ರಾಜಕೀಯಕ್ಕೆ ಎಂಟ್ರಿ ಆಗ್ಬೇಕಾ? ಅದಕ್ಕೂ ಬರಲಿದೆ ಕೋರ್ಸ್! ಬೆಂಗಳೂರಿನಲ್ಲಿ ಮುಂದಿನ ವರ್ಷ ಶುರುವಾಗತ್ತೆ ರಾಜಕೀಯ ಪದವಿ ಕಾಲೇಜು
ರಾಜಕೀಯ ಅಧ್ಯಯನ ಆಸಕ್ತ ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ. ಬೆಂಗಳೂರಿನಲ್ಲಿ 2026ರ ಜೂನ್‌ನಲ್ಲಿ ರಾಜಕೀಯ ಪದವಿ ಕಾಲೇಜು ಆರಂಭಿಸಲು ಕರ್ನಾಟಕ ಸರ್ಕಾರ ಮುಂದಾಗಿದೆ. ಇದು ಮೂರು ವರ್ಷಗಳ ಕೋರ್ಸ್ ಆಗಿದ್ದು, ರಾಜಕೀಯ ನೀತಿ ಸಂಹಿತೆ ಮತ್ತು ಸಿದ್ಧಾಂತ ವಿಷಯಗಳನ್ನು ಒಳಗೊಂಡಿರುತ್ತದೆ. ಪಠ್ಯಕ್ರಮ ರೂಪಿಸಲು ನಿವೃತ್ತ ಪ್ರಾಧ್ಯಾಪಕರು ಹಾಗೂ ಹಿರಿಯ ರಾಜಕಾರಣಿಗಳ ಸಲಹೆ ಪಡೆಯಲಾಗುವುದು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ.

ಬೆಂಗಳೂರು, ಅ.15: ರಾಜಕೀಯ ವಿಚಾರಗಳಲ್ಲಿ ತೊಡಗಿಸಿಕೊಳ್ಳಬೇಕು, ಹಾಗೂ ಅದರ ಬಗ್ಗೆ ಅಧ್ಯಯನ ಮಾಡಬೇಕು ಎನ್ನುವವರು ಮೊದಲು ಈ ಕೋರ್ಸ್ ಮಾಡಿದ್ರೆ ಇನ್ನೂ ಉತ್ತಮ. ಭವಿಷ್ಯದಲ್ಲಿ ರಾಜಕಾರಣಕ್ಕೆ ಬರುವವರಿಗೆ ಹಾಗೂ ರಾಜಕೀಯದಲ್ಲಿ ಆಸಕ್ತಿಯುಳ್ಳವವರಿಗೆ ಸುವರ್ಣ ಅವಕಾಶವೊಂದನ್ನು ಸರ್ಕಾರ ನೀಡುತ್ತಿದೆ. ಬೆಂಗಳೂರಿನಲ್ಲಿ ರಾಜಕೀಯ ಪದವಿ ಕಾಲೇಜು ಆರಂಭಿಸಲು (Bengaluru Political Degree College) ಸರ್ಕಾರ ಮುಂದಾಗಿದ್ದು, 2026 ಜೂನ್‌ನಲ್ಲಿ ಬೆಂಗಳೂರಿನಲ್ಲಿ ರಾಜಕೀಯ ಪದವಿ ಕಾಲೇಜು ಆರಂಭಿಸಲಾಗುವುದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಂಗಳವಾರ (ಅ.14) ಹೇಳಿದ್ದಾರೆ.
ಈ ರಾಜಕೀಯ ಪದವಿ ಮೂರು ವರ್ಷಗಳ ಕೋರ್ಸ್ ಆಗಿದ್ದು, ಇದರ ಪಠ್ಯಕ್ರಮವು ರಾಜಕೀಯ ನೀತಿ ಸಂಹಿತೆ ಮತ್ತು ಸಿದ್ಧಾಂತವನ್ನು ಒಳಗೊಂಡಿರುತ್ತದೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ. ಇನ್ನು ಇದರ ಪಠ್ಯಕ್ರಮವನ್ನು ಸಿದ್ಧಪಡಿಸುವಾಗ ನಿವೃತ್ತ ಪ್ರಾಧ್ಯಾಪಕರು, ಹಿರಿಯ ರಾಜಕಾರಣಿಗಳು ಮತ್ತು ರಾಜಕೀಯದ ಬಗ್ಗೆ ಜ್ಞಾನವಿರುವ ಸಾರ್ವಜನಿಕರ ಸಲಹೆಯನ್ನು ಪಡೆಯಲಾಗುವುದು. ಇನ್ನು ಒಂದು ತಿಂಗಳಲ್ಲಿ ಇದರ ಬಗ್ಗೆ ಸಂಪೂರ್ಣ ಚಿತ್ರಣ ಹೊರಬರಲಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: SSLC, ದ್ವಿತೀಯ PUC ಪಾಸಿಂಗ್ ಮಾರ್ಕ್ಸ್ ಕಡಿತ
ಇನ್ನು ಈ ಬಗ್ಗೆ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಅವರೊಂದಿಗೆ ಚರ್ಚೆ ನಡೆಸಲಾಗಿದ್ದು, ಈ ವಿಚಾರವನ್ನು ಮುಖ್ಯಮಂತ್ರಿಗಳ ಬಳಿ ಪ್ರಸ್ತಾಪಿಸಲಾಗಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕೂಡ ಯೋಜಿತ ಕಾಲೇಜಿಗೆ ಅನುದಾನ ನೀಡುವ ಭರವಸೆ ನೀಡಿದ್ದಾರೆ.ಇದೇ ವೇಳೆ ರಾಜ್ಯದಲ್ಲಿ 29,000 ಶಿಕ್ಷಕರ ಹುದ್ದೆಗಳು ಖಾಲಿ ಇವೆ. 1,900 ಪ್ರಾಥಮಿಕ ಶಾಲೆಗಳಲ್ಲಿ 10 ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿದ್ದಾರೆ. ಅಧಿಕಾರದಲ್ಲಿರುವವರ ನಿರ್ಧಾರಗಳಿಂದಾಗಿ ಕನ್ನಡ ಮಾಧ್ಯಮ ಶಾಲೆಗಳು ದುರ್ಬಲವಾಗುತ್ತಿವೆ ಎಂದು ಹೇಳಿದ್ದಾರೆ.
ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:22 pm, Wed, 15 October 25




