ರಾಜ್ಯ ಸರ್ಕಾರಿ ನೌಕರರ ಮುಷ್ಕರ: ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಇಂದು ನಡೆಯಬೇಕಿದ್ದ ಪರೀಕ್ಷೆಗಳು ಮುಂದೂಡಿಕೆ

7ನೇ ವೇತನ ಆಯೋಗ ವರದಿ ಜಾರಿಗೆ ಆಗ್ರಹಿಸಿ ರಾಜ್ಯ ಸರ್ಕಾರಿ ನೌಕರರು ನಡೆಸುತ್ತಿರುವ ಮುಷ್ಕರ ಪರೀಕ್ಷೆಗಳ ಮೇಲೆ ಪರಿಣಾಮ ಬೀರಿದೆ. ಬೆಂಗಳೂರು, ಕಲಬುರಗಿಯಲ್ಲಿ ಇಂದು ನಡೆಯಬೇಕಿದ್ದ ಪರೀಕ್ಷೆಗಳು ಮುಂದೂಡಲಾಗಿದೆ.

ರಾಜ್ಯ ಸರ್ಕಾರಿ ನೌಕರರ ಮುಷ್ಕರ: ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಇಂದು ನಡೆಯಬೇಕಿದ್ದ ಪರೀಕ್ಷೆಗಳು ಮುಂದೂಡಿಕೆ
Follow us
ರಮೇಶ್ ಬಿ. ಜವಳಗೇರಾ
|

Updated on:Mar 01, 2023 | 9:31 AM

7ನೇ ವೇತನ ಆಯೋಗ ವರದಿ ಜಾರಿಗೆ ಆಗ್ರಹಿಸಿ ರಾಜ್ಯ ಸರ್ಕಾರಿ ನೌಕರರು ಮುಷ್ಕರ (Karnataka Government Employees Strike) ನಡೆಸುತ್ತಿದ್ದಾರೆ.  ರಾಜ್ಯದ ಎಲ್ಲಾ ಸರ್ಕಾರಿ ಇಲಾಖೆಯ ಸುಮಾರು 10 ಲಕ್ಷ ನೌಕರರು ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದಾರೆ. ಇದರಿಂದ ಪರೀಕ್ಷೆಗಳಿಗೂ ರಾಜ್ಯ ಸರ್ಕಾರಿ ನೌಕರರ ಮುಷ್ಕರ ಬಿಸಿ ತಟ್ಟಿದೆ. ಇಂದು(ಮಾರ್ಚ್ 01) ಬೆಂಗಳೂರು ದಕ್ಷಿಣ ಜಿಲ್ಲೆ, ಬಾಗಲಕೋಟೆಯಲ್ಲಿ ಪದವಿಪೂರ್ವ ಕಾಲೇಜುಗಳ ಪ್ರಥಮ ಪಿಯುಸಿ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಇನ್ನು ಕಲಬುರಗಿಯಲ್ಲಿ ಎಸ್​ಎಸ್​ಎಲ್​ಸಿ ಪೂರ್ವಬಾವಿ ಪರೀಕ್ಷೆ ಮುಂದೂಡಿಕೆ ಮಾಡಲಾಗಿದೆ.

ಇದನ್ನೂ ಓದಿ: ಸರ್ಕಾರದ ವಿರುದ್ಧ ನೌಕರರ ಸಮರ.. ಇಂದಿನಿಂದ ಮುಷ್ಕರ: ಬಹುತೇಕ ಎಲ್ಲಾ ಸರ್ಕಾರಿ ಸೇವೆಗಳು ಬಂದ್

ಪ್ರಥಮ ಪಿಯುಸಿ ಮುಂದೂಡಿಕೆ

ಬೆಂಗಳೂರು ದಕ್ಷಿಣ ಜಿಲ್ಲೆ ಪದವಿಪೂರ್ವ ಕಾಲೇಜುಗಳಲ್ಲಿ ದಿನಾಂಕ 01.03.2023 _ರಂದು ನಡೆಯಬೇಕಾಗಿದ್ದ ಪ್ರಥಮ ಪಿಯುಸಿ Biology, Computer science, Electronics and Sociology ವಿಷಯದ ಪರೀಕ್ಷ ಗಳನ್ನು ಸರ್ಕಾರಿ ನೌಕರರ ಮುಷ್ಕರದ ಕಾರಣ ವಿದ್ಯಾರ್ಥಿಗಳಿಗೆ ಉಂಟಾಗಬಹುದಾದ ತೊಂದರೆಗಳನ್ನು ತಪ್ಪಿಸಲು ದಿನಾಂಕ 4-3-2023ಕ್ಕೆ ಮುಂದೂಡಲಾಗಿದೆ. ನಾಳೆಯಿಂದ ನಡೆಯಬೇಕಾಗಿದ್ದ ಪರೀಕ್ಷೆಗಳು ಯಥಾಪ್ರಕಾರ ಯಾವುದೇ ಬದಲಾವಣೆ ಇಲ್ಲದೆ ನಡೆಯುತ್ತವೆ. ಯಾವುದೇ ಬದಲಾವಣೆಗಳಿದ್ದಲ್ಲಿ ಮುಂದೆ ನಿಮ್ಮ ಗಮನಕ್ಕೆ ತರಲಾಗುವುದು ಎಂದು ಬೆಂಗಳೂರು ದಕ್ಷಿಣ ಜಿಲ್ಲೆಯ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.

ಎಸ್​ಎಸ್​ಎಲ್​ಸಿ ಪೂರ್ವಬಾವಿ ಪರೀಕ್ಷೆ ಮುಂದೂಡಿಕೆ

ಇನ್ನು ಕಲಬುರಗಿಯಲ್ಲಿ ಸಹ ಶಾಲಾ ಶಿಕ್ಷಕರು ಕೂಡಾ ಪ್ರತಿಭಟನೆಗೆ ಮುಂದಾದ ಹಿನ್ನೆಲೆ ಎಸ್​ಎಸ್​ಎಲ್​ಸಿ ಪೂರ್ವಬಾವಿ ಪರೀಕ್ಷೆ ಮುಂದೂಡಲಾಗಿದೆ. ಇಂದು ನಡೆಬೇಕಿದ್ದ ಹಿಂದಿ ವಿಷಯದ ಎಸ್​ಎಸ್​ಎಲ್​ಸಿ ಪೂರ್ವಬಾವಿ ಪರೀಕ್ಷೆಯನ್ನು ಮಾರ್ಚ್ 6ರಂದು ನಡೆಸಲು ಕಲಬುರಗಿ ಡಿಡಿಪಿಐ ಸಂಕ್ರೆಪ್ಪಗೌಡ ಸೂಚನೆ ನೀಡಿದ್ದಾರೆ.

ಬಾಗಲಕೋಟೆಯಲ್ಲೂ ಪರೀಕ್ಷೆ ಪಿಯುಸಿ ಮುಂದಕ್ಕೆ

ಬಾಗಲಕೋಟೆಯಲ್ಲಿ ಇಂದು ನಡೆಯಬೇಕಿದ್ದ ಪ್ರಥಮ ಪಿಯುಸಿ ಪರೀಕ್ಷೆ ಮುಂದೂಡಿಕೆಯಾಗಿವೆ. ಇಂದು ಹಿಂದಿ, ಸಂಸ್ಕೃತ ಭಾಷೆ ಪರೀಕ್ಷೆ ನಡೆಯಬೇಕಿತ್ತು. ಆದ್ರೆ, ರಾಜ್ಯಾದ್ಯಂತ ಸರಕಾರಿ ನೌಕರರ ಮುಷ್ಕರ ಹಿನ್ನೆಲೆ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಈ ಬಗ್ಗೆ ಬಾಗಲಕೋಟೆ ಡಿಡಿಪಿಯು ಡಾ ಕೃಷ್ಣಪ್ಪ ಪಿ ಮಾಹಿತಿ ನೀಡಿದ್ದಾರೆ.

Published On - 9:21 am, Wed, 1 March 23

ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್