ಬೆಂಗಳೂರು: ಕರ್ನಾಟಕ ನೀಟ್ ಪಿಜಿ 2021 (NEET PG 2021) ಅಣಕು ಸೀಟು ಹಂಚಿಕೆ ಫಲಿತಾಂಶ ಇಂದು ಬಿಡುಗಡೆ ಆಗಲಿದೆ. ಇಂದು ಪಿಜಿ ಕೋರ್ಸ್‌ಗಳಿಗೆ ಕೌನ್ಸಿಲಿಂಗ್ ಆರಂಭಿಸಲಾಗಿತ್ತು. ಇಂದು ಪಿಜಿಇಟಿ (PGET) ಅಣಕು ಸೀಟು ಹಂಚಿಕೆಯ ಫಲಿತಾಂಶವನ್ನು ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ವೆಬ್‌ಸೈಟ್‌ನಲ್ಲಿ ಲಾಗಿನ್ ಆಗುವ ಮೂಲಕ ಪರಿಶೀಲಿಸಬಹುದು. ಕರ್ನಾಟಕ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (Karnataka NEET PG 2021) ಅಣಕು ಸೀಟ್ ಹಂಚಿಕೆ ಯಾವುದೇ ಕ್ಷಣದಲ್ಲಿ ಬೇಕಾದರೂ ಪ್ರಕಟವಾಗುವ ಸಾಧ್ಯತೆಯಿದೆ. ಅಭ್ಯರ್ಥಿಗಳು ಈ ಕುರಿತು ಪರಿಶೀಲಿಸಲು ಅಧಿಕೃತ ವೆಬ್‌ಸೈಟ್ cetonline.karnataka.gov.inಗೆ ಭೇಟಿ ನೀಡಬಹುದು.
ಕರ್ನಾಟಕ NEET PG 2021 ಅಣಕು ಸೀಟ್ ಹಂಚಿಕೆ ಫಲಿತಾಂಶವನ್ನು ಯಾವಾಗ ಬೇಕಾದರೂ ಬಿಡುಗಡೆ ಮಾಡಬಹುದು. KEA ಅದಕ್ಕೆ ಯಾವುದೇ ನಿರ್ದಿಷ್ಟ ಸಮಯವನ್ನು ಖಚಿತಪಡಿಸಿಲ್ಲ. ಆದರೆ, ಇಂದೇ ಪ್ರಕಟವಾಗಲಿದೆ ಎಂದು ಮಾತ್ರ ಘೋಷಿಸಿದೆ. ಇಂದು ಸಂಜೆಯೊಳಗೆ ಸೀಟು ಹಂಚಿಕೆಯ ಮಾಹಿತಿ ಪ್ರಕಟವಾಗುವ ಸಾಧ್ಯತೆಯಿದೆ.
ಇಂದು ಪ್ರಕಟಿಸುವ ಫಲಿತಾಂಶ ಕೇವಲ ಅಣಕು ಸೀಟು ಹಂಚಿಕೆಯಾಗಿದ್ದು, 2021ರ ಡಿಸೆಂಬರ್ 11ರಂದು ಅಂತಿಮ ಫಲಿತಾಂಶ ಬಿಡುಗಡೆಯಾಗುವ ಸಾಧ್ಯತೆ ಇದೆ. ಅಣಕು ಹಂಚಿಕೆ ಆದೇಶವನ್ನು ಪರಿಶೀಲಿಸಲು ಅಭ್ಯರ್ಥಿಗಳಿಗೆ ಅವರ PGET ನಂಬರ್ ಬೇಕು. ಪಿಜಿಇಟಿ ಸಂಖ್ಯೆಯ ಮೂಲಕ ಅಣಕು ಸೀಟು ಹಂಚಿಕೆಯ ಆದೇಶವನ್ನು ಪರೀಕ್ಷಿಸಬಹುದು. ಫಲಿತಾಂಶವನ್ನು ಹೇಗೆ ಪರಿಶೀಲಿಸುವುದು ಎಂಬುದರ ಕುರಿತು ಮಾಹಿತಿ ಇಲ್ಲಿದೆ.
ಕರ್ನಾಟಕ ನೀಟ್ ಪಿಜಿ 2021 ಅಣಕು ಸೀಟು ಹಂಚಿಕೆ ಫಲಿತಾಂಶವನ್ನು ಪರೀಕ್ಷಿಸುವ ವಿಧಾನ ಇಲ್ಲಿದೆ…
1. ನೀಟ್ ಪಿಜಿ ಪರೀಕ್ಷೆ ಬರೆದ ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್‌ಸೈಟ್ cetonline.karnataka.gov.inಗೆ ಭೇಟಿ ನೀಡಿ.
2. ಓಪನ್ ಆದ ಪೇಜ್‌ನಲ್ಲಿ ‘Latest Announcements’ ಸೆಕ್ಷನ್ ಕ್ಲಿಕ್ ಮಾಡಿ.
3. Karnataka NEET PG 2021 ಎಂಬಲ್ಲಿ ಕ್ಲಿಕ್ ಮಾಡಿ.
4. ಓಪನ್ ಆದ ಪೇಜ್‌ನಲ್ಲಿ ಪಿಜಿಇಟಿ 2021 ನಂಬರ್ ನೀಡಿ ಲಾಗಿನ್ ಆಗಿ.
5. ಅಲ್ಲಿ ನೀಟ್ ಪಿಜಿ ಸೀಟು ಹಂಚಿಕೆ ಫಲಿತಾಂಶ ಕಾಣಿಸಿಕೊಳ್ಳುತ್ತದೆ.
6. ಅದನ್ನು ಡೌನ್‌ಲೋಡ್ ಮಾಡಿಕೊಂಡು ಪ್ರಿಂಟ್ ತೆಗೆದುಕೊಳ್ಳಿ.
ನೀಟ್ ಪಿಜಿ ಪರೀಕ್ಷೆ ಬರೆದ ಅಭ್ಯರ್ಥಿಗಳಿಗೆ ಆಪ್ಶನ್ ಎಂಟ್ರಿ ಬದಲಾವಣೆಗೆ (Changing Option Entry) ಅವಕಾಶ ನೀಡಲಾಗುತ್ತದೆ. ಮುಂದಿನ ಪ್ರಕ್ರಿಯೆಗೆ ಕೆಇಎ (ಕರ್ನಾಟಕ ಪರೀಕ್ಷಾ ಪ್ರಾಧಿಕಾರ) ಬಿಡುಗಡೆ ಮಾಡುವ ವೇಳಾಪಟ್ಟಿಯನ್ನು ಗಮನಿಸುತ್ತಿರಿ.
ಇದನ್ನೂ ಓದಿ: NEET Exam 2021 Result: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ; ಕರ್ನಾಟಕದ ಇಬ್ಬರಿಗೆ 5ನೇ ರ್ಯಾಂಕ್
NEET 2021 Results: ನೀಟ್ ಫಲಿತಾಂಶ ಪ್ರಕಟಿಸಲು ಸುಪ್ರೀಂ ಕೋರ್ಟ್ ಅನುಮತಿ; ರಿಸಲ್ಟ್ ನೋಡಲು ಹೀಗೆ ಮಾಡಿ