ಬೆಂಗಳೂರು: ಭಾರತದಲ್ಲೇ ಮೊದಲ ಬಾರಿಗೆ ರಾಜ್ಯ ಸರ್ಕಾರ ಹೊಸ ಶಿಕ್ಷಣ ನೀತಿಯನ್ನು (National Education Policy 2020) ಜಾರಿಗೆ ತಂದಿದೆ. ಸಾಕಷ್ಟು ವಿರೋಧದ ನಡುವೆಯೂ ಶಿಕ್ಷಣ ಇಲಾಖೆ NEP ಜಾರಿ ಮಾಡಿದೆ. ಇದಕ್ಕೆ ಕೇಂದ್ರ ಶಿಕ್ಷಣ ಇಲಾಖೆಯಿಂದಲೂ ಗ್ರೀನ್ ಸಿಗ್ನಲ್ ಸಿಕ್ಕಿದೆ. ಸದ್ಯ ಈ ಹೊಸ ಶಿಕ್ಷಣ ನೀತಿ ಮತ್ತೆ ಚರ್ಚೆಗೆ ಗ್ರಾಸವಾಗಿದೆ. ರಾಜ್ಯದಲ್ಲಿ ತರಾತುರಿಯಲ್ಲಿ ಎನ್ಇಪಿ ಜಾರಿ ಮಾಡಿದ್ದು, ಹಾಗಾಗಿ ಡಿಸೆಂಬರ್ 17ರಂದು ರಾಜ್ಯದ ವಿಶ್ವವಿದ್ಯಾಲಯ ಬಂದ್ಗೆ ಕರೆ ನೀಡಲಾಗಿದೆ. ಈ ಕುರಿತಾಗಿ ಎನ್ಎಸ್ಯುಐ ಅಧ್ಯಕ್ಷ ಕೀರ್ತಿ ಗಣೇಶ್ ಪ್ರತಿಕ್ರಿಯೆ ನೀಡಿದ್ದು, ಎನ್ಇಪಿಯನ್ನು ರಾಜ್ಯದಲ್ಲಿ ತರಾತುರಿಯಲ್ಲಿ ಜಾರಿ ಮಾಡಿದ್ದಾರೆ. ಇದರ ಬಗ್ಗೆ ಯಾವುದೇ ಮಾಹಿತಿ ಶಿಕ್ಷಣ ಸಂಸ್ಥೆಗಳಲ್ಲಿ ಇಲ್ಲ. ಪ್ರಿನ್ಸಿಪಲ್ರನ್ನು ಕೇಳಿದ್ರು ಮಾಹಿತಿ ಸಿಗ್ತಾ ಇಲ್ಲ. ನಾವು ಸರ್ಕಾರಿ ನೌಕರು ಅಂತಾರೆ ಪ್ರಿನ್ಸಿಪಲ್. ನಾವು ಯಾವುದರ ಬಗ್ಗೆ ಮಾತನಾಡಲು ಆಗಲ್ಲ ಅಂತಾರೆ. ಯಾವುದೆ ಮುಂದಾಲೋಚನೆ ಇಲ್ಲದೆ ಎನ್ಇಪಿ ಜಾರಿ ಮಾಡಿದ್ದಾರೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ ಸಾಕಷ್ಟು ತೊಂದರೆಯಾಗುತ್ತಿದೆ ಎಂದು ಹೇಳಿದರು.
ಅಲ್ಲದೆ ಸರಿಯಾದ ಸಮಯಕ್ಕೆ ಫಲಿತಾಂಶ ಬರುತ್ತಿಲ್ಲ. ಕೆಲವೊಂದು ಕೊರ್ಸಗಳ ಫಲಿತಾಂಶ ಒಂದು ವರ್ಷವಾದರೂ ಇನ್ನು ಬಂದಿಲ್ಲ. ಇದರ ಬಗ್ಗೆ ಸಚಿವರು ಗಮನ ಹರಿಸಬೇಕು. ಸ್ಕಾಲರ್ಶಿಪ್ ಶೀಪ್ ಕೂಡ ಇನ್ನೂ ಕೊಟ್ಟಿಲ್ಲ. ತಕ್ಷಣವೇ ಸರ್ಕಾರ ಹಣ ಬಿಡುಗಡೆ ಮಾಡಬೇಕು ಎಂದು ಕೀರ್ತಿ ಗಣೇಶ್ ಆಗ್ರಹಿಸಿದರು. ಜೊತೆಗೆ ಬಸ್ಗಳ ವ್ಯವಸ್ಥೆ ಸರಿಯಾಗಬೇಕು. ಓವರ್ ಲೋಡ್ ಬಸ್ಗಳು ಕಾಲೇಜಿಗೆ ಬರುತ್ತಿವೆ. ಇದರಿಂದ ಒಬ್ಬ ವಿದ್ಯಾರ್ಥಿ ಜೀವ ಹೋಗಿದೆ ಎಂದರು.
ಇದನ್ನೂ ಓದಿ: ರಾಷ್ಟ್ರೀಯ ಶಿಕ್ಷಣ ನೀತಿ ಪಠ್ಯಕ್ಕೆ ಕೇಂದ್ರದಿಂದ ಗ್ರೀನ್ ಸಿಗ್ನಲ್, ಅಂಗನವಾಡಿಯಿಂದಲೇ ಆರಂಭ
ಸರ್ಕಾರಿ ಕಾಲೇಜುಗಳಲ್ಲಿ ಅತಿಯಾದ ಶುಲ್ಕ ವಸೂಲಿ ಮಾಡುತ್ತಿದ್ದಾರೆ. ಬಡವರ ಮಕ್ಕಳ ಫೀಜ್ ಕಡಿಮೆ ಇರುತ್ತೆ ಅಂತ ಸರ್ಕಾರಿ ಕಾಲೇಜ್ಗೆ ಬರ್ತಾರೆ. ನಮ್ಮ ಸಂಘಟನೆ ವತಿಯಿಂದ ಸಾಕಷ್ಟು ಭಾರಿ ಕಾಲೇಜ್ ಫೀಜ್ ಕಡಿಮೆ ಮಾಡಿ ಎಂದು ಮನವಿ ಮಾಡಿದ್ದೇವೆ. ಆದರೆ ಸರ್ಕಾರದ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹಾಗಾಗಿ ನಮ್ಮ ಬೇಡಿಕೆಗಳು ಈಡೇರಬೇಕು.
ವಿದ್ಯಾರ್ಥಿಗಳ ಬೇಡಿಕೆಗೆ ಎನ್ಎಸ್ಯುಐನಿಂದ ವಿವಿ ಬಂದ್ ಕರೆ ನೀಡಿದ್ದೇವೆ ಎಂದು ಕೀರ್ತಿ ಗಣೇಶ್ ತಿಳಿಸಿದರು.
ಅಂಗನವಾಡಿ ಹಂತದಿಂದಲೇ ಎನ್ಇಪಿ ಆರಂಭ
ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದಿಂದಲೇ ರಾಷ್ಟ್ರೀಯ ಶಿಕ್ಷಣ ನೀತಿಯನ್ನ ಸರ್ಕಾರ ಜಾರಿಗೊಳಿಸಿದೆ. ದೇಶದ ಪ್ರತಿ ಮಗುವಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು. ಅದಕ್ಕಾಗಿ ದೇಶದ ಶೈಕ್ಷಣಿಕ ವ್ಯವಸ್ಥೆಯಲ್ಲಿ ಅಮೂಲಾಗ್ರ ಸುಧಾರಣೆ, ಬದಲಾವಣೆ ತರಲಿರುವ ಮಹತ್ವಾಕಾಂಕ್ಷೆಯ ರಾಷ್ಟ್ರೀಯ ಶಿಕ್ಷಣ ನೀತಿ-2020 ಅನುಷ್ಠಾನಗೊಳಿಸುವಲ್ಲಿ ಕರ್ನಾಟಕ ಸರ್ಕಾರ ಮುಂಚೂಣಿಯಲ್ಲಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮತ್ತೊಂದು ಮಹತ್ವದ ಹೆಜ್ಜೆ ಇರಿಸಿದ್ದು, ಇದೇ ವರ್ಷದಿಂದಲೇ ಎನ್‌ಇಪಿ-2020 ಜಾರಿಗೆ ಮುಂದಾಗಿದೆ.. ಪ್ರಾಥಮಿಕ ಹಂತದಲ್ಲಿ ರಾಜ್ಯದ ಅಂಗನವಾಡಿ ಶಾಲೆಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ 2020 ಅನುಷ್ಠಾನಕ್ಕೆ ಮುಂದಾಗಿದ್ದು ಕೇಂದ್ರ ಶಿಕ್ಷಣ ಇಲಾಖೆಯೂ ಇದಕ್ಕೆ ಅನುಮತಿ ನೀಡಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.