ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮೌಲ್ಯಮಾಪನ ಆರಂಭ, ರಿಸಲ್ಟ್ ಯಾವಾಗ?
Karnataka SSLC Result 2023: 2022-23ನೇ ಸಾಲಿನ ಕರ್ನಾಟಕ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಗಳ ಮೌಲ್ಯಮಾಪನ ಆರಂಭವಾಗಿದ್ದು, ಫಲಿತಾಂಶಕ್ಕಾಗಿ ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿದ್ದಾರೆ. ಹಾಗಾದ್ರೆ, ರಿಸಲ್ಟ್ ಯಾವಾಗ ಪ್ರಕಟವಾಗಹುದು ಎನ್ನುವುದು ಈ ಕೆಳಗಿನಂತಿದೆ ನೋಡಿ.
ಬೆಂಗಳೂರು: 2022-23ನೇ ಸಾಲಿನ ಕರ್ನಾಟಕ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯ (SSLC Exam) ಮೌಲ್ಯಮಾಪನ ಆರಂಭವಾಗಿದೆ. ಶಿಕ್ಷಕರಿಗೆ ಚುನಾವಣಾ ಕರ್ತವ್ಯ ಇರುವುದರಿಂದ ಇನ್ನು ಮುಂದಿನ ದಿನಗಳಲ್ಲಿ ಬಹಳ ಬೇಗ ಫಲಿತಾಂಶ ನೀಡುವ ಸಲುವಾಗಿ ಮೌಲ್ಯಮಾಪನ ಆರಂಭ ಮಾಡಲಾಗಿದೆ. ಎರಡನೇ 2ನೇ ವಾರ ಚುನಾವಣೆ ಫಲಿತಾಂಶಕ್ಕೆ ತೊಂದರೆ ಆಗದಂತೆ ಪಿಯುಸಿ ಫಲಿತಾಂಶವನ್ನು ಕೇವಲ 23 ದಿನದೊಳಗೆ ಪ್ರಕಟಿಸಿದಂತೆ ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ಸಹ ಪ್ರಕಟಿಸಲು ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ನಿರ್ಣಯ ಮಂಡಳಿ ತೀರ್ಮಾನಿಸಿದೆ.
236 ಕೇಂದ್ರಗಳಲ್ಲಿ 8.42 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 50 ಲಕ್ಷಕ್ಕೂ ಅಧಿಕ ಉತ್ತರ ಪತ್ರಿಕೆಗಳಯ ಮೌಲ್ಯಮಾಪನ ನಡೆಯಬೇಕಿದೆ. ಈ ಮೌಲ್ಯಮಾಪನದಲ್ಲಿ ಸುಮಾರು 70 ಸಾವಿರಕ್ಕೂ ಅಧಿಕ ಶಿಕ್ಷಕರು ಪಾಲ್ಗೊಂಡಿದ್ದಾರೆ ಎಂದು ತಿಳಿದುಬಂದಿದೆ.
KSEEB ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಮಾರ್ಚ್ 28ರಿಂದ ಏಪ್ರಿಲ್ 11ರವರೆಗೆ ನಡೆದಿದ್ದು, ಒಟ್ಟು 8.60 ಲಕ್ಷ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ಇನ್ನು ರಾಜ್ಯಾದ್ಯಂತ ಸುಮಾರು 236 ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆದಿದ್ದವು. ಈಗಾಗಲೇ ಎಸ್ಎಸ್ಲ್ಸಿ ಪರೀಕ್ಷೆಯ ಕೀ ಉತ್ತರಗಳನ್ನು ಪ್ರಕಟಿಸಲಾಗಿದ್ದು, ವಿದ್ಯಾರ್ಥಿಗಳಿಗೆ ತಾತ್ಕಾಲಿಕ ಕೀ ಉತ್ತರ ಬಗ್ಗೆ ಏನಾದರೂ ಆಕ್ಷೇಪಣೆಗಳು ಇದ್ದರೆ ತಿಳಿಸುವಂತೆ ಮಂಡಳಿ ಹೇಳಿತ್ತು. ಇದೀಗ ಮೌಲ್ಯ ಮಾಪನ ಶುರುವಾಗಿದ್ದು, ಫಲಿತಾಂಶ ಏನಾಗಲಿದೆ? ಎಷ್ಟು ಅಂಕಗಳು ಬರಲಿವೆ ಎನ್ನುವ ಕಾತರ, ಕುತೂಹಲದ ಜೊತೆ ಆತಂಕವೂ ಸಹ ವಿದ್ಯಾರ್ಥಿಗಳಲ್ಲಿ ಮನೆ ಮಾಡಿದೆ.
SSLC ಫಲಿತಾಂಶವನ್ನು ಇಲಾಖೆಯ ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟವಾಗಲಿದ್ದು, karresults.nic.in ಮತ್ತು kseab.karnataka.gov.in. ಮೂಲಕ ಫಲಿತಾಂಶ ತಿಳಿದುಕೊಳ್ಳಬಹುದಾಗಿದೆ. ಇನ್ನು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ದಿನಾಕ ಸೇರಿದಂತೆ ಇತರೆ ಮಾಹಿತಿಯನ್ನು ನಿಮಗೆ ಕೊಡುತ್ತಿರುತ್ತೇವೆ. ಹೀಗಾಗಿ ನೀವು ವಿಟಿ9 ಕನ್ನಡ ವೆಬ್ಸೈಟ್ ನೋಡುತ್ತೀರಿ.
ಶಿಕ್ಷಣಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:48 am, Tue, 25 April 23