2nd PUC Results 2025 Toppers: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ; ಯಾರು ಟಾಪರ್ಸ್? ಇಲ್ಲಿದೆ ವಿವರ

ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ 2025 ಟಾಪರ್: ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದೆ. ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನ ದೊರೆತಿದ್ದು, ಯಾದಗಿರಿ ಕೊನೆಯ ಸ್ಥಾನದಲ್ಲಿದೆ. ಹಾಗಾದರೆ, ಈ ಬಾರಿ ಟಾಪ್ ರ್ಯಾಂಕ್ ಗಳಿಸಿದವರು ಯಾರು? ಎರಡನೇ ಹಾಗೂ ಮೂರನೇ ರ್ಯಾಂಕ್ ಯಾರಿಗೆ? ವಿವರಗಳು ಇಲ್ಲಿವೆ.

2nd PUC Results 2025 Toppers: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ; ಯಾರು ಟಾಪರ್ಸ್? ಇಲ್ಲಿದೆ ವಿವರ
ಅಮೂಲ್ಯ ಕಾಮತ್, ದೀಪಶ್ರೀ ಹಾಗೂ ಸಂಜನಾ ಬಾಯಿ

Updated on: Apr 08, 2025 | 2:52 PM

ಬೆಂಗಳೂರು, ಏಪ್ರಿಲ್ 8: ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆಯ 2024-25 ನೇ ಸಾಲಿನ ಫಲಿತಾಂಶವನ್ನು (2nd PUC Result) ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ಮಂಗಳವಾರ ಪ್ರಕಟಿಸಿದರು. ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾಗಿದ್ದ 6,37,805 ವಿದ್ಯಾರ್ಥಿಗಳ ಪೈಕಿ 4,68,439 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಒಟ್ಟಾರೆ ಶೇ  73.45 ರಷ್ಟು ಫಲಿತಾಂಶ ಪ್ರಕಟವಾಗಿದೆ. ಉಡುಪಿ ಜಿಲ್ಲೆ (Udupi) ಪ್ರಥಮ, ದಕ್ಷಿಣ ಕನ್ನಡ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದಿದ್ದರೆ ಉತ್ತರ ಕರ್ನಾಟಕ ಭಾಗದ ಯಾದಗಿರಿ ಜಿಲ್ಲೆ ಕೊನೆಯ ಸ್ಥಾನ ಪಡೆದಿದೆ. ಬೆಂಗಳೂರು ದಕ್ಷಿಣ ಶೇ 85.36, ಬೆಂಗಳೂರು ಉತ್ತರ ಶೇ 83.31 ಫಲಿತಾಂಶ ದಾಖಲಿಸಿವೆ.

ದ್ವಿತೀಯ ಪಿಯುಸಿ ಫಲಿತಾಂಶ: ಅಮೂಲ್ಯ ಕಾಮತ್​ಗೆ ಮೊದಲ ರ್ಯಾಂಕ್

ವಿಜ್ಞಾನ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಎಕ್ಸಪರ್ಟ್ ಪಿಯು ಕಾಲೇಜಿನ ವಿದ್ಯಾರ್ಥಿನಿ ಅಮೂಲ್ಯ ಕಾಮತ್ ಮೊದಲ ರ್ಯಾಂಕ್ ಪಡೆದಿದ್ದಾರೆ. ಇವರು ವಿಜ್ಞಾನ ವಿಭಾಗದಲ್ಲಿ 600ಕ್ಕೆ 599 ಅಂಕ ಪಡೆದಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ವಾಗ್ದೇವಿ ಪಿಯು ಕಾಲೇಜಿನ ವಿದ್ಯಾರ್ಥಿನಿ ಆರ್​.ದೀಕ್ಷಾ 600ಕ್ಕೆ 599 ಅಂಕ ಪಡೆದಿದ್ದು, ದ್ವಿತೀಯ ಸ್ಥಾನ ಪಡೆದಿದ್ದಾರೆ.

600ಕ್ಕೆ 598 ಅಂಕ ಪಡೆದ ಬಿಂದು ನವಲೆ ರಾಜ್ಯಕ್ಕೆ ತೃತೀಯ ಸ್ಥಾನ ಪಡೆದಿದ್ದರೆ, 600ಕ್ಕೆ 598 ಅಂಕ ಪಡೆದ ರಾಜ ಯದುವಂಶಿ ಯಾದವ್​ಗೆ 4ನೇ ಸ್ಥಾನ ದೊರೆತಿದೆ. 600ಕ್ಕೆ 598 ಅಂಕ ಪಡೆದ ವಿಜೇತ್ ಜಿ. ಗೌಡ ರಾಜ್ಯಕ್ಕೆ 5ನೇ ಸ್ಥಾನ ಗಳಿಸಿದ್ದಾರೆ.

ಇದನ್ನೂ ಓದಿ
ದ್ವಿತೀಯ ಪಿಯು ಫಲಿತಾಂಶ: ಲಾರಿ ಡ್ರೈವರ್​ ಪುತ್ರಿ ಕರ್ನಾಟಕಕ್ಕೆ ಫಸ್ಟ್
ಸರ್ಕಾರೀ ಕಾಲೇಜುಗಳಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಪ್ರಯತ್ನ: ಸಚಿವ
ಕರ್ನಾಟಕ ದ್ವಿತೀಯ ಪಿಯುಸಿ ಜಿಲ್ಲಾವಾರು ಫಲಿತಾಂಶ ಇಲ್ಲಿದೆ
ಯಾವೆಲ್ಲ ವೆಬ್ಸೈಟ್ ನಲ್ಲಿ ಫಲಿತಾಂಶ ಲಭ್ಯ? ರಿಸಲ್ಟ್ ನೋಡುವುದು ಹೇಗೆ?

ಕಾಮರ್ಸ್ ವಿಭಾಗದಲ್ಲಿ ದೀಪಶ್ರೀಗೆ, ಕಲಾ ವಿಭಾಗದಲ್ಲಿ ಸಂಜನಾಗೆ ಮೊದಲ ರ್ಯಾಂಕ್

ಕಾಮರ್ಸ್ ವಿಭಾಗದಲ್ಲಿ ದಕ್ಷಿಣ ಕನ್ನಡದ ಕೆನರಾ ಪಿಯು ಕಾಲೇಜು‌ ವಿದ್ಯಾರ್ಥಿನಿ ದೀಪಶ್ರೀ ಮೊದಲ ರ್ಯಾಂಕ್ ಗಳಿಸಿದ್ದಾರೆ. ಇವರು 600 ಕ್ಕೆ ‌599 ಅಂಕ ಗಳಿಸಿದ್ದಾರೆ. ಕಾಮರ್ಸ್ ವಿಭಾಗದಲ್ಲಿ 600ಕ್ಕೆ 598 ಅಂಕ ಪಡೆದ ಎಂ.ಎ.ತೇಜಸ್ವಿನಿ ರಾಜ್ಯಕ್ಕೆ 2ನೇ ಸ್ಥಾನ ಪಡೆದಿದ್ದಾರೆ. ಈಕೆ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಕೊಪ್ಪ ಭಾರತಮ್ಮ ಪಿಯು ಕಾಲೇಜಿನ ವಿದ್ಯಾರ್ಥಿನಿಯಾಗಿದ್ದಾರೆ.

ಕಲಾ ವಿಭಾಗದಲ್ಲಿ ಬಳ್ಳಾರಿ ಜಿಲ್ಲೆಯ ಇಂದು ಪಿಯು ಕಾಲೇಜು ವಿದ್ಯಾರ್ಥಿನಿ ಸಂಜನಾ ಬಾಯಿ 600 ಕ್ಕೆ ‌597 ಅಂಕ ಗಳಿಸಿ ಮೊದಲ ರ್ಯಾಂಕ್ ಪಡೆದಿದ್ದಾರೆ.

ಇದನ್ನೂ ಓದಿ: ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ, ಉಡುಪಿ ಪ್ರಥಮ, ದಕ್ಷಿಣ ಕನ್ನಡ ದ್ವಿತೀಯ

600ಕ್ಕೆ 596 ಅಂಕ ಪಡೆದಿರುವ ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಇಟ್ಟಿಗಿ ಗ್ರಾಮದ ಶ್ರೀಪಂಚಮಸಾಲಿ ಪಿಯು ಕಾಲೇಜಿನ ವಿದ್ಯಾರ್ಥಿನಿ ಕೆ.ನಿರ್ಮಲಾ ರಾಜ್ಯಕ್ಕೆ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಬೆಂಗಳೂರಿನ ಲಾ ಮಹಿಳಾ ಪಿಯು ಕಾಲೇಜಿನ ವಿದ್ಯಾರ್ಥಿನಿ ಕೆ.ಆರ್​.ಶ್ರೀಜಯದರ್ಶಿನಿ 600ಕ್ಕೆ 595 ಅಂಕ ಗಳಿಸಿ ರಾಜ್ಯಕ್ಕೆ ತೃತೀಯ ಸ್ಥಾನ ಪಡೆದಿದ್ದಾರೆ. ಕಲಾವಿಭಾಗದಲ್ಲಿ 600ಕ್ಕೆ 594 ಅಂಕ ಪಡೆದ ಹುಬ್ಬಳ್ಳಿಯ ವಿದ್ಯಾನಗರ ಪಿಯು ಕಾಲೇಜಿನ ವಿದ್ಯಾರ್ಥಿನಿ ಇನೇಷ್ಕಾ ನಡುಗಡ್ಡಿ 4ನೇ ಸ್ಥಾನ, ಮಜಲಟ್ಟಿ ಗ್ರಾಮದ ಸರ್ಕಾರಿ ಪಿಯು ಕಾಲೇಜಿನ ವಿದ್ಯಾರ್ಥಿನಿ ಕಾವೇರಿ ಪವಾಡಿ ಮಲ್ಲಾಪುರ 600ಕ್ಕೆ 594 ಅಂಕ ಪಡೆದು 5ನೇ ಸ್ಥಾನ ಗಳಿಸಿದ್ದಾರೆ.

ಶಿಕ್ಷಣಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 2:24 pm, Tue, 8 April 25