ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ಆಯೋಜಿಸಲಾಗುವ ಕೆಸಿಇಟಿ ಪರೀಕ್ಷೆಗೆ ದಿನಾಂಕ ಸನ್ನಿಹಿತವಾಗಿದೆ. ಈ ಹಿನ್ನೆಲೆಯಲ್ಲಿ 2021ನೇ ಸಾಲಿನ ಪರೀಕ್ಷೆಯ ಪ್ರವೇಶಾತಿ ಪತ್ರವನ್ನು ಕೆಇಎ (Karnataka Examinations Authority) ಬಿಡುಗಡೆ ಮಾಡಿದ್ದು, ಅಧಿಕೃತ ವೆಬ್ಸೈಟ್ನಲ್ಲಿ ಲಭ್ಯವಿದೆ. ಸದರಿ ಪರೀಕ್ಷೆಯನ್ನು ಬರೆಯಲಿರುವ ವಿದ್ಯಾರ್ಥಿಗಳು ವೆಬ್ಸೈಟ್ನಿಂದ ಪ್ರವೇಶಾತಿ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಬೇಕಿದ್ದು, ಅದಕ್ಕೆ ಸಂಬಂಧಪಟ್ಟ ಮಾಹಿತಿ ಇಲ್ಲಿದೆ.
ಕೆಸಿಇಟಿ ಪರೀಕ್ಷೆಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು kea.kar.nic.in ಎಂಬ ಅಧಿಕೃತ ವೆಬ್ಸೈಟ್ನಿಂದ ಪ್ರವೇಶಾತಿ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಆದರೆ, ಡೌನ್ಲೋಡ್ಗೂ ಮುನ್ನ ಕೆಲ ನಿಯಮಗಳನ್ನು ಪಾಲಿಸುವುದು ಅವಶ್ಯಕವಾಗಿದ್ದು, ತಮ್ಮ ಲಾಗಿನ್ ವಿವರಗಳನ್ನು ಸಲ್ಲಿಸಬೇಕಾಗಿದೆ.
ಪ್ರವೇಶ ಪತ್ರ ಡೌನ್ಲೋಡ್ ಮಾಡಲು ಹೀಗೆ ಮಾಡಿ:
1. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್ಸೈಟ್ kea.kar.nic.in ಗೆ ಮೊದಲು ಭೇಟಿ ನೀಡಿ
2. ವೆಬ್ಸೈಟ್ ತೆರೆಯುತ್ತಿದ್ದಂತೆಯೇ ಮುಖಪುಟದಲ್ಲಿ ನಿಮಗೆ ಸಾಕಷ್ಟು ಆಯ್ಕೆಗಳು ಸಿಗಲಿದ್ದು, ಅದರಲ್ಲಿ KCET Admit Card 2021 ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿ
3. ಲಿಂಕ್ ತೆರೆದ ನಂತರ ನಿಮಗೆ ಲಾಗಿನ್ ಆಗಲು ಆಯ್ಕೆ ಕಾಣಿಸಲಿದ್ದು, ಅದರಲ್ಲಿ ನಿಮ್ಮ ಲಾಗಿನ್ ವಿವರಗಳನ್ನು ಸರಿಯಾಗಿ ನಮೂದಿಸಿ
4. ಲಾಗಿನ್ ಆದ ಬಳಿಕ ಪರೀಕ್ಷೆಯ ಪ್ರವೇಶಾತಿ ಪತ್ರವು ಸ್ಕ್ರೀನ್ನಲ್ಲಿ ಕಾಣಿಸಿಕೊಳ್ಳಲಿದೆ
5. ಪ್ರವೇಶಾತಿ ಪತ್ರದಲ್ಲಿರುವ ವಿವರಗಳನ್ನು ಒಮ್ಮೆ ಸರಿಯಾಗಿ ಗಮನಿಸಿ
6. ಬಳಿಕ ಅದೇ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಿ
7. ಮುಂದಿನ ಅವಶ್ಯಕತೆಗೆ ಅನುಗುಣವಾಗಿ ಡೌನ್ಲೋಡ್ ಮಾಡಿದ ಪ್ರವೇಶಾತಿ ಪತ್ರದ ಮುದ್ರಿತ ಪ್ರತಿಯನ್ನು ಪಡೆದುಕೊಳ್ಳಿ
ಈ ಬಾರಿ ಕೆಸಿಇಟಿ (Karnataka CET) ಪರೀಕ್ಷೆಯನ್ನು ಆಗಸ್ಟ್ 28, 29 ಹಾಗೂ 30ರಂದು ನಿಗದಿಪಡಿಸಲಾಗಿದೆ. ಪರೀಕ್ಷೆ ನಡೆಸಲು ರಾಜ್ಯಾದ್ಯಂತ 500 ಪರೀಕ್ಷಾ ಕೇಂದ್ರ ತೆರೆಯಲು ಸಿದ್ಧತೆಯನ್ನೂ ಮಾಡಿಕೊಳ್ಳಲಾಗಿದೆ. ಪರೀಕ್ಷೆಯನ್ನು ಕರ್ನಾಟಕ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ನಿಯಮಾವಳಿಗಳಿಗೆ ಅನುಸಾರವಾಗಿ ಆಯೋಜಿಸಲಾಗುತ್ತಿದ್ದು, ವಿದ್ಯಾರ್ಥಿಗಳು ಕೊರೊನಾ ನಿಯಮಾವಳಿಗಳನ್ನು ಪಾಲಿಸಿ ಪರೀಕ್ಷೆ ಬರೆಯಬೇಕಿದೆ.
(KCET admit card 2021 released how to download direct link available here)
ಇದನ್ನೂ ಓದಿ:
KCET Admit Card 2021: ಕೆಸಿಇಟಿ ಪರೀಕ್ಷೆ ಪ್ರವೇಶ ಪತ್ರ ನಾಳೆ ಬಿಡುಗಡೆ; ಆನ್ಲೈನ್ ಮೂಲಕ ಹೀಗೆ ಡೌನ್ಲೋಡ್ ಮಾಡಿಕೊಳ್ಳಿ..
CET 2021: ಆಗಸ್ಟ್ 28,29 ಮತ್ತು 30ರಂದು ಸಿಇಟಿ; ಇಲ್ಲಿದೆ ಕೆಲವು ಮುಖ್ಯ ವಿವರ