NEET Row: ಯಾವುದೇ ಪ್ರಶ್ನೆಪತ್ರಿಕೆ ಸೋರಿಕೆಯಾಗಿಲ್ಲ: ಕಾಂಗ್ರೆಸ್ ಆರೋಪ ತಳ್ಳಿಹಾಕಿದ ನೀಟ್
ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ 2024 ರ ಫಲಿತಾಂಶದಲ್ಲಿ ಅಕ್ರಮ ನಡೆದಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಈ ಕುರಿತಾಗಿ ನವದೆಹಲಿಯ ರಾಷ್ಟ್ರೀಯ ಮಾಧ್ಯಮ ಕೇಂದ್ರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಮುಖ್ಯಸ್ಥ ಸುಭೋದ್ ಕುಮಾರ್, ವಿವಾದದ ಬಗ್ಗೆ ಪರೀಕ್ಷಾ ಸಂಸ್ಥೆಯು ಸಮಗ್ರವಾಗಿ ವಿಶ್ಲೇಷಣೆ ಮಾಡಿದ್ದು ಯಾವುದೇ ಪ್ರಶ್ನೆಪತ್ರಿಕೆ ಸೋರಿಕೆಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ದೆಹಲಿ, ಜೂನ್ 08: ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET) 2024 ರ ಫಲಿತಾಂಶದಲ್ಲಿ ಅಕ್ರಮ ನಡೆದಿದೆ ಎಂದು ಕಾಂಗ್ರೆಸ್ (Congress) ಆರೋಪಿಸಿದೆ. ಈ ವಿವಾದದ ನಡುವೆ ಇಂದು ಶಿಕ್ಷಣ ಸಚಿವಾಲಯವು ನವದೆಹಲಿಯ ರಾಷ್ಟ್ರೀಯ ಮಾಧ್ಯಮ ಕೇಂದ್ರದಲ್ಲಿ ವೈದ್ಯಕೀಯ ಪ್ರವೇಶ ಪರೀಕ್ಷೆಯ ಕುರಿತು ಪತ್ರಿಕಾಗೋಷ್ಠಿ ಮಾಡಿದ್ದು, ಪಾರದರ್ಶಕವಾಗಿ ಪರೀಕ್ಷೆ ನಡೆಸಲಾಗಿದ್ದು, ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದೆ ಎಂಬ ಆರೋಪವನ್ನು ತಳ್ಳಿಹಾಕಲಾಗಿದೆ. ವೈದ್ಯಕೀಯ ಪರೀಕ್ಷೆಯ ಸಮಗ್ರತೆಗೆ ದೇಶದಲ್ಲಿ ಎಲ್ಲಿಯೂ ರಾಜಿಯಾಗಿಲ್ಲ ಎಂದು ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಮುಖ್ಯಸ್ಥ ಸುಭೋದ್ ಕುಮಾರ್ ಹೇಳಿದ್ದಾರೆ.
ವಿವಾದದ ಬಗ್ಗೆ ಪರೀಕ್ಷಾ ಸಂಸ್ಥೆಯು ಸಮಗ್ರವಾಗಿ ವಿಶ್ಲೇಷಣೆ ಮಾಡಿದ್ದು ಯಾವುದೇ ಪ್ರಶ್ನೆಪತ್ರಿಕೆ ಸೋರಿಕೆಯಾಗಿಲ್ಲ. ನಾವು ಎಲ್ಲವನ್ನೂ ಎಚ್ಚರಿಕೆಯಿಂದ ಪರಿಶೀಲಿಸಿ ಫಲಿತಾಂಶವನ್ನು ಬಿಡುಗಡೆ ಮಾಡಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: NEET UG Result 2024 : ನೀಟ್ ಮೊದಲ ರ್ಯಾಂಕ್ನ 100 ವಿದ್ಯಾರ್ಥಿಗಳಲ್ಲಿ ಕರ್ನಾಟಕದ ಆರು ವಿದ್ಯಾರ್ಥಿಗಳು ಟಾಪರ್ಸ್
ಜೂನ್ 4ರಂದು ದಿಢೀರ್ ಆಗಿ ಪ್ರಕಟಗೊಂಡ ನೀಟ್ ಪರೀಕ್ಷೆ ಫಲಿತಾಂಶದಲ್ಲಿ 67 ವಿದ್ಯಾರ್ಥಿಗಳು 720ಕ್ಕೆ 720 ಅಂಕ ಗಳಿಸಿದ್ದರು. ಇದು ಇದುವರೆಗಿನ ಸಾರ್ವಕಾಲಿಕ ದಾಖಲೆ ಆಗಿದೆ. ಇದೇ ಈಗ ಕೋಟ್ಯಂತರ ವಿದ್ಯಾರ್ಥಿಗಳಿಗೆ ಪರೀಕ್ಷೆಯ ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆಯನ್ನ ಪ್ರಶ್ನಿಸುವಂತೆ ಮಾಡಿದೆ.
ನೀಟ್ ಪರೀಕ್ಷೆ ನಡೆದ ಹರಿಯಾಣದ ಫರೀದಾಬಾದ್ ಕೇಂದ್ರವೊಂದರಲ್ಲಿಯೇ 8 ವಿದ್ಯಾರ್ಥಿಗಳು 720ಕ್ಕೆ 720 ಅಂಕ ಗಳಿಸಿದ್ದಾರೆ. ಇಷ್ಟೇ ಅಲ್ಲ ಕ್ರಮ ಸಂಖ್ಯೆ 62ರಿಂದ67ರ ವರೆಗಿನ ವಿದ್ಯಾರ್ಥಿಗಳು 720 ಅಂಕ ಗಳಿಸಿದ್ದಾರೆ. ಹಾಗೇ ಮೊದಲ ರ‍್ಯಾಂಕ್ ಗಳಿಸಿರುವ 47 ವಿದ್ಯಾರ್ಥಿಗಳಲ್ಲಿ 44 ವಿದ್ಯಾರ್ಥಿಗಳು ಗ್ರೇಸ್ ಮಾರ್ಕ್ಸ್ ಪಡೆದು ರ‍್ಯಾಂಕ್ ಗಳಿಸಿರುವುದು, ಅನುಮಾನಕ್ಕೆ ಕಾರಣವಾಗಿತ್ತು.
ಪಿಐಬಿ ಇಂಡಿಯಾ ಟ್ವೀಟ್
The issue concerning the NEET exam is pertinent to 6 centres and 1600 candidates
We had formed a committee of experts, analyzed the issue and addressed the grievances
To allay the fear of 1600 candidates especially, and other 23 lakh candidates, National Testing Agency (NTA)… pic.twitter.com/bZjpxTDoZ0
— PIB India (@PIB_India) June 8, 2024
ಡಾಕ್ಟರ್ ಆಗಬೇಕೆಂಬ ಕನಸಿನಲ್ಲಿ ಕೋಟಿ ಕೋಟಿ ವಿದ್ಯಾರ್ಥಿಗಳು ಹಗಲಿರುಳು ಪರಿಶ್ರಮ ಪಡ್ತಾರೆ. ಅದಕ್ಕಾಗಿ ಅನ್ನ ನೀರು ಬಿಟ್ಟು ಸ್ಟಡೀ ಮಾಡುತ್ತಾರೆ. ಅಖಿಲ ಭಾರತೀಯ ಸಂಸ್ಥೆ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ನೀಟ್ ಪರೀಕ್ಷೆ ನಡೆಸುತ್ತದೆ. ಮೇ 2019 ರಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಪರವಾಗಿ ನೀಟ್ (ಯುಜಿ) ಪರೀಕ್ಷೆಯನ್ನು ನಡೆಸುತ್ತಿದೆ. ಪದವಿಪೂರ್ವ ವೈದ್ಯಕೀಯ ಕೋರ್ಸ್ಗಳ (ಎಂಬಿಬಿಎಸ್, ಬಿಡಿಎಸ್, ಇತ್ಯಾದಿ) ಪ್ರವೇಶಕ್ಕಾಗಿ ದೇಶದಾದ್ಯಂತ ಎಲ್ಲಾ ವೈದ್ಯಕೀಯ ಸಂಸ್ಥೆಗಳಲ್ಲಿ ಅರ್ಹತಾ ಪರೀಕ್ಷೆ ಮಾಡಲಾಗುತ್ತದೆ.
ಜೂನ್ 4 ರೊಳಗೆ ಫಲಿತಾಂಶಗಳು ಸಿದ್ಧವಾಗಿರುವುದರಿಂದ, ಪ್ರಕಟಣೆಯನ್ನು ವಿಳಂಬಗೊಳಿಸಲು ಯಾವುದೇ ಕಾರಣವಿಲ್ಲ ಎಂದು ಎನ್ಟಿಎ ನಿರ್ಧಾರಕ್ಕೆ ಬಂದಿದೆ. ಇದಲ್ಲದೆ, ವರ್ಷದಿಂದ ವರ್ಷಕ್ಕೆ ಫಲಿತಾಂಶ ಘೋಷಣೆಯ ಸಮಯವನ್ನು ಸುಧಾರಿಸುವ ನಿಟ್ಟಿನಲ್ಲಿ ಎನ್ಟಿಎ ಕಾರ್ಯನಿರ್ವಹಿಸುತ್ತಿದೆ.
ಇದನ್ನೂ ಓದಿ: ಈ ವರ್ಷದಿಂದ ನಾವು ಓದುವುದು NEPನಾ ಅಥವಾ SEPನಾ? ಡಿಗ್ರಿ ವಿದ್ಯಾರ್ಥಿಗಳ ಗೊಂದಲಕ್ಕೆ ಇಲ್ಲಿದೆ ಪರಿಹಾರ
ನೀಟ್ (ಯುಜಿ) 2024 ರ ಅಭ್ಯರ್ಥಿಗಳು ಪಂಜಾಬ್ ಮತ್ತು ಹರಿಯಾಣ, ದೆಹಲಿ ಮತ್ತು ಛತ್ತೀಸ್ಗಢ ಹೈಕೋರ್ಟ್ಗೆ ರಿಟ್ ಅರ್ಜಿಗಳನ್ನು ಸಲ್ಲಿಸಿದ್ದಾರೆ ಎಂದು ಎನ್ಟಿಎ ತಿಳಿಸಿದೆ. ನೀಟ್ (ಯುಜಿ) 2024 ರ ಸಮಯದಲ್ಲಿ ಪರೀಕ್ಷಾ ಸಮಯ ಕಳೆದುಕೊಳ್ಳುವ ಕಳವಳವನ್ನು ಎತ್ತಿಹಿಡಿದಿದೆ. ಈ ಕೇಂದ್ರಗಳಲ್ಲಿ ಪರೀಕ್ಷೆಯನ್ನು ಪೂರ್ಣಗೊಳಿಸಲು ತಮಗೆ ಪೂರ್ಣ 3 ಗಂಟೆ 20 ನಿಮಿಷಗಳು ಸಿಗಲಿಲ್ಲ, ಪ್ರಶ್ನೆಪತ್ರಿಕೆಗಳ ತಪ್ಪು ವಿತರಣೆ, ಕೆಲವು ಸಂದರ್ಭಗಳಲ್ಲಿ ಹರಿದ ಒಎಂಆರ್ ಇತ್ಯಾದಿ ಕಾರಣಗಳು ಎಂದು ಅಭ್ಯರ್ಥಿಗಳು ಆರೋಪಿಸಿದ್ದಾರೆ.
ಮತ್ತಷ್ಟು ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.