education Tips in Kannada : SSLC ನಂತರ ಯಾವ ಕೋರ್ಸ್​​​​​ ಆಯ್ಕೆ ಮಾಡಿಕೊಳ್ಳಬೇಕು? ಈ ಕೋರ್ಸ್​​​ ಉತ್ತಮ

Karnataka SSLC Result 2024: ಇಂದು ಎಸ್​​​ಎಸ್​​​ಎಲ್​​​ಸಿ ವಿದ್ಯಾರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಕರ್ನಾಟಕ ಶಾಲಾ ಪರೀಕ್ಷೆಗಳು ಮತ್ತು ಮೌಲ್ಯಮಾಪನ ಮಂಡಳಿಯು ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ 2024 ವನ್ನು ಇಂದು (ಮೇ 9) ಬೆಳಗ್ಗೆ 10.30ಕ್ಕೆ ಪ್ರಕಟಿಸಲಿದೆ. ಫಲಿತಾಂಶ ಬಂದ ಖುಷಿಯೊಂದಿಗೆ ಮುಂದೆ ಯಾವ ಕೋರ್ಸ್ ಆಯ್ಕೆ ಮಾಡಿಕೊಳ್ಳಬೇಕು ಎನ್ನುವ ಗೊಂದಲ ವಿದ್ಯಾರ್ಥಿಗಳಲ್ಲಿ ಮೂಡುವುದು ಸಹಜ. ಆಯ್ಕೆಗಳು ನೂರಾರಿದ್ದರೂ ಯಾವುದು ಬೆಸ್ಟ್ ಎನ್ನುವ ಪ್ರಶ್ನೆಗೆ ಉತ್ತರವು ಇಲ್ಲಿದೆ.

education Tips in Kannada : SSLC ನಂತರ ಯಾವ ಕೋರ್ಸ್​​​​​ ಆಯ್ಕೆ ಮಾಡಿಕೊಳ್ಳಬೇಕು? ಈ ಕೋರ್ಸ್​​​ ಉತ್ತಮ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on:May 09, 2024 | 12:12 PM

ವಿದ್ಯಾರ್ಥಿಗಳ ಜೀವನದ ಮಹತ್ವದ ಘಟ್ಟ ಎಸ್​​​ಎಸ್​​​ಎಲ್​​​ಸಿ. ಹತ್ತನೇ ತರಗತಿ ಆದ ಬಳಿಕ ಯಾವ ಕೋರ್ಸ್ ಆಯ್ಕೆ ಮಾಡಿಕೊಳ್ಳುತ್ತೇವೆ ಎನ್ನುವುದರ ನಿಮ್ಮ ಉದೋಗ್ಯ ಕ್ಷೇತ್ರವು ನಿರ್ಧಾರವಾಗುತ್ತದೆ. ಆದರೆ ಮಾಹಿತಿಯ ಕೊರತೆ ಕೋರ್ಸ್ ಗಳ ಆಯ್ಕೆಯಲ್ಲಿ ಎಡವುತ್ತಿದ್ದಾರೆ. ಈ ವೇಳೆಯಲ್ಲಿ ನಿಮ್ಮ ಆಯ್ಕೆ ಸರಿಯಾಗಿದ್ದರೆ ನೀವು ಅಂದುಕೊಂಡ ಕ್ಷೇತ್ರದಲ್ಲಿ ಉದ್ಯೋಗವನ್ನು ಗಿಟ್ಟಿಸಿಕೊಳ್ಳಬಹುದು.

* ವಿಜ್ಞಾನ : ಹತ್ತನೇ ತರಗತಿಯ ನಂತರ ಹೆಚ್ಚಿನವರು ವಿಜ್ಞಾನ ವಿಷಯವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಈ ಪಿಸಿಎಂ ವಿಷಯಗಳನ್ನು ಅಧ್ಯಯನ ಮಾಡಿದರೆ ಎಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸಸ್, ರಕ್ಷಣಾ ಸೇವೆಗಳು, ಮರ್ಚೆಂಟ್ ನೇವಿ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಮುಂದುವರೆಯಬಹುದು. ಪಿಸಿಬಿ ವಿಷಯಗಳನ್ನು ಓದಿದರೆ ಔಷಧ, ಫಿಸಿಯೋಥೆರಪಿ, ಕೃಷಿ, ಪೋಷಣೆ ಮತ್ತು ಆಹಾರ ಪದ್ಧತಿ, ದಂತವೈದ್ಯಶಾಸ್ತ್ರ ಹೀಗೆ ಹಲವರು ಆಯ್ಕೆಗಳಿವೆ.

* ವಾಣಿಜ್ಯ ವಿಭಾಗ : ವ್ಯವಹಾರಗಳಲ್ಲಿ ಆಸಕ್ತಿಯಿರುವ ವಿದ್ಯಾರ್ಥಿಗಳು ಪಿಯುಸಿಯಲ್ಲಿ ವಾಣಿಜ್ಯವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಪಿಯುಸಿ ನಂತರ ಬಿಕಾಂ ಡಿಗ್ರಿ ಮಾಡಿ ಸ್ವಂತ ಬ್ಯುಸಿನೆಸ್ ಮಾಡಬಹುದು. ಅದಲ್ಲದೇ ವಾಣಿಜ್ಯ ವಿಷಯಗಳಲ್ಲಿ ಮುಂದುವರೆದರೆ ಚಾರ್ಟರ್ಡ್ ಅಕೌಂಟೆನ್ಸಿ, ಬ್ಯಾಂಕಿಂಗ್, ವಿಮೆ, ಹಣಕಾಸು ಹೀಗೆ ಹಲವಾರು ವೃತ್ತಿ ಆಯ್ಕೆಯನ್ನು ಕಾಣಬಹುದು.

* ಕಲಾ ವಿಭಾಗ : ಪಿಯುಸಿಯಲ್ಲಿ ಕಲಾ ವಿಭಾಗವನ್ನು ಆಯ್ಕೆ ಮಾಡಿಕೊಂಡರೆ ಸಮಾಜಶಾಸ್ತ್ರ, ಇತಿಹಾಸ, ಸಾಹಿತ್ಯ, ರಾಜ್ಯಶಾಸ್ತ್ರ, ಮನೋವಿಜ್ಞಾನ, ಅರ್ಥಶಾಸ್ತ್ರ, ತತ್ವಶಾಸ್ತ್ರ, ಲಲಿತಕಲೆ ವಿವಿಧ ವಿಷಯಗಳ ಬಗ್ಗೆ ಅಧ್ಯಯನ ಮಾಡಬಹುದು. ಕಲಾ ವಿಭಾಗದಲ್ಲಿ ಮುಂದುವರೆದರೆ ಪತ್ರಿಕೋದ್ಯಮ, ಸಾಹಿತ್ಯ, ಬರವಣಿಗೆ, ಶಿಕ್ಷಕರು ಹೀಗೆ ಹಲವಾರು ವೃತ್ತಿ ಆಯ್ಕೆಗಳು ವಿದ್ಯಾರ್ಥಿಗಳಿಗಿದೆ.

* ವೃತ್ತಿಪರ ಕೋರ್ಸ್‌ಗಳು : ಎಸ್‌ಎಸ್‌ಎಲ್‌ಸಿ ಬಳಿಕ ವೃತ್ತಿಪರ ಕೋರ್ಸ್‌ಗಳು ಇವೆ. ಸಾಫ್ಟ್‌ವೇರ್ ಡೆವಲಪ್‌ಮೆಂಟ್, ಫ್ಯಾಶನ್ ಡಿಸೈನಿಂಗ್, ಡೆಸ್ಕ್‌ಟಾಪ್ ಪಬ್ಲಿಷಿಂಗ್ , ಆಭರಣ ವಿನ್ಯಾಸ, ಪ್ರಯಾಣ ಮತ್ತು ಪ್ರವಾಸೋದ್ಯಮ, ಐಟಿಐ ಹೀಗೆ ವಿವಿಧ ಕೋರ್ಸ್‌ಗಳು ವಿದ್ಯಾರ್ಥಿಗಳಿಗೆ ಲಭ್ಯವಿದೆ.

ಇದನ್ನೂ ಓದಿ: ಇಂದು SSLC ಫಲಿತಾಂಶ ಪ್ರಕಟ, ರಿಸಲ್ಟ್​​​ ನೋಡಲು ಈ ವೆಬ್​ ಸೈಟ್​​​ಗಳಿಗೆ ಭೇಟಿ ನೀಡಿ

* ಪ್ಯಾರಾ ಮೆಡಿಕಲ್ ಕೋರ್ಸ್‌ಗಳು : ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಈ ಪ್ಯಾರಾ ಮೆಡಿಕಲ್ ಕೋರ್ಸ್ ಗಳನ್ನು ಹೆಚ್ಚಿನ ವಿದ್ಯಾರ್ಥಿಗಳ ಆಯ್ಕೆಗಳಲ್ಲಿ ಒಂದಾಗಿದೆ. ಈ ಕ್ಷೇತ್ರದಲ್ಲಿ ಎಕ್ಸ್-ರೇ ತಂತ್ರಜ್ಞ, ಡಯಾಲಿಸಿಸ್ ತಂತ್ರಜ್ಞ, ನರ್ಸಿಂಗ್ ಅಸಿಸ್ಟೆನ್ಸ್, ನೇತ್ರ ತಂತ್ರಜ್ಞ ಹೀಗೆ ಆಯ್ಕೆಗಳು ಹಲವಾರಿದೆ.

ಮತ್ತಷ್ಟು ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:58 am, Thu, 9 May 24

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ