Karnataka School Reopen: ನವೆಂಬರ್ ತಿಂಗಳಿಂದ ಮಕ್ಕಳಿಗೆ ಬಿಸಿಯೂಟ ವ್ಯವಸ್ಥೆ: ಬಿ.ಸಿ ನಾಗೇಶ್ ಸುದ್ದಿಗೋಷ್ಠಿ

ಬಿಸಿ ನಾಗೇಶ್​ ಸುದ್ದಿಗೋಷ್ಠಿ: ಮಕ್ಕಳ ಶಿಕ್ಷಣ ಸಮಸ್ಯೆ ದೂರ ಮಾಡಿ, ಮಕ್ಕಳಿಗೆ ಶಿಕ್ಷಣ ನೀಡಲು ಇಲಾಖೆ ಮುಂದಾಗಿದೆ. ತಜ್ಞರು ಹಾಗು ಸಿಎಂ ಅನುಮತಿಯೊಂದಿಗೆ ಶಾಲೆ ಆರಂಭಕ್ಕೆ ಮುಂದಾಗಿದ್ದೇವೆ ಎಂದು ಹೇಳಿದ್ದಾರೆ.

Karnataka School Reopen: ನವೆಂಬರ್ ತಿಂಗಳಿಂದ ಮಕ್ಕಳಿಗೆ ಬಿಸಿಯೂಟ ವ್ಯವಸ್ಥೆ: ಬಿ.ಸಿ ನಾಗೇಶ್ ಸುದ್ದಿಗೋಷ್ಠಿ
ಸಚಿವ ಬಿ.ಸಿ.ನಾಗೇಶ್


ಬೆಂಗಳೂರು: ರಾಜ್ಯದಲ್ಲಿ 1-5ನೇ ತರಗತಿಯನ್ನ ಪ್ರಾರಂಭ ಮಾಡುತ್ತಿದ್ದೇವೆ. ಅಕ್ಟೋಬರ್ 25 ರಿಂದ 1-5ನೇ ತರಗತಿವರೆಗೆ ಶಾಲೆ ಆರಂಭಿಸುತ್ತಿದ್ದೇವೆ. ಮಾರ್ಗಸೂಚಿಯನ್ನ ಪಾಲಿಸಿ ತರಗತಿ ಪ್ರಾರಂಭಿಸುತ್ತಿದ್ದೇವೆ. ಕೊವಿಡ್​ ತಾಂತ್ರಿಕ ಸಲಹಾ ಸಮಿತಿ ಒಪ್ಪಿಗೆ ಹಿನ್ನೆಲೆ ನಿರ್ಧಾರ ಕೈಗೊಳ್ಳಲಾಗಿದೆ. ಅನೇಕ ತಾಲೂಕುಗಳಲ್ಲಿ ಪಾಸಿಟಿವಿಟಿ ದರ ಶೇಕಡಾ 0 ರಷ್ಟಿದೆ. ಇವೆಲ್ಲವನ್ನ ಗಮನದಲ್ಲಿಟ್ಟುಕೊಂಡು ಸರ್ಕಾರ ಹೀಗೆ ನಿರ್ಧರಿಸಿದೆ ಎಂದು ಬೆಂಗಳೂರಿನಲ್ಲಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಇಂದು (ಅಕ್ಟೋಬರ್ 18) ತಿಳಿಸಿದ್ದಾರೆ. ಶಾಲೆ ಆರಂಭ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದ್ದಾರೆ.

ಮೊದಲ 1 ವಾರ ಮಾತ್ರ ಅರ್ಧದಿನ ಮಾತ್ರ ಶಾಲೆ ಇರುತ್ತೆ. ನವೆಂಬರ್ ಮೊದಲ ವಾರದಿಂದ ಪೂರ್ತಿ ದಿನ ಶಾಲೆ ಆರಂಭ ಆಗಲಿದೆ. ನವೆಂಬರ್​ ತಿಂಗಳಲ್ಲಿ ಮಕ್ಕಳಿಗೆ ಬಿಸಿಯೂಟದ ವ್ಯವಸ್ಥೆ ಇರುತ್ತೆ. 2 ದಿನಗಳಲ್ಲಿ ಶಾಲೆಗಳ ಆರಂಭಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಲಾಗುತ್ತದೆ. ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನೂ ಅನುಸರಿಸ್ತೇವೆ ಎಂದು ನಾಗೇಶ್ ಹೇಳಿದ್ದಾರೆ. ಯಾವುದೇ ಕಾರಣಕ್ಕೂ ಪಠ್ಯ ಕಡಿತ ಮಾಡುವುದಿಲ್ಲ. ಪಠ್ಯ ಕ್ರಮ ಮುಗಿಸುವುದಕ್ಕೆ ನಾವು ಪ್ರಯತ್ನ ಮಾಡುತ್ತೇವೆ. ನಾನು ಹೋದ ಕಡೆ ಎಲ್ಲಾ ಶಾಲೆ ಆರಂಭಿಸುವಂತೆ ಒತ್ತಾಯ ಕೇಳಿಬಂದಿದೆ. ಬಹುತೇಕ ಪೋಷಕರು ಶಾಲೆ ಆರಂಭಿಸಲು ಒತ್ತಾಯಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ರಾಜ್ಯದಲ್ಲಿ ಈಗಾಗಲೇ ಅಂಗನವಾಡಿಗಳು ನಡೆಯುತ್ತಿವೆ. ರಾಜ್ಯದಲ್ಲಿ ದಿನ ಬಿಟ್ಟು ದಿನ ಅಂಗನವಾಡಿಗಳು ನಡೆಯುತ್ತಿವೆ. ಅದೇ ಮಾದರಿಯಲ್ಲಿ LKG, UKG ಆರಂಭಕ್ಕೆ ಚಿಂತನೆ ನಡೆಸಲಾಗಿದೆ ಎಂದು ಬಿ.ಸಿ. ನಾಗೇಶ್ ಹೇಳಿದ್ದಾರೆ. ಮಕ್ಕಳ ಶಿಕ್ಷಣ ಸಮಸ್ಯೆ ದೂರ ಮಾಡಿ, ಮಕ್ಕಳಿಗೆ ಶಿಕ್ಷಣ ನೀಡಲು ಇಲಾಖೆ ಮುಂದಾಗಿದೆ. ತಜ್ಞರು ಹಾಗು ಸಿಎಂ ಅನುಮತಿಯೊಂದಿಗೆ ಶಾಲೆ ಆರಂಭಕ್ಕೆ ಮುಂದಾಗಿದ್ದೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: School Reopen: ಅಕ್ಟೋಬರ್ 25ರಿಂದ 1 ರಿಂದ 5ನೇ ತರಗತಿ ಶಾಲೆ ಆರಂಭ

ಇದನ್ನೂ ಓದಿ: Covid 19 Guidelines: ಕೊವಿಡ್ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ ಸರ್ಕಾರ; ಈಜುಕೊಳ ಕಾರ್ಯಾಚರಣೆಗೆ ಅವಕಾಶ

Click on your DTH Provider to Add TV9 Kannada