AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿದ್ಯಾರ್ಥಿನಿಯರ ಆತ್ಮವಿಶ್ವಾಸ ಹೆಚ್ಚಿಸಿದ ಜೆಂಡರ್-ನ್ಯೂಟ್ರಲ್ ಸಮವಸ್ತ್ರ: ದೇಶದ ಗಮನ ಸೆಳೆದಿದೆ ಕೇರಳ ಶಾಲೆಯ ಈ ನಿರ್ಧಾರ

2018ರಲ್ಲಿ ಸಮವಸ್ತ್ರ ಬದಲಾವಣೆ ನಿರ್ಧಾರ ಜಾರಿಗೊಳಿಸಿದ ನಂತರ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಹೆಚ್ಚಾಯಿತು. ಮುಖ್ಯವಾಗಿ ಬಾಲಕಿಯರು ತಮ್ಮಿಷ್ಟದಂತೆ ಆಡಲು, ಓಡಾಡಲು ಈ ನೂತನ ಸಮವಸ್ತ್ರದಿಂದ ಅನುಕೂಲವಾಗಿದೆ

ವಿದ್ಯಾರ್ಥಿನಿಯರ ಆತ್ಮವಿಶ್ವಾಸ ಹೆಚ್ಚಿಸಿದ ಜೆಂಡರ್-ನ್ಯೂಟ್ರಲ್ ಸಮವಸ್ತ್ರ: ದೇಶದ ಗಮನ ಸೆಳೆದಿದೆ ಕೇರಳ ಶಾಲೆಯ ಈ ನಿರ್ಧಾರ
ಕೇರಳ ಶಾಲೆಯಲ್ಲಿ ಬಾಲಕ-ಬಾಲಕಿಯರಿಗೆ ಒಂದೇ ರೀತಿಯ ಸಮವಸ್ತ್ರ
TV9 Web
| Edited By: |

Updated on: Nov 20, 2021 | 7:11 PM

Share

ಕೊಚ್ಚಿ: ಕೇರಳದ ಎರ್ನಾಕುಲಂ ಜಿಲ್ಲೆ ವಲಯಚಿರಂಗಾರ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಹೊಸ ರೀತಿಯ ಸಮವಸ್ತ್ರವನ್ನು ನಿಗದಿಪಡಿಸಲಾಗಿದೆ. ಬಾಲಕ-ಬಾಲಕಿಯರಿಗೆ ಸಾಮಾನ್ಯ ಸಮವಸ್ತ್ರ ರೂಪಿಸಲಾಗಿದ್ದು, ಜೆಂಡರ್ ನ್ಯೂಟ್ರಲ್ ಸಮವಸ್ತ್ರದ ಮೂಲಕ ಲಿಂಗ ಸಮಾನತೆಯ ಆಶಯಕ್ಕೆ ಹೊಸ ಆಯಾಮ ನೀಡಲಾಗಿದೆ. 2018ರಲ್ಲಿ ಶಾಲೆಯಲ್ಲಿ ಜೆಂಡರ್-ನ್ಯೂಟ್ರಲ್ ನೀತಿಯನ್ನು ಜಾರಿ ಮಾಡಲಾಯಿತು. ಅದರಂತೆ ಶಾಲೆಯ ಮುಖ್ಯಶಿಕ್ಷಕಿ ಎಲ್ಲ ವಿದ್ಯಾರ್ಥಿಗಳಿಗೂ ಷರ್ಟ್ ಮತ್ತು ಮೋಟುಪ್ಯಾಂಟ್​ (ಥ್ರೀಫೋರ್ತ್​) ಕಡ್ಡಾಯಗೊಳಿಸಿದರು.

ಶಾಲೆ ಜಾರಿಮಾಡಿರುವ ನೀತಿಯ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗಳು ಆರಂಭವಾಗಿವೆ. ‘ಉತ್ತಮ ದೃಷ್ಟಿಕೋನ ಹೊಂದಿರುವ ಶಾಲೆ ಇದು. ಶಾಲೆಯಲ್ಲಿ ಸುಧಾರಣೆ ತರಬೇಕು ಎಂದು ಯೋಚಿಸಿದಾಗ ಲಿಂಗ ಸಮಾನತೆಯ ಬಗ್ಗೆಯೂ ಸಾಕಷ್ಟು ಚರ್ಚೆ ಮಾಡಲಾಯಿತು. ಹೀಗಾಗಿ ಸಮವಸ್ತ್ರದಲ್ಲಿ ಸುಧಾರಣೆ ತರಲು ಪ್ರಯತ್ನಿಸಿದೆವು. ಈ ಬಗ್ಗೆ ಏನು ಮಾಡಬೇಕು ಎಂದು ಯೋಚಿಸುತ್ತಿದ್ದಾಗಲೇ ಸ್ಕರ್ಟ್​ಗಳ ಕಾರಣಕ್ಕೆ ವಿದ್ಯಾರ್ಥಿನಿಯರು ತೊಂದರೆ ಅನುಭವಿಸುವುದು ನನ್ನ ಗಮನಕ್ಕೆ ಬಂತು. ಸಮವಸ್ತ್ರ ಬದಲಿಸುವ ಬಗ್ಗೆ ಎಲ್ಲರೊಡನೆ ಮಾತನಾಡಿದೆ. ಶೇ 90ರಷ್ಟು ಪೋಷಕರು ಈ ಚಿಂತನೆ ಒಪ್ಪಿಕೊಂಡರು. ಮಕ್ಕಳು ಸಹ ಖುಷಿಯಾದರು. ಈ ವಿಷಯ ಈಗ ದೇಶದ ಮಟ್ಟದಲ್ಲಿ ಚರ್ಚೆಯಾಗುತ್ತಿರುವುದು ನನಗೆ ಸಂತೋಷ ಎನಿಸುತ್ತಿದೆ’ ಎಂದು 2018ರಲ್ಲಿ ಶಾಲೆಯಲ್ಲಿ ಹೊಸ ಸಮವಸ್ತ್ರ ಅನುಷ್ಠಾನಕ್ಕೆ ತಂದ ಹಿಂದಿನ ಮುಖ್ಯಶಿಕ್ಷಕಿ ಸಿ.ರಾಜಿ ಹೇಳಿದರು.

‘ವಿದ್ಯಾರ್ಥಿಗಳು ಮತ್ತು ಪೋಷಕರ ಮನಸ್ಸಿನಲ್ಲಿ ಲಿಂಗಸಮಾನತೆಯ ಬಗ್ಗೆ ಜಾಗೃತಿ ಮೂಡಬೇಕಿದೆ. ಸ್ಕರ್ಟ್​ ಧರಿಸುವ ಕಾರಣದಿಂದ ಬಾಲಕಿಯರು ಹಲವು ಸಮಸ್ಯೆಗಳನ್ನು ಎದುರಿಸುತ್ತಾರೆ. ಶೌಚಾಲಯಕ್ಕೆ ಹೋಗುವಾಗ ಮತ್ತು ಆಟವಾಡುವಾಗ ಗೊಂದಲಗಳು ಎದುರಾಗುತ್ತವೆ. ನಾವು ಸಮವಸ್ತ್ರದ ಬಗ್ಗೆ ಯೋಚಿಸುವಾಗ ಈ ಅಂಶದ ಬಗ್ಗೆಯೂ ಗಮನ ಹರಿಸಿದೆವು. ನಮ್ಮದು 105 ವರ್ಷ ಹಳೆಯ ಶಾಲೆ. ಯಾರಿಂದಲೂ ಪ್ರಬಲ ವಿರೋಧ ಕೇಳಿಬರಲಿಲ್ಲ. ಶೈಕ್ಷಣಿಕ ಸಮಿತಿಯ ನಿರ್ಧಾರವನ್ನು ಎಲ್ಲರೂ ಒಪ್ಪಿಕೊಂಡರು. ನಮ್ಮ ನಿರ್ಧಾರಕ್ಕೆ ನಾವು ಅಂದುಕೊಂಡಿದ್ದಕ್ಕಿಂತಲೂ ಹೆಚ್ಚಿನ ಮಾನ್ಯತೆ ಸಿಕ್ಕಿತು’ ಎಂದು ಶಾಲಾ ನಿರ್ವಹಣಾ ಸಮಿತಿಯ ಮಾಜಿ ಅಧ್ಯಕ್ಷ ಎನ್​.ಪಿ.ಅಜಯಕುಮಾರ ನೆನಪಿಸಿಕೊಂಡರು.

2018ರಲ್ಲಿ ಸಮವಸ್ತ್ರ ಬದಲಾವಣೆ ನಿರ್ಧಾರ ಜಾರಿಗೊಳಿಸಿದ ನಂತರ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಹೆಚ್ಚಾಯಿತು. ಮುಖ್ಯವಾಗಿ ಬಾಲಕಿಯರು ತಮ್ಮಿಷ್ಟದಂತೆ ಆಡಲು, ಓಡಾಡಲು ಈ ನೂತನ ಸಮವಸ್ತ್ರದಿಂದ ಅನುಕೂಲವಾಗಿದೆ. ಅವರು ಮತ್ತು ಅವರ ಪೋಷಕರು ಈ ನಿರ್ಧಾರದಿಂದ ಹೆಚ್ಚು ಸಂತೋಷವಾಗಿದ್ದಾರೆ. ಬಾಲಕ-ಬಾಲಕಿಯರು ಸಮಾನ ಸ್ವಾತಂತ್ರ್ಯ ಮತ್ತು ಸಂತೋಷ ಅನುಭವಿಸಬೇಕು ಎನ್ನುವುದು ನಮ್ಮ ಆಶಯ ಎಂದು ಶಾಲೆಯಲ್ಲಿ ಪ್ರಸ್ತುತ ಮುಖ್ಯ ಶಿಕ್ಷಕಿಯಾಗಿರುವ ಕೆ.ಪಿ.ಸುಮಾ ಪ್ರತಿಕ್ರಿಯಿಸಿದರು.

‘ನನ್ನ ಮಕ್ಕಳು ಶಾಲೆಗೆ 2018ರಲ್ಲಿ ಸೇರಿದರು. ಬಾಲಕ-ಬಾಲಕಿಯರಿಗೆ ಸಮಾನತೆ ಬೇಕು ಎನ್ನುವ ವಿಚಾರ ಈ ನಿರ್ಧಾರದಲ್ಲಿದೆ. ಮಕ್ಕಳು ತಮ್ಮಿಷ್ಟದ ಚಟುವಟಿಕೆಯನ್ನು ಯಾವುದೇ ಮುಜುಗರವಿಲ್ಲದೆ ನಿರ್ವಹಿಸಲು ಅನುವು ಮಾಡಿಕೊಡುವ ಸಮವಸ್ತ್ರ ಇದು ಎಂದು ಪೋಷಕರು ಮತ್ತು ಶಿಕ್ಷಕರ ಸಂಘದ ಅಧ್ಯಕ್ಷ ವಿ.ವಿವೇಕ್ ಹೇಳಿದರು.

ಇದನ್ನೂ ಓದಿ: Gender Sensitivity: ಬೇಕಾಬಿಟ್ಟಿಯಾಗಿ ರೇಪ್ ಪದ ಬಳಕೆಗೆ ವಿಧಾನಸಭಾ ಸದಸ್ಯೆಯರ ಆಕ್ಷೇಪ, ಪಕ್ಷಭೇದ ಮೀರಿದ ಮಾದರಿ ಚರ್ಚೆ ಇದನ್ನೂ ಓದಿ: Gender Equality; ಪ್ರಶ್ನಿಸುವ ಸಾಹಸ ಮನೋಭಾವದ ಹೆಣ್ಣೆಂದರೆ ಸಮಾಜಕ್ಕೆ ಇನ್ನೂ ಬಿಸಿತುಪ್ಪವೆ?

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ