Karnataka SSLC District Wise Result 2024: ಉಡುಪಿಗೆ ಪ್ರಥಮ ಸ್ಥಾನ, ಯಾದಗಿರಿಗೆ ಕೊನೆಯ ಸ್ಥಾನ

ಕರ್ನಾಟಕ ಜಿಲ್ಲಾವಾರು 10ನೇ ತರಗತಿ ಫಲಿತಾಂಶ 2024: ಉಡುಪಿ ಪ್ರಥಮ ಸ್ಥಾನ(94%) ಪಡೆದಿದೆ. ದ್ವಿತೀಯ ಸ್ಥಾನ ದಕ್ಷಿಣ ಕನ್ನಡ(92.12%) ಜಿಲ್ಲೆಗೆ ಸಿಕ್ಕಿದ್ದು ಶಿವಮೊಗ್ಗ (88.67%) ಮೂರನೇ ಸ್ಥಾನ ಪಡೆದಿದೆ. ಇನ್ನು ರಾಜ್ಯದಲ್ಲಿ ಶೇಕಡಾವಾರು ಕೊನೆ ಸ್ಥಾನ ಪಡೆದ ಜಿಲೆ ಯಾದಗಿರಿ (50.59%).

Karnataka SSLC District Wise Result 2024: ಉಡುಪಿಗೆ ಪ್ರಥಮ ಸ್ಥಾನ, ಯಾದಗಿರಿಗೆ ಕೊನೆಯ ಸ್ಥಾನ
ಉಡುಪಿಗೆ ಪ್ರಥಮ ಸ್ಥಾನ, ಯಾದಗಿರಿಗೆ ಕೊನೆಯ ಸ್ಥಾನ
Follow us
| Updated By: ಆಯೇಷಾ ಬಾನು

Updated on:May 09, 2024 | 11:20 AM

ಬೆಂಗಳೂರು, ಮೇ.09: ಇಂದು 2023-24ನೇ ಸಾಲಿನ ಎಸ್​ಎಸ್​ಎಲ್​ಸಿ ಪರೀಕ್ಷೆ ಫಲಿತಾಂಶ ಹೊರಬಿದ್ದಿದೆ. ರಾಜ್ಯಾದ್ಯಂತ 8 ಲಕ್ಷ 69 ಸಾವಿರದ 968 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಸದ್ಯ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಘೋಷಣೆ ಮಾಡಿದೆ. ಎಂದಿನಂತೆ ಈ ಬಾರಿಯೂ ಕೂಡ ಹೆಣ್ಣುಮಕ್ಕಳೇ ರಿಸಲ್ಟ್​​ನಲ್ಲಿ ಮೇಲುಗೈ ಸಾಧಿಸಿದ್ದಾರೆ. ಇನ್ನು ಉಡುಪಿಗೆ ರಾಜ್ಯದಲ್ಲಿ ಮೊದಲ ಸ್ಥಾನ ಸಿಕ್ಕಿದೆ. ಯಾದಗಿರಿ ಜಿಲ್ಲೆಗೆ ಕೊನೆಯ ಸ್ಥಾನ ಸಿಕ್ಕಿದೆ.

2024ರ ಮಾ.25ರಿಂದ 2024ರ ಏಪ್ರಿಲ್ 6ರವರೆಗೆ ನಡೆದಿದ್ದ ಎಸ್​ಎಸ್​ಎಲ್​ಸಿ ಪರೀಕ್ಷೆ-1ರಲ್ಲಿ 441910 ವಿದ್ಯಾರ್ಥಿಗಳು, 428058 ವಿದ್ಯಾರ್ಥಿನಿಯರು ಪರೀಕ್ಷೆ ಬರೆದಿದ್ದರು. ಈ ಬಾರಿ ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ 6,31,204 ವಿದ್ಯಾರ್ಥಿಗಳು ಪಾಸ್​​ ಆಗಿದ್ದು ಈ ಬಾರಿ ರಾಜ್ಯಾದ್ಯಂತ 76.91ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 2,87,416 (65.90%) ಬಾಲಕರು ಪಾಸ್ ಆಗಿದ್ದು 3,43,788 (81.11%) ಬಾಲಕಿಯರು ಪಾಸ್​ ಆಗಿದ್ದಾರೆ. ಈ ಮೂಲಕ SSLC ಪರೀಕ್ಷೆಯಲ್ಲಿ ಬಾಲಕಿಯರು ಮೇಲುಗೈ ಸಾಧಿಸಿದ್ದಾರೆ. ಇನ್ನು ಉಡುಪಿ ಪ್ರಥಮ ಸ್ಥಾನ(94%) ಪಡೆದಿದೆ. ದ್ವಿತೀಯ ಸ್ಥಾನ ದಕ್ಷಿಣ ಕನ್ನಡ(92.12%) ಜಿಲ್ಲೆಗೆ ಸಿಕ್ಕಿದ್ದು ಶಿವಮೊಗ್ಗ (88.67%) ಮೂರನೇ ಸ್ಥಾನ ಪಡೆದಿದೆ. ಇನ್ನು ರಾಜ್ಯದಲ್ಲಿ ಶೇಕಡಾವಾರು ಕೊನೆ ಸ್ಥಾನ ಪಡೆದ ಜಿಲೆ ಯಾದಗಿರಿ (50.59%).

ಇದನ್ನೂ ಓದಿ: Karnataka SSLC 2024 Toppers List: ಬಾಗಲಕೋಟೆಯ ಅಂಕಿತಾ ಬಸಪ್ಪ ಕೊನ್ನೂರು ರಾಜ್ಯಕ್ಕೆ ಪ್ರಥಮ, ಇಲ್ಲಿದೆ ಟಾಪರ್ಸ್​​ ಲಿಸ್ಟ್

ಜಿಲ್ಲಾವಾರು ಫಲಿತಾಂಶ

  • ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನ (94%) ಫಲಿತಾಂಶ
  • ದಕ್ಷಿಣ ಕನ್ನಡ ಜಿಲ್ಲೆಗೆ ದ್ವಿತೀಯ ಸ್ಥಾನ (92.12%)
  • ಶಿವಮೊಗ್ಗ ಜಿಲ್ಲೆಗೆ ಮೂರನೇ ಸ್ಥಾನ (88.67%)
  • ಕೊಡಗು ಜಿಲ್ಲೆಗೆ ನಾಲ್ಕನೇ ಸ್ಥಾನ (88.67%)
  • ಉತ್ತರ ಕನ್ನಡ ಜಿಲ್ಲೆಗೆ ಐದನೇ ಸ್ಥಾನ (86.54%)
  • ಹಾಸನ ಜಿಲ್ಲೆಗೆ ಆರನೇ ಸ್ಥಾನ (86.28%)
  • ಮೈಸೂರು ಜಿಲ್ಲೆಗೆ ಏಳನೇ ಸ್ಥಾನ (85.5%)
  • ಶಿರಸಿ ಜಿಲ್ಲೆಗೆ ಎಂಟನೇ ಸ್ಥಾನ (84.64%)
  • ಬೆಂಗಳೂರು ಗ್ರಾ ಜಿಲ್ಲೆಗೆ ಒಂಬ್ತತೇ ಸ್ಥಾನ (83.67%)
  • ಚಿಕ್ಕಮಗಳೂರು ಜಿಲ್ಲೆಗೆ ಹತ್ತನೇ ಸ್ಥಾನ (83.39%)
  • ವಿಜಯಪುರ ಜಿಲ್ಲೆಗೆ 11ನೇ ಸ್ಥಾನ (79.82%)
  • ಬೆಂಗಳೂರು ದಕ್ಷಿಣ ಜಿಲ್ಲೆಗೆ 12ನೇ ಸ್ಥಾನ (79%)
  • ಬಾಗಲಕೋಟೆ ಜಿಲ್ಲೆಗೆ 13ನೇ ಸ್ಥಾನ (77.92%)
  • ಬೆಂಗಳೂರು ಉತ್ತರ ಜಿಲ್ಲೆಗೆ 14ನೇ ಸ್ಥಾನ (77.09%)
  • ಹಾವೇರಿ ಜಿಲ್ಲೆಗೆ 15ನೇ ಸ್ಥಾನ (75.85%)
  • ತುಮಕೂರು ಜಿಲ್ಲೆಗೆ 16ನೇ ಸ್ಥಾನ (75.16%)
  • ಗದಗ ಜಿಲ್ಲೆಗೆ 17ನೇ ಸ್ಥಾನ (74.76%)
  • ಚಿಕ್ಕಬಳ್ಳಾಪುರ ಜಿಲ್ಲೆಗೆ 18ನೇ ಸ್ಥಾನ (73.61%)
  • ಮಂಡ್ಯ ಜಿಲ್ಲೆಗೆ 19ನೇ ಸ್ಥಾನ (73.59%)
  • ಕೋಲಾರ ಜಿಲ್ಲೆಗೆ 20ನೇ ಸ್ಥಾನ (73.57%)
  • ಚಿತ್ರದುರ್ಗ ಜಿಲ್ಲೆಗೆ 21ನೇ ಸ್ಥಾನ (72.85%)
  • ಧಾರವಾಡ ಜಿಲ್ಲೆಗೆ 22ನೇ ಸ್ಥಾನ (72.67%)
  • ದಾವಣಗೆರೆ ಜಿಲ್ಲೆಗೆ 23ನೇ ಸ್ಥಾನ (72.49%)
  • ಚಾಮರಾಜನಗರ ಜಿಲ್ಲೆಗೆ 24ನೇ ಸ್ಥಾನ (71.59%)
  • ಚಿಕ್ಕೋಡಿ ಜಿಲ್ಲೆಗೆ 25ನೇ ಸ್ಥಾನ (69.82%)
  • ರಾಮನಗರ ಜಿಲ್ಲೆಗೆ 26ನೇ ಸ್ಥಾನ (69.53%)
  • ವಿಜಯನಗರ ಜಿಲ್ಲೆಗೆ 27ನೇ ಸ್ಥಾನ (65.61%)
  • ಬಳ್ಳಾರಿ ಜಿಲ್ಲೆಗೆ 28ನೇ ಸ್ಥಾನ ಸಿಕ್ಕಿದೆ (64.99%)
  • ಬೆಳಗಾವಿ ಜಿಲ್ಲೆಗೆ 29ನೇ ಸ್ಥಾನ (64.93%)
  • ಮಧುಗಿರಿ ಜಿಲ್ಲೆಗೆ 30ನೇ ಸ್ಥಾನ (62.44%)
  • ರಾಯಚೂರು ಜಿಲ್ಲೆಗೆ 31ನೇ ಸ್ಥಾನ (61.2%)
  • ಕೊಪ್ಪಳ ಜಿಲ್ಲೆಗೆ 32ನೇ ಸ್ಥಾನ (61.16%)
  • ಬೀದರ್ ಜಿಲ್ಲೆಗೆ 33ನೇ ಸ್ಥಾನ (57.52%)
  • ಕಲಬುರಗಿ ಜಿಲ್ಲೆಗೆ 34ನೇ ಸ್ಥಾನ (53.04%)
  • SSLC ಪರೀಕ್ಷೆಯಲ್ಲಿ ಯಾದಗಿರಿ ಜಿಲ್ಲೆಗೆ ಕೊನೆಯ ಸ್ಥಾನ 50.59% ಸಿಕ್ಕಿದೆ

ಪಾಸಾಗಲಿ ಅಥವಾ ಫೇಲಾಗಲಿ 3 ಬಾರಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ. ಪಾಸಾದವರು ಅಂಕ ಹೆಚ್ಚಿಸಿಕೊಳ್ಳಲು ಪರೀಕ್ಷೆ-2, ಪರೀಕ್ಷೆ-3 ಬರೆಯಬಹುದಾಗಿದೆ.

Published On - 10:59 am, Thu, 9 May 24

ತಾಜಾ ಸುದ್ದಿ
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಮಗನನ್ನು ನೋಡಲು ಜೈಲಿಗೆ ಬಂದ ರೇವಣ್ಣ ಮಾಧ್ಯಮದವರನ್ನು ಕಂಡು ಸಿಡುಕಿದರು!
ಮಗನನ್ನು ನೋಡಲು ಜೈಲಿಗೆ ಬಂದ ರೇವಣ್ಣ ಮಾಧ್ಯಮದವರನ್ನು ಕಂಡು ಸಿಡುಕಿದರು!
ಭೂಕುಸಿತದಲ್ಲಿ ಸಿಲುಕಿರುವ ಕಾರ್ಮಿಕನ ಕೈ ಗೋಚರ: ಸುರಂಗದ ಮೂಲಕ ಚಿಕಿತ್ಸೆ
ಭೂಕುಸಿತದಲ್ಲಿ ಸಿಲುಕಿರುವ ಕಾರ್ಮಿಕನ ಕೈ ಗೋಚರ: ಸುರಂಗದ ಮೂಲಕ ಚಿಕಿತ್ಸೆ
ಮುಡಾ ಹಗರಣ ಸಿಬಿಐ ತನಿಖೆಗೆ ನೀಡಬೇಕೆನ್ನುವ ನೈತಿಕತೆ ಬಿಜೆಪಿಗಿದೆಯಾ? ಸಿಎಂ
ಮುಡಾ ಹಗರಣ ಸಿಬಿಐ ತನಿಖೆಗೆ ನೀಡಬೇಕೆನ್ನುವ ನೈತಿಕತೆ ಬಿಜೆಪಿಗಿದೆಯಾ? ಸಿಎಂ
ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಹೊಡೆದ ಶಿಕ್ಷಕಿ! ಪೋಷಕರಿಂದ ಶಾಲೆಗೆ ಬೀಗ
ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಹೊಡೆದ ಶಿಕ್ಷಕಿ! ಪೋಷಕರಿಂದ ಶಾಲೆಗೆ ಬೀಗ
 ಪವಿತ್ರಾ ಗೌಡರನ್ನು ನೋಡಲು ಬುತ್ತಿಯೊಂದಿಗೆ ಜೈಲಿಗೆ ಬಂದ ತಂದೆ-ತಾಯಿ, ಸಹೋದರ
 ಪವಿತ್ರಾ ಗೌಡರನ್ನು ನೋಡಲು ಬುತ್ತಿಯೊಂದಿಗೆ ಜೈಲಿಗೆ ಬಂದ ತಂದೆ-ತಾಯಿ, ಸಹೋದರ