2027 ರ ಸಿಬಿಎಸ್‌ಇ ಬೋರ್ಡ್ ಪರೀಕ್ಷೆಗೆ ಸಿದ್ಧತೆ ಮತ್ತು ಮಂಡಳಿಯ ಕಟ್ಟುನಿಟ್ಟಿನ ಸೂಚನೆ

ಸಿಬಿಎಸ್‌ಇ 2027 ಮಂಡಳಿ ಪರೀಕ್ಷೆಗಳ ಸಿದ್ಧತೆಗಳು ಆರಂಭವಾಗಿವೆ. ನೋಂದಣಿ ಮತ್ತು ಅಭ್ಯರ್ಥಿಗಳ ಪಟ್ಟಿ (LOC) ಮಾಹಿತಿಯನ್ನು ಶಾಲೆಗಳು ಸಂಪೂರ್ಣವಾಗಿ ಮತ್ತು ಸರಿಯಾಗಿ ನಮೂದಿಸುವುದು ಕಡ್ಡಾಯ. ಪ್ರವೇಶ ಪತ್ರ, ಪರೀಕ್ಷಾ ಪ್ರಕ್ರಿಯೆಯಲ್ಲಿ ಯಾವುದೇ ಸಮಸ್ಯೆಗಳು ಎದುರಾಗದಂತೆ ಡೇಟಾವನ್ನು ಸಲ್ಲಿಸುವ ಮುನ್ನ ಪ್ರತಿಯೊಂದು ಮಾಹಿತಿಯನ್ನು ಪರೀಕ್ಷಿಸಬೇಕು ಎಂದು ಮಂಡಳಿ ಸೂಚಿಸಿದೆ. ತಾತ್ಕಾಲಿಕ ದಿನಾಂಕ ಪಟ್ಟಿ ಶೀಘ್ರದಲ್ಲೇ ಬಿಡುಗಡೆಯಾಗಲಿದ್ದು, ವಿದ್ಯಾರ್ಥಿಗಳು, ಪೋಷಕರು LOC ವಿವರಗಳನ್ನು ಪರಿಶೀಲಿಸುವುದು ಉತ್ತಮ.

2027 ರ ಸಿಬಿಎಸ್‌ಇ ಬೋರ್ಡ್ ಪರೀಕ್ಷೆಗೆ ಸಿದ್ಧತೆ ಮತ್ತು ಮಂಡಳಿಯ ಕಟ್ಟುನಿಟ್ಟಿನ ಸೂಚನೆ
ಸಿಬಿಎಸ್‌ಇ

Updated on: Sep 13, 2026 | 4:42 PM

2027 ರ ಸಿಬಿಎಸ್‌ಇ (CBSE) ಮಂಡಳಿ ಪರೀಕ್ಷೆಗಳಿಗೆ ಸಿದ್ಧತೆಗಳು ಆರಂಭವಾಗಿದ್ದು, ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಯು ದೇಶೀಯ ಮತ್ತು ಅಂತರರಾಷ್ಟ್ರೀಯ ಅಂಗಸಂಸ್ಥೆ ಶಾಲೆಗಳಿಗೆ ಮಹತ್ವದ ಸೂಚನೆ ನೀಡಿದೆ. ವಿದ್ಯಾರ್ಥಿಗಳ ನೋಂದಣಿ ಮತ್ತು ಅಭ್ಯರ್ಥಿಗಳ ಪಟ್ಟಿ (LOC) ಮಾಹಿತಿಯನ್ನು ಸಂಪೂರ್ಣವಾಗಿ ಮತ್ತು ಸರಿಯಾಗಿ ನಮೂದಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ಮಂಡಳಿ ತಿಳಿಸಿದೆ. ಪ್ರವೇಶ ಪತ್ರ ಮತ್ತು ಪರೀಕ್ಷಾ ಪ್ರಕ್ರಿಯೆಯ ಸಮಯದಲ್ಲಿ ಯಾವುದೇ ಸಮಸ್ಯೆಗಳು ಎದುರಾಗದಂತೆ ಡೇಟಾವನ್ನು ಸಲ್ಲಿಸುವ ಮೊದಲು ಶಾಲೆಗಳು ಪ್ರತಿಯೊಂದು ಮಾಹಿತಿಯನ್ನು ಪರೀಕ್ಷಿಸಬೇಕು ಎಂದು ಸಿಬಿಎಸ್‌ಇ ಹೇಳಿದೆ.

LOC (ಅಭ್ಯರ್ಥಿಗಳ ಪಟ್ಟಿ) ಎಂದರೇನು ಮತ್ತು ಅದರ ಪ್ರಾಮುಖ್ಯತೆ ಏನು?

ಅಭ್ಯರ್ಥಿಗಳ ಪಟ್ಟಿ (List of Candidates – LOC) ಬೋರ್ಡ್ ಪರೀಕ್ಷೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳ ಅಧಿಕೃತ ವಿವರಗಳನ್ನು ಹೊಂದಿರುತ್ತದೆ. ಇದರಲ್ಲಿ ವಿದ್ಯಾರ್ಥಿಯ ಹೆಸರು, ಪೋಷಕರ ಹೆಸರು, ಜನ್ಮ ದಿನಾಂಕ ಮತ್ತು ಆಯ್ಕೆ ಮಾಡಿದ ವಿಷಯಗಳ ಕೋಡ್‌ಗಳು ಇರುತ್ತವೆ. ಈ ಮಾಹಿತಿಯ ಆಧಾರದ ಮೇಲೆಯೇ ಪರೀಕ್ಷೆಯ ಹಾಲ್ ಟಿಕೆಟ್ (Admit Card) ತಯಾರಿಸಲಾಗುತ್ತದೆ ಹಾಗೂ ಪರೀಕ್ಷಾ ಕೇಂದ್ರಗಳಿಗೆ ಸಂಬಂಧಿಸಿದ ವಿಷಯಗಳ ಪ್ರಶ್ನೆ ಪತ್ರಿಕೆಗಳನ್ನು ರವಾನಿಸಲಾಗುತ್ತದೆ. ಆದ್ದರಿಂದ ಈ ದತ್ತಾಂಶದಲ್ಲಿ ಕಾಗುಣಿತ ತಪ್ಪುಗಳಾಗಲಿ ಅಥವಾ ವಿಷಯದ ಕೋಡ್ ಬದಲಾವಣೆಯಾಗಲಿ ಇರಬಾರದು.

ಇದನ್ನೂ ಓದಿ: ಕಾಲೇಜಿನಲ್ಲಿ ರಾತ್ರಿ ಕಾವಲುಗಾರನ ಕೆಲಸ ಮಾಡುತ್ತಲೇ ಓದಿ ಸತತ 3 ಸರ್ಕಾರಿ ಉದ್ಯೋಗ ಗಿಟ್ಟಿಸಿಕೊಂಡ ಸಾಧಕ!

ದೋಷಗಳಿಂದ ವಿದ್ಯಾರ್ಥಿಗಳಿಗೆ ಎದುರಾಗುವ ಸವಾಲುಗಳು:

ಹಿಂದಿನ ವರ್ಷಗಳಲ್ಲಿ ತಪ್ಪಾದ ವಿಷಯ ಸಂಕೇತಗಳು, ವಿಷಯಗಳ ಅದಲು-ಬದಲು ಮತ್ತು ವೈಯಕ್ತಿಕ ಮಾಹಿತಿಯಲ್ಲಿ ದೋಷಗಳು ಕಂಡುಬಂದಿದ್ದವು ಎಂದು ಮಂಡಳಿ ನೆನಪಿಸಿದೆ. ಅಲ್ಲದೆ, ಕೆಲವು ಶಾಲೆಗಳು ಕೊನೆಯ ಗಡುವಿನ ನಂತರ ಡೇಟಾ ಸಲ್ಲಿಸಲು ಪ್ರಯತ್ನಿಸುವುದರಿಂದ ಮಂಡಳಿಯ ಪ್ರಕ್ರಿಯೆಗೆ ಅಡೆತಡೆಯುಂಟಾಗುತ್ತದೆ. ಇಂತಹ ತಪ್ಪುಗಳಿಂದ ವಿದ್ಯಾರ್ಥಿಗಳು ಪರೀಕ್ಷಾ ಸಮಯದಲ್ಲಿ ಮತ್ತು ಫಲಿತಾಂಶದ ವೇಳೆ ಅನಗತ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ತಾತ್ಕಾಲಿಕ ಡೇಟ್‌ಶೀಟ್:

CBSE 2027 ಬೋರ್ಡ್ ಪರೀಕ್ಷೆಗಳ ಆಡಳಿತಾತ್ಮಕ ಸಿದ್ಧತೆಗಳ ನಡುವೆ, ಮಂಡಳಿಯು ತಾತ್ಕಾಲಿಕ ದಿನಾಂಕ ಪಟ್ಟಿಯನ್ನು (Time Table / Date Sheet) ಶೀಘ್ರದಲ್ಲೇ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಪರೀಕ್ಷಾ ವೇಳಾಪಟ್ಟಿಯನ್ನು ಮುಂಚಿತವಾಗಿಯೇ ಬಿಡುಗಡೆ ಮಾಡುವುದರಿಂದ ವಿದ್ಯಾರ್ಥಿಗಳು ತಮ್ಮ ಅಭ್ಯಾಸ ಮತ್ತು ರಿವಿಷನ್‌ ಯೋಜನೆಯನ್ನು ಉತ್ತಮವಾಗಿ ಸಿದ್ಧಪಡಿಸಿಕೊಳ್ಳಲು ನೆರವಾಗುತ್ತದೆ. ಆದ್ದರಿಂದ ಶಾಲೆಗಳು, ವಿದ್ಯಾರ್ಥಿಗಳು ಮತ್ತು ಪೋಷಕರು LOC ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸುವಂತೆ ಮಂಡಳಿ ಸೂಚಿಸಿದೆ.

ಶಿಕ್ಷಣಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us