SSLC District Wise Result 2025: ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ, ಕಲಬುರಗಿಗೆ ಕೊನೆಯ ಸ್ಥಾನ

ಕರ್ನಾಟಕ ಎಸ್​ಎಸ್​ಎಲ್​ಸಿ​ ಜಿಲ್ಲಾವಾರು ಫಲಿತಾಂಶ 2025: 2024-25ನೇ ಸಾಲಿನ ಎಸ್ಎಸ್ಎಲ್​ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಒಟ್ಟಾರೆ ಶೇಕಡಾ 62.34ರಷ್ಟು ಫಲಿತಾಂಶ ದಾಖಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ಶೇಕಡಾ 91.12ರೊಂದಿಗೆ ಪ್ರಥಮ ಸ್ಥಾನ ಪಡೆದಿದೆ. ಕಲಬುರಗಿ ಜಿಲ್ಲೆ ಕೊನೆಯ ಸ್ಥಾನ ಪಡೆದುಕೊಂಡಿದೆ. ಹಾಗಾದರೆ ಯಾವ ಜಿಲ್ಲೆಗೆ ಯಾವ ಸ್ಥಾನ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

SSLC District Wise Result 2025: ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ, ಕಲಬುರಗಿಗೆ ಕೊನೆಯ ಸ್ಥಾನ
ಪ್ರಾತಿನಿಧಿಕ ಚಿತ್ರ

Updated on: May 02, 2025 | 1:30 PM

kseab.karnataka.gov.in – Karnataka SSLC Class 10 Result 2025:

ಬೆಂಗಳೂರು, ಮೇ 02: 2024-25ನೇ ಸಾಲಿನ ಎಸ್​ಎಸ್​ಎಲ್​ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ. ಈ ಬಾರಿ ಶೇ.62.34ರಷ್ಟು ಫಲಿತಾಂಶ ಅಂದರೆ ಕಳೆದ ವರ್ಷಕ್ಕಿಂತ 8% ಹೆಚ್ಚಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಶೇ.91.12 ರಷ್ಟು ಫಲಿತಾಂಶ ಗಳಿಸುವ ಮೂಲಕ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಪಡೆದುಕೊಂಡಿದೆ. ಶೇ42.43 ರಷ್ಟು ಫಲಿತಾಂಶ ಗಳಿಸುವ ಕಲಬುರಗಿ ಜಿಲ್ಲೆ ಕೊನೆಯ ಸ್ಥಾನದಲ್ಲಿದೆ.

ಯಾವ ಜಿಲ್ಲೆಗೆ ಯಾವ ಸ್ಥಾನ?

ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ (ಶೇ.91.12), ಉಡುಪಿ ಜಿಲ್ಲೆ 2ನೇ ಸ್ಥಾನ (ಶೇ.89.96), ಉತ್ತರ ಕನ್ನಡ ಜಿಲ್ಲೆಗೆ 3ನೇ ಸ್ಥಾನ (ಶೇ.83.19), ಶಿವಮೊಗ್ಗ ಜಿಲ್ಲೆಗೆ 4ನೇ ಸ್ಥಾನ (ಶೇ.82.29), ಕೊಡಗು ಜಿಲ್ಲೆಗೆ 5ನೇ ಸ್ಥಾನ (ಶೇ.82.21) ಮತ್ತು
ಕಲಬುರಗಿ ಕೊನೆಯ ಸ್ಥಾನ (ಶೇ42.43) ಪಡೆದುಕೊಂಡಿದೆ.

ಇದನ್ನೂ ಓದಿ: Karnataka SSLC Result 2025: ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ; kseab.karnataka.gov.in ನಲ್ಲಿ ರಿಸಲ್ಟ್​ ಲಭ್ಯ

ಇದನ್ನೂ ಓದಿ
SSLC ಫಲಿತಾಂಶ: 22 ವಿದ್ಯಾರ್ಥಿಗಳಿಗೆ ಔಟ್​ ಆಫ್ ಔಟ್​
ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ: ಫಲಿತಾಂಶ ಯಾವ ಸೈಟ್ ಗಳಲ್ಲಿ ಲಭ್ಯ?
Karnataka SSLC Results: ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ, ಲೈವ್​ ನೋಡಿ
ಕರ್ನಾಟಕ ಎಸ್‌ಎಸ್‌ಎಲ್‌ಸಿ ಶೇ. 62.14 ಫಲಿತಾಂಶ

ಇನ್ನು ಎಂದಿನಂತೆ ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. 22 ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನ ಪಡೆದು ರಾಜ್ಯಕ್ಕೆ ಟಾಪರ್‌ ಆಗಿ ಹೊರಹೊಮ್ಮಿದ್ದಾರೆ. 8 ಲಕ್ಷ ವಿದ್ಯಾರ್ಥಿಗಳ ಪೈಕಿ, 5 ಲಕ್ಷ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶೇಕಡಾ 74ರಷ್ಟು ಬಾಲಕಿಯರು ಪಾಸಾಗಿದ್ದಾರೆ.

625ಕ್ಕೆ 625 ಅಂಕ ಪಡೆದವರು

  • ಅಖೀಲ್ ಅಹ್ಮದ್ ನದಾಫ್‌ -ಆಕ್ಸ್​ಫರ್ಡ್ ಶಾಲೆ, ವಿಜಯಪುರ
  • ಭಾವನಾ -ನೀಲಗಿರೇಶ್ವರ ವಿದ್ಯಾನಿಕೇತನ ಶಾಲೆ, ದೇವನಹಳ್ಳಿ
  • ಎಂ.ಧನಲಕ್ಷ್ಮೀ -ಸೇಂಟ್‌ ಯಶ್‌ ಶಾಲೆ, ಬೆಂಗಳೂರು ಉತ್ತರ
  • ಎಸ್.ಧನುಷ್ -ಮರಿಮಲ್ಲಪ್ಪ ಹೈಸ್ಕೂಲ್‌, ಮೈಸೂರು ಜಿಲ್ಲೆ
  • ಜೆ.ಧೃತಿ -ಸಾಹುಕಾರ್‌ ಚಿಕ್ಕನಗೌಡ ಶಾಲೆ, K.R.ಪೇಟೆ, ಮಂಡ್ಯ
  • ಎಸ್.ಎನ್.ಜಾಹ್ನವಿ – ವಿಜಯಭಾರತಿ ವಿದ್ಯಾಲಯ, ಬೆಂಗಳೂರು ದಕ್ಷಿಣ
  • ಮಧುಸೂಧನ್ ರಾಜ್ -MES ಕಿಶೋರ ಕೇಂದ್ರ, ಬೆಂಗಳೂರು ಉತ್ತರ
  • ಮೊಹಮ್ಮದ್ ಮಸ್ತೂರ್ -ಚೇತನ ವಿದ್ಯಾಮಂದಿರ, ತುಮಕೂರು
  • ಮೌಲ್ಯ ಡಿ. ರಾಜ್ -ರಾಷ್ಟ್ರೀಯ ಅಕಾಡೆಮಿ ಶಾಲೆ, ಚಿತ್ರದುರ್ಗ
  • ಕೆ.ನಮನ – ಪ್ರಿಯದರ್ಶಿನಿ ಹೈಸ್ಕೂಲ್, ಶಿವಮೊಗ್ಗ ಜಿಲ್ಲೆ
  • ನಮಿತಾ -ಮಾತಾ ನ್ಯಾಷನಲ್‌ ಇಂಗ್ಲಿಷ್‌ ಶಾಲೆ, ಬೆಂಗಳೂರು ದಕ್ಷಿಣ
  • ನಂದನ್ -ರಾಷ್ಟ್ರೀಯ ಅಕಾಡೆಮಿ ಇಂಗ್ಲಿಷ್ ಶಾಲೆ, ಚಿತ್ರದುರ್ಗ
  • ನಿತ್ಯ ಎಂ.ಕುಲಕರ್ಣಿ -ರಾಮಕೃಷ್ಣ ಇಂಗ್ಲಿಷ್‌ ಶಾಲೆ, ಶಿವಮೊಗ್ಗ
  • ರಂಜಿತಾ -ಚಂದ್ರಶೇಖರನಾಥ ಸ್ವಾಮೀಜಿ ಶಾಲೆ, ಬೆಂಗಳೂರು ಗ್ರಾ.
  • ರೂಪಾ ಪಾಟೀಲ್-ಸರ್ಕಾರಿ ಕಾಂಪೋಸಿಟ್‌ ಪಿಯು ಕಾಲೇಜು, ಬೆಳಗಾವಿ
  • ಸಹಿಷ್ಣು ಎನ್ – ಆದಿಚುಂಚನಗಿರಿ ಹೈಸ್ಕೂಲ್‌, ಶಿವಮೊಗ್ಗ ಜಿಲ್ಲೆ
  • ಶಗುಫ್ತಾ ಅಂಜುಮ್ -ಸರ್ಕಾರಿ ಕಾಂಪೋಸಿಟ್‌ ಉರ್ದು ಶಾಲೆ, ಶಿರಸಿ
  • ಸ್ವಸ್ತಿ ಕಾಮತ್ -ಕಾರ್ಕಳ ಜ್ಞಾನಸುಧಾ ಇಂಗ್ಲಿಷ್ ಶಾಲೆ, ಉಡುಪಿ
  • R.N.ತಾನ್ಯಾ – BKSVB ಶಾಲೆ, ವಿಜಯನಗರ, ಮೈಸೂರು
  • ಉತ್ಸವ್ ಪಟೇಲ್ -ವಿಜಯ ಸ್ಕೂಲ್, ಚಿಕ್ಕಹೊನ್ನೇನಹಳ್ಳಿ, ಹಾಸನ
  • ಯಶ್ವಿತಾ ರೆಡ್ಡಿ -ಚಿರೆಕ್‌ ಪಬ್ಲಿಕ್‌ ಸ್ಕೂಲ್, ಮಧುಗಿರಿ, ತುಮಕೂರು
  • ಯುಕ್ತಾ ಎಸ್ -ಹೋಲಿ ಚೈಲ್ಡ್‌ ಇಂಗ್ಲಿಷ್‌ ಶಾಲೆ, ಬೆಂಗಳೂರು ಉತ್ತರ

ಎಸ್​ಎಸ್​​ಎಲ್​​ಸಿ ಫಲಿತಾಂಶ ಲೈವ್​ ಅಪ್ಡೇಟ್ಸ್​

Published On - 1:04 pm, Fri, 2 May 25