Second PUC Exam 3 Result :ದ್ವಿತೀಯ ಪಿಯುಸಿ ಪರೀಕ್ಷೆ-3 ಫಲಿತಾಂಶ ಪ್ರಕಟ

Karnataka second puc exam 3 Result Declared: ದ್ವಿತೀಯ ಪಿಯುಸಿ ಪರೀಕ್ಷೆ-3 ಫಲಿತಾಂಶ ಪ್ರಕಟ ಪ್ರಕಟವಾಗಿದೆ. ಇಂದು (ಜುಲೈ 16) 2024ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ3 ರ ಫಲಿತಾಂಶವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ ಪ್ರಕಟಸಿದ್ದು, ಈ ಪರೀಕ್ಷೆಯಲ್ಲೂ ಸಹ ಮತ್ತೊಮ್ಮೆ ಬಾಲಕಿಯರು ಮೇಲುಗೈ ಸಾಧಿಸಿದ್ದಾರೆ.

Second PUC Exam 3 Result :ದ್ವಿತೀಯ ಪಿಯುಸಿ ಪರೀಕ್ಷೆ-3 ಫಲಿತಾಂಶ ಪ್ರಕಟ
ಪ್ರಾತಿನಿಧಿಕ ಚಿತ್ರ
Follow us
| Updated By: ರಮೇಶ್ ಬಿ. ಜವಳಗೇರಾ

Updated on:Jul 16, 2024 | 3:38 PM

ಬೆಂಗಳೂರು, (ಜುಲೈ 16): ಇದೇ ಜೂನ್ 25ರಿಂದ ಜುಲೈ5 ರವರೆಗೆ ನಡೆದಿದ್ದ ದ್ವಿತೀಯ ಪಿಯುಸಿ ಪರೀಕ್ಷೆ-3ರ ಫಲಿತಾಂಶ ಪ್ರಕಟವಾಗಿದೆ. 2024ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ3 ರ ಫಲಿತಾಂಶವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ ಇಂದು(ಜುಲೈ 16) ಪ್ರಕಟಿಸಿದೆ. ಪರೀಕ್ಷೆಗೆ ಹಾಜರಾಗಿದ್ದ ಒಟ್ಟು 75466 ವಿದ್ಯಾರ್ಥಿಗಳ ಪೈಕಿ 17,911 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶೇ.21.65 ಬಾಲಕರು ಪಾಸ್ ಆಗಿದ್ದರೆ, ಶೇ. 26.55 ಬಾಲಕಿಯರು ತೇರ್ಗಡೆಯಾಗಿದ್ದಾರೆ. ಈ ಮೂಲಕ ಮತ್ತೊಮ್ಮೆ ಬಾಲಕಿಯರು ಮೇಲುಗೈ ಸಾಧಿಸಿದ್ದಾರೆ.

ಕರ್ನಾಟಕದಾದ್ಯಂತ ಇದೇ ಜೂನ್ 25ರಿಂದ ಜುಲೈ5 ರವರೆಗೆ ದ್ವಿತೀಯ ಪಿಯುಸಿ-3 ಪರೀಕ್ಷೆ ನಡೆಸಲಾಗಿತ್ತು. 76,005 ವಿದ್ಯಾರ್ಥಿಗಳಿಂದ ಪರೀಕ್ಷೆ ನೋಂದಣಿ ಮಾಡಿಕೊಂಡಿದ್ದರು. ಆದ್ರೆ, 75466 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 17,911 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ.

ಇಂದು (ಜುಲೈ 16) ಮಧ್ಯಾಹ್ನ 3ಕ್ಕೆ ವೆಬ್‌ಸೈಟ್‌ ಮೂಲಕ ಪ್ರಕಟಿಸಲಾಗಿದ್ದು, ನಾಳೆ(ಜುಲೈ 7) ಆಯಾ ಕಾಲೇಜುಗಳಲ್ಲೂ ಫಲಿತಾಂಶವನ್ನು ನೋಟಿಸ್ ಬೋರ್ಡ್​​ಗೆ ಹಾಕಲಾಗುತ್ತ. ಇನ್ನು ಇಂದೇ ಆನ್​ಲೈನ್​ನಲ್ಲಿ ಫಲಿತಾಂಶ ನೋಡಬೇಕು ಎಂದರೆ ಈ ಕೆಳಗೆ ನೀಡಿರುವ ಮಹಿತಿಯನ್ನು ಅನುಸರಿಸಿ.

ಫಲಿತಾಂಶ ನೋಡುವುದು ಹೇಗೆ?

  • kseab.karnataka.gov.in ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
  • https://www.karresults.nic.in ಅನ್ನು ಕ್ಲಿಕ್‌ ಮಾಡಿ.
  • ಹೋಮ್‌ ಪೇಜ್‌ನಲ್ಲಿ ಪಿಯುಸಿ ಪೂರಕ ಫಲಿತಾಂಶದ ಲಿಂಕ್‌ ಕ್ಲಿಕ್‌ ಮಾಡಿ
  • ಸ್ಕ್ರೀನ್‌ನಲ್ಲಿ ಹೊಸ ಪುಟ ಕಾಣಿಸುತ್ತದೆ
  • ನಿಮ್ಮ ರೋಲ್‌ ನಂಬರ್‌, ಜನ್ಮ ದಿನಾಂಕ ಸೇರಿದಂತೆ ಅಲ್ಲಿ ಕೇಳಲಾಗುವ ಮಾಹಿತಿಯನ್ನು ನಮೂದಿಸಿ
  • ಸ್ಕ್ರೀನ್‌ ಮೇಲೆ ನಿಮ್ಮ ಫಲಿತಾಂಶ ಕಾಣುತ್ತದೆ
  • ಫಲಿತಾಂಶವನ್ನು ಡೌನ್‌ಲೋಡ್‌ ಮಾಡಿ ಅಥವಾ ಪ್ರಿಂಟ್‌ ಔಟ್‌ ತೆಗೆದುಕೊಳ್ಳಿ

ಮತ್ತಷ್ಟು ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 2:39 pm, Tue, 16 July 24