ಮೈಸೂರು: ಪ್ರಿಯತಮ ಕೈಕೊಟ್ಟಿದ್ದಕ್ಕೆ ಪ್ರಿಯತಮೆ ಆತ್ಮಹತ್ಯೆಗೆ ಶರಣು

ಪ್ರೀತಿಸಿದ ಹುಡುಗ ಕೈಕೊಟ್ಟಿದ್ದಕ್ಕೆ ಯುವತಿ ಡೆತ್​ ನೋಟ್​​ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಗೌಡನಹಳ್ಳಿಯಲ್ಲಿ ನಡೆದಿದೆ.

ಮೈಸೂರು: ಪ್ರಿಯತಮ ಕೈಕೊಟ್ಟಿದ್ದಕ್ಕೆ ಪ್ರಿಯತಮೆ ಆತ್ಮಹತ್ಯೆಗೆ ಶರಣು
ಮೃತ ನಿಸರ್ಗಾ ಮತ್ತು ಸುಹಾಸ್​ ರೆಡ್ಡಿ
Edited By: ವಿವೇಕ ಬಿರಾದಾರ

Updated on: Jul 23, 2023 | 9:37 AM

ಮೈಸೂರು: ಪ್ರೀತಿಸಿದ ಹುಡುಗ ಕೈಕೊಟ್ಟಿದ್ದಕ್ಕೆ ಯುವತಿ (Young Girl) ಡೆತ್​ ನೋಟ್​​ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಕೆ.ಆರ್.ನಗರ (KR Nagar) ತಾಲೂಕಿನ ಗೌಡನಹಳ್ಳಿಯಲ್ಲಿ ನಡೆದಿದೆ. ನಿಸರ್ಗಾ ಮೃತ ಯುವತಿ. ನಿಸರ್ಗಾ ಕೆ.ಆರ್ ನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಿಮ ವರ್ಷದ ಬಿ.ಕಾಂ ಓದುತ್ತಿದ್ದಳು. ನಿಸರ್ಗಾಳಿಗೆ ಸುಹಾಸ್ ರೆಡ್ಡಿ ಎಂಬ ಯುವಕನ ಪರಿಚಯಚಾಗುತ್ತದೆ. ಪರಿಚಯ ಸ್ನೇಹವಾಗಿ, ಸ್ನೇಹ ಪ್ರೀತಿಗೆ ತಿರುಗುತ್ತಿದೆ. ಆದರೆ ಇತ್ತೀಚಿಗೆ ಕೆಲದಿನಗಳಿಂದ ಪ್ರಿಯತಮ ಸುಹಾಸ್ ವರ್ತನೆಯಲ್ಲಿ ಬದಲಾವಣೆ ಕಂಡಿದ್ದು, ಆತ ಮತ್ತೊಬ್ಬ ಯುವತಿಯೊಂದಿಗೆ ಸ್ನೇಹ ಬೆಳಸಿದ್ದನು.

ಇದರಿಂದ ಮಾನಸಿಕವಾಗಿ ಖಿನ್ನತೆಗೊಳಗಾಗಿದ್ದ ನಿಸರ್ಗಾ ಕೈ ಕೊಯ್ದುಕೊಂಡು ಸಾಮಾಜಿಕ ಜಾಲಾತಾಣದಲ್ಲಿ ಫೋಟೊ ಹಾಕಿದ್ದಳು. ಹಾಗೆ ಈ ವಿಚಾರವನ್ನು ನಿಸರ್ಗಾ, ಪ್ರಿಯತಮ ಸುಹಾಸ್​ಗೆ ಇತ್ತೀಚಿಗೆ ಪರಿಚಯವಾಗಿದ್ದ ಮೊತ್ತೊಬ್ಬ ಯುವತಿಯ ಪೋಷಕರಿಗೂ ತಿಳಿಸಿದ್ದಾಳೆ. ಆಗ ಪೋಷಕರು ಕೆಟ್ಟದಾಗಿ ನಿಂದಿಸಿ ಸಾಯುವಂತೆ ಪ್ರೇರೇಪಿಸಿರುವ ಆರೋಪ ಕೇಳಿಬಂದಿದೆ.

ಇದನ್ನೂ ಓದಿ: ಮಹಿಳೆಯಿಂದ ಪ್ರಿಯಕರನಿಗೆ ಚಾಕು ಇರಿತ; ಅಸ್ಸಾಂಗೆ ಪರಾರಿಯಾಗಲು ಯತ್ನ

ಇದರಿಂದ ನೊಂದ ನಿಸರ್ಗಾ ಡೆತ್ ನೋಟ್ ಬರೆದು ಇಲಿ ಪಾಷಾಣ ತೆಗೆದುಕೊಂಡಿದ್ದಾಳೆ. ಕೂಡಲೆ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ ನಿಸರ್ಗಾ ಸಾವನ್ನಪ್ಪಿದ್ದಾಳೆ. ಇನ್ನು ನಿಸರ್ಗಾ ಆತ್ಮಹತ್ಯೆಗೆ ಶರಣಾಗುತ್ತಿದ್ದಂತೆ ಆರೋಪಿ ಸುಹಾಸ್​​ ತಲೆಮರೆಸಿಕೊಂಡಿದ್ದು, ಪೊಲೀಸರು ಶೋಧ ನಡೆಸಿದ್ದಾರೆ. ಕೆ.ಆರ್ ನಗರ ಪೊಲೀಸ್ ಠಾಣೆಯಲ್ಲಿ ಸುಹಾಸ್, ಹಾಗೂ ಇತ್ತೀಚಿಗೆ ಪರಿಚಯವಾದ ಯುವತಿ ಪೋಷಕರು ಸೇರಿದಂತೆ ಐವರ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:35 am, Sun, 23 July 23

Ram

ರಾಮ್ ಮೈಸೂರು ಪತ್ರಕರ್ತನಾಗಿ 20 ವರ್ಷದ ಅನುಭವ. ಕಳೆದ 14 ವರ್ಷಗಳಿಂದ ಟಿವಿ9 ಕನ್ನಡದ ಮೈಸೂರು ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ನಿರ್ವಹಣೆ. ರಾಜ್ಯದ ವಿಧಾನಸಭಾ ಲೋಕಸಭಾ ಚುನಾವಣೆಯ ವಿಶೇಷ ವರದಿ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳ ಉಪಚುನಾವಣಾ ವರದಿ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದ ಚುನಾವಣಾ ವರದಿ ಸೇರಿದಂತೆ ಹಲವು ಚುನಾವಣೆಯ ವರದಿಯ ಅನುಭವ. ಮುಂಬೈ ಮಹಾಮಳೆಯ ಕವರೇಜ್, ಕೊಡಗು ಜಿಲ್ಲೆಯ ಗುಡ್ಡ ಕುಸಿತ, ಸೇರಿದಂತೆ ಹಲವು ಸ್ಟಿಂಗ್ ಕಾರ್ಯಾಚರಣೆ, ಸಾಮಾಜಿಕ‌ ಸಮಸ್ಯೆ ಹಾಗೂ ಮಾನವೀಯ ಕಳಕಳಿಯುಳ್ಳ ವರದಿ ಮಾಡಿದ ಅನುಭವ.

Read More
Follow Us