ದ್ವಿತೀಯ ಪಿಯುಸಿಯಂತೆ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲೂ ಮಹತ್ವದ ಬದಲಾವಣೆಗೆ ಪ್ಲಾನ್
ಕಳೆದ ಹಲವು ವರ್ಷಗಳಿಂದ ವಾರ್ಷಿಕ ಪರೀಕ್ಷೆಗೆ ಮೂರು ಗಂಟೆಗಳ ಕಾಲ ಅವಕಾಶ ನೀಡಲಾಗುತ್ತಿತ್ತು. ಆದ್ರೆ, ಈ ವರ್ಷದಿಂದ ಈ ನಿಯಮ ಬದಲಾಗುತ್ತಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪಿಯುಸಿ ಬಳಿಕ ಈಗ ಎಸ್ಎಸ್ಎಲ್ ಸಿ ಪರೀಕ್ಷೆಗೂ ಸಮಯ ಕಡಿತದ ಬಗ್ಗೆ ಚಿಂತನೆ ನಡೆಸಿದೆ.
ಬೆಂಗಳೂರು, (ಸೆಪ್ಟೆಂಬರ್ 19): ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪಿಯುಸಿ ಹಾಗೂ ಎಸ್ಎಸ್ಎಲ್ ಸಿ ಮಕ್ಕಳ ಪರೀಕ್ಷೆಗಳ ವಿಚಾರದಲ್ಲಿ ದಿನಕ್ಕೊಂದು ಹೊಸ ಪ್ರಯೋಗಗಳನ್ನು ಮಾಡುತಿದ್ದು, ಇಲಾಖೆಯ ಹೊಸ ಪ್ರಯೋಗಗಳು ವಿದ್ಯಾರ್ಥಿಗಳನ್ನು ಸಂಕಷ್ಟಕ್ಕೆ ದೂಡುತ್ತಿವೆ. ಇದೀಗ ವಿದ್ಯಾರ್ಥಿಗಳ ಭವಿಷ್ಯದ ಮುಖ್ಯ ಘಟ್ಟವಾಗಿರುವ SSLC ಪರೀಕ್ಷೆಗಳ ನಿಯಮಗಳ ಬದಲಾವಣೆಗೂ ಮುಂದಾಗಿದೆ. ಹೌದು…ದ್ವಿತೀಯ ಪಿಯು ಬಳಿಕ ಈಗ SSLC ಲಿಖಿತ ಪರೀಕ್ಷೆ ಅವಧಿ ಕಡಿತಗೊಳಿಸುವ ಚಿಂತನೆ ನಡೆಸಿದೆ.
ಕಳೆದ ವರ್ಷ SSLC ಫಲಿತಾಂಶ ದಾಖಲೆಯ ಕುಸಿತ ಕಂಡು ಇಲಾಖೆ ಛೀಮಾರಿ ಹಾಕಿಸಿಕೊಂಡಿತ್ತು. ಈಗ ಮತ್ತೆ SSLC ಪರೀಕ್ಷೆ ವಿಚಾರದಲ್ಲಿಯೂ ಇಲಾಖೆ ಸಮಯ ಕಡಿತಕ್ಕೆ ಮುಂದಾಗಿದೆ. ಕನ್ನಡ ಪರೀಕ್ಷೆ ಹೊರತು ಪಡಿಸಿ ಉಳಿದ ಎಲ್ಲ ಲಿಖಿತ ಪರೀಕ್ಷೆಗಳ ಅವಧಿಯನ್ನ ಕಡಿತಕ್ಕೆ ಚಿಂತನೆ ನಡೆಸಿದೆ. ಈಗಾಗಲೇ ಪಿಯು ಪರೀಕ್ಷೆಯಲ್ಲಿ ಮತ್ತೊಂದು ಪ್ರಯೋಗ ಮಾಡಿರುವ ಶಿಕ್ಷಣ ಇಲಾಖೆ ದ್ವಿತೀಯ ಪಿಯು ಪರೀಕ್ಷೆ ಅವಧಿ ಇಳಿಕೆಗೆ ಮುಂದಾಗಿದೆ. ದ್ವಿತೀಯ ಪಿಯುಸಿ ಪರೀಕ್ಷೆಯ ಅವಧಿಯನ್ನು 15 ನಿಮಿಷಗಳ ಕಾಲ ಇಳಿಕೆ ಮಾಡಿದೆ. 3 ಗಂಟೆಗಳ ಕಾಲ ಬರೆಯಬೇಕಿದ್ದ ಪರೀಕ್ಷೆ ಇದೇ ಶೈಕ್ಷಣಿಕ ವರ್ಷದಿಂದ 2 ಗಂಟೆ 45 ನಿಮಿಷಕ್ಕೆ ನಿಗಧಿ ಮಾಡಿದೆ.
ಇದನ್ನೂ ಓದಿ: ದ್ವಿತೀಯ ಪಿಯು ಲಿಖಿತ ಪರೀಕ್ಷೆಯಲ್ಲಿ ಮಹತ್ವದ ಬದಲಾವಣೆ: ಅವಧಿ ಇಳಿಕೆ ಮಾಡಿ ಮತ್ತೊಂದು ಪ್ರಯೋಗ
ಇದೇ ರೀತಿ 80 ಅಂಕಗಳಿಗೆ ಇರುವ ಎಸ್ಎಸ್ಎಲ್ ಸಿ ವಾರ್ಷಿಕ ಪರೀಕ್ಷೆಯ ಅವಧಿಯನ್ನ 15 ನಿಮಿಷ ಕಡಿತ ಮಾಡಲು ಪ್ಲಾನ್ ಮಾಡುತ್ತಿದೆ. ಕನ್ನಡ ಪರೀಕ್ಷೆಯನ್ನ ಹೊರತುಪಡಿಸಿ ಉಳಿದ ಎಲ್ಲ ಪರೀಕ್ಷಗಳ ಅವಧಿಯನ್ನ ಕಡಿತಗೊಳಿಸಲು ಇಲಾಖೆ ಚಿಂತನೆ ನಡೆಸಿದ್ದು, ಈ ಬಗ್ಗೆ ನುರಿತ ಶಿಕ್ಷಕರು ತಜ್ಞರ ಅಭಿಪ್ರಾಯ ಪಡೆಯಲು ಮುಂದಾಗಿದೆ. ಆದ್ರೆ ಇದಕ್ಕೆ ಶಿಕ್ಷಣ ಸಚಿವರು ಸ್ಪಷ್ಟ ಮಾಹಿತಿ ನೀಡದೆ ಇದನೆಲ್ಲ ಮಂಡಳಿ ಹಾಗೂ ಅಧಿಕಾರಿಗಳಿಗೆ ನೀಲಾಗಿದೆ ಎಂದಿದ್ದಾರೆ.
ಈ ಅಭಿಪ್ರಾಯದ ವರದಿಯನ್ನ ಸರ್ಕಾರದ ಮುಂದೆ ಇಟ್ಟು ಲಿಖಿತ ಪರೀಕ್ಷೆಯ ಅವಧಿಯಲ್ಲಿ 15 ನಿಮಿಷಗಳ ಕಾಲದ ಸಮಯ ಕಡಿತ ಮಾಡಲು ಶಾಲಾ ಶಿಕ್ಷಣ ಇಲಾಖೆ ಮುಂದಾಗಿದೆ. ಲಿಖಿತ ಬರವಣಿಗೆಗೆ ಮಾತ್ರ 2 ಗಂಟೆ 45 ನಿಮಿಷಗಳ ಕಾಲಾವಕಾಶ ನೀಡಲು ಚಿಂತನೆ ನಡೆದಿದೆ. ಸದ್ಯ ಇದಕ್ಕೆ ವಿರೋಧ ಶುರುವಾಗಿದೆ. ಈಗಾಗಲೇ ಪಿಯು ಪರೀಕ್ಷೆ ಅವಧಿ ಕಡಿಮೆ ಮಾಡಲಾಗಿದೆ. ಅದೇ ರೀತಿ ಎಸ್ಎಸ್ಎಲ್ ಸಿ ಅವಧಿಯೂ ಕಡಿತ ಮಾಡವುದು ವಿದ್ಯಾರ್ಥಿಗಳ ಶೈಕ್ಷಣಿಕ ದೃಷ್ಟಿಯಿಂದ ಉತ್ತಮ ಬೆಳವಣಿಗೆಯಲ್ಲ. ಜೊತೆಗೆ ಇದೇ 24 ರಿಂದ ಶುರುವಾಗುತ್ತಿರುವ ಮದ್ಯವಾರ್ಷಿಕ ಪರೀಕ್ಷೆಗೂ ಮಂಡಳಿ ಪ್ರಶ್ನೆ ಪತ್ರಿಕೆ ನೀಡುತ್ತಿರವುದು ವೆಬ್ ಕಾಸ್ಟಿಂಗ್ ಮಾಡ್ತೀರೊದು ಖಾಸಗಿ ಶಾಲೆಗಳ ಒಕ್ಕೂಟದ ವಿರೋಧಕ್ಕೆ ಕಾರಣವಾಗಿದೆ.
ಶಾಲಾ ಶಿಕ್ಷಣ ಇಲಾಖೆ SSLC ಪರೀಕ್ಷೆ ವಿಚಾರದಲ್ಲಿ ಪದೇ ಪದೇ ಈ ರೀತಿಯಾದ ಹೊಸ ನಿಯಮದಿಂದ ಪೋಷಕರಲ್ಲಿ ಹಾಗೂ ಮಕ್ಕಳಲ್ಲಿ ಟೆನ್ಷನ್ ಶುರುವಾಗಿದ್ದು, ಮೊದಲು ಇದ್ದ 3 ಗಂಟೆ 15 ನಿಮಿಷವೇ ಪರೀಕ್ಷೆ ಬರೆಯಲು ಸಾಕಗಾದೇ ವಿದ್ಯಾರ್ಥಿಗಳು ಪರದಾಡುತ್ತಿದ್ದರು. ಆದರೆ ಈಗ ಇರೋ ಕಾಲಾವಾಕಾಶದಲ್ಲೂ 15 ನಿಮಿಷ ಕಡಿತಗೊಳಿಸಿದ್ರೆ ಪರೀಕ್ಷೆ ಹೇಗೆ ಬರೆಯೋದು. ಹೀಗಾಗಿ ಸರ್ಕಾರ ಈ ನಿರ್ಧಾರ ಕೈ ಬಿಡುವಂತೆ ಎಲ್ಲಡೆ ಒತ್ತಾಯ ಕೇಳಿ ಬರುತ್ತಿವೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ