ಪದವಿ ಕನಸ್ಸು ಕಾಣುತ್ತಿರುವ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್; ಖಾಸಗಿ ಕಾಲೇಜುಗಳಲ್ಲಿ ಸಿಗಲಿದೆ ಸರ್ಕಾರಿ ಕೋಟಾ ಸೀಟ್

ಪದವಿ ಮಾಡುವ ಕನಸ್ಸು ಇದೇನಾ? ಪದವಿ ಶಿಕ್ಷಣ ಪಡೆಯಲು ಕಾಲೇಜು ಹುಡುಕಲು ಶುರು ಮಾಡಿದ್ದೀರಾ? ಹಾಗಿದ್ರೆ ನಿಮಗೆ ಗುಡ್ ನ್ಯೂಸ್ ಇದೆ. ಉನ್ನತ್ತ ಶಿಕ್ಷಣ ಇಲಾಖೆ ಪದವಿ ಶಿಕ್ಷಣದ ಕನಸ್ಸು ಕಾಣುತ್ತೀರೊ ವಿದ್ಯಾರ್ಥಿಗಳಿಗ ಬಂಪರ್ ನ್ಯೂಸ್ ನೀಡಿದೆ. ಎಂಜಿನಿಯರಿಂಗ್ ಹಾಗೂ ವೈದ್ಯಕೀಯ ಸೀಟ್ ಹಂಚಿಕೆ ಮಾದರಿಯಂತೆ ಪದವಿ ಕೋರ್ಸ್​ಗಳಿಗೂ ಸೀಟ್ ಹಂಚಿಕೆಗೆ ಉನ್ನತ್ತ ಶಿಕ್ಷಣ ಇಲಾಖೆ ಮುಂದಾಗಿದೆ.

ಪದವಿ ಕನಸ್ಸು ಕಾಣುತ್ತಿರುವ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್; ಖಾಸಗಿ ಕಾಲೇಜುಗಳಲ್ಲಿ ಸಿಗಲಿದೆ ಸರ್ಕಾರಿ ಕೋಟಾ ಸೀಟ್
ಉನ್ನತ ಶಿಕ್ಷಣ ಇಲಾಖೆ
Follow us
| Updated By: ಆಯೇಷಾ ಬಾನು

Updated on: Aug 09, 2024 | 7:50 AM

ಬೆಂಗಳೂರು, ಆಗಸ್ಟ್​.09: ಪಿಯುಸಿ ಬಳಿಕ ಪದವಿ ಶಿಕ್ಷಣದ ಕನಸ್ಸು ಕಂಡ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಇನ್ಮುಂದೆ ಪ್ರತಿಷ್ಠಿತ ಖಾಸಗಿ ಕಾಲೇಜುಗಳಲ್ಲಿಯೂ (Private Colleges) ಸರ್ಕಾರಿ ಕೋಟಾದ ಪದವಿ ಸೀಟ್​ಗಳು ಸಿಗಲಿವೆ (Government Quota Seats). ಎಂಜಿನಿಯರಿಂಗ್ ಹಾಗೂ ವೈದ್ಯಕೀಯ ಸೀಟ್ ಹಂಚಿಕೆ ಮಾದರಿಯಂತೆ ಪದವಿ ಕೋರ್ಸ್​ಗಳಿಗೂ ಸೀಟ್ ಹಂಚಿಕೆಗೆ ಉನ್ನತ್ತ ಶಿಕ್ಷಣ ಇಲಾಖೆ ಮುಂದಾಗಿದೆ. ರಾಜ್ಯದ ಖಾಸಗಿ ಕಾಲೇಜುಗಳಲ್ಲಿ ಇನ್ಮುಂದೆ 40% ಸರ್ಕಾರಿ ಕೋಟಾದಡಿಯಲ್ಲಿ ಪದವಿ ಸೀಟ್​ಗಳನ್ನ ಸರ್ಕಾರಕ್ಕೆ ಪಡೆಯಲು ಉನ್ನತ್ತ ಶಿಕ್ಷಣ ಇಲಾಖೆ ಮುಂದಾಗಿದೆ.

ಈ ಹಿಂದೆ ಖಾಸಗಿ ಪದವಿ ಕಾಲೇಜುಗಳು 100ಕ್ಕೆ 100 ಮ್ಯಾನೇಜಮೆಂಟ್ ಕೋಟಾದಡಿ ಸೀಟ್ ನೀಡಿ ಪದವಿ ದಾಖಲಾತಿ ಪಡೆಯುತ್ತಿದ್ದರು. ಇದರಿಂದ ಪ್ರತಿಷ್ಠಿತ ಖಾಸಗಿ ಕಾಲೇಜುಗಳಲ್ಲಿ ಓದಲು ಪ್ರತಿಭಾವಂತ ಬಡ ವಿದ್ಯಾರ್ಥಿಗಳು ಶುಲ್ಕ ಕಟ್ಟಲಾಗದೆ ಪರದಾಡುತ್ತಿದ್ದರು. ಹೀಗಾಗಿ ಸರ್ಕಾರ ಪದವಿ ಖಾಸಗಿ ಕಾಲೇಜುಗಳಲ್ಲಿ ಕಾನೂನಾತ್ಮಕವಾಗಿ ಬರಬೇಕಾದ 40% ಸರ್ಕಾರಿ ಕೋಟಾದ ಸೀಟ್ ಗಳನ್ನ ಈ ವರ್ಷದಿಂದ ಪಡೆಯಲು ಮುಂದಾಗಿದೆ. ಈ ಸೀಟ್​ಗಳನ್ನ ಕೆಇಎ ಅಥವಾ ಕಾಮೆಡಕೆ ಮಾದರಿಯಲ್ಲಿ ಪರೀಕ್ಷೆ ಅಥವಾ ಆಯ್ಕೆ ನಡೆಸಿ ವಿದ್ಯಾರ್ಥಿಗಳಿಗೆ ಖಾಸಗಿ ಕಾಲೇಜುಗಳಲ್ಲಿ ಪದವಿ ಕೋರ್ಸ್ ಸೀಟ್​ಗಳನ್ನ ಹಂಚಿಕೆ ಮಾಡಲು ಮುಂದಾಗಿದೆ.

ಇದನ್ನೂ ಓದಿ: ಹುಬ್ಬಳ್ಳಿ ಅಂಕೋಲಾ ಜೋಡಿ ರೈಲು ಹಳಿ: ಕರ್ನಾಟಕಕ್ಕೆ ಅಶ್ವಿನಿ ವೈಷ್ಣವ್ ಕೊಟ್ಟರು ಗುಡ್ ನ್ಯೂಸ್

ವೈದ್ಯಕೀಯ, ಇಂಜಿನಿಯರಿಂಗ್ ಮಾದರಿ ಪರೀಕ್ಷೆ

ಈಗಾಗಲೇ ಎಂಜಿನಿಯರಿಂಗ್, ವೈದ್ಯಕೀಯ ಶಿಕ್ಷಣ ಪಡೆಯಲು ಸಿಇಟಿ ಪರೀಕ್ಷೆ ಬರೆಯಬೇಕಿದೆ. ರ್ಯಾಂಕ್ ಆಧಾರದ ಮೇಲೆ ಸೀಟ್ ಜೊತೆಗೆ ಇಚ್ಛೆಯ ಕಾಲೇಜು ನೀಡುವ ವ್ಯವಸ್ಥೆ ಇದೆ. ಸದ್ಯ ಇದೇ ವ್ಯವಸ್ಥೆಯನ್ನ ಪದವಿ ಕೋರ್ಸ್​ಗಳಿಗೂ ತರುವ ಚಿಂತನೆ ಇದೆ. ಇದರಿಂದ ಖಾಸಗಿ ಕಾಲೇಜುಗಳಲ್ಲಿ ಓದಬೇಕೆಂಬ ಕನಸ್ಸು ಕಂಡಿರುವ ಹಾಗೂ ಸರ್ಕಾರಿ ಕಾಲೇಜುಗಳಿಲ್ಲದ ಭಾಗಗಳಲ್ಲಿನ ವಿದ್ಯಾರ್ಥಿಗಳಿಗೆ ವರದಾನವಾಗಲಿದೆ.

ಈ ವರ್ಷದಿಂದಲೇ ಖಾಸಗಿ ಕಾಲೇಜುಗಳಲ್ಲಿ ಕಾನೂನಾತ್ಮಕವಾಗಿ ಬರಬೇಕಿರುವ ಪದವಿ ಸೀಟ್ ಪಡೆಯಲು ಸರ್ಕಾರ ಮುಂದಾಗಿದೆ. ಆದ್ರೆ ಕೆಲವು ಖಾಸಗಿ ಕಾಲೇಜು ಹಾಗೂ ವಿವಿಗಳು ಈಗಾಗಲೇ ದಾಖಲಾತಿ ಮಾಡಿಕೊಂಡಿವೆ. ಹೀಗಾಗಿ ಕೆಲವು ಸಮಯಾವಕಾಶ ಕೇಳಿದ್ದಾರೆ. ಈ ಹಿನ್ನಲೆ ಈ ವರ್ಷ ಕೆಲವು ಕಾಲೇಜುಗಳಲ್ಲಿ ಜಾರಿ ಜೊತೆ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಕಡ್ಡಾಯವಾಗಿ ಖಾಸಗಿ ಕಾಲೇಜುಗಳಲ್ಲಿ ಶೇ 40% ಸರ್ಕಾರಿ ಸೀಟ್ ಪಡೆಯಲು ಮುಂದಾಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ