
ಬೆಂಗಳೂರಿನ ಪ್ರಸಿದ್ಧ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ (NLSIU) 2027ರ ಜನವರಿಯಿಂದ ಪ್ರಾರಂಭವಾಗುವ ಬ್ಯಾಚ್‌ಗಾಗಿ ವಿವಿಧ ಸಂಶೋಧನಾ ಫೆಲೋಶಿಪ್‌ಗಳಿಗೆ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ. ಕಾನೂನು, ಸಮಾಜ ವಿಜ್ಞಾನ ಮತ್ತು ಸಾರ್ವಜನಿಕ ನೀತಿ ಕ್ಷೇತ್ರಗಳಲ್ಲಿ ಉನ್ನತ ಸಂಶೋಧನೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಈ ಅವಕಾಶ ಕಲ್ಪಿಸಲಾಗಿದ್ದು, ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ 50,000 ರೂ. ನಿಂದ 2,00,000 ರೂ. ವರೆಗೆ ಆಕರ್ಷಕ ಸ್ಟೈಫಂಡ್ ದೊರೆಯಲಿದೆ.
NLSIU ಒಟ್ಟು ಮೂರು ವಿಭಾಗಗಳಲ್ಲಿ ಸಂಶೋಧನಾ ಫೆಲೋಶಿಪ್‌ಗಳನ್ನು ಘೋಷಿಸಿದ್ದು, ಅವುಗಳ ಅರ್ಹತೆ ಮತ್ತು ಸೀಟುಗಳ ವಿವರ ಕೆಳಗಿನಂತಿದೆ:
ಇದನ್ನೂ ಓದಿ: ಸತತ 3 ಬಾರಿ ಸೋಲು…4ನೇ ಪ್ರಯತ್ನದಲ್ಲಿ IAS ಕನಸು ನನಸು ಮಾಡಿಕೊಂಡ ನೇಹಾ ಬ್ಯಾಡ್ವಾಲ್: ಯಶಸ್ಸಿನ ಸೀಕ್ರೆಟ್ ಇಲ್ಲಿದೆ!
ಆಯ್ಕೆಯಾದ ಅಭ್ಯರ್ಥಿಗಳ ಶೈಕ್ಷಣಿಕ ಹಿನ್ನೆಲೆ, ಅನುಭವ ಮತ್ತು ಆಯ್ಕೆಯಾದ ವಿಭಾಗದ ಆಧಾರದ ಮೇಲೆ ಪ್ರತ್ಯೇಕ ಮಾಸಿಕ ಧನಸಹಾಯವನ್ನು ನೀಡಲಾಗುತ್ತದೆ. ಗ್ರಾಜುಯೇಟ್ ರಿಸರ್ಚ್ ಫೆಲೋಶಿಪ್ ಪಡೆದವರಿಗೆ ತಿಂಗಳಿಗೆ 50,000 ರೂ., ಪೋಸ್ಟ್‌ಡಾಕ್ಟರಲ್ ಫೆಲೋಶಿಪ್ ಅಭ್ಯರ್ಥಿಗಳಿಗೆ ತಿಂಗಳಿಗೆ 1,20,000 ರೂ. ಹಾಗೂ ವಿಶ್ವವಿದ್ಯಾಲಯ ಸಂಶೋಧನಾ ಫೆಲೋಶಿಪ್ ಪಡೆಯುವವರಿಗೆ ತಿಂಗಳಿಗೆ 2,00,000 ರೂ. ಸ್ಟೈಫಂಡ್ ನೀಡಲಾಗುತ್ತದೆ. ಆಯ್ಕೆಯಾದ ಎಲ್ಲಾ ಅಭ್ಯರ್ಥಿಗಳು ಫೆಲೋಶಿಪ್ ಅವಧಿಯಲ್ಲಿ ಬೆಂಗಳೂರಿನ NLSIU ಕ್ಯಾಂಪಸ್‌ನಲ್ಲಿಯೇ ವಾಸಿಸುವುದು ಕಡ್ಡಾಯವಾಗಿರುತ್ತದೆ.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಎನ್‌ಎಲ್‌ಎಸ್‌ಐಯುವಿನ (NLSIU) ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ಅಲ್ಲಿ ಲಭ್ಯವಿರುವ ಗೂಗಲ್ ಫಾರ್ಮ್ (Google Form) ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಅಕ್ಟೋಬರ್ 30, 2026ರ ಸಂಜೆ 05:00 ಗಂಟೆ ಕೊನೆಯ ದಿನಾಂಕವಾಗಿದೆ. ಸಂಶೋಧನೆಯಲ್ಲಿ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ನಿಗದಿತ ಸಮಯದೊಳಗೆ ಅರ್ಜಿ ಸಲ್ಲಿಸಿ ಈ ಅವಕಾಶವನ್ನು ಪಡೆದುಕೊಳ್ಳಬಹುದು.
ಶಿಕ್ಷಣಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:09 pm, Tue, 29 September 26