AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka 2nd PUC Exam 2025 Result: ಇಂದು ದ್ವಿತೀಯ ಪಿಯು ಫಲಿತಾಂಶ: ಎಷ್ಟು ಗಂಟೆಗೆ? ನೋಡುವುದ್ಹೇಗೆ? ಇಲ್ಲಿದೆ ವಿವರ

Second PUC Result 2025: ಈಗಾಗಲೇ ದ್ವಿತೀಯ ಪಿಯುಸಿ ಪರೀಕ್ಷೆಗಳು ಮುಗಿದಿವೆ. ಇನ್ನೂ ಫಲಿತಾಂಶಗ ಹೊರಬೀಳುವುದೊಂದೇ ಬಾಕಿ. ಇದೀಗ ಆ ಸಮಯ ಬಂದೇ ಬಿಟ್ಟಿದೆ. ಇಂದೇ (ಏಪ್ರಿಲ್​ 8) ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಲಿದೆ. ಹಾಗಾದ್ರೆ, ರಿಸಲ್ಟ್​ ಎಷ್ಟು ಗಂಟೆಗೆ ಪ್ರಕಟ? ಹಾಗೂ ವೀಕ್ಷಣೆ ಮಾಡುವುದು ಹೇಗೆ ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.

Karnataka 2nd PUC Exam 2025 Result: ಇಂದು ದ್ವಿತೀಯ ಪಿಯು ಫಲಿತಾಂಶ: ಎಷ್ಟು ಗಂಟೆಗೆ? ನೋಡುವುದ್ಹೇಗೆ? ಇಲ್ಲಿದೆ ವಿವರ
Karnataka 2nd Puc Exam 2025 Result
ವಿನಯ್​ ಕಾಶಪ್ಪನವರ್​
| Edited By: |

Updated on:Apr 08, 2025 | 8:29 AM

Share

ಬೆಂಗಳೂರು, (ಏಪ್ರಿಲ್ 08): ಪರೀಕ್ಷೆ ಬರೆದು ಫಲಿತಾಂಶಕ್ಕೆ ಕಾತರಿಂದ ಕಾಯುತ್ತಿರುವ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ( 2nd PUC  Students) ಗುಡ್​ನ್ಯೂಸ್ ಸಿಕ್ಕಿದೆ. ಮಾರ್ಚ್ 1ರಿಂದ ಮಾರ್ಚ್ 20ರವರೆಗೆ ನಡೆದಿದ್ದ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ (Karnataka 2nd PUC Exam 2025 Result ) ಇಂದು ಅಂದರೆ ಏಪ್ರಿಲ್ 08ರಂದು ಪ್ರಕಟವಾಗಲಿದೆ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಮಂಗಳವಾರ ಮಧ್ಯಾಹ್ನ 12.30ಕ್ಕೆ ಸುದ್ದಿಗೋಷ್ಠಿ ನಡೆಸಿ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸಲಿದ್ದಾರೆ. ಬಳಿಕ ಅಂದೆ ಮಧ್ಯಾಹ್ನ 1.30ಕ್ಕೆ ವೆಬ್​ಸೈಟ್​ನಲ್ಲಿ PUC ಫಲಿತಾಂಶ ಪ್ರಕಟವಾಗಲಿದ್ದು, ವಿದ್ಯಾರ್ಥಿಗಳು ಇದ್ದಲ್ಲೇ ಆನ್​​ಲೈನ್​​ನಲ್ಲಿ ಫಲಿತಾಂಶ ವೀಕ್ಷಣೆ ಮಾಡಬಹುದಾಗಿದೆ. ಇನ್ನು ವೀಕ್ಷಣೆ ಮಾಡುವುದು ಹೇಗೆ ಎನ್ನುವುದು ಈ ಕೆಳಗಿನಂತಿದೆ ನೋಡಿ.

ರಿಸಲ್ಟ್ ನೋಡುವುದು ಎಲ್ಲಿ?

ಪತ್ರಿಕಾಗೋಷ್ಠಿ ಸಚಿವ ಮಧುಬಂಗಾರಪ್ಪ ಅವರು ಸುದ್ದಿಗೋಷ್ಠಿಯಲ್ಲಿ ಫಲಿತಾಂಶ ಪ್ರಕಟಿಸಲಿದ್ದಾರೆ. ಆ ನಂತರ ಅಂದರೆ 1:30ರ ನಂತರ ಆನ್​ಲೈನ್ ಮೂಲಕವೂ ಫಲಿತಾಂಶ ವೀಕ್ಷಿಸಬಹುದಾಗಿದೆ. ಜತೆಗೆ, ಅಂಕಪಟ್ಟಿ ಡೌನ್​ಲೋಡ್ ಮಾಡಿಕೊಳ್ಳಬಹುದಾಗಿದೆ.

ಈ ಎರಡು ವೆಬ್​ಸೈಟ್​ಗಳಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ ಲಭ್ಯವಿರಲಿದೆ.

ಇದನ್ನೂ ಓದಿ
Image
KCET Exam ಹಾಲ್ ಟಿಕೆಟ್​ ಬಿಡುಗಡೆ, ಆನ್​ಲೈನ್​ನಲ್ಲಿ ಡೌನ್‌ಲೋಡ್ ಮಾಡಿ
Image
ಸೆಕೆಂಡ್ ಪಿಯುಸಿ ಫಲಿತಾಂಶ ಇಂದು, ನೀವು ತಿಳಿಯಲೇಬೇಕಾದ ವಿಚಾರಗಳು ಇಲ್ಲಿವೆ
Image
ದ್ವಿತೀಯ ಪಿಯು ಗಣಿತ ಪರೀಕ್ಷೆ: 12 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಗೈರು
Image
ಈ ಬಾರಿ ಎಸ್​ಎಸ್​ಎಲ್​ಸಿ ಪರೀಕ್ಷೆ ಪಾಸಾಗಬೇಕಿದ್ದರೆ ಶೇ 35 ಅಂಕ ಗಳಿಸಲೇಬೇಕು

ಇದನ್ನೂ ಓದಿ: ಸಿಇಟಿ ಪರೀಕ್ಷೆ ಹಾಲ್ ಟಿಕೆಟ್​ ಬಿಡುಗಡೆ, ಆನ್​ಲೈನ್​ನಲ್ಲಿ ಡೌನ್‌ಲೋಡ್ ಮಾಡುವುದು ಹೇಗೆ?

ಆನ್​ಲೈನ್​ನಲ್ಲಿ ಫಲಿತಾಂಶ ನೋಡುವುದ್ಹೇಗೆ?

  1. ಅಧಿಕೃತ ವೆಬ್‌ಸೈಟ್‌ಗೆ karresults.nic.in ಅಥವಾ kseab.karnataka.gov.in ಗೆ ಭೇಟಿ ನೀಡಬೇಕು.
  2. ಹೋಂ ಪೇಜ್​ನಲ್ಲಿ, Second PU Results 2025 ಲಿಂಕ್ ಕ್ಲಿಕ್ ಮಾಡಬೇಕು.
  3. ರಿಜಿಸ್ಟ್ರೇಷನ್ ನಂಬರ್ (ನೋಂದಣಿ ಸಂಖ್ಯೆ) ಮತ್ತು ಪಾಸ್‌ವರ್ಡ್ ನಮೂದಿಸಬೇಕು.
  4. Second PU Results 2025 ಎಂಬುದು ಸ್ಕ್ರೀನ್​ನಲ್ಲಿ ಕಾಣಿಸುತ್ತದೆ.
  5. ನಂತರ ರಿಸಲ್ಟ್ ನೋಡಬಹುದು. ಅಲ್ಲಿಯೇ ಪಿಡಿಎಫ್ ಡೌನ್​ಲೋಡ್ ಮಾಡಲು ಅವಕಾಶ ಇರುತ್ತದೆ.

ಮಾರ್ಚ್ 1ರಿಂದ 20ರವರೆಗೆ ನಡೆದಿದ್ದ ದ್ವಿತೀಯ ಪಿಯುಸಿ ಪರೀಕ್ಷೆ

ಮಾರ್ಚ್ 1ರಿಂದ 20ರವರೆಗೆ ನಡೆದ ಪರೀಕ್ಷೆಗೆ ಒಟ್ಟು 7,13,862 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಒಟ್ಟು 1171 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು. 6,61,474 ಹೊಸ ವಿದ್ಯಾರ್ಥಿಗಳು, 34,071 ಪುನರಾವರ್ತಿತ ವಿದ್ಯಾರ್ಥಿಗಳು, 18,317 ಖಾಸಗಿ ವಿದ್ಯಾರ್ಥಿಗಳು ದ್ವಿತೀಯ ಪಿಯು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:22 pm, Mon, 7 April 25

Follow Us
ಪ್ರದೋಷ್ ಮಾಫಿ ಸಾಕ್ಷಿ ಅರ್ಜಿ ವಿಚಾರಣೆ ಮುಂದೂಡಿಕೆ; ದರ್ಶನ್ ಮನವಿ ವಜಾ
ಪ್ರದೋಷ್ ಮಾಫಿ ಸಾಕ್ಷಿ ಅರ್ಜಿ ವಿಚಾರಣೆ ಮುಂದೂಡಿಕೆ; ದರ್ಶನ್ ಮನವಿ ವಜಾ
ಬೆಂಗಳೂರಿನಲ್ಲಿ 800 KG ಜಿಲೆಟಿನ್‌ ಜಪ್ತಿ, ದೊಡ್ಡ ಅಪಾಯ ಜಸ್ಟ್ ಮಿಸ್!
ಬೆಂಗಳೂರಿನಲ್ಲಿ 800 KG ಜಿಲೆಟಿನ್‌ ಜಪ್ತಿ, ದೊಡ್ಡ ಅಪಾಯ ಜಸ್ಟ್ ಮಿಸ್!
ಮದ್ಯದ ಬಾಟಲ್ ಇಟ್ಟುಕೊಂಡು ಯಾರಿವಳು ಯಾರಿವಳು ಹಾಡು ಹಾಡಿದ ಸ್ವಾಮೀಜಿ
ಮದ್ಯದ ಬಾಟಲ್ ಇಟ್ಟುಕೊಂಡು ಯಾರಿವಳು ಯಾರಿವಳು ಹಾಡು ಹಾಡಿದ ಸ್ವಾಮೀಜಿ
ಭವಾನಿ ಶಂಕರ ದೇವಸ್ಥಾನದ ಪುಷ್ಕರಣಿ ಜಾಗ ಒತ್ತುವರಿ ಆರೋಪ
ಭವಾನಿ ಶಂಕರ ದೇವಸ್ಥಾನದ ಪುಷ್ಕರಣಿ ಜಾಗ ಒತ್ತುವರಿ ಆರೋಪ
ಪ್ರಜ್ವಲ್ ರೇವಣ್ಣ ಬಳಿ ಮತ್ತೊಂದು ಮೊಬೈಲ್ ಪತ್ತೆ!
ಪ್ರಜ್ವಲ್ ರೇವಣ್ಣ ಬಳಿ ಮತ್ತೊಂದು ಮೊಬೈಲ್ ಪತ್ತೆ!
ಮದುವೆ ಮನೆ ಆಹಾರ ಪರಿಶೀಲನೆಗೂ ಸೂಚನೆ: ಖಾದರ್ ಮಹತ್ವದ ಘೋಷಣೆ
ಮದುವೆ ಮನೆ ಆಹಾರ ಪರಿಶೀಲನೆಗೂ ಸೂಚನೆ: ಖಾದರ್ ಮಹತ್ವದ ಘೋಷಣೆ
ಸೊಳ್ಳೆ ಕಾಟಕ್ಕೆ ಮುಕ್ತಿ ನೀಡಿ ಪ್ಲೀಸ್, ದರ್ಶನ್; ನಾನೇನು ಮಾಡೋಕಾಗಲ್ಲ DGP
ಸೊಳ್ಳೆ ಕಾಟಕ್ಕೆ ಮುಕ್ತಿ ನೀಡಿ ಪ್ಲೀಸ್, ದರ್ಶನ್; ನಾನೇನು ಮಾಡೋಕಾಗಲ್ಲ DGP
ಕೋಟಿ ಆಸ್ತಿಗಾಗಿ ಜೀವಂತ ವೃದ್ಧನ ಮರಣ ಪ್ರಮಾಣಪತ್ರ ಸೃಷ್ಟಿಸಿ ವಂಚನೆ!
ಕೋಟಿ ಆಸ್ತಿಗಾಗಿ ಜೀವಂತ ವೃದ್ಧನ ಮರಣ ಪ್ರಮಾಣಪತ್ರ ಸೃಷ್ಟಿಸಿ ವಂಚನೆ!
ಒಂಟಿ ಮನೆಗಳನ್ನೇ ದರೋಡೆ ಮಾಡ್ತಿದ್ದ ಖತರ್ನಾಕ್ ಗ್ಯಾಂಗ್ ಬಂಧನ
ಒಂಟಿ ಮನೆಗಳನ್ನೇ ದರೋಡೆ ಮಾಡ್ತಿದ್ದ ಖತರ್ನಾಕ್ ಗ್ಯಾಂಗ್ ಬಂಧನ
ನಾಗೇಂದ್ರ ರಾಜೀನಾಮೆ ಪಟ್ಟು, ರಾಜ್ಯಾದ್ಯಂತ ಪ್ರತಿಭಟನೆಗೂ ಬಿಜೆಪಿ ಪ್ಲ್ಯಾನ್
ನಾಗೇಂದ್ರ ರಾಜೀನಾಮೆ ಪಟ್ಟು, ರಾಜ್ಯಾದ್ಯಂತ ಪ್ರತಿಭಟನೆಗೂ ಬಿಜೆಪಿ ಪ್ಲ್ಯಾನ್