CBSE Exam: ಇಂದಿನಿಂದ CBSE ಬೋರ್ಡ್ ಪರೀಕ್ಷೆ ಆರಂಭ; ವಿದ್ಯಾರ್ಥಿಗಳೇ ಈ ವಿಷ್ಯ ನೆನಪಿರಲಿ

ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯ (CBSE) 10ನೇ ಮತ್ತು 12ನೇ ತರಗತಿಯ ಪರೀಕ್ಷೆಗಳು ಫೆಬ್ರವರಿ 15 ರಿಂದ ಪ್ರಾರಂಭವಾಗಿವೆ. ಪರೀಕ್ಷಾ ಕೇಂದ್ರಕ್ಕೆ ಸಮಯಕ್ಕೆ ತಲುಪುವುದು ಅತ್ಯಗತ್ಯ. ಪರೀಕ್ಷಾ ಹಾಲ್‌ಗೆ ನೀಲಿ ಶಾಯಿ ಪೆನ್, ಐಡಿ ಕಾರ್ಡ್, ಹಾಲ್ ಟಿಕೆಟ್ ತರುವುದನ್ನು ಮರೆಯದಿರಿ. ಜೊತೆಗೆ ಮೊಬೈಲ್, ಕ್ಯಾಲ್ಕುಲೇಟರ್, ಇತರ ಎಲೆಕ್ಟ್ರಾನಿಕ್ ಸಾಧನಗಳನ್ನು ತರಬಾರದು. ನಿಯಮಾವಳಿಗಳನ್ನು ಉಲ್ಲಂಘಿಸಿದರೆ ತೀವ್ರ ಪರಿಣಾಮಗಳು ಎದುರಾಗಬಹುದು.

CBSE Exam: ಇಂದಿನಿಂದ CBSE ಬೋರ್ಡ್ ಪರೀಕ್ಷೆ ಆರಂಭ; ವಿದ್ಯಾರ್ಥಿಗಳೇ ಈ ವಿಷ್ಯ ನೆನಪಿರಲಿ
Cbse 10th And 12th Board Exams

Updated on: Feb 15, 2025 | 1:16 PM

ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯ ಅಂದರೆ CBSE ಯ 10 ನೇ ಮತ್ತು 12 ನೇ ತರಗತಿಯ ಬೋರ್ಡ್ ಪರೀಕ್ಷೆಗಳು ಫೆಬ್ರವರಿ 15 ರಿಂದ ಅಂದರೆ ಇಂದಿನಿಂದ ಪ್ರಾರಂಭವಾಗಿದೆ. 10 ನೇ ತರಗತಿಯ ಬೋರ್ಡ್ ಪರೀಕ್ಷೆಯು ಇಂಗ್ಲಿಷ್ (ಸಂವಹನ) ಮತ್ತು ಇಂಗ್ಲಿಷ್ (ಭಾಷೆ ಮತ್ತು ಸಾಹಿತ್ಯ) ಪತ್ರಿಕೆಗಳೊಂದಿಗೆ ಪ್ರಾರಂಭವಾಗಿದೆ. ಈ ಪರೀಕ್ಷೆಗಳು ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 1:30 ರವರೆಗೆ ನಡೆಯಲಿವೆ. ಪರೀಕ್ಷೆ ಬರೆಯುವ ಎಲ್ಲಾ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರವನ್ನು ಯಾವಾಗ ತಲುಪಬೇಕು, ಪರೀಕ್ಷಾ ಹಾಲ್‌ಗೆ ಏನು ತೆಗೆದುಕೊಂಡು ಹೋಗಬೇಕು ಮತ್ತು ಏನು ತೆಗೆದುಕೊಂಡು ಹೋಗಬಾರದು ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಈ ಎಲ್ಲಾ ವಿಷಯಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.

ಎಷ್ಟು ಸಮಯದವರೆಗೆ ಪ್ರವೇಶ ಲಭ್ಯವಿರುತ್ತದೆ?

ಸಿಬಿಎಸ್‌ಇ ಬೋರ್ಡ್ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಯಾವಾಗ ಪ್ರವೇಶ ಪಡೆಯುತ್ತಾರೆ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಮಂಡಳಿ ಹೊರಡಿಸಿದ ಮಾರ್ಗಸೂಚಿಗಳ ಪ್ರಕಾರ, ಬೆಳಿಗ್ಗೆ 10 ಗಂಟೆಯ ನಂತರ ಯಾವುದೇ ವಿದ್ಯಾರ್ಥಿಯನ್ನು ಪರೀಕ್ಷಾ ಕೇಂದ್ರಕ್ಕೆ ಪ್ರವೇಶಿಸಲು ಅನುಮತಿಸಲಾಗುವುದಿಲ್ಲ. ಆದ್ದರಿಂದ ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರವನ್ನು ತಲುಪಬೇಕಾಗುತ್ತದೆ.

ಪರೀಕ್ಷಾ ಕೇಂದ್ರಕ್ಕೆ ಹೋಗುವಾಗ ಏನು ಧರಿಸಬೇಕು?

ವಿದ್ಯಾರ್ಥಿಗಳು ಶಾಲಾ ಸಮವಸ್ತ್ರ ಧರಿಸಿ ಪರೀಕ್ಷಾ ಕೇಂದ್ರಕ್ಕೆ ಹೋಗಬೇಕು, ಖಾಸಗಿ ವಿದ್ಯಾರ್ಥಿಗಳು ಹಗುರವಾದ ಬಟ್ಟೆ ಧರಿಸಲು ಅವಕಾಶವಿದೆ. ಇದಲ್ಲದೆ, ಅತ್ಯಂತ ಮುಖ್ಯವಾದ ವಿಷಯವೆಂದರೆ ನಿಮ್ಮ ಶಾಲಾ ಐಡಿ ಕಾರ್ಡ್​​ ಮತ್ತು ಪರೀಕ್ಷಾ ಹಾಲ್​ ಟಿಕೆಟನ್ನು ತೆಗೆದುಕೊಂಡಲು ಹೋಗಲು ಮರೆಯದಿರಿ.

ಪರೀಕ್ಷಾ ಹಾಲ್‌ಗೆ ಏನು ತೆಗೆದುಕೊಂಡು ಹೋಗಬೇಕು?

ಸಿಬಿಎಸ್‌ಇ ಮಾರ್ಗಸೂಚಿಗಳ ಪ್ರಕಾರ, ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಪರೀಕ್ಷಾ ಸಭಾಂಗಣದೊಳಗೆ ನೀಲಿ/ರಾಯಲ್ ನೀಲಿ ಶಾಯಿ/ಬಾಲ್ ಪಾಯಿಂಟ್/ಜೆಲ್ ಪೆನ್, ಬರವಣಿಗೆ ಪ್ಯಾಡ್, ಎರೇಸರ್, ಜ್ಯಾಮಿತಿ/ಪೆನ್ಸಿಲ್ ಬಾಕ್ಸ್, ಸ್ಕೇಲ್, ಪಾರದರ್ಶಕ ಚೀಲ ಮತ್ತು ಪಾರದರ್ಶಕ ನೀರಿನ ಬಾಟಲ್, ಸಾಮಾನ್ಯ ವಾಚ್, ಮೆಟ್ರೋ ಕಾರ್ಡ್, ಬಸ್ ಪಾಸ್ ಮತ್ತು ಹಣವನ್ನು ತೆಗೆದುಕೊಂಡು ಹೋಗಬಹುದು.

ಇದನ್ನೂ ಓದಿ: ಬಡತನವನ್ನು ಮೆಟ್ಟಿನಿಂತು ಸಹೋದರಿಯರ ಸಾಧನೆ; ಅಕ್ಕ IAS, ತಂಗಿ IPS ಅಧಿಕಾರಿ

ಪರೀಕ್ಷಾ ಹಾಲ್‌ಗೆ ಏನು ತೆಗೆದುಕೊಂಡು ಹೋಗಬಾರದು?

ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಪರೀಕ್ಷಾ ಕೊಠಡಿಗೆ ಪುಸ್ತಕಗಳು, ಕಾಗದದ ತುಂಡುಗಳು, ಎಲೆಕ್ಟ್ರಾನಿಕ್ ಪೆನ್ನು, ಸ್ಕ್ಯಾನರ್, ಪೆನ್ ಡ್ರೈವ್, ಕ್ಯಾಲ್ಕುಲೇಟರ್, ಮೊಬೈಲ್, ಇಯರ್‌ಫೋನ್‌ಗಳು, ಮೈಕ್ರೊಫೋನ್, ಬ್ಲೂಟೂತ್, ಸ್ಮಾರ್ಟ್ ವಾಚ್, ಕ್ಯಾಮೆರಾ, ಪೇಜರ್ ಮತ್ತು ಹೆಲ್ತ್ ಬ್ಯಾಂಡ್ ಇತ್ಯಾದಿಗಳನ್ನು ತೆಗೆದುಕೊಂಡು ಹೋಗಬಾರದು. ಇಲ್ಲದಿದ್ದರೆ ಸಿಕ್ಕಿಬಿದ್ದರೆ ಅವರನ್ನು ಪರೀಕ್ಷೆಯಿಂದ ಹೊರಹಾಕಬಹುದು ಮತ್ತು ಎರಡು ವರ್ಷಗಳ ಕಾಲ ಪರೀಕ್ಷೆಯಿಂದ ನಿಷೇಧಿಸಬಹುದು. ಆದ್ದರಿಂದ ಪರೀಕ್ಷಾ ಕೊಠಡಿಗೆ ಹೋಗುವ ಮೊದಲು ಏನು ತೆಗೆದುಕೊಂಡು ಹೋಗಬೇಕು ಮತ್ತು ತೆಗೆದುಕೊಂಡು ಹೋಗಬಾರದು ಎಂಬುದನ್ನು ತಿಳಿದುಕೊಳ್ಳುವುದು ಅಗತ್ಯ.

ಶಿಕ್ಷಣಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ