AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

PGCET Result 2025: ಕರ್ನಾಟಕ PGCET ಫಲಿತಾಂಶ ಪ್ರಕಟ ನಿರೀಕ್ಷೆ; ರಿಸಲ್ಟ್​​​ ಪರಿಶೀಲಿಸುವ ವಿಧಾನ ಇಲ್ಲಿದೆ

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಶೀಘ್ರದಲ್ಲೇ 2025ರ PGCET ಫಲಿತಾಂಶಗಳನ್ನು ಪ್ರಕಟಿಸುವ ನಿರೀಕ್ಷೆಯಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಫಲಿತಾಂಶ ಪ್ರಕಟವಾದ ನಂತರ ಅಭ್ಯರ್ಥಿಗಳು cetonline.karnataka.gov.in ವೆಬ್‌ಸೈಟ್‌ಗೆ ಭೇಟಿ ನೀಡಿ ಫಲಿತಾಂಶ ಪರಿಶೀಲಿಸಬಹುದು. ಅರ್ಹ ಅಭ್ಯರ್ಥಿಗಳು ಕೌನ್ಸೆಲಿಂಗ್‌ಗೆ ಹಾಜರಾಗಬೇಕು. ಎಂಬಿಎ, ಎಂಸಿಎ, ಎಂಇ, ಎಂಟೆಕ್, ಮತ್ತು ಎಂಆರ್ಕ್ ಕೋರ್ಸ್‌ಗಳಿಗೆ ಪ್ರವೇಶ ದೊರೆಯುತ್ತದೆ.

PGCET Result 2025: ಕರ್ನಾಟಕ PGCET ಫಲಿತಾಂಶ ಪ್ರಕಟ ನಿರೀಕ್ಷೆ; ರಿಸಲ್ಟ್​​​ ಪರಿಶೀಲಿಸುವ ವಿಧಾನ ಇಲ್ಲಿದೆ
ಸ್ನಾತಕೋತ್ತರ ಸಾಮಾನ್ಯ ಪ್ರವೇಶ ಪರೀಕ್ಷೆ
ಅಕ್ಷತಾ ವರ್ಕಾಡಿ
| Edited By: |

Updated on:Jul 31, 2025 | 12:43 PM

Share

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA)ವು ಶೀಘ್ರದಲ್ಲೇ ಸ್ನಾತಕೋತ್ತರ ಸಾಮಾನ್ಯ ಪ್ರವೇಶ ಪರೀಕ್ಷೆ (PGCET 2025) ಫಲಿತಾಂಶಗಳನ್ನು ಪ್ರಕಟಿಸಲಿದೆ. ಆದರೆ ಫಲಿತಾಂಶ ಪ್ರಕಟಣೆಯ ನಿಖರವಾದ ಸಮಯ ಮತ್ತು ದಿನಾಂಕವನ್ನು ಕೆಇಎ ಇನ್ನೂ ಬಹಿರಂಗಪಡಿಸಿಲ್ಲ. ಪರೀಕ್ಷೆ ಬರೆದ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ cetonline.karnataka.gov.in ಗೆ ಭೇಟಿ ನೀಡುವ ಮೂಲಕ ಫಲಿತಾಂಶವನ್ನು ಪರಿಶೀಲಿಸಬಹುದು

ಇದರಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ. ಕೌನ್ಸೆಲಿಂಗ್‌ನ ಎಲ್ಲಾ ಹಂತಗಳನ್ನು ಯಶಸ್ವಿಯಾಗಿ ಉತ್ತೀರ್ಣರಾದವರಿಗೆ ಕರ್ನಾಟಕದಾದ್ಯಂತ ಕಾಲೇಜುಗಳಲ್ಲಿ ಎಂಬಿಎ, ಎಂಸಿಎ, ಎಂಇ, ಎಂ.ಟೆಕ್ ಮತ್ತು ಎಂ.ಆರ್ಕ್ ಸೇರಿದಂತೆ ಸ್ನಾತಕೋತ್ತರ ಕಾರ್ಯಕ್ರಮಗಳಿಗೆ ಪ್ರವೇಶ ನೀಡಲಾಗುತ್ತದೆ.

2025ರ ಕರ್ನಾಟಕ PGCET  ಫಲಿತಾಂಶವನ್ನು ಪರಿಶೀಲಿಸುವುದು ಹೇಗೆ ?

  • ಹಂತ 1: ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: cetonline.karnataka.gov.in
  • ಹಂತ 2: ಮುಖಪುಟದಲ್ಲಿ ಲಭ್ಯವಿರುವ KEA PGCET ಫಲಿತಾಂಶ 2025 ಲಿಂಕ್ ಅನ್ನು ಕ್ಲಿಕ್ ಮಾಡಿ.
  • ಹಂತ 3: ಲಾಗಿನ್ ಆಗಲು ದಾಖಲೆ ಸಲ್ಲಿಸಿ.
  • ಹಂತ 4: ಕರ್ನಾಟಕ PGCET ಫಲಿತಾಂಶ 2025 ಸ್ಕ್ರೀನ್​​ ಮೇಲೆ ಕಾಣಿಸುತ್ತದೆ.
  • ಹಂತ 5: ಸ್ಕೋರ್‌ಕಾರ್ಡ್ PDF ಅನ್ನು ವೀಕ್ಷಿಸಿ ಮತ್ತು ಡೌನ್‌ಲೋಡ್ ಮಾಡಿ.
  • ಹಂತ 6: ಭವಿಷ್ಯದ ಉಲ್ಲೇಖಕ್ಕಾಗಿ ಅದರ ಪ್ರಿಂಟ್​​ ಕಾಪಿಯನ್ನು ತೆಗೆದಿಟ್ಟುಕೊಳ್ಳಿ.

ಇದನ್ನೂ ಓದಿ: ವಿಶ್ವದ ಅತ್ಯುತ್ತಮ ಶಾಲೆಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಭಾರತದ ಏಕೈಕ ಶಿಕ್ಷಣ ಸಂಸ್ಥೆ ಯಾವುದು ಗೊತ್ತಾ?

ಕರ್ನಾಟಕ PGCET ಫಲಿತಾಂಶ PDF ನಲ್ಲಿ ಉಲ್ಲೇಖಿಸಲಾದ ವಿವರಗಳು:

ಕೆಳಗಿನ ಸ್ಕೋರ್‌ಕಾರ್ಡ್‌ನಲ್ಲಿ ಉಲ್ಲೇಖಿಸಲಾದ ಪ್ರಮುಖ ಮಾಹಿತಿಯ ಪಟ್ಟಿಯನ್ನು ಪರಿಶೀಲಿಸಿ.

  • ಅಭ್ಯರ್ಥಿಯ ಹೆಸರು
  • PGCET ಸಂಖ್ಯೆ
  • ಅಭ್ಯರ್ಥಿಯ ಪ್ರಕಾರ/ವರ್ಗ
  • PGCET 2025 ರ‍್ಯಾಂಕ್
  • PGCET ಅಂಕಗಳು

ಶಿಕ್ಷಣಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 11:35 am, Thu, 31 July 25