ಅಮೆರಿಕದ ಆ ಕಾಲೇಜಿನಲ್ಲಿ ಈ ವರ್ಷದಿಂದಲೇ ಪಾರ್ನೋಗ್ರಫಿ ಶಿಕ್ಷಣ (adult education) ಕೊಡಲು ತೀರ್ಮಾನಿಸಲಾಗಿದೆ. ಇದರ ವಿಶೇಷತೆ ಏನು ಅಂತಂದರೆ ಪೋರ್ನ್ ಸೈಟ್ ಗಳಲ್ಲಿ ಪುಂಖಾನುಪುಂಖವಾಗಿ ಸಿಗುವ ನೀಲಿ ಚಿತ್ರಗಳನ್ನು ವಿದ್ಯಾರ್ಥಿಗಳು ಮತ್ತು ಟೀಚರುಗಳು ಒಟ್ಟಿಗೆ ಕುಳಿತೋ/ ನಿಂತೋ ವೀಕ್ಷಣೆ ಮಾಡಬಹುದು. ಇದರ ಆಳ-ಅಗಲ ವಿಸ್ತಾರವಾಗಿದ್ದು ಸೆಕ್ಸ್ ಕುರಿತಾದ ಶಿಕ್ಷಣದಲ್ಲಿ (adult course) ಜನಾಂಗೀಯ, ವರ್ಣ, ಸಾಮಾಜಿಕ ಸ್ತರ, ಲಿಂಗದ ಆಧಾರದಲ್ಲಿ ಅಧ್ಯಯನ ನಡೆಯುತ್ತದೆ ಎಂದು ಕಾಲೇಜು ವೆಬ್ಸೈಟ್ ತಿಳಿಸಿದೆ.
ಇಂತಹ ಆಳವಾದ ಪಾರ್ನೋಗ್ರಫಿ ಶಿಕ್ಷಣವನ್ನು ಅಮೆರಿಕದ ಉಠಾ ನಗರದಲ್ಲಿ (Utah) ವೆಸ್ಟ್ ಮಿನಿಸ್ಟರ್ ಕಾಲೇಜ್ ನಲ್ಲಿ (Westminster College) ಚೊಚ್ಚಲ ಬಾರಿಗೆ ಈ ವರ್ಷದಿಂದಲೇ ಹೇಳಿಕೊಡಲಾಗುವುದು. ಪ್ರಯೋಗಾತ್ಮಕವಾಗಿ ಮತ್ತು ಆಮೂಲಾಗ್ರವಾಗಿ ‘Film 3000’ programme ಫಿಲ್ಮ್ 3000 ಕಾರ್ಯಯೋಜನೆಯಡಿ ಈ ಸೆಕ್ಸ್ ಕೋರ್ಸ್ ಹೇಳಿಕೊಡಲಾಗುತ್ತದೆ. ಅಂತಿಮವಾಗಿ ಸಾಮಾಜಿಕವಾಗಿ ಕಾಡುವ ಸೆಕ್ಸ್ ವಿಷಯದ ಬಗ್ಗೆ ಅರಿತುಕೊಳ್ಳುವುದಕ್ಕೆ ಇದು ಚರಮಗೀತೆಯಾಗಿದೆ.
ಈ ಅಡಲ್ಟ್ ಶಿಕ್ಷಣದ ಬಳಿಕ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಸಾಮಾಜಿಕ, ವಿವಾದಿತ ಸೆಕ್ಸ್ ವಿಚಾರದಲ್ಲಿ ತಮ್ಮ ಉದ್ಯೋಗ ಭವಿಷ್ಯ ರೂಪಿಸಿಕೊಳ್ಳಲು ಎಷ್ಟು ಸಹಕಾರಿಯಾಗಲಿದೆ ಎಂಬುದನ್ನು ಅಳೆಯಲು ಈ ಕೋರ್ಸ್ ಎಷ್ಟರ ಮಟ್ಟಿಗೆ ಸಹಕಾರಿಯಾಗಲಿದೆ ಎಂಬುದನ್ನು ಅರಿಯಬೇಕಿದೆ ಎಂದು ಕಾಲೇಜು ಆಡಳಿತ ಮಂಡಳಿ ಆಲೋಚಿಸುತ್ತಿದೆ.
ಕಾಲೇಜು ಹಂತದಲ್ಲಿ ಸೆಕ್ಸ್ ಎಜುಕೇಶನ್ ಹೆಸರಿನಲ್ಲಿ ಟೀಚರುಗಳು ಮತ್ತು ವಿದ್ಯಾರ್ಥಿಗಳು ಒಟ್ಟಿಗೇ ವೀಕ್ಷಿಸಿ, ಅಧ್ಯಯನ ಮಾಡುವುದಕ್ಕೆ ಎಂದಿನಂತೆ ಸಂಪ್ರದಾಯವಾದಿಗಳು ಮೂಗೆಳೆದಿದ್ದಾರೆ. ಇದೊಂದು ಪರಮ ಅಸಹ್ಯಕರ ಬೆಳವಣಿಗೆ ಎಂದು ಉದ್ವೇಗಗೊಂಡಿದ್ದಾರೆ.