AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

UPSC Exam: ಯುಪಿಎಸ್​ಸಿ ಪರೀಕ್ಷೆಯಲ್ಲಿ ಇಂಜಿನಿಯರ್​ಗಳೇ ಹೆಚ್ಚು ಯಶಸ್ವಿ​ ಆಗುತ್ತಿರುವುದೇಕೆ?

ಈ ವರ್ಷ ಯುಪಿಎಸ್​ಸಿ ಪರೀಕ್ಷೆಯಲ್ಲಿ ಅಗ್ರ ಸ್ಥಾನ ಪಡೆದ ಟಾಪ್ 10 ರ್ಯಾಂಕರ್​ಗಳಲ್ಲಿ 6 ಜನ ಇಂಜಿನಿಯರಿಂಗ್ ಹಿನ್ನೆಲೆಯಿಂದ ಬಂದವರು. ಹಾಗಾದರೆ, ನಾಗರಿಕ ಸೇವಾ ಪರೀಕ್ಷೆಯಲ್ಲಿ ಇಂಜನಿಯರ್​ಗಳೇ ಹೆಚ್ಚು ಯಶಸ್ವಿಯಾಗಲು ಕಾರಣವೇನು?

UPSC Exam: ಯುಪಿಎಸ್​ಸಿ ಪರೀಕ್ಷೆಯಲ್ಲಿ ಇಂಜಿನಿಯರ್​ಗಳೇ ಹೆಚ್ಚು ಯಶಸ್ವಿ​ ಆಗುತ್ತಿರುವುದೇಕೆ?
ಈ ವರ್ಷ ಯುಪಿಎಸ್​ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದ ಇಂಜಿನಿಯರಿಂಗ್ ಹಿನ್ನೆಲೆಯುಳ್ಳ ಅಭ್ಯರ್ಥಿಗಳು
TV9 Web
| Updated By: ಸುಷ್ಮಾ ಚಕ್ರೆ

Updated on: Nov 02, 2021 | 1:25 PM

Share

ಐಎಎಸ್​, ಐಪಿಎಸ್​, ಐಆರ್​ಎಸ್​, ಐಎಫ್​ಎಸ್​ ಅಧಿಕಾರಿಯಾಗಬೇಕೆಂಬ ಆಸೆ ಇಂದಿನ ಯುವಪೀಳಿಗೆಯಲ್ಲಿ ಹೆಚ್ಚಾಗುತ್ತಿದೆ. ಕೈತುಂಬ ಸಂಬಳ ಬರುವ ಸಾಫ್ಟ್​ವೇರ್ ಕ್ಷೇತ್ರವನ್ನು ಬಿಟ್ಟು ನಾಗರಿಕ ಸೇವಾ ಪರೀಕ್ಷೆ (ಯುಪಿಎಸ್​ಸಿ) ಬರೆಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಯುಪಿಎಸ್​ಸಿ ಪರೀಕ್ಷೆ ಬರೆಯುವವರ ಪೈಕಿ ಪ್ರತಿ ವರ್ಷವೂ ಇಂಜಿನಿಯರ್​​ಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇತ್ತೀಚೆಗಷ್ಟೇ UPSC 2020 ಪರೀಕ್ಷೆಯ ಅಂತಿಮ ಫಲಿತಾಂಶ ಪ್ರಕಟವಾಯಿತು. ಈ ವರ್ಷ ಯುಪಿಎಸ್​ಸಿ ಪರೀಕ್ಷೆಯಲ್ಲಿ ಅಗ್ರ ಸ್ಥಾನ ಪಡೆದ ಟಾಪ್ 10 ರ್ಯಾಂಕರ್​ಗಳಲ್ಲಿ 6 ಜನ ಇಂಜಿನಿಯರಿಂಗ್ ಹಿನ್ನೆಲೆಯಿಂದ ಬಂದವರು. ಕಳೆದ 1 ದಶಕದಲ್ಲಿ ಇಬ್ಬರನ್ನು ಹೊರತುಪಡಿಸಿ (2011ರಲ್ಲಿ AIR 1 ಶೆನಾ ಅಗರ್ವಾಲ್ ಮತ್ತು 2015ರಲ್ಲಿ ಟೀನಾ ದಾಬಿ) ಉಳಿದವರೆಲ್ಲ UPSC CSE ಟಾಪರ್‌ಗಳು ಎಂಜಿನಿಯರಿಂಗ್ ವಿಭಾಗದವರೇ ಆಗಿದ್ದಾರೆ. ಕಲಾ ವಿಭಾಗ ಅಥವಾ ಮಾನವಿಕ ಶೈಕ್ಷಣಿಕ ಹಿನ್ನೆಲೆ ಹೊಂದಿರುವವರಿಗೆ ಯುಪಿಎಸ್​ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಸುಲಭವಾಗುತ್ತದೆ ಎಂಬ ಕಲ್ಪನೆಯನ್ನು ಈ ಹತ್ತು ವರ್ಷಗಳಲ್ಲಿ ಇಂಜಿನಿಯರಿಂಗ್​ ಹಿನ್ನೆಲೆಯುಳ್ಳ ಯುಪಿಎಸ್​ಸಿ ಟಾಪರ್​ಗಳು ಬುಡಮೇಲು ಮಾಡಿದ್ದಾರೆ.

ಇಂಜಿನಿಯರಿಂಗ್ ಮುಗಿಸಿದ ನಂತರ ಕ್ಯಾಂಪಸ್​ ಸೆಲೆಕ್ಷನ್​ನಲ್ಲಿ ಲಾಭದಾಯಕ ಪ್ಲೇಸ್‌ಮೆಂಟ್ ಆಫರ್‌ಗಳ ಹೊರತಾಗಿಯೂ, ಇಂಜಿನಿಯರ್‌ಗಳು ಆಡಳಿತಾತ್ಮಕ ಸೇವೆಗಳಿಗೆ ಸೇರಲು ಒಲವು ತೋರುತ್ತಿದ್ದಾರೆ. ಕೆಲವರು ಪದವಿಯ ನಂತರ ತಮ್ಮ ತಯಾರಿಯನ್ನು ಪ್ರಾರಂಭಿಸಿದರೆ, ಅನೇಕರು ಪರೀಕ್ಷೆಗೆ ಸಿದ್ಧತೆ ನಡೆಸಲು ತಮ್ಮ ಕಾರ್ಪೊರೇಟ್ ವೃತ್ತಿಜೀವನವನ್ನು ತ್ಯಜಿಸುತ್ತಿದ್ದಾರೆ.

DoPT ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ಕಳೆದ 10 ವರ್ಷಗಳಲ್ಲಿ ಯುಪಿಎಸ್‌ಸಿ ಸಿವಿಲ್ ಸರ್ವೀಸ್ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಎಂಜಿನಿಯರ್‌ಗಳ ಸಂಖ್ಯೆ ಹೆಚ್ಚಾಗಿದೆ. 2019ರಲ್ಲಿ ಇಂಜಿನಿಯರಿಂಗ್ ಪದವಿ ಹೊಂದಿರುವ ಅನೇಕ ಅಧಿಕಾರಿಗಳನ್ನು ಡಿಒಪಿಟಿ ‘ಪದವೀಧರ’ ವರ್ಗಕ್ಕೆ ಸೇರಿಸಿರುವುದರಿಂದ ಸಂಖ್ಯೆ 27 ಕ್ಕಿಂತ ಹೆಚ್ಚಿರಬಹುದು.

ಈ ವರ್ಷದ ಯುಪಿಎಸ್​ಸಿ ಟಾಪ್ 10 ಅಭ್ಯರ್ಥಿಗಳ ಪಟ್ಟಿಯಲ್ಲಿ, AIR 1 ಶುಭಂ ಕುಮಾರ್ ಮತ್ತು AIR 8 ಜೀವನಿ ಕಾರ್ತಿಕ್ ನಾಗ್ಜಿಭಾಯಿ ಐಐಟಿ ಬಾಂಬೆಯ ಹಳೆ ವಿದ್ಯಾರ್ಥಿಗಳಾಗಿದ್ದಾರೆ. AIR 7 ಪ್ರವೀಣ್ ಕುಮಾರ್ ಐಐಟಿ ಕಾನ್ಪುರದಿಂದ ಪದವೀಧರರಾಗಿದ್ದರೆ, AIR 3 ಅಂಕಿತಾ ಜೈನ್ ಡಿಟಿಯು ದೆಹಲಿಯವರಾಗಿದ್ದಾರೆ. ಇವುಗಳ ಹೊರತಾಗಿ, IIT-BHU (ವಾರಣಾಸಿ)ಯಿಂದ ಒಟ್ಟು 17 ವಿದ್ಯಾರ್ಥಿಗಳು ನಾಗರಿಕ ಸೇವೆಗಳ ಪರೀಕ್ಷೆ 2020ಗೆ ಅರ್ಹತೆ ಪಡೆದಿದ್ದಾರೆ. ನಾಗರಿಕ ಸೇವೆ ಬಗ್ಗೆ ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತಿರುವ ಆಸಕ್ತಿಯಿಂದಾಗಿ, IIT-BHU ಹಳೆಯ ವಿದ್ಯಾರ್ಥಿಗಳು ಈಗ ಯುಪಿಎಸ್​ಸಿ ಆಕಾಂಕ್ಷಿಗಳಿಗೆ ನಿಯಮಿತ ಕೌನ್ಸೆಲಿಂಗ್ ಕೂಡ ಆಯೋಜಿಸಿದ್ದಾರೆ ಎಂದು ಇಂಡಿಯನ್ ಎಕ್ಸ್​ಪ್ರೆಸ್​ ವರದಿ ಮಾಡಿದೆ.

ಇಂಜಿನಿಯರಿಂಗ್ ವಿದ್ಯಾರ್ಥಿಗಳ ನಾಗರಿಕ ಸೇವೆಗಳತ್ತ ಒಲವು ಹೆಚ್ಚುತ್ತಿರುವುದನ್ನು ಗುರುತಿಸಿದ ಐಐಟಿ (ಬಿಎಚ್‌ಯು) ವಾರಣಾಸಿ ನಿರ್ದೇಶಕ ಪ್ರಮೋದ್ ಕುಮಾರ್ ಜೈನ್, ಉತ್ತಮ ಅವಕಾಶಗಳ ಪ್ರವೇಶ ಮತ್ತು ಸಮಾಜಕ್ಕೆ ಸೇವೆ ಸಲ್ಲಿಸಬೇಕೆಂಬ ತುಡಿತ ಹೆಚ್ಚಾಗಿರುವುದರಿಂದ ನಾಗರಿಕ ಸೇವೆಗಳು ಮತ್ತು ಕಾರ್ಪೊರೇಟ್ ವೃತ್ತಿಜೀವನದ ನಡುವಿನ ವ್ಯತ್ಯಾಸವು ಬಹುತೇಕ ಕಣ್ಮರೆಯಾಗಿದೆ. ಐಐಟಿ ಹಳೆಯ ವಿದ್ಯಾರ್ಥಿಗಳು ಈಗಿನ ವಿದ್ಯಾರ್ಥಿಗಳಲ್ಲಿ ಯುಪಿಎಸ್​ಸಿ ಪರೀಕ್ಷೆ ಬರೆಯುವ ಬಗ್ಗೆ ಸ್ಫೂರ್ತಿ ತುಂಬುತ್ತಿದ್ದಾರೆ ಎಂದಿದ್ದಾರೆ.

AIR 2 ಜಾಗೃತಿ ಅವಸ್ಥಿ ಬಿಟೆಕ್ ಪದವೀಧರರಾಗಿದ್ದಾರೆ. ನಾಲ್ಕು ವರ್ಷಗಳ ಇಂಜಿನಿಯರಿಂಗ್ ಅಧ್ಯಯನಕ್ಕೆ ಒಳಪಡುವ ಪರಿಣಾಮವಾಗಿ ಇಂಜಿನಿಯರ್‌ಗಳು ತಮ್ಮ ಉತ್ತಮ ವಿಶ್ಲೇಷಣಾತ್ಮಕ ಸಾಮರ್ಥ್ಯದಿಂದಾಗಿ ಸಿಎಸ್‌ಇಗೆ ಅರ್ಹತೆ ಪಡೆದಿದ್ದಾರೆ. ಅಲ್ಲದೆ, ಅಭ್ಯರ್ಥಿಯ ಕಠಿಣ ಪರಿಶ್ರಮ ಮತ್ತು ನಿರ್ಣಯವು ಅವರ ಹಿನ್ನೆಲೆಯನ್ನು ಲೆಕ್ಕಿಸದೆ, ನಾಗರಿಕ ಸೇವೆಗಳಂತಹ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಲು ಅವರಿಗೆ ಸಹಾಯ ಮಾಡುತ್ತದೆ.

ಐಆರ್‌ಎಸ್ ಬ್ಯಾಚ್ 2019ರ ಅಂಕುಶ್ ಕೊಠಾರಿ ಐಐಟಿ ಕಾನ್ಪುರದ ಹಳೆಯ ವಿದ್ಯಾರ್ಥಿಯಾಗಿದ್ದು, ಇವರು ನಾಗರಿಕ ಸೇವಾ ಪರೀಕ್ಷೆಗೆ ಹಾಜರಾಗಲು 19 ಲಕ್ಷ ರೂ. ವೇತನವಿದ್ದ ಕ್ಯಾಂಪಸ್ ಪ್ಲೇಸ್‌ಮೆಂಟ್ ಆಫರ್ ಅನ್ನು ತ್ಯಜಿಸಿದ್ದರು. ಇಂಜಿನಿಯರಿಂಗ್ ಪದವಿಯ ಅಂತಿಮ ವರ್ಷದಲ್ಲಿ ನಾನು ಭಾರತದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಇಂಟರ್ನ್ ಆಗಿ ಸೇರಿಕೊಂಡೆ. ನಾನು ಜಂಟಿ ಕಾರ್ಯದರ್ಶಿ ಮಟ್ಟದ ಐಎಎಸ್ ಅಧಿಕಾರಿಗೆ ವರದಿ ಮಾಡಬೇಕಾಗಿತ್ತು, ಅವರು ನಮಗೆ ಕೆಲಸವನ್ನು ನಿಯೋಜಿಸುತ್ತಿದ್ದರು. ಒಬ್ಬ ಐಎಎಸ್ ಅಧಿಕಾರಿ ತನ್ನ ಅಧಿಕಾರದಿಂದ ಸಮಾಜದಲ್ಲಿ ಯಾವ ರೀತಿಯ ಬದಲಾವಣೆಯನ್ನು ತರಬಹುದು ಎಂಬುದು ನನಗೆ ಅಲ್ಲಿ ಗೊತ್ತಾಯಿತು. ಅದರಿಂದ ನಾನು ಆಕರ್ಷಿತನಾಗಿದ್ದೆ. ನಾಗರಿಕ ಸೇವಕನಾಗಲು ಮತ್ತು ರಾಷ್ಟ್ರ ಮತ್ತು ಅದರ ಅಭಿವೃದ್ಧಿಗಾಗಿ ಕೆಲಸ ಮಾಡಲು ಇದು ನನ್ನನ್ನು ಪ್ರೇರೇಪಿಸಿತು ಎಂದು ಅಂಕುಶ್ ಹೇಳಿದ್ದಾರೆ.

ಇದನ್ನೂ ಓದಿ: ಯುಪಿಎಸ್​ಸಿ 2020: 35ನೇ ಶ್ರೇಣಿಯಲ್ಲಿ ಪಾಸಾದ ಬೆಂಗಳೂರು ಮೂಲದ ಅಪರ್ಣಾ ರಮೇಶ್!

ಯುಪಿಎಸ್​ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಧಾನಿ ಅಭಿನಂದನೆ; ಫೇಲ್​ ಆದವರಲ್ಲೂ ಧೈರ್ಯ ತುಂಬಿದ ಮೋದಿ

ಯಶ್ ಅಭಿಮಾನಿಗಳಿಗೆ ತುಂಬಾ ಇಷ್ಟ ಆಯ್ತು ‘ರಾಮಾಯಣ’ ಸಿನಿಮಾ ಮೊದಲ ಗ್ಲಿಂಪ್ಸ್
ಯಶ್ ಅಭಿಮಾನಿಗಳಿಗೆ ತುಂಬಾ ಇಷ್ಟ ಆಯ್ತು ‘ರಾಮಾಯಣ’ ಸಿನಿಮಾ ಮೊದಲ ಗ್ಲಿಂಪ್ಸ್
ಸಿಎಂ ವಿರುದ್ಧ ಬರ್ಮಣಿ ದೂರು ಸಲ್ಲಿಸಿದ್ದರೆ ಚೆನ್ನಾಗಿರುತಿತ್ತು: ಯತ್ನಾಳ್
ಸಿಎಂ ವಿರುದ್ಧ ಬರ್ಮಣಿ ದೂರು ಸಲ್ಲಿಸಿದ್ದರೆ ಚೆನ್ನಾಗಿರುತಿತ್ತು: ಯತ್ನಾಳ್
‘ರಾಮಾಯಣ’ ಗ್ಲಿಂಪ್ಸ್ ನೋಡಿದ ಅಭಿಮಾನಿಗಳು ಹೇಳಿದ್ದೇನು? ವಿಡಿಯೋ ನೋಡಿ
‘ರಾಮಾಯಣ’ ಗ್ಲಿಂಪ್ಸ್ ನೋಡಿದ ಅಭಿಮಾನಿಗಳು ಹೇಳಿದ್ದೇನು? ವಿಡಿಯೋ ನೋಡಿ
ಎಕ್ಸ್​ಟ್ರಾ ಕಾಫಿ ಕಪ್​ಗಾಗಿ ಗಲಾಟೆ: ಹೋಟೆಲ್‌ ಸಿಬ್ಬಂದಿ ಮೇಲೆ ಹಲ್ಲೆ!
ಎಕ್ಸ್​ಟ್ರಾ ಕಾಫಿ ಕಪ್​ಗಾಗಿ ಗಲಾಟೆ: ಹೋಟೆಲ್‌ ಸಿಬ್ಬಂದಿ ಮೇಲೆ ಹಲ್ಲೆ!
ಸುಖಾಸುಮ್ಮನೆ ಹೇಳಿಕೆ ನೀಡುವ ರಾಜಕಾರಣಿಗೆ ಯದುವೀರ್ ಮಾದರಿ
ಸುಖಾಸುಮ್ಮನೆ ಹೇಳಿಕೆ ನೀಡುವ ರಾಜಕಾರಣಿಗೆ ಯದುವೀರ್ ಮಾದರಿ
ಸ್ವಯಂ ನಿವೃತ್ತಿ ಬಗ್ಗೆ ಎಎಸ್​ಪಿ ನಾರಾಯಣ ಭರಮನಿ ಮೊದಲ ಪ್ರತಿಕ್ರಿಯೆ
ಸ್ವಯಂ ನಿವೃತ್ತಿ ಬಗ್ಗೆ ಎಎಸ್​ಪಿ ನಾರಾಯಣ ಭರಮನಿ ಮೊದಲ ಪ್ರತಿಕ್ರಿಯೆ
ಕೋವಿಡ್ ಲಸಿಕೆ ಪಡೆದವರಲ್ಲಿ ಹೃದಯಾಘಾತ ಅಪಾಯ ಕಡಿಮೆ: ಡಾ. ಮೋಹಿತ್ ಗುಪ್ತಾ
ಕೋವಿಡ್ ಲಸಿಕೆ ಪಡೆದವರಲ್ಲಿ ಹೃದಯಾಘಾತ ಅಪಾಯ ಕಡಿಮೆ: ಡಾ. ಮೋಹಿತ್ ಗುಪ್ತಾ
ಸಂಪುಟ ಸಭೆಯನ್ನು ಬೇರೆ ಬೇರೆ ಸ್ಥಳಗಳಲ್ಲಿ ನಡೆಸುವುದು ದುಂದು ವೆಚ್ಚವಲ್ಲವೇ?
ಸಂಪುಟ ಸಭೆಯನ್ನು ಬೇರೆ ಬೇರೆ ಸ್ಥಳಗಳಲ್ಲಿ ನಡೆಸುವುದು ದುಂದು ವೆಚ್ಚವಲ್ಲವೇ?
ಸಂವೇದನೆಯಿಲ್ಲದ, ಸೂಕ್ಷ್ಮತೆ ಗೊತ್ತಿರದ ಸಿಬ್ಬಂದಿಯಿಂದ ಸಮೀಕ್ಷೆ ಬೇಕಿತ್ತೇ?
ಸಂವೇದನೆಯಿಲ್ಲದ, ಸೂಕ್ಷ್ಮತೆ ಗೊತ್ತಿರದ ಸಿಬ್ಬಂದಿಯಿಂದ ಸಮೀಕ್ಷೆ ಬೇಕಿತ್ತೇ?
ಎಲ್ಲ ಮಂತ್ರಿಗಳು ಒಂದೇ ವಾಕ್ಯವನ್ನು ಪುನರಾವರ್ತಿಸುತ್ತಿದ್ದಾರೆ
ಎಲ್ಲ ಮಂತ್ರಿಗಳು ಒಂದೇ ವಾಕ್ಯವನ್ನು ಪುನರಾವರ್ತಿಸುತ್ತಿದ್ದಾರೆ