ಈ ವರ್ಷದಿಂದ ನಾವು ಓದುವುದು NEPನಾ ಅಥವಾ SEPನಾ? ಡಿಗ್ರಿ ವಿದ್ಯಾರ್ಥಿಗಳ ಗೊಂದಲಕ್ಕೆ ಇಲ್ಲಿದೆ ಪರಿಹಾರ

ಪಿಯುಸಿ ಪಾಸಾಗಿ ಪದವಿ ವ್ಯಾಸಂಗಕ್ಕೆ ದಾಖಲಾತಿ ಪಡೆಯುತ್ತಿರುವ ವಿದ್ಯಾರ್ಥಿಗಳಲ್ಲಿ ನಾವು ಓದಬೇಕಾಗಿರುವುದು NEPನಾ ಅಥವಾ SEPನಾ ಅಂತ ಗೊಂದಲ ಮೂಡಿದೆ. ಅಲ್ಲದೆ, ಪದವಿಯನ್ನು 3 ವರ್ಷ ಓದಬೇಕಾ ಅಥವಾ 4 ವರ್ಷ ಓದಬೇಕಾ ಅಂತ ಗೊಂದಲ ಇದ್ದರೇ ಈ ಸುದ್ದಿಯನ್ನು ತಪ್ಪದೇ ಓದಿ..

ಈ ವರ್ಷದಿಂದ ನಾವು ಓದುವುದು NEPನಾ ಅಥವಾ SEPನಾ? ಡಿಗ್ರಿ ವಿದ್ಯಾರ್ಥಿಗಳ ಗೊಂದಲಕ್ಕೆ ಇಲ್ಲಿದೆ ಪರಿಹಾರ
ಸಾಂದರ್ಭಿಕ ಚಿತ್ರ
Follow us
Vinay Kashappanavar
| Updated By: ವಿವೇಕ ಬಿರಾದಾರ

Updated on: Jun 08, 2024 | 3:26 PM

ಬೆಂಗಳೂರು, ಜೂನ್​ 08: ಪಿಯುಸಿ ಫಲಿತಾಂಶ (PUC Result) ಪ್ರಕಟವಾಗಿದೆ. ವಿದ್ಯಾರ್ಥಿಗಳು ಪದವಿ ವ್ಯಾಸಂಗಕ್ಕೆ ದಾಖಲಾತಿ ಪಡೆಯುತ್ತಿದ್ದಾರೆ. ಆದರೆ ವಿದ್ಯಾರ್ಥಿಗಳಲ್ಲಿ ಅದೊಂದು ವಿಚಾರಕ್ಕೆ ತಲೆ ಕೆಡೆಸಿಕೊಂಡಿದ್ದಾರೆ. ನಾವು ಓದಬೇಕಾಗಿರುವುದು ರಾಷ್ಟ್ರೀಯ ಶಿಕ್ಷಣ ನೀತಿ (NEP)ನಾ ಅಥವಾ ರಾಜ್ಯ ಶಿಕ್ಷಣ ನೀತಿ (SEP)ನಾ? ನಮ್ಮ ಪದವಿ ವ್ಯಾಸಂಗ 3 ವರ್ಷನಾ ಅಥವಾ 4 ವರ್ಷನಾ? ಅಂತ ವಿದ್ಯಾರ್ಥಿಗಳಲ್ಲಿ ಪ್ರಶ್ನೆಗಳು ಉದ್ಭವಿಸುತ್ತಿವೆ. ಈ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

ರಾಷ್ಟ್ರೀಯ ಶಿಕ್ಷಣ ನೀತಿ-2020 (NEP) ಪ್ರಧಾನಿ ನರೇಂದ್ರ ಮೋದಿಯವರ ಮಹತ್ವದ ನೀತಿಗಳಲ್ಲಿ ಒಂದಾಗಿದೆ. ಇದು ಜಾರಿಯಾದಾಗಿನಿಂದ ವಾದ-ವಿವಾದಗಳು ನಡೆಯುತ್ತಲೇ ಇವೆ. ಕರ್ನಾಟಕ ಸರ್ಕಾರ ರಾಜ್ಯದಲ್ಲಿ ಎನ್‌ಇಪಿ ರದ್ದು ಮಾಡಿ ಎಸ್​ಇಪಿ ರಚನೆಗೆ ಸುಖದೇವ್ ಥೋರಟ್ ನೇತೃತ್ವದಲ್ಲಿ 15 ಜನರ ತಜ್ಞರ ಸಮಿತಿಯನ್ನು ರಚನೆ ಮಾಡಿದೆ. ಎಸ್​ಇಪಿಗೆ ಬೇಕಾದ ಎಲ್ಲ ತಯಾರಿಗಳು ನಡೆಯುತ್ತಿವೆ. ವಿಶ್ವವಿದ್ಯಾಲಯಗಳಲ್ಲಿ ನೂತನ ಪಠ್ಯಕ್ರಮ ಚೌಕಟ್ಟಿಗೆ ಪೂರಕವಾದ ಪರಿಷ್ಕರಣೆ ಶುರುವಾಗಿದೆ.

NEPಗೂ ಮತ್ತು SEPಗೂ ಅಜಗಜಾಂತರ ವ್ಯತ್ಯಾಸವಿದೆ. ಈ ಹಿಂದೆ ಇದ್ದ ಎಸ್​ಇಪಿ (ರಾಜ್ಯ ಶಿಕ್ಷಣ ನೀತಿ) ಪ್ರಕಾರ, ಮೂರು ವರ್ಷಗಳು ಪದವಿ ಹಾಗೂ ಎರಡು ವರ್ಷ ಸ್ನಾತಕೋತ್ತರ ಪದವಿ ಓದಬೇಕಿತ್ತು. ಆದರೆ ಎನ್​ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಜಾರಿಯಾದ ಮೇಲೆ ನಾಲ್ಕು ವರ್ಷ ಪದವಿ ಹಾಗೂ ಒಂದು ವರ್ಷ ಸ್ನಾತಕೋತ್ತರ ಪದವಿ ಓದಬೇಕು.

ಎನ್​ಇಪಿ ಪ್ರಕಾರ ಮೊದಲ ವರ್ಷಕ್ಕೆ ಗ್ರ್ಯಾಡ್ಜುವೇಟ್ ಸರ್ಟಿಫಿಕೆಟ್, ಎರಡನೇ ವರ್ಷಕ್ಕೆ ಗ್ರ್ಯಾಡ್ಜುವೇಟ್ ಡಿಪ್ಲಮೊ ಹಾಗೂ ಮೂರನೇ ವರ್ಷಕ್ಕೆ ಗ್ರ್ಯಾಡ್ಜುವೇಟ್ ಡಿಗ್ರಿ ಹೀಗೆ ಪ್ರತಿ ವರ್ಷಕ್ಕೂ ಪ್ರತ್ಯೇಕ ಸರ್ಟಿಫಿಕೇಟ್ ಸಿಗುತ್ತದೆ. ನೀವು ಯಾವುದೇ ವರ್ಷದಲ್ಲಿ ಶಿಕ್ಷಣ ನಿಲ್ಲಿಸಿದರೂ ಆ ವರ್ಷದ ಸರ್ಟಿಫೀಕೇಟ್ ಸಿಗುತ್ತದೆ.

ಇದನ್ನೂ ಓದಿ: ಎನ್​ಇಪಿಯಿಂದ 2047ರ ವೇಳೆಗೆ ಭಾರತ ಅತ್ಯಂತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲಿದೆ: AICTE ಅಧ್ಯಕ್ಷ

ಆದರೆ ಇದೀಗ ರಾಜ್ಯ ಸರ್ಕಾರ ಎಸ್​ಇಪಿ ಜಾರಿಗೆ ತರುತ್ತಿದೆ. ಈಗಾಗಲೆ ಎಲ್ಲ ವಿಶ್ವ ವಿದ್ಯಾಲಯಗಳಲ್ಲಿ ಎಸ್​ಇಪಿ ತಕ್ಕಹಾಗೆ ಪರಿಷ್ಕರಿತ ಪಠ್ಯ ಪುಸ್ತಕ ತಯಾರಾಗುತ್ತಿವೆ. ಇದೇ ವರ್ಷದಿಂದ ಎಸ್​ಇಪಿ ಜಾರಿಗೆ ಬರಲಿದೆ. ಪದವಿ ವ್ಯಾಸಂಗಕ್ಕೆ ಈ ವರ್ಷ ದಾಖಲಾತಿ ಪಡೆಯುವವರು ಎಸ್​ಇಪಿ ಓದಲಿದ್ದಾರೆ.

ಈ ವರ್ಷದಿಂದಲೇ ಎಸ್​ಇಪಿ ಜಾರಿಯಾಗುವ ಹಿನ್ನೆಲೆಯಲ್ಲಿ ಹಲವು ಮಹತ್ವದ ಸಭೆಗಳನ್ನು ನಡೆಸಲಾಗಿದೆ. ಜ್ಞಾನಭಾರತಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಸ್​ಇಪಿ ಜಾರಿ ಹಾಗೂ ಪಠ್ಯಕ್ರಮ ಪರಿಷ್ಕರಣ ಮಹತ್ವದ ಪ್ರಾಂತೀಯ ಮಟ್ಟದ ಕಾರ್ಯಗಾರ ನಡೆಸಲಾಯಿತು. ರಾಜ್ಯದ ಬೇರೆ ಬೇರೆ ವಿಶ್ವವಿದ್ಯಾಲಯದ ಕುಲಪತಿಗಳು, ಶಿಕ್ಷಣ ತಜ್ಞರು ಭಾಷ ತಜ್ಞರು ಹಾಗು ರಾಜ್ಯ ಪಠ್ಯಕ್ರಮ ರಚಾನ ಸಮಿತಿ ಸದಸ್ಯರು ಭಾಗಿಯಾಗಿದ್ದರು.

ಒಟ್ಟಿನಲ್ಲಿ ಎನ್‌‌ಇಪಿ ಈ ವರ್ಷದಿಂದಲೇ ರಾಜ್ಯದಲ್ಲಿ ಜಾರಿಯಾಗುವ ಹಿನ್ನೆಲೆಯಲ್ಲಿ ರಾಜ್ಯ ಪಠ್ಯಕ್ರಮ ಚೌಕಟ್ಟಿಗೆ ಪೂರಕವಾದ ಪಠ್ಯಕ್ರಮ ಸಿದ್ಧವಾಗುತ್ತಿದೆ. ಅದೆನೇ ಇರಲಿ ಈ ಎಸ್ಇಪಿಯಿಂದ ಆದರೂ ರಾಜ್ಯದ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಸಿಗಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ