್ಕಾರ ನಡೆಸುತ್ತಿಲ್ಲ: ಶಿವಕುಮಾರ್
ಎಸ್ಟಿ ಸಮುದಾಯದ ಶ್ರೀಗಳು ಜಾತ್ರೆಗೆ ಆಹ್ವಾನಿಸಲು ಬಂದಿದ್ದರು: ಪರಮೇಶ್ವರ್
ಎಸ್ಟಿ ಸಮುದಾಯದ ಶ್ರೀಗಳು ಜಾತ್ರೆಗೆ ಆಹ್ವಾನಿಸಲು ಬಂದಿದ್ದರು: ಪರಮೇಶ್ವರ್
ವಿರಾಟ್ ಕೊಹ್ಲಿ ಒಂದಂಕಿಗೆ ಔಟ್ ಆಗುತ್ತಿದ್ದಂತೆ ಸ್ಟೇಡಿಯಂ ಖಾಲಿ ಖಾಲಿ
ವಿರಾಟ್ ಕೊಹ್ಲಿ ಒಂದಂಕಿಗೆ ಔಟ್ ಆಗುತ್ತಿದ್ದಂತೆ ಸ್ಟೇಡಿಯಂ ಖಾಲಿ ಖಾಲಿ
ರೀಲ್ಸ್​​ ನೋಡುತ್ತಾ ಸರ್ಕಾರಿ ಬಸ್ ​ಚಲಾಯಿಸಿದ್ದ ಚಾಲಕ ಅಮಾನತು
ರೀಲ್ಸ್​​ ನೋಡುತ್ತಾ ಸರ್ಕಾರಿ ಬಸ್ ​ಚಲಾಯಿಸಿದ್ದ ಚಾಲಕ ಅಮಾನತು
ಪಿಡಿಓಗಳು ಕುಬೇರರು ಅನ್ನೋದನ್ನು ಸಾಬೀತು ಮಾಡಿರುವ ಹಿರೇಮಠ
ಪಿಡಿಓಗಳು ಕುಬೇರರು ಅನ್ನೋದನ್ನು ಸಾಬೀತು ಮಾಡಿರುವ ಹಿರೇಮಠ
ಸಂಸತ್ತಿನ ಬಜೆಟ್ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣ
ಸಂಸತ್ತಿನ ಬಜೆಟ್ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣ
ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದ ದಾವಣಗೆರೆಯ ಈಜುಪಟು
ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದ ದಾವಣಗೆರೆಯ ಈಜುಪಟು
Budget Session 2025: ಬಜೆಟ್ ಅಧಿವೇಶನಕ್ಕೂ ಮುನ್ನ ಪ್ರಧಾನಿ ಮೋದಿ ಮಾತು
Budget Session 2025: ಬಜೆಟ್ ಅಧಿವೇಶನಕ್ಕೂ ಮುನ್ನ ಪ್ರಧಾನಿ ಮೋದಿ ಮಾತು
ನಮ್ಮ ಮನೆಯಲ್ಲಿ ನಾನು ಆಸ್ತಿಕ ಅದರೆ ನಮ್ಮ ತಂದೆ ನಾಸ್ತಿಕ: ಯತೀಂದ್ರ
ನಮ್ಮ ಮನೆಯಲ್ಲಿ ನಾನು ಆಸ್ತಿಕ ಅದರೆ ನಮ್ಮ ತಂದೆ ನಾಸ್ತಿಕ: ಯತೀಂದ್ರ
ಮನೆಯೊಡತಿ ಸಾವಿನ ಸುದ್ದಿ ತಿಳಿದು ಸಾಕು ನಾಯಿಯ ಮೂಕರೋಧನೆ
ಮನೆಯೊಡತಿ ಸಾವಿನ ಸುದ್ದಿ ತಿಳಿದು ಸಾಕು ನಾಯಿಯ ಮೂಕರೋಧನೆ