ಬೆಂಗಳೂರು: ಕೆಸೆಟ್ ಪರೀಕ್ಷೆಯ ಫಲಿತಾಂಶವು ನಾಳೆ (ನವೆಂಬರ್ 2) ಬೆಳಗ್ಗೆ 10 ಗಂಟೆಗೆ ಪ್ರಕಟ ಆಗಲಿದೆ. ಮೈಸೂರು ವಿವಿ ಕುಲಪತಿಗಳು ಫಲಿತಾಂಶ ಪ್ರಕಟಿಸಲಿದ್ದಾರೆ. ಮೈಸೂರು ವಿವಿಯ ಕಾರ್ಯಸೌಧದಲ್ಲಿ ವಿಸಿಯಿಂದ ಫಲಿತಾಂಶ ಪ್ರಕಟ ಆಗಲಿದೆ. ಜುಲೈ 25 ರಂದು 11 ಕೇಂದ್ರಗಳಲ್ಲಿ ಕೆಸೆಟ್ ಪರೀಕ್ಷೆ ನಡೆದಿತ್ತು. 84 ಸಾವಿರ ಅಭ್ಯರ್ಥಿಗಳಿಂದ ಕೆಸೆಟ್ ಪರೀಕ್ಷೆಗೆ ನೋಂದಣಿ ಮಾಡಲಾಗಿತ್ತು.
ಬೆಂಗಳೂರು, ಮೈಸೂರು, ಬೆಳಗಾವಿ, ಬಳ್ಳಾರಿ, ವಿಜಯಪುರ, ದಾವಣಗೆರೆ, ಧಾರವಾಡ, ಕಲಬುರ್ಗಿ, ಮಂಗಳೂರು, ಶಿವಮೊಗ್ಗ, ತುಮಕೂರಿನಲ್ಲಿ ಕೆಸೆಟ್ ಪರೀಕ್ಷೆ ಜರುಗಿತ್ತು. ಈ ಪರೀಕ್ಷೆಯ ಫಲಿತಾಂಶವು ನಾಳೆ ಪ್ರಕಟ ಆಗಲಿದೆ. ಒಟ್ಟು 41 ವಿಷಯಗಳಲ್ಲಿ ನಾಳೆ ಕೆಸೆಟ್ ಫಲಿತಾಂಶ ಪ್ರಕಟವಾಗಲಿದೆ. ಈ ಮೊದಲು ಕೆಸೆಟ್ ಪರೀಕ್ಷೆಯನ್ನು ಮುಂದೂಡಲಾಗಿತ್ತು. ಕೊರೊನಾ ಕಾರಣದಿಂದ ಮುಂದೂಡಲಾಗಿದ್ದ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆ- ಸೆಟ್) ದಿನಾಂಕವನ್ನು ಮರು ನಿಗದಿಗೊಳಿಸಿ ಆಯೋಜಿಸಲಾಗಿತ್ತು.
ಬಳಿಕ ಕೊರೊನಾ ಬಳಿಕ ಪರೀಕ್ಷೆಯು ಪೂರ್ಣಗೊಂಡಿದ್ದು, ನಾಳೆ (ನವೆಂಬರ್ 2) ಫಲಿತಾಂಶ ಪ್ರಕಟಿಸುವ ಬಗ್ಗೆ ಹೇಳಲಾಗಿದೆ. ಈ ಬಗ್ಗೆ ಮೈಸೂರು ವಿಶ್ವವಿದ್ಯಾಲಯ ಮಾಹಿತಿ ನೀಡಿದೆ. ಮೈಸೂರು ವಿವಿ ಕುಲಪತಿಗಳು ಫಲಿತಾಂಶ ಪ್ರಕಟಿಸಲಿದ್ದಾರೆ. ಮೈಸೂರು ವಿವಿಯ ಕಾರ್ಯಸೌಧದಲ್ಲಿ ವಿಸಿಯಿಂದ ಫಲಿತಾಂಶ ಪ್ರಕಟ ಆಗಲಿದೆ.
ಇದನ್ನೂ ಓದಿ: ಕಲಬುರಗಿ: ಕಾನ್ಸ್ಟೇಬಲ್ ಪರೀಕ್ಷೆಯಲ್ಲಿ ಅಕ್ರಮಕ್ಕೆ ಯತ್ನ; 3 ಅಭ್ಯರ್ಥಿಗಳು ಸೇರಿ 11 ಜನರ ಬಂಧನ
ಇದನ್ನೂ ಓದಿ: ಮುಂದಿನ ದಿನಗಳಲ್ಲಿ ಕನ್ನಡ ಪರ್ವ ಶುರುವಾಗಲಿ; ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ವೇಳೆ ಸಿಎಂ ಬೊಮ್ಮಾಯಿ ಕರೆ