ಬೆಂಗಳೂರು, ಜುಲೈ 15: ಕರ್ನಾಟಕ ಶಾಲಾ ಪರೀಕ್ಷೆ & ಮೌಲ್ಯನಿರ್ಣಯ ಮಂಡಳಿ ನಡೆಸಿದ್ದ 2024ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ 03 ಫಲಿತಾಂಶವನ್ನು (Puc Exam-3 Results) ನಾಳೆ ಪ್ರಕಟಿಸಲಿದೆ. ಜುಲೈ 16ರ ಮಧ್ಯಾಹ್ನ 3 ಗಂಟೆಗೆ ಅಧಿಕೃತ http//karresults.nic.in ವೆಬ್ ಸೈಟ್ನಲ್ಲಿ ಫಲಿತಾಂಶ ಲಭ್ಯವಾಗಲಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ & ಮೌಲ್ಯನಿರ್ಣಯ ಮಂಡಳಿಯ ಅಧ್ಯಕ್ಷೆ ಐಎಎಸ್ ಅಧಿಕಾರಿ ಎನ್ ಮಂಜುಶ್ರೀ ತಿಳಿಸಿದ್ದಾರೆ.
ಜೂನ್ 24ರಿಂದ ಜುಲೈ 05ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ-03 ನಡೆಸಲಾಗಿತ್ತು. ಕರ್ನಾಟಕದ ನಾನಾ ಜಿಲ್ಲೆ ಕೇಂದ್ರಗಳಲ್ಲಿ ಪರೀಕ್ಷೆ ನಡೆದಿದ್ದು, ಬಳಿಕ ಮೌಲ್ಯಮಾಪನವೂ ಮಾಡಲಾಗಿತ್ತು ಇದೀಗ ನಾಳೆ ಫಲಿತಾಂಶ ಪ್ರಕಟಿಸಲಾಗುತ್ತಿದೆ.
ಇದನ್ನೂ ಓದಿ: Karnataka SSLC Exam Result-2: SSLC ಪರೀಕ್ಷೆ-2 ಫಲಿತಾಂಶ ಇಂದು ಪ್ರಕಟ, ರಿಸಲ್ಟ್ ನೋಡವುದು ಹೇಗೆ? ಇಲ್ಲಿದೆ ವಿವರ
ತಮ್ಮ ಬಂದ ಅಂಕಗಳಿಂದ ಅತೃಪ್ತರಾದ ವಿದ್ಯಾರ್ಥಿಗಳು ಮರುಮೌಲ್ಯಮಾಪನ ಹಾಕಬಹುದಾಗಿದೆ. ಆದರೆ ಅದಕ್ಕೂ ಮೊದಲು ಅರ್ಜಿ ಸಲ್ಲಿಸಬೇಕು. ಮರುಮೌಲ್ಯಮಾಪನ ಮತ್ತು ಮರು ಮೊತ್ತವನ್ನು ಮೇ 22 ರಿಂದ 25 ರವರೆಗೆ ಅವಕಾಶ ನೀಡಲಾಗಿತ್ತು.
ಇದನ್ನೂ ಓದಿ: Karnataka SSLC Exam Result-2: ಎಸ್ಎಸ್ಎಲ್ಸಿ ಪರೀಕ್ಷೆ-2 ಫಲಿತಾಂಶ ಪ್ರಕಟ
ಅರ್ಜಿಯೊಂದಿಗೆ ವಿದ್ಯಾರ್ಥಿಗಳು ಒಂದು ವಿಷಯಕ್ಕೆ 140 ರೂ. ಎರಡು ವಿಷಯಗಳಿಗೆ ರೂ. 270 ಮತ್ತು ಮೂರು ಅಥವಾ ಹೆಚ್ಚಿನ ವಿಷಯಗಳಿಗೆ 400. ಆದಾಗ್ಯೂ, ನಿಯಮಿತ ಮತ್ತು ಖಾಸಗಿ ನೋಂದಾಯಿತ ಎಸ್ಸಿ, ಎಸ್ಟಿ ಮತ್ತು ಸಿ-1 ವಿದ್ಯಾರ್ಥಿಗಳು ಕೇವಲ 1 ರೂ ಪಾವತಿಸಬೇಕಾಗಿತ್ತು. ಒಂದು ವಿಷಯಕ್ಕೆ ಮೊದಲ ಬಾರಿಗೆ ಹಾಜರಾಗುವ ಅಭ್ಯರ್ಥಿಗಳಿಗೆ ಶುಲ್ಕ 175 ರೂ. ವಿಧಿಸಲಾಗಿತ್ತು.
ಮತ್ತಷ್ಟು ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:43 pm, Mon, 15 July 24