ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಇಂದು(ಏ.08) ಪ್ರಕಟವಾಗುತ್ತಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಪತ್ರಿಕಾಗೋಷ್ಠಿ ಮೂಲಕ ಫಲಿತಾಂಶ ಪ್ರಕಟಿಸಲಿದ್ದು, ಮಧ್ಯಾಹ್ನ 1.30ರ ವೇಳೆಗೆ ಅಧಿಕೃತ ವೆಬ್ಸೈಟ್ನಲ್ಲಿ ಲಭ್ಯವಿರಲಿದೆ. ಪಿಯುಸಿ ನಂತರ ಯಾವ ಕೋರ್ಸ್ ಮಾಡಿದ್ರೆ ಮುಂದಿನ ವೃತ್ತಿಪರ ಬದುಕಿಗೆ ಒಳ್ಳೆಯದು ಎಂಬ ಸಾಕಷ್ಟು ಗೊಂದಲ ವಿದ್ಯಾರ್ಥಿಗಳಲ್ಲಿರುತ್ತದೆ. ಅದರಂತೆ ನೀವು ಪಿಯುಸಿಯಲ್ಲಿ ತೆಗೆದುಕೊಂಡಿರುವ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗಕ್ಕೆ ಸಂಬಂಧಿಸಿದ ಬೆಸ್ಟ್ ವೃತ್ತಿಪರ ಕೋರ್ಸ್ಗಳ ಕುರಿತು ಮಾಹಿತಿ ಇಲ್ಲಿದೆ.
ನೀವು ಡಿಗ್ರಿ ಮಾಡಬೇಕೆಂದು ಬಯಸಿದರೆ ಬ್ಯಾಚುಲರ್ ಆಫ್ ಆರ್ಟ್ಸ್ ಕೋರ್ಸ್ ನಲ್ಲಿ ಹಲವು ಅವಕಾಶಗಳಿವೆ. ನೀವು ನಿಮ್ಮ ಆಯ್ಕೆ ಭಾಷೆಗಳ ಅನುಗುಣವಾಗಿ ಬಿಎ ಇಂಗ್ಲೀಷ್, ಕನ್ನಡ, ಹಿಂದಿ, ಬ್ಯಾಚುಲರ್ ಆಫ್ ಆರ್ಟ್ಸ್ ಕೋರ್ಸ್, ಬಿಎ ಇನ್ ಲಿಟೆರೇಚರ್, ಬಿಎ ಮ್ಯೂಸಿಕ್, ಬಿಎ ಥಿಯೇಟರ್ ಕೋರ್ಸ್ಗಗಳನ್ನು ಮಾಡಬಹುದು. ಈ ಮೂಲಕ ಇದರಲ್ಲೇ ಮುಂದುವರಿದು ನೀವು ಸ್ನಾತಕೋತ್ತರ ಪದವಿಯನ್ನೂ ಪೂರ್ಣಗೊಳಿಸಬಹುದು. ಇದರಲ್ಲಿ ನಿಮಗೆ ಸಾಕಷ್ಟು ಉದ್ಯೋಗವಕಾಶಗಳಿವೆ.
ಇದಲ್ಲದೇ ಆರ್ಟ್ಸ್ ವಿಷಯದಲ್ಲಿ ಪಿಯುಸಿ ಮುಗಿಸಿದ ಬಳಿಕ ಕಾನೂನು ಪದವಿಯನ್ನೂ ಪಡೆಯಬಹುದಾಗಿದೆ. ಜೊತೆಗೆ ಬ್ಯಾಚುಲರ್ ಆಫ್ ಫೈನ್ ಆರ್ಟ್ಸ್ (BFA), ಬ್ಯಾಚುಲರ್ ಆಫ್ ಡಿಸೈನ್ (B. Des), ಬ್ಯಾಚುಲರ್ ಆಫ್ ಮಾಸ್ ಮೀಡಿಯಾ (BMM), ಮತ್ತು ಬ್ಯಾಚುಲರ್ ಆಫ್ ಹೋಟೆಲ್ ಮ್ಯಾನೇಜ್‌ಮೆಂಟ್ (BHM) ಸೇರಿವೆ . ಈ ಕೋರ್ಸ್‌ಗಳು ವೈವಿಧ್ಯಮಯ ವೃತ್ತಿ ಅವಕಾಶಗಳನ್ನು ನೀಡುತ್ತವೆ ಮತ್ತು ಹೆಚ್ಚಿನ ಸಂಬಳದ ಸಾಮರ್ಥ್ಯವನ್ನು ಹೊಂದಿವೆ.
ಪಿಯುಸಿಯಲ್ಲಿ ಕಾಮರ್ಸ್ ತೆಗೆದುಕೊಂಡಿದ್ದರೆ ಚಿಂತಿಸಬೇಕಿಲ್ಲ. ಇತ್ತೀಚಿನ ದಿನಗಳಲ್ಲಿ ಕಾಮರ್ಸ್ ಬಹುಬೇಡಿಕೆಯ ವಿಷಯವಾಗಿದ್ದು, ನೀವು ಇಲ್ಲಿ ಹಲವು ವೃತ್ತಿಪರ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಪಿಯುಸಿ ವಾಣಿಜ್ಯದ ನಂತರ, ಜನಪ್ರಿಯ ಮತ್ತು ಸಂಭಾವ್ಯವಾಗಿ ಹೆಚ್ಚಿನ ಸಂಬಳದ ಕೋರ್ಸ್‌ಗಳೆಂದರೆ, ಚಾರ್ಟರ್ಡ್ ಅಕೌಂಟೆನ್ಸಿ (CA), ಕಂಪನಿ ಸೆಕ್ರೆಟರಿ (CS), ಮತ್ತು ಬ್ಯಾಚುಲರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ (BBA) ಜೊತೆಗೆ ಹಣಕಾಸು ವಿಶೇಷತೆಯೊಂದಿಗೆ, ಜೊತೆಗೆ ಹಣಕಾಸು ಅಥವಾ CFA ನಲ್ಲಿ MBA ನಂತಹ ಇತರ ಆಯ್ಕೆಗಳಿವು.
ಇದಲ್ಲದೇ ಪಿಯುಸಿಯಿಂದ ಸ್ನಾತಕೋತ್ತರ ಪದವಿವರೆಗೂ ಅರ್ಥಶಾಸ್ತರ ಮತ್ತು ಅನ್ವಯಿಕ ಸಂಖ್ಯಾಶಾಸ್ತ್ರ ಅಧ್ಯಯನ ಮಾಡಿ ಪಿಎಚ್‌ಡಿ ವರೆಗೂ ಅಧ್ಯಯನ ಮಾಡಿ ಅರ್ಥಶಾಸ್ತ್ರಜ್ಞರಾಗಬಹುದು. ನೀವು ಉದ್ಯೋಗಕ್ಕಿಂತ ಓದಿನಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದರೆ ವಾಣಿಜ್ಯ ವಿಭಾಗದಲ್ಲಿ ನಿಮ್ಮ ಆಯ್ಕೆಯ ವಿಷಯದಲ್ಲಿ ಪಿಎಚ್‌ಡಿ ಮಾಡಬಹುದು.
ಇದನ್ನೂ ಓದಿ: ಪಿಯುಸಿ ನಂತರ ಮುಂದೇನು? ಈ ಕೋರ್ಸ್ ಮಾಡಿದ್ರೆ ಸುಲಭವಾಗಿ ಕೆಲಸ ಸಿಗುತ್ತೆ
ಪಿಯುಸಿ ವಿಜ್ಞಾನವನ್ನು ಪೂರ್ಣಗೊಳಿಸಿದ ನಂತರ, ನೀವು ವಿವಿಧ ಪದವಿಪೂರ್ವ ಕೋರ್ಸ್‌ಗಳನ್ನು ಮುಂದುವರಿಸಬಹುದು, ಅವುಗಳೆಂದರೆ ಜೈವಿಕ ತಂತ್ರಜ್ಞಾನ, ಕಂಪ್ಯೂಟರ್ ವಿಜ್ಞಾನ ಅಥವಾ ವಿಧಿವಿಜ್ಞಾನ ವಿಜ್ಞಾನದಂತಹ ವಿಶೇಷ ಕ್ಷೇತ್ರಗಳಲ್ಲಿ ಎಂಜಿನಿಯರಿಂಗ್ (ಬಿಇ/ಬಿ.ಟೆಕ್), ವೈದ್ಯಕೀಯ (ಎಂಬಿಬಿಎಸ್), ಫಾರ್ಮಸಿ (ಬಿ.ಫಾರ್ಮ್), ಅಥವಾ ಬ್ಯಾಚುಲರ್ ಆಫ್ ಸೈನ್ಸ್ (ಬಿ.ಎಸ್ಸಿ), ನಿಮ್ಮ ಆಸಕ್ತಿಗಳು ಮತ್ತು ವೃತ್ತಿ ಗುರಿಗಳನ್ನು ಅವಲಂಬಿಸಿ ಆಯ್ಕೆ ಮಾಡಿಕೊಳ್ಳಿ. ಈ ಕ್ಷೇತ್ರಗಳಲ್ಲಿ ಒಂದನ್ನು ಆಯ್ಕೆ ಮಾಡಿದ ನಂತರವು, ನಿಮಗೆ ಅದರಲ್ಲಿ ನಿಮ್ಮ ಆಸಕ್ತ ವಿಷಯಗಳನ್ನು ಆಯ್ಕೆ ಮಾಡಲು ಅವಕಾಶಗಳಿವೆ. ನಿಮ್ಮಆಯ್ಕೆಯ ಮೇಲೆ ನೀವು ಸೀಟುಗಳನ್ನು ಪಡೆಯಲು ಕೆಲವು ಪರೀಕ್ಷೆಗೆ ತಯಾರಿ ನಡೆಸಬೇಕಾಗುತ್ತದೆ.
ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶದ ಲೈವ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 11:09 am, Tue, 8 April 25