ಶಾಲಾ ಕಾಲೇಜು ಪಠ್ಯದಲ್ಲಿ ಹೊಸ ವಿಷಯ ಸೇರ್ಪಡೆ ಮಾಡುವ ಬಗ್ಗೆ ಬಸವರಾಜ ಬೊಮ್ಮಾಯಿ ಮಾಹಿತಿ
ಶಾಲೆ ಕಾಲೇಜುಗಳಲ್ಲಿ ಕೂಡ ವಿದ್ಯಾರ್ಥಿಗಳಿಗೆ ವೈಜ್ಞಾನಿಕ ಸಂಶೋಧನೆ, ವೈಜ್ಞಾನಿಕ ಚಿಂತನೆ ಅದಲ್ಲದೆ ನವ ಉದ್ಯಮಕ್ಕೆ ಭದ್ರ ಬುನಾದಿ ಹಾಕಬೇಕಾದ ಮಹತ್ವಾಕಾಂಕ್ಷೆಯ ಯೋಜನೆಯನ್ನು ಸರ್ಕಾರ ತರಲಿದೆ ಎಂದು ಬೊಮ್ಮಾಯಿ ತಿಳಿಸಿದ್ದಾರೆ.
ಶಾಲೆಗಳಲ್ಲಿ ಇನ್ನೋವೇಟೀವ್ ಮತ್ತು ಎಂಟರ್ಪ್ರಿನರ್ಶಿಪ್ ಎಂಬ ಎರಡು ಹೊಸ ವಿಷಯಗಳನ್ನು ಮುಂಬರುವ ವರ್ಷದಿಂದ ಶಿಕ್ಷಣದಲ್ಲಿ, ಪಠ್ಯಪುಸ್ತಕದಲ್ಲಿ ಅಳವಡಿಸಲು ಚಿಂತನೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಹೊಸ ಆಲೋಚನೆ ಹಾಗೂ ಉದ್ಯಮಶೀಲತೆಗೆ ಉತ್ತೇಜನ ಕೊಡಲು ಶಾಲೆಗಳ ಪಠ್ಯಪುಸ್ತಕದಲ್ಲಿ ಮುಂಬರುವ ವರ್ಷದಿಂದ ಈ ವಿಷಯಗಳು ಸೇರಿಸಬೇಕು ಎಂದು ತೀರ್ಮಾನ ಮಾಡಲಾಗಿದೆ.
ಐಟಿಐ ಡಿಪ್ಲೋಮಾ ಕಾಲೇಜು ಉನ್ನತೀಕರಣ ಕೂಡ ಮಾಡುವ ಯೋಚನೆ ಇದೆ. ಶಾಲೆ ಕಾಲೇಜುಗಳಲ್ಲಿ ಕೂಡ ವಿದ್ಯಾರ್ಥಿಗಳಿಗೆ ವೈಜ್ಞಾನಿಕ ಸಂಶೋಧನೆ, ವೈಜ್ಞಾನಿಕ ಚಿಂತನೆ ಅದಲ್ಲದೆ ನವ ಉದ್ಯಮಕ್ಕೆ ಭದ್ರ ಬುನಾದಿ ಹಾಕಬೇಕಾದ ಮಹತ್ವಾಕಾಂಕ್ಷೆಯ ಯೋಜನೆಯನ್ನು ಸರ್ಕಾರ ತರಲಿದೆ ಎಂದು ಬೊಮ್ಮಾಯಿ ತಿಳಿಸಿದ್ದಾರೆ.
ಕೃಷಿ, ತೋಟಗಾರಿಕೆ, ರೇಷ್ಮೆ ಉದ್ಯಮ ಮುಂತಾದ ಕಡೆ, ಅತಿ ಹೆಚ್ಚು ಉದ್ಯೋಗ ಕೊಡುವ ರಂಗದಲ್ಲಿ ಸ್ಟಾರ್ಟ್ ಅಪ್ಗಳು ಬರಬೇಕು. ಅಲ್ಲಿ ಹೊಸ ಚಿಂತನೆ, ಹೊಸ ಕ್ರಾಂತಿ ಆಗಬೇಕು. ಸಾಮಾಜಿಕ ಜವಾಬ್ದಾರಿ ಇಟ್ಟುಕೊಂಡು ಶಿಕ್ಷಣ, ಆರೋಗ್ಯ ವಿಭಾಗದಲ್ಲಿ ಕೂಡ ಹೆಚ್ಚಿನ ಉತ್ತೇಜನ ಕೊಡಲಾಗುತ್ತದೆ. ಹೆಣ್ಣು ಮಕ್ಕಳು ಹಾಗೂ ಮಕ್ಕಳ ಸಂಬಂಧಿಸಿದ ಯೋಜನೆಗಳು ಅತಿಹೆಚ್ಚು ತರುವ ಮೂಲಕ ಅದನ್ನು ಬಲಪಡಿಸುವ ಆಶಯ ಇದೆ ಎಂದು ಸಿಎಂ ಬೊಮ್ಮಾಯಿ ಈ ವೇಳೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಮತದಾರರ ಬಳಿ ಇರಲೇಬೇಕಾದ ಕೆಲವು ಆಪ್ಗಳಿವು; ಮಾಹಿತಿ ಪಡೆದುಕೊಳ್ಳಿ
ಇದನ್ನೂ ಓದಿ: ಶೇ. 40ರಷ್ಟು ಕಮಿಷನ್ ಸಾಕ್ಷ್ಯಾಧಾರ ಬಿಡುಗಡೆಯು ಬೊಮ್ಮಾಯಿ ನೇತೃತ್ವದ ಸರ್ಕಾರಕ್ಕೆ ಮರಣಶಾಸನ ಸಾಬೀತುಪಡಿಸುತ್ತದೆ: ಡಿ. ಕೆಂಪಣ್ಣ