Suresh Kumar PC LIVE: ದ್ವಿತೀಯ ಪಿಯುಸಿ ಮಕ್ಕಳು ಪರೀಕ್ಷೆ ಇಲ್ಲದೇ ಪಾಸ್: ಎಸ್​ಎಸ್​ಎಲ್​ಸಿ ಮಕ್ಕಳಿಗೆ ಪರೀಕ್ಷೆ ಇದ್ದರೂ ಫೇಲ್​ ಮಾಡಲ್ಲ

| Updated By: Skanda

Updated on:Jun 04, 2021 | 10:49 AM

2nd PUC State Board Exam 2021 LIVE: ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳಿಗೆ ಎರಡೇ ಪರೀಕ್ಷೆ, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಪರೀಕ್ಷೆ ಇಲ್ಲದೇ ಪಾಸ್​! ಏನಿದು ರಾಜ್ಯ ಶಿಕ್ಷಣ ಇಲಾಖೆ ನಿರ್ಧಾರ? ಸಚಿವರು ಹೇಳಿದ್ದೇನು? ಇಲ್ಲಿದೆ ವಿವರ.

Suresh Kumar PC LIVE: ದ್ವಿತೀಯ ಪಿಯುಸಿ ಮಕ್ಕಳು ಪರೀಕ್ಷೆ ಇಲ್ಲದೇ ಪಾಸ್: ಎಸ್​ಎಸ್​ಎಲ್​ಸಿ ಮಕ್ಕಳಿಗೆ ಪರೀಕ್ಷೆ ಇದ್ದರೂ ಫೇಲ್​ ಮಾಡಲ್ಲ
ಸಚಿವ ಎಸ್​. ಸುರೇಶ್​ ಕುಮಾರ್​

ಬೆಂಗಳೂರು: ಈ ವರ್ಷ ದ್ವಿತೀಯ ಪಿಯುಸಿ ಪರೀಕ್ಷೆ ಈಗ ನಡೆಸಲ್ಲ. ಹೀಗಾಗಿ ಪ್ರಥಮ ಪಿಯುಸಿ ಫಲಿತಾಂಶ ಆಧರಿಸಿ ಗ್ರೇಡಿಂಗ್ ನೀಡಲಾಗುವುದು. ಫಲಿತಾಂಶ ಸಮಾಧಾನವಿಲ್ಲದಿದ್ದರೆ ಮತ್ತೊಮ್ಮೆ ಪರೀಕ್ಷೆ ಮಾಡುತ್ತೇವೆ. ಬೇಕೆಂದರೆ ಕೊರೊನಾ ಕಡಿಮೆಯಾದ ನಂತರ ಪರೀಕ್ಷೆ ಮಾಡುತ್ತೇವೆ. ಸದ್ಯ ದ್ವಿತೀಯ ಪಿಯುಸಿಯ ಎಲ್ಲ ವಿದ್ಯಾರ್ಥಿಗಳು ಪಾಸ್ ಹಾಗೂ ಎಸ್​ಎಸ್​ಎಲ್​ಸಿ ಮಕ್ಕಳಿಗೆ ಪರೀಕ್ಷೆ ಮಾಡಲಾಗುವುದು ಆದರೆ ಫೇಲ್​ ಮಾಡೋದಿಲ್ಲ ಎಂದು ಶಿಕ್ಷಣ ಸಚಿವ ಸುರೇಶ್​ ಕುಮಾರ್​ ತಿಳಿಸಿದ್ದಾರೆ.

LIVE NEWS & UPDATES

The liveblog has ended.
  • 04 Jun 2021 10:45 AM (IST)

    ಸಿಇಟಿ, ನೀಟ್​ ಎಕ್ಸಾಂಗೆ ಚೆನ್ನಾಗಿ ಓದಿ; ಈ ಪರೀಕ್ಷೆ ನಡೆದಿಲ್ಲ ಎಂಬ ಬೇಸರ ಬೇಡ

    ದ್ವಿತೀಯ ಪರೀಕ್ಷೆ ನಡೆಸಲು ಹೋದರೆ ಕನಿಷ್ಟ 12 ದಿನ ಬೇಕಾಗುತ್ತದೆ. ಹೀಗಾಗಿ ನೀವು ಈ ಬಗ್ಗೆ ಬೇಸರವಾಗುವುದು ಬೇಡ. ಬದಲಾಗಿ ನೀಟ್​ ಮತ್ತು ಸಿಇಟಿ ಪರೀಕ್ಷೆಗಳತ್ತ ಹೆಚ್ಚು ಗಮನ ಕೊಟ್ಟು ತಯಾರಿ ನಡೆಸಿ. ಅಷ್ಟಾದರೂ ಅಸಮಾಧಾನವಿದೆ ಎಂದಾದಲ್ಲಿ ಅಂತಹವರಿಗೆ ಮಾತ್ರ ಪರೀಕ್ಷೆ ವ್ಯವಸ್ಥೆ ಮಾಡೋಣ ಎಂದು ಸಚಿವರು ಮಕ್ಕಳಿಗೆ ಭರವಸೆ ನೀಡಿದ್ದಾರೆ.

  • 04 Jun 2021 10:41 AM (IST)

    ಈ ಬಾರಿ ಎಷ್ಟಕ್ಕೆ ಎಷ್ಟು ಅಂಕ ಎಂದು ಇರೋದಿಲ್ಲ; ಕೇವಲ ಗ್ರೇಡಿಂಗ್

    ಈ ಬಾರಿ ಅಂಕಪಟ್ಟಿಯಲ್ಲಿ ಮಕ್ಕಳು ಎಷ್ಟು ಅಂಕ ಪಡೆದಿದ್ದಾರೆ ಎಂದು ನೀಡಲಾಗುವುದಿಲ್ಲ. ಬದಲಾಗಿ ಗ್ರೇಡಿಂಗ್ ನೀಡಲಾಗುವುದು. ಒಂದು ವೇಳೆ ಪ್ರಥಮ ಪಿಯುಸಿ ಪರೀಕ್ಷೆ ಗ್ರೇಡಿಂಗ್​ ಬಗ್ಗೆ ಅಸಮಾಧಾನವಿದ್ದರೆ ಅವರು ಪರೀಕ್ಷೆ ಬರೆಯುತ್ತೇವೆಂದು ತಿಳಿಸಬಹುದು. ಕೊರೊನಾ ಕಡಿಮೆಯಾದ ನಂತರ ಅವರಿಗೆ ವ್ಯವಸ್ಥೆ ಮಾಡಿಕೊಡುವ ಬಗ್ಗೆ ಯೋಚಿಸಲಾಗುವುದು ಎಂದು ತಿಳಿಸಿದ್ದಾರೆ.

  • 04 Jun 2021 10:37 AM (IST)

    ಮೂರನೇ ಅಲೆಯನ್ನು ಅದರ ಪರಿಸ್ಥಿತಿಯನ್ನು ಈಗಲೇ ನಿರ್ಧರಿಸಲಾಗದು

    ಎಸ್​ಎಸ್​ಎಲ್​ಸಿ ಮಕ್ಕಳಿಗೆ ಜುಲೈ ಮೂರನೇ ವಾರದಲ್ಲಿ ಪರೀಕ್ಷೆ ನಡೆಸುತ್ತೇವೆ ಎನ್ನುವುದು ಈಗಿನ ನಿರ್ಧಾರ. ಆದರೆ, ಮೂರನೇ ಅಲೆಯನ್ನು, ಅದರ ಪರಿಸ್ಥಿತಿಯನ್ನು ಈಗ ನಿರ್ಧರಿಸಲಾಗುವುದಿಲ್ಲ. ಆಗ ಪರಿಸ್ಥಿತಿಗೆ ತಕ್ಕಂತೆ ಮತ್ತೆ ನಿರ್ಧರಿಸುವುದೇ ಸೂಕ್ತ ಎಂದಿದ್ದಾರೆ.

  • 04 Jun 2021 10:35 AM (IST)

    ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಗ್ರೇಡಿಂಗ್ ಬಿಟ್ಟರೆ ಬೇರೆ ಆಯ್ಕೆ ಇಲ್ಲ

    ಪ್ರಥಮ ಪಿಯುಸಿ ಫಲಿತಾಂಶ ಆಧರಿಸಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಗ್ರೇಡಿಂಗ್ ಕೊಡುವುದನ್ನು ಬಿಟ್ಟರೆ ನಮ್ಮ ಬಳಿ ಬೇರೆ ಆಯ್ಕೆಯೇ ಇಲ್ಲ ಎಂದು ಸಚಿವ ಸುರೇಶ್ ಕುಮಾರ್‌ ಹೇಳಿಕೆ ನೀಡಿದ್ದಾರೆ.

  • 04 Jun 2021 10:29 AM (IST)

    ಮನೆಯ ಹತ್ತಿರದ ಕೇಂದ್ರಗಳಲ್ಲೇ ಪರೀಕ್ಷೆ ಬರೆಯಿರಿ

    SSLCಯಲ್ಲಿ ಯಾರನ್ನೂ ಫೇಲ್ ಮಾಡುವುದಿಲ್ಲ. 120 ಅಂಕಗಳಿಗೆ ಮಲ್ಟಿಪಲ್ ಚಾಯ್ಸ್ ಪ್ರಶ್ನೆಪತ್ರಿಕೆ. ಪ್ರತಿ ವಿಷಯಕ್ಕೆ 40 ಅಂಕಗಳು ಇರುತ್ತದೆ ಎಂದು ತಿಳಿಸಿದ್ದಾರೆ. ಜುಲೈ ಕೊನೆಯ ವಾರ ಅಥವಾ ಆಗಸ್ಟ್‌ನಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಫಲಿತಾಂಶ ನೀಡುತ್ತೇವೆ ಎಂದು ಹೇಳಿದ್ದಾರೆ.

  • 04 Jun 2021 10:27 AM (IST)

    ಪರೀಕ್ಷಾ ಕೊಠಡಿ ಮೇಲ್ವಿಚಾರಕರು ಲಸಿಕೆ ಪಡೆದಿರಬೇಕು

    ಎಸ್​​ಎಸ್​ಎಲ್​ಸಿ ಪರೀಕ್ಷೆ ದಿನ ಕೊಠಡಿ ಮೇಲ್ವಿಚಾರಕರು ಲಸಿಕೆ ಪಡೆದಿರಬೇಕು ಎಂದು ನಿಯಮ ರೂಪಿಸಿದ್ದೇವೆ.

  • 04 Jun 2021 10:26 AM (IST)

    ಎಸ್​ಎಸ್​ಎಲ್​ಸಿಯಲ್ಲಿ ಯಾರನ್ನೂ ಫೇಲ್​ ಮಾಡುವುದಿಲ್ಲ

    ಎಸ್​ಎಸ್​ಎಲ್​ಸಿಯಲ್ಲಿ ಯಾರನ್ನೂ ಫೇಲ್​ ಮಾಡುವುದಿಲ್ಲ. ಮೊದಲೇ ಮಾದರಿ ಪ್ರಶ್ನೆ ಪತ್ರಿಕೆಯನ್ನು ನೀಡುತ್ತೇವೆ. ಅದನ್ನು ನೋಡಿಕೊಂಡು ಸಿದ್ಧತೆ ಮಾಡಿಕೊಳ್ಳಿ. ಒತ್ತಡವಾಗಲಿ, ಆತಂಕವಾಗಲೀ ಬೇಡ. ಅತ್ಯಂತ ಸರಳ ಹಾಗೂ ನೇರ ಪ್ರಶ್ನೆಗಳನ್ನಷ್ಟೇ ಕೇಳಲಾಗುವುದು. ಒಂದು ಡೆಸ್ಕ್‌ಗೆ ಒಬ್ಬ ವಿದ್ಯಾರ್ಥಿಯನ್ನು ಕೂರಿಸುತ್ತೇವೆ. ಪರೀಕ್ಷೆ ಬರೆಯುವ ಎಲ್ಲರಿಗೂ N95 ಮಾಸ್ಕ್ ನೀಡುತ್ತೇವೆ. ಮಾದರಿ ಪ್ರಶ್ನೆಪತ್ರಿಕೆ ಶಾಲೆಗಳಿಗೆ ಕಳಿಸಲು ವ್ಯವಸ್ಥೆ ಆಗಿದೆ. ವೆಬ್‌ಸೈಟ್‌ನಲ್ಲೂ ಮಾದರಿ ಪ್ರಶ್ನೆಪತ್ರಿಕೆ ಹಾಕಲಾಗುವುದು. SSLCಯಲ್ಲಿ ಯಾರನ್ನೂ ಫೇಲ್ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

  • 04 Jun 2021 10:24 AM (IST)

    ಜುಲೈ 3ನೇ ವಾರದಲ್ಲಿ ಎಸ್​ಎಸ್​ಎಲ್​ಸಿ ಪರೀಕ್ಷೆ ನಡೆಸಲು ತೀರ್ಮಾನ

    ಜುಲೈ 3ನೇ ವಾರದಲ್ಲಿ ಪರೀಕ್ಷೆ ನಡೆಸಲು ತೀರ್ಮಾನ. 20 ದಿನ ಮುಂಚಿತವಾಗಿ ಪರೀಕ್ಷೆ ದಿನಾಂಕ ಘೋಷಣೆ ಮಾಡಲಾಗುವುದು. ಕೊವಿಡ್ ಕಾರಣದಿಂದ ಪರೀಕ್ಷೆ ಬರೆಯಲು ಆಗದಿದ್ದರೆ. ಅಂತಹ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಅವಕಾಶವಿದೆ. ಹೊಸ ಅಭ್ಯರ್ಥಿಗಳಾಗಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು. 6 ಸಾವಿರ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗುವುದು. ಈ ಬಾರಿ ದುಪ್ಪಟ್ಟು ಕೇಂದ್ರಗಳಲ್ಲಿ ಪರೀಕ್ಷೆ ಮಾಡುತ್ತೇವೆ. ಒಂದು ಕೊಠಡಿಯಲ್ಲಿ 10-12 ಜನ ಕೂರಿಸಿ ಪರೀಕ್ಷೆ ನಡೆಸುತ್ತೇವೆ.

  • 04 Jun 2021 10:23 AM (IST)

    ಎಸ್​ಎಸ್​ಎಲ್​ಸಿಗೂ ಗ್ರೇಡ್​​​​ ನೀಡಲಾಗುವುದು

    ಎಸ್​ಎಸ್​ಎಲ್​ಸಿಗೂ ಗ್ರೇಡ್​ ಆಧಾರಿತ ಅಂಕ ನೀಡಲಾಗುವುದು. ಎ, ಎ ಪ್ಲಸ್​ ಮಾದರಿಯಲ್ಲಿ ಗ್ರೇಡ್​ ವ್ಯವಸ್ಥೆ ಇರಲಿದೆ.

  • 04 Jun 2021 10:20 AM (IST)

    ಎಸ್​ಎಸ್​​ಎಲ್​ಸಿಗೆ ಎರಡು ಪರೀಕ್ಷೆ; ಎರಡೇ ಪ್ರಶ್ನೆ ಪತ್ರಿಕೆ

    ಗಣಿತ, ವಿಜ್ಞಾನ ಹಾಗೂ ಸಮಾಜ ವಿಜ್ಞಾನ ಈ ಮೂರು ವಿಷಯಗಳನ್ನು ಸೇರಿಸಿ ಒಂದು ಪೇಪರ್​, ಬಹು ಆಯ್ಕೆ ಪ್ರಶ್ನೆಗಳನ್ನು ಕೇಳಲಾಗುವುದು. ಸರಳ ಹಾಗೂ ನೇರ ಪ್ರಶ್ನೆಗಳಿರಲಿವೆ. ಇನ್ನೊಂದು ಪತ್ರಿಕೆ ಭಾಷಾ ವಿಷಯಗಳು ಇರಲಿವೆ.

  • 04 Jun 2021 10:18 AM (IST)

    ಕಳೆದ ಬಾರಿ 9ನೇ ತರಗತಿ ಪರೀಕ್ಷೆಯೂ ನಡೆದಿಲ್ಲ

    ಎಸ್​ಎಸ್​ಎಲ್​ಸಿ ಮಕ್ಕಳನ್ನು ಕಳೆದ ವರ್ಷದ ಆಧಾರದ ಮೇಲೆ ಪಾಸ್​ ಮಾಡೋಣವೆಂದರೆ ಕಳೆದ ಬಾರಿ 9ನೇ ತರಗತಿ ಪರೀಕ್ಷೆಯೂ ನಡೆದಿಲ್ಲ.

  • 04 Jun 2021 10:17 AM (IST)

    ಎಸ್​ಎಸ್​ಎಲ್​ಸಿಗೆ ಪರೀಕ್ಷೆ ನಡೆಸದೇ ಇರುವುದು ಸುಲಭವಲ್ಲ

    8 ಲಕ್ಷ 75 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆಯುತ್ತಿದ್ದಾರೆ. ಕೆಲ ಸಮೀಕ್ಷೆಗಳಲ್ಲಿ ಪರೀಕ್ಷೆ ಬೇಡ ಅನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಆದರೆ, ಎಸ್​ಎಸ್​ಎಲ್​ಸಿಗೆ ಪರೀಕ್ಷೆ ನಡೆಸದೇ ಇರುವುದು ಸುಲಭವಿಲ್ಲ.

  • 04 Jun 2021 10:14 AM (IST)

    ದ್ವಿತೀಯ ಪಿಯುಸಿಯ ಎಲ್ಲಾ ವಿದ್ಯಾರ್ಥಿಗಳೂ ಪಾಸ್​

    ಈ ವರ್ಷ ದ್ವಿತೀಯ ಪಿಯುಸಿ ಪರೀಕ್ಷೆ ಈಗ ನಡೆಸಲ್ಲ. ಹೀಗಾಗಿ ಪ್ರಥಮ ಪಿಯುಸಿ ಫಲಿತಾಂಶ ಆಧರಿಸಿ ಗ್ರೇಡಿಂಗ್ ನೀಡಲಾಗುವುದು. ಫಲಿತಾಂಶ ಸಮಾಧಾನವಿಲ್ಲದಿದ್ದರೆ ಮತ್ತೊಮ್ಮೆ ಪರೀಕ್ಷೆ ಮಾಡುತ್ತೇವೆ. ಕೊರೊನಾ ಕಡಿಮೆಯಾದ ನಂತರ ಪರೀಕ್ಷೆ ಮಾಡುತ್ತೇವೆ. ಸದ್ಯ ದ್ವಿತೀಯ ಪಿಯುಸಿಯ ಎಲ್ಲ ವಿದ್ಯಾರ್ಥಿಗಳು ಪಾಸ್ ಎಂದು ತಿಳಿಸಿದ್ದಾರೆ.

  • 04 Jun 2021 10:10 AM (IST)

    ಬೇರೆ ಮಾರ್ಗದಲ್ಲಿ ಇದಕ್ಕೆ ವ್ಯವಸ್ಥೆ ಮಾಡಲಾಗುವುದು

    ಈ ವರ್ಷ ದ್ವಿತೀಯ ಪಿಯುಸಿ ಪರೀಕ್ಷೆ ಈಗ ನಡೆಸಲ್ಲ ಎಂದಿರುವ ಸಚಿವರು ಪರೀಕ್ಷೆ ಇಲ್ಲದೆ ಪಾಸ್ ಮಾಡುವ ಬಗ್ಗೆ ಚರ್ಚಿಸಿದ್ದೇನೆ. ಹಲವು ರಾಜ್ಯಗಳ ಶಿಕ್ಷಣ ಸಚಿವರ ಜತೆ ಚರ್ಚಿಸಿದ್ದೇನೆ. ಯಾರೂ ಕೂಡ ಸೂಕ್ತ ಮಾನದಂಡವನ್ನು ಹೇಳಿಲ್ಲ. ಹೀಗಾಗಿ ನಮ್ಮ ರಾಜ್ಯದಲ್ಲಿ ದ್ವಿತೀಯ ಪಿಯುಸಿ ಸದ್ಯಕ್ಕೆ ರದ್ದು ಮಾಡಲಾಗಿದ್ದು, ಬೇರೆ ಮಾರ್ಗದಲ್ಲಿ ಇದಕ್ಕೆ ವ್ಯವಸ್ಥೆ ಮಾಡಲಾಗುವುದು.

  • 04 Jun 2021 10:08 AM (IST)

    ಈ ವರ್ಷ ದ್ವಿತೀಯ ಪಿಯುಸಿ ಪರೀಕ್ಷೆ ಈಗ ನಡೆಸಲ್ಲ

    ಈ ವರ್ಷ ದ್ವಿತೀಯ ಪಿಯುಸಿ ಪರೀಕ್ಷೆ ಈಗ ನಡೆಸಲ್ಲ ಎಂದು ಶಿಕ್ಷಣ ಸಚಿವ ಎಸ್.ಸುರೇಶ್‌ಕುಮಾರ್ ಘೋಷಣೆ ಮಾಡಿದ್ದಾರೆ.

  • 04 Jun 2021 10:07 AM (IST)

    ಪರೀಕ್ಷೆ ಸಂಬಂಧ ಅಭಿಪ್ರಾಯ ಸಂಗ್ರಹಿಸಲಾಗಿದೆ

    ಪ್ರಸಕ್ತ ವರ್ಷ ಪರೀಕ್ಷೆ ನಡೆಸುವ ಸಂಬಂಧ ಚರ್ಚೆಗಳಾಗುತ್ತಿವೆ. ಪರೀಕ್ಷೆ ನಡೆಸಬೇಕೆಂದು ಕೆಲವರು ಹೇಳುತ್ತಿದ್ದಾರೆ. ಕೆಲವರು ಪರೀಕ್ಷೆ ನಡೆಸುವುದು ಬೇಡ ಎಂದು ಹೇಳ್ತಿದ್ದಾರೆ. ಹೀಗಾಗಿ ಪರೀಕ್ಷೆ ನಡೆಸುವ ಸಂಬಂಧ ಪರಿಷತ್ ಸದಸ್ಯರು, ಹಿರಿಯ ಮಾಧ್ಯಮ ಪ್ರತಿನಿಧಿಗಳು, ಪೋಷಕರು, ಮಕ್ಕಳು, ಶಿಕ್ಷಣ ತಜ್ಞರ ಅಭಿಪ್ರಾಯ ಸಂಗ್ರಹ ಮಾಡಲಾಗಿದೆ.

  • 04 Jun 2021 10:04 AM (IST)

    ಸುದ್ದಿಗೋಷ್ಠಿ ಆರಂಭ – ಈ ವರ್ಷ ಪರಿಸ್ಥಿತಿ ವಿಭಿನ್ನವಾಗಿದೆ ಎಂದ ಸಚಿವರು

    ಶಿಕ್ಷಣ ಸಚಿವ ಎಸ್​.ಸುರೇಶ್​ ಕುಮಾರ್​ ನೇತೃತ್ವದ ಸುದ್ದಿಗೋಷ್ಠಿ ಆರಂಭವಾಗಿದೆ. ಕಳೆದ ವರ್ಷ ಸವಾಲನ್ನು ಎದುರಿಸಿ ಪರೀಕ್ಷೆ ಆರಂಭಿಸಿದ್ದೆವು ಆದರೆ ಈ ವರ್ಷ ಪರಿಸ್ಥಿತಿ ವಿಭಿನ್ನವಾಗಿದೆ ಎಂದು ಹೇಳುವ ಮೂಲಕ ಮಾತು ಆರಂಭಿಸಿದ್ದಾರೆ.

  • 04 Jun 2021 10:00 AM (IST)

    ಪರ್ಯಾಯ ವ್ಯವಸ್ಥೆಗೆ ಯೋಜನೆ?

    ಎಸ್​ಎಸ್​ಎಲ್​ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಗಳು ಮಕ್ಕಳ ಶೈಕ್ಷಣಿಕ ಜೀವನದ ಪ್ರಮುಖ ಘಟ್ಟಗಳೆಂದು ಪರಿಗಣಿಸಲ್ಪಟ್ಟಿರುವ ಕಾರಣ ಅವುಗಳನ್ನು ಸಂಪೂರ್ಣ ರದ್ದುಪಡಿಸುವ ಬದಲು, ಪರ್ಯಾಯ ವ್ಯವಸ್ಥೆ ರೂಪಿಸಬಹುದು ಎಂಬ ಅಂದಾಜಿದೆ. ಬೋರ್ಡ್​ ಪರೀಕ್ಷೆ ಬದಲು ಶಾಲಾ ಕಾಲೇಜು ಮಟ್ಟದಲ್ಲಿ ಪರೀಕ್ಷೆ ನಡೆಸಲು ಸಲಹೆ ವ್ಯಕ್ತವಾಗಿದೆ.

  • Published On - Jun 04,2021 10:45 AM

    Follow us