ಬೀಟ್ ಬಾಕ್ಸಿಂಗ್; ‘ಬೂಟ್ಸ್ ಅಂಡ್ ಕ್ಯಾಟ್ಸ್, ಬೂಟ್ಸ್ ಅಂಡ್ ಕ್ಯಾಟ್ಸ್’ ಕೃತಿಯ ಸಂಗೀತ ಪಾಠ
Beatboxing : ಬೀಟ್ ಬಾಕ್ಸಿಂಗ್ ಎಂದರೆ ತುಟಿ, ನಾಲಗೆ, ಬಾಯಿ, ಧ್ವನಿಯ ಸಹಾಯದಿಂದ ಡ್ರಮ್ ಬೀಟ್ಸ್ ಅಥವಾ ತಾಳವಾದ್ಯಗಳ ಧ್ವನಿ ಅನುಕರಿಸುವುದು. ಈ ಯುವಕಲಾವಿದೆ ಮೂರು ಪದಗಳೊಂದಿಗೆ ಸೃಷ್ಟಿಸಿದ ವಿಡಿಯೋ ವೈರಲ್ ಆಗಿದೆ.
Viral Video : ಸಾಮಾಜಿಕ ಜಾಲತಾಣಗಳು ಪ್ರತಿಭೆಯನ್ನು ಪ್ರದರ್ಶಿಸಲು ಸಾಕಷ್ಟು ಅವಕಾಶವನ್ನು ಮಾಡಿಕೊಡುತ್ತಿವೆ. ಅಷ್ಟೇ ಅಲ್ಲ ಯಾವ ಮಾಹಿತಿಯೂ, ಜ್ಞಾನವೂ, ವಿದ್ಯೆಯೂ ಯಾರದೂ ಸ್ವತ್ತಲ್ಲ ಎನ್ನುವುದನ್ನೂ ತೋರಿಸಿ ಕೊಡುತ್ತಿವೆ. ತಮಗೆ ಆಸಕ್ತಿ ಇರುವ ಏನನ್ನೂ ನೋಡಿ ಕಲಿಯಲು ಇಲ್ಲಿ ಅವಕಾಶವಿದೆ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಕೃತಿ ಎಂಬ ಈ ಯುವಕಲಾವಿದೆ ಬೀಟ್ ಬಾಕ್ಸಿಂಗ್ನಲ್ಲಿ ಆಸಕ್ತಿಯುಳ್ಳಾಕೆ. ಬೀಟ್ ಬಾಕ್ಸಿಂಗ್ಗೆ ಮೂರು ಪದಗಳನ್ನು ಉಚ್ಚರಿಸಿ ಅದನ್ನು ಲಯಬದ್ಧವಾಗಿಸಿದ್ದಾಳೆ. ಈ ಝಲಕನ್ನು ಸೃಷ್ಟಿಸಿದ ರೀತಿಗೆ ನೆಟ್ಟಿಗರು ಬೆರಗುಗೊಂಡಿದ್ದಾರೆ.
ಇದನ್ನೂ ಓದಿView this post on Instagram
ಬೀಟ್ ಬಾಕ್ಸಿಂಗ್ ಎಂದರೆ ತುಟಿ, ನಾಲಗೆ, ಬಾಯಿ, ಧ್ವನಿಯ ಸಹಾಯದಿಂದ ಡ್ರಮ್ ಬೀಟ್ಸ್ ಅಥವಾ ತಾಳವಾದ್ಯಗಳ ಧ್ವನಿಯನ್ನು ಅನುಕರಿಸುವುದು. ಈಗಿಲ್ಲಿ ಕೃತಿ ಬೀಟ್ ಬಾಕ್ಸಿಂಗ್ ಸೃಷ್ಟಿಗೆ ಮೂರು ಪದಗಳನ್ನು ಉಪಯೋಗಿಸಿದ್ದಾಳೆ; ಬೂಟ್ಸ್ ಅಂಡ್ ಕ್ಯಾಟ್ಸ್. ಹೇಗೆ ಈ ಪದಗಳನ್ನು ಲಯಬದ್ಧವಾಗಿ ಉಚ್ಚರಿಸಬೇಕು ಎಂದು ತೋರಿಸಿದ್ದಾಳೆ. 1 ಮಿಲಿಯನ್ ಜನರು ಈ ವಿಡಿಯೋ ಇಷ್ಟಪಟ್ಟಿದ್ದಾರೆ.
ಅದ್ಭುತವಾಗಿದೆ ಈ ರೀಲ್ ಎಂದು ನೆಟ್ಟಿಗರು ಶ್ಲಾಘಿಸಿದ್ದಾರೆ. ಹೀಗೆ ಕ್ರಿಯೇಟಿವ್ ಆಗಿ ಯೋಚಿಸಿ ಸರಳವಾಗಿ ತಿಳಿಸಿಕೊಟ್ಟು ಜನರಲ್ಲಿ ಸಂಗೀತದ ಬಗ್ಗೆ ಆಸಕ್ತಿ ಹುಟ್ಟಿಸುವ ಕಲಾವಿದರ ಅವಶ್ಯಕತೆ ಇದೆ ಎಂದಿದ್ದಾರೆ ಹಲವರು. ತಂತ್ರಗಳನ್ನು ಯಾರೂ ಹೀಗೆ ತಿಳಿಸಿಕೊಡುವುದಿಲ್ಲ. ಮಕ್ಕಳಲ್ಲಿಇದು ಸಂಗೀತದ ಬಗ್ಗೆ ಆಸಕ್ತಿ ಹುಟ್ಟಿಸಲು ಸಹಕಾರಿಯಾಗಿದೆ ಎಂದಿದ್ದಾರೆ ಕೆಲವರು.
ಇದನ್ನು ನಿಮ್ಮ ಮಕ್ಕಳಿಗೆ ತೋರಿಸಿ, ಅವರು ಪ್ರಯತ್ನಿಸುತ್ತಾರಾ ಗಮನಿಸಿ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ