Karnataka SSLC Result 2024 Live: ಕರ್ನಾಟಕ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟ, ಅಂಕಿತಾ ಬಸಪ್ಪ ರಾಜ್ಯಕ್ಕೆ ಪ್ರಥಮ
ಕರ್ನಾಟಕ ಎಸ್ಎಸ್ಎಲ್ಸಿ ಫಲಿತಾಂಶ 2024 Live: 2023-24ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶವು ಇಂದುಪ್ರಕಟಗೊಂಡಿದೆ. ಈ ಬಾರಿಯ ಪರೀಕ್ಷೆಯಲ್ಲಿ ಉಡುಪಿ ಮೊದಲ ಸ್ಥಾನ ಪಡೆದರೆ, ದಕ್ಷಿಣ ಕನ್ನಡ ಜಿಲ್ಲೆ ಎರಡನೇ ಸ್ಥಾನ, ಶಿವಮೊಗ್ಗ ಮೂರನೇ ಸ್ಥಾನ ಪಡೆದಿದೆ. ಯಾದಗಿರಿ ಕೊನೆಯ ಸ್ಥಾನದಲ್ಲಿದೆ. ಬಾಗಲಕೋಟೆಯ ಅಂಕಿತಾ ಬಸಪ್ಪ 625/625 ಅಂಕಗಳನ್ನು ಪಡೆದು ಟಾಪರ್ ಆಗಿದ್ದಾರೆ.
ಕರ್ನಾಟಕ ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶ(Karnataka SSLC Results 2024) ಪ್ರಕಟಗೊಂಡಿದೆ. 2023-24ನೇ ಸಾಲಿನ ಪರೀಕ್ಷೆಯಲ್ಲಿ ಶೇ.73.40ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಬಾರಿಯ ಪರೀಕ್ಷೆಯಲ್ಲಿ ಉಡುಪಿ ಮೊದಲ ಸ್ಥಾನ ಪಡೆದರೆ, ದಕ್ಷಿಣ ಕನ್ನಡ ಜಿಲ್ಲೆ ಎರಡನೇ ಸ್ಥಾನ, ಶಿವಮೊಗ್ಗ ಮೂರನೇ ಸ್ಥಾನ ಪಡೆದಿದೆ. ಯಾದಗಿರಿ ಕೊನೆಯ ಸ್ಥಾನದಲ್ಲಿದೆ. ಬಾಗಲಕೋಟೆಯ ಅಂಕಿತಾ ಬಸಪ್ಪ 625/625 ಅಂಕಗಳನ್ನು ಪಡೆದು ಟಾಪರ್ ಆಗಿದ್ದಾರೆ.
ಬೆಳಗ್ಗೆ 10.30ಕ್ಕೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸುದ್ದಿಗೋಷ್ಠಿ ನಡೆದಿತ್ತು. ಬಳಿಕ ಫಲಿತಾಂಶವು karresults.nic.in ವೆಬ್ಸೈಟ್ನಲ್ಲಿ ಪ್ರಕಟಗೊಂಡಿದೆ. ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್ kseab.karnataka.gov.in ಗೆ ಭೇಟಿ ನೀಡಿ ಫಲಿತಾಂಶವನ್ನು ನೋಡಬಹುದು.
ಕರ್ನಾಟಕದ ಒಟ್ಟು 2,750 ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಈ ಸಲದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದರು. ಈ ಬಾರಿ ಮಾರ್ಚ್ 25 ರಿಂದ ಏಪ್ರಿಲ್ 6ರವರೆಗೆ ಪರೀಕ್ಷೆ ನಡೆದಿತ್ತು, ಈ ಬಾರಿ ಎಸ್ಎಸ್ಎಲ್ಸಿ ಪರೀಕ್ಷೆಯನ್ನು 8.69 ಲಕ್ಷ ವಿದ್ಯಾರ್ಥಿಗಳು ಬರೆದಿದ್ದರು.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯು ಪ್ರಥಮ ಭಾಷೆಯ ಪತ್ರಿಕೆ, ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್ ಮತ್ತು ಸಂಸ್ಕೃತದೊಂದಿಗೆ ಪ್ರಾರಂಭವಾಯಿತು. ಏಪ್ರಿಲ್ 8 ರಂದು ಜೆಟಿಎಸ್ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಮತ್ತು ಮೌಖಿಕ ಪರೀಕ್ಷೆಗಳು ನಡೆದಿದ್ದವು.
ಮತ್ತಷ್ಟು ಓದಿ: Karnataka SSLC Result 2024: ಮೇ 9ರಂದು ಎಸ್ಎಸ್ಎಲ್ಸಿ ಫಲಿತಾಂಶ: ಆನ್ಲೈನ್ನಲ್ಲಿ ನೋಡೋದು ಹೇಗೆ?
ಇದರಲ್ಲಿ ವಿದ್ಯಾರ್ಥಿಗಳ ಸಂಖ್ಯೆ 4,41,910, ವಿದ್ಯಾರ್ಥಿನಿಯರು 4,28,058 ಮಂದಿ ಇದ್ದರು. ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶವು ಏಪ್ರಿಲ್ 10, 2024ರಂದು ಬಿಡುಗಡೆ ಮಾಡಲಾಗಿತ್ತು. ಈ ವರ್ಷದ ದ್ವಿತೀಯ ಪಿಯುಸಿಯ ಒಟ್ಟಾರೆ ಫಲಿತಾಂಶ ಶೇ.81.15 ರಷ್ಟಿದೆ.
ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
LIVE NEWS & UPDATES
-
Karnataka SSLC Result Live: SSLC ಫಲಿತಾಂಶ ಹೆಚ್ಚಿಸಲು 20 ಪರ್ಸೆಂಟ್ ಗ್ರೇಸ್ ಮಾರ್ಕ್ಸ್ ಕೊಟ್ಟ ಇಲಾಖೆ
20 ಪರ್ಸೆಂಟ್ ಗ್ರೇಸ್ ಮಾರ್ಕ್ಸ್ ಕೊಟ್ಟರೂ ಈ ಭಾರಿಯ ಫಲಿತಾಂಶ ಇಳಿಕೆಯಾಗಿದೆ. ಕನಿಷ್ಠ ಪರೀಕ್ಷೆ ಪಾಸ್ ಮಾರ್ಕ್ಸ್ 35 ರಿಂದ 25 ಅಂಕಗಳಿಗೆ ಇಳಿಸಿದ ಇಲಾಖೆ. ಬರೋಬ್ಬರಿ 1ಲಕ್ಷದ 70 ಸಾವಿರ ವಿದ್ಯಾರ್ಥಿಗಳಿಗೆ ಇಲಾಖೆಯಿಂದ ಗ್ರೇಸ್ ಮಾರ್ಕ್ಸ್ ಸಿಕ್ಕಿದೆ.
-
Karnataka SSLC Result Live: ಟಾಪರ್ ಅಂಕಿತಾ ಬಸಪ್ಪ ಪ್ರತಿಕ್ರಿಯೆ
ಭವಿಷ್ಯದಲ್ಲಿ ಐಎಎಸ್ ಮಾಡುವ ಕನಸು ಹೊಂದಿದ್ದೇನೆ ಎಂದು ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಟಾಪರ್ ಆದ ಅಂಕಿತಾ ಬಸಪ್ಪ ಟಿವಿ9ಗೆ ಪ್ರತಿಕ್ರಿಯಿಸಿದ್ದಾರೆ.
-
Karnataka SSLC Result Live: ಅಂಕಿತಾ ಬಸಪ್ಪ 625/625
ಅಂಕಿತಾ ಬಸಪ್ಪ 625ಕ್ಕೆ 625 ರಷ್ಟು ಅಂಕಗಳನ್ನು ಪಡೆದು ಮೊದಲ ಸ್ಥಾನದಲ್ಲಿದ್ದರೆ 7 ವಿದ್ಯಾರ್ಥಿಗಳು ಎರಡನೇ ಸ್ಥಾನದಲ್ಲಿದ್ದಾರೆ.
Karnataka SSLC Result Live: ಎಸ್ಎಸ್ಎಲ್ಸಿ ಪರೀಕ್ಷೆ, ಜಿಲ್ಲೆಗಳ ಶೇಖಡಾವಾರು ಫಲಿತಾಂಶ
ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉಡುಪಿ ಜಿಲ್ಲೆ 94% ಫಲಿತಾಂಶ, ದಕ್ಷಿಣ ಕನ್ನಡ 92.12%, ಶಿವಮೊಗ್ಗ 88.67%, ಕೊಡಗು 88.67%, ಉತ್ತರ ಕನ್ನಡ 86.54%, ಹಾಸನ 86.28%, ಮೈಸೂರು 85.5%, ಶಿರಸಿ 84.64%, ಬೆಂಗಳೂರು ಗ್ರಾ. 83.67%, ಚಿಕ್ಕಮಗಳೂರು 83.39%, ವಿಜಯಪುರ 79.82%, ಬೆಂಗಳೂರು ದಕ್ಷಿಣ 79%, ಬಾಗಲಕೋಟೆ 77.92%, ಬೆಂಗಳೂರು ಉತ್ತರ, 77.09%, ಹಾವೇರಿ 75.85%, ತುಮಕೂರು 75.16%, ಗದಗ 74.76%, ಚಿಕ್ಕಬಳ್ಳಾಪುರ 73.61%, ಮಂಡ್ಯ 73.59% ಕೋಲಾರ 73.57%, ಚಿತ್ರದುರ್ಗ 72.85%, ಧಾರವಾಡ 72.67%, ದಾವಣಗೆರೆ 72.49%, ಚಾಮರಾಜನಗರ 71.59%, ಚಿಕ್ಕೋಡಿ 69.82%, ರಾಮನಗರ 69.53%, ವಿಜಯನಗರ 65.61%, ಬಳ್ಳಾರಿ 64.99%, ಬೆಳಗಾವಿ 64.93%, ಮಧುಗಿರಿ 62.44%, ರಾಯಚೂರು 61.2%, ಕೊಪ್ಪಳ 61.16%, ಬೀದರ್ 57.52%, ಕಲಬುರಗಿ 53.04%, SSLC ಪರೀಕ್ಷೆಯಲ್ಲಿ ಯಾದಗಿರಿ ಜಿಲ್ಲೆ 50.59% ಫಲಿತಾಂಶ ಬಂದಿದೆ.
Karnataka SSLC Result Live: ಈ ಬಾರಿಯ ಒಟ್ಟು ಫಲಿತಾಂಶ ಶೇ.73.40
ಈ ಬಾರಿಯ ಒಟ್ಟು ಫಲಿತಾಂಶ ಶೇ.73.40 ಆಗಿದ್ದು, ಒಟ್ಟು 63,12,04 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಕಳೆದ ಬಾರಿ ಹೋಲಿಕೆ ಮಾಡಿದ್ರೆ ಈ ಬಾರಿ ಶೇಕಡ 10 ಫಲಿತಾಂಶ ಕುಸಿತ ಕಂಡಿದೆ.
Karnataka SSLC Result Live: ಕಾರ್ಕಳದ ಸಹನಾಗೆ ಮೂರನೇ ಸ್ಥಾನ
ಕಳೆದ ಸಾಲಿನಲ್ಲಿ ಉಡುಪಿ ಜಿಲ್ಲೆ 18ನೇ ಸ್ಥಾನ ಪಡೆದಿತ್ತು, ಕಾರ್ಕಳ ತಾಲೂಕಿನ ಜ್ಞಾನಸುಧಾ ವಿದ್ಯಾರ್ಥಿನಿ ಸಹನಾ 623 ಅಂಕ ಪಡೆದು ರಾಜ್ಯಕ್ಕೆ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ.
Karnataka SSLC Result Live: ಅಂಕಿತಾ ಬಸಪ್ಪ ಮೆಳ್ಳಿಗೇರಿ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿನಿ
ಎಸ್ಎಸ್ಎಲ್ಸಿಯಲ್ಲಿ ಪ್ರಥಮ ಸ್ಥಾನ ಪಡೆದ ಅಂಕಿತಾ ಬಸಪ್ಪ ಬಾಗಲಕೋಟೆಯ ಮೆಳ್ಳಿಗೇರಿ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿನಿಯಾಗಿದ್ದಾರೆ.
Karnataka SSLC Result Live: ಬಾಗಲಕೋಟೆಯ ಅಂಕಿತಾ ಬಸಪ್ಪ ರಾಜ್ಯಕ್ಕೆ ಪ್ರಥಮ ಸ್ಥಾನ
ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಬಾಗಲಕೋಟೆಯ ಅಂಕಿತಾ ಬಸಪ್ಪ ಮೊದಲನೇ ಸ್ಥಾನಗಳಿಸಿದ್ದಾರೆ. ಬೆಂಗಳೂರಿನ ಮೇದಾ ಪಿ ಶೆಟ್ಟಿ ಎರಡನೇ ಸ್ಥಾನ ಪಡೆದಿದ್ದಾರೆ.
Karnataka SSLC Result Live: ದಕ್ಷಿಣ ಕನ್ನಡ, ಶಿವಮೊಗ್ಗ ಶೇಕಡಾವಾರು ಫಲಿತಾಂಶ
ದಕ್ಷಿಣ ಕನ್ನಡ ಜಿಲ್ಲೆ 92.12%, ಶಿವಮೊಗ್ಗ ಜಿಲ್ಲೆ 88.67%, ಕೊಡಗು ಜಿಲ್ಲೆ 88.67% ರಷ್ಟಿದೆ.
Karnataka SSLC Result Live: ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ದಕ್ಷಿಣ ಕನ್ನಡಕ್ಕೆ ಎರಡನೇ ಸ್ಥಾನ
ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಎರಡನೇ ಸ್ಥಾನ ಹಾಗೂ ಶಿವಮೊಗ್ಗ ಜಿಲ್ಲೆ ಮೂರನೇ ಸ್ಥಾನದಲ್ಲಿದೆ.
Karnataka SSLC Result Live: ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ಉಡುಪಿ ಜಿಲ್ಲೆ ಶೇ.94
ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ಉಡುಪಿ ಜಿಲ್ಲೆ ಶೇ.94 ಫಲಿತಾಂಶ ಪಡೆದು ಮೊದಲ ಸ್ಥಾನದಲ್ಲಿದೆ.
Karnataka SSLC Result Live: ಎಸ್ಎಸ್ಎಲ್ಸಿ ಫಲಿತಾಂಶ, ಉಡುಪಿಗೆ ಮೊದಲ ಸ್ಥಾನ
ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ಉಡುಪಿ ಜಿಲ್ಲೆಗೆ ಮೊದಲ ಸ್ಥಾನ ಗಳಿಸಿದೆ. ಯಾದಗಿರಿ ಕೊನೆಯ ಸ್ಥಾನದಲ್ಲಿದೆ.
Karnataka SSLC Result Live: ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಈ ಬಾರಿಯೂ ಬಾಲಕಿಯರೇ ಮೈಲುಗೈ
ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಈ ಬಾರಿಯೂ ಬಾಲಕಿಯರೇ ಮೈಲುಗೈ ಸಾಧಿಸಿದ್ದಾರೆ.
Karnataka SSLC Result Live: ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 631204 ವಿದ್ಯಾರ್ಥಿಗಳು ಪಾಸ್
ಈ ಬಾರಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 631204 ವಿದ್ಯಾರ್ಥಿಗಳು ಪಾಸಾಗಿದ್ದಾರೆ, ಈ ಬಾರಿ ರಾಜ್ಯಾದ್ಯಂತ 76.91ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
Karnataka SSLC Result Live: ಈ ವೆಬ್ಸೈಟ್ಗಳಲ್ಲಿ ಎಸ್ಎಸ್ಎಲ್ಸಿ ಫಲಿತಾಂಶ ಲಭ್ಯ
ಈ ವೆಬ್ಸೈಟ್ಗಳಲ್ಲಿ ಎಸ್ಎಸ್ಎಲ್ಸಿ ಫಲಿತಾಂಶ ಲಭ್ಯವಿದೆ. kseeb.kar.nic.in & karresults.nic.inನಲ್ಲಿ SSLC ಫಲಿತಾಂಶ ಲಭ್ಯವಿರಲಿದೆ.
Karnataka SSLC Result Live: ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧ್ಯಕ್ಷೆ ಮಂಜುಶ್ರೀ ಸುದ್ದಿಗೋಷ್ಠಿ
ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧ್ಯಕ್ಷೆ ಮಂಜುಶ್ರೀ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.
Karnataka SSLC Result Live: ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟ
ಕರ್ನಾಟಕದ ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟಗೊಂಡಿದೆ.
Karnataka SSLC Result Live: ಪಾಸಾದರೂ ಅಂಕ ಹೆಚ್ಚಿಸಿಕೊಳ್ಳಲು ಪರೀಕ್ಷೆ-2, ಪರೀಕ್ಷೆ-3 ಬರೆಯಬಹುದು
ಪಾಸಾಗಲಿ ಅಥವಾ ಫೇಲಾಗಲಿ 3 ಬಾರಿ ಪರೀಕ್ಷೆ ಬರೆಯಲು ಅವಕಾಶ, ಪಾಸಾದರೂ ಅಂಕ ಹೆಚ್ಚಿಸಿಕೊಳ್ಳಲು ಪರೀಕ್ಷೆ-2, ಪರೀಕ್ಷೆ-3 ಬರೆಯಬಹುದು.
Karnataka SSLC Result Live: ಅಧಿಕೃತ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಲಾದ ಮಾರ್ಕ್ ಶೀಟ್ ತಾತ್ಕಾಲಿಕ
ಅಧಿಕೃತ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಲಾದ ಆನ್‌ಲೈನ್ ಮಾರ್ಕ್ ಶೀಟ್ ತಾತ್ಕಾಲಿಕವಾಗಿರುವುದರಿಂದ, ವಿದ್ಯಾರ್ಥಿಗಳು ತಮ್ಮ ಶಾಲೆಗಳ ಅಧಿಕೃತ ಸೂಚನೆಯ ಪ್ರಕಾರ ಫಲಿತಾಂಶಗಳನ್ನು ಪ್ರಕಟಿಸಿದ ಕೆಲವು ದಿನಗಳ ನಂತರ ತಮ್ಮ ಶಾಲೆಗಳಿಂದ SSLC ಮಾರ್ಕ್‌ಶೀಟ್ ಪಡೆಯಬೇಕು.
Karnataka SSLC Result Live: ಫಲಿತಾಂಶ ವೀಕ್ಷಿಸುವ ಮುನ್ನ ಈ ವಿಚಾರ ಗಮನದಲ್ಲಿರಲಿ
ವಿದ್ಯಾರ್ಥಿಗಳು ತಮ್ಮ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನೆನಪಿನಲ್ಲಿಟ್ಟುಕೊಂಡಿರಬೇಕು ಏಕೆಂದರೆ ಫಲಿತಾಂಶಗಳ ಪೋರ್ಟಲ್ – karresults.nic.in ಗೆ ಲಾಗ್ ಇನ್ ಮಾಡಲು ಈ ವಿವರಗಳು ಬೇಕಾಗುತ್ತವೆ.
Karnataka SSLC Result Live: ಕಳೆದ ವರ್ಷದ ಫಲಿತಾಂಶ ಏನಾಗಿತ್ತು?
ಕಳೆದ ವರ್ಷ ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ 8 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಜರಾಗಿದ್ದರು. ಕರ್ನಾಟಕ SSLC 2023 ಪರೀಕ್ಷೆಗಳಲ್ಲಿ ಒಟ್ಟಾರೆ ಉತ್ತೀರ್ಣ ಶೇಕಡಾ 83.89%. ಈ ವರ್ಷ, ಕರ್ನಾಟಕ 10 ನೇ ತರಗತಿಯ ಒಟ್ಟಾರೆ ಉತ್ತೀರ್ಣ ಶೇಕಡಾವಾರು ಪ್ರಮಾಣವನ್ನು ಮೇ 9, 2024 ರಂದು ಪ್ರಕಟಿಸಲಾಗುತ್ತಿದೆ.
Karnataka SSLC Result Live: ಇನ್ನು ಕೆಲವೇ ಕ್ಷಣಗಳಲ್ಲಿ ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟ
ಇನ್ನು ಕೆಲವೇ ಕ್ಷಣಗಳಲ್ಲಿ ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟಗೊಳ್ಳಲಿದೆ. ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ ನಿಮಗೆ ಇಲ್ಲಿ ಸಿಗಲಿದೆ.
Karnataka SSLC Result Live: 8.69 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು
ಕರ್ನಾಟಕದಲ್ಲಿ ಈ ಸಲ ಎಸ್ಎಸ್‌ಎಲ್‌ಸಿ ಪರೀಕ್ಷೆಗೆ 8.69 ಲಕ್ಷ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ಈ ಪೈಕಿ 4.41 ಲಕ್ಷ ಬಾಲಕರು, 4.28 ಬಾಲಕಿಯರು. ಅಲ್ಲದೆ, 18,225 ಖಾಸಗಿ ವಿದ್ಯಾರ್ಥಿಗಳು, 41,375 ಪುನರಾವರ್ತಿತ ವಿದ್ಯಾರ್ಥಿಗಳು ಹಾಗೂ 5,424 ವಿಭಿನ್ನ ಸಾಮರ್ಥ್ಯದ ವಿದ್ಯಾರ್ಥಿಗಳು ಕರ್ನಾಟಕದ 2,750 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆದಿದ್ದರು.
Karnataka SSLC Result Live: ಸುದ್ದಿಗೋಷ್ಠಿ ಮುಗಿದ ಬಳಿಕ ಫಲಿತಾಂಶ ಪ್ರಕಟ
ಸುದ್ದಿಗೋಷ್ಠಿ ಬಳಿಕ ಎಲ್ಲ ಶಾಲೆಗಳ ಫಲಿತಾಂಶ ಪ್ರಕಟವಾಗುತ್ತದೆ. ಅಧಿಕೃತ ವೆಬ್‌ಸೈಟ್‌ಗಳಲ್ಲೂ ಫಲಿತಾಂಶ ಲಭ್ಯವಿರಲಿದೆ.
Karnataka SSLC Result Live: ಈ ವೆಬ್ಸೈಟ್ಗಳಲ್ಲಿ ಫಲಿತಾಂಶ ವೀಕ್ಷಿಸಬಹುದು
ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ಕರ್ನಾಟಕ ಫಲಿತಾಂಶಗಳ ಅಧಿಕೃತ ವೆಬ್‌ಸೈಟ್ karresults.nic.in ನಲ್ಲಿ ಅಥವಾ kseab.karnataka.gov.in ನಲ್ಲಿ ನೇರ ಲಿಂಕ್ ಮೂಲಕವೂ ಪರಿಶೀಲಿಸಬಹುದು.
Karnataka SSLC Result Live: ಇಂದು ಬೆಳಗ್ಗೆ 10.30ಕ್ಕೆ ಪರೀಕ್ಷೆ ಫಲಿತಾಂಶ ಪ್ರಕಟ
ಇಂದು ಬೆಳಗ್ಗೆ 10.30ಕ್ಕೆ ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯಲ್ಲಿ ಸುದ್ದಿಗೋಷ್ಠಿ ನಡೆಯಲಿದೆ.
Karnataka SSLC Result Live: ಮಾರ್ಚ್-ಏಪ್ರಿಲ್ ತಿಂಗಳಲ್ಲಿ ನಡೆದಿತ್ತು ಎಸ್ಎಸ್ಎಲ್ಸಿ ಪರೀಕ್ಷೆ
ಎಸ್‌ಎಸ್‌ಎಲ್‌ಸಿ ಪರೀಕ್ಷೆ 1 ಅನ್ನು ಮಾರ್ಚ್ – ಏಪ್ರಿಲ್‌ನಲ್ಲಿ ನಡೆಸಲಾಯಿತು. ಎಲ್ಲ ವಿಷಯಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಈಗಾಗಲೇ ನಡೆದಿದೆ.
Published On - May 09,2024 8:04 AM