ಮುಂದಿನ ದಿನಗಳಲ್ಲಿ ಕನ್ನಡ ಪರ್ವ ಶುರುವಾಗಲಿ; ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ವೇಳೆ ಸಿಎಂ ಬೊಮ್ಮಾಯಿ ಕರೆ
ನಾಡು ಶ್ರೀಮಂತವಾಗಬೇಕಾದರೆ ಜನ ಶ್ರೀಮಂತವಾಗಬೇಕು. ಜನ ಶ್ರೀಮಂತರಾದರೆ ಎಲ್ಲಾ ರಂಗಗಳೂ ಶ್ರೀಮಂತವಾಗುತ್ತದೆ, ಆ ನಾಡು ಶ್ರೀಮಂತವಾಗುತ್ತದೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪ್ರದಾನದ ವೇಳೆ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬೆಂಗಳೂರು: ಕರ್ನಾಟಕದ 66 ಸಾಧಕರಿಗೆ ಇಂದು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಜೊತೆಗೆ 10 ಸಂಘ-ಸಂಸ್ಥೆಗಳಿಗೂ ಅಮೃತ ಮಹೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಶಸ್ತಿ ಪ್ರದಾನ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಮನುಷ್ಯರು ಜ್ಞಾನ, ವಿಜ್ಞಾನದಲ್ಲಿ ಜ್ಞಾನದಲ್ಲಿ ಎಷ್ಟು ಮುಂದುವರೆಯುತ್ತಿದ್ದಾರೋ ಅಷ್ಟೇ ಮಾನವೀಯತೆಯನ್ನು ಕೂಡ ಬೆಳೆಸಿಕೊಂಡರೆ ಸಮಾಜದಲ್ಲಿ ಸ್ವಾಸ್ಥ್ಯ ಉಂಟಾಗುತ್ತದೆ. ಕನ್ನಡ ನಾಡನ್ನು ಎಲ್ಲರೂ ಉಳಿಸಿಕೊಂಡು, ಬೆಳೆಸಿಕೊಂಡು ಹೋಗಬೇಕು. ಕನ್ನಡದ ಅಂತರಂಗದ ಶಕ್ತಿಯೇ ಪ್ರೀತಿ ಮತ್ತು ವಿಶ್ವಾಸ. ಸುಮ್ಮನೆ ಬೇರೆ ಭಾಷೆ ಬಗ್ಗೆ ವಿಶ್ಲೇಷಣೆ ಬೇಡ. ಆದರೆ ನಮ್ಮ ಕನ್ನಡದ ವಿಶ್ಲೇಷಣೆ ಬೇಕು. ನಮ್ಮ ಕನ್ನಡಿಗರಿಗೆ ಹೃದಯ ವೈಶಾಲ್ಯತೆ ಇದೆ. ನಾಡು ಶ್ರೀಮಂತವಾಗಬೇಕಾದರೆ ಜನ ಶ್ರೀಮಂತವಾಗಬೇಕು. ಜನ ಶ್ರೀಮಂತರಾದರೆ ಎಲ್ಲಾ ರಂಗಗಳೂ ಶ್ರೀಮಂತವಾಗುತ್ತದೆ, ಆ ನಾಡು ಶ್ರೀಮಂತವಾಗುತ್ತದೆ ಎಂದು ಹೇಳಿದ್ದಾರೆ.
ಮುಂದಿನ ದಿನಗಳಲ್ಲಿ ಕನ್ನಡದ ಪರ್ವ ಆರಂಭವಾಗಬೇಕು. ಪ್ರಶಸ್ತಿಗೆ ಪುರಸ್ಕೃತರನ್ನು ಆಯ್ಕೆ ಮಾಡಿದವರು ಸಮುದ್ರದ ಆಳದಲ್ಲಿ ಮುತ್ತುಗಳನ್ನು ಭೂಮಿಯ ಒಳಗಡೆ ಇದ್ದ ಬಂಗಾರದ ಮುತ್ತುಗಳನ್ನು ಆಯ್ಕೆ ಮಾಡಿದ್ದಾರೆ. ಮನುಷ್ಯನಿಗೆ ಹಲವಾರು ಆಸೆ ಅಭಿಲಾಷೆ ಇರುತ್ತದೆ. ದೈಹಿಕ ಬೆಳವಣಿಗೆ ಜೊತೆಗೆ ಮಾನಸಿಕ ಬೆಳವಣಿಗೆ ಕೂಡ ಆಗಿರುತ್ತದೆ. ಅದರಂತೆ ನಮ್ಮ ಆಸೆ ಅಭಿಲಾಷೆ ಕೂಡ ಬದಲಾಗುತ್ತಿರುತ್ತದೆ. ಸಾಧನೆಯಲ್ಲಿ ಪರೋಪಕಾರಿ ಗುಣ ಬರಬೇಕು. ಅದು ಬಂದಾಗ ಮಾತ್ರ ಜೀವನದಲ್ಲಿ ಒಳ್ಳೆಯ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಸಮಾರಂಭದಲ್ಲಿ ಕನ್ನಡ ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್ ಸೇರಿದಂತೆ ಹಲವರು ಭಾಗಿಯಾಗಿದ್ದರು. 66ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ 66 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಯಿತು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿ ಹೀಗಿದೆ.
ಸಾಹಿತ್ಯ ಕ್ಷೇತ್ರ: ಚಾಮರಾಜನಗರ ಜಿಲ್ಲೆಯ ಮಹದೇವ ಶಂಕನಪುರ ಚಿತ್ರದುರ್ಗದ ಪ್ರೊ.ಡಿ.ಟಿ. ರಂಗಸ್ವಾಮಿ ರಾಯಚೂರಿನ ಜಯಲಕ್ಷ್ಮೀ ಮಂಗಳಮೂರ್ತಿ ಚಿಕ್ಕಮಗಳೂರಿನ ಅಜ್ಜಂಪುರ ಮಂಜುನಾಥ್ ವಿಜಯಪುರದ ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿ ಬಾಗಲಕೋಟೆಯ ಸಿದ್ದಪ್ಪ ಬಿದರಿ
ರಂಗಭೂಮಿ ಕ್ಷೇತ್ರ: ಹಾವೇರಿಯ ಫಕೀರವ್ವ ರಾಮಪ್ಪ ಕೊಡಾಯಿ ಚಿಕ್ಕಮಗಳೂರಿನ ಪ್ರಕಾಶ್ ಬೆಳವಾಡಿ ಬಳ್ಳಾರಿಯ ರಮೇಶ್ ಗೌಡ ಪಾಟೀಲ್ ರಾಮನಗರದ ಎನ್. ಮಲ್ಲೇಶಯ್ಯ ಗದಗ ಜಿಲ್ಲೆಯ ಸಾವಿತ್ರಿ ಗೌಡರ್
ಜಾನಪದ ಕ್ಷೇತ್ರ: ವಿಜಯಪುರ ಜಿಲ್ಲೆಯ ಆರ್.ಬಿ. ನಾಯಕ ಶಿವಮೊಗ್ಗ ಜಿಲ್ಲೆಯ ಗೌರಮ್ಮ ಹುಚ್ಚಪ್ಪ ಮಾಸ್ತರ್ ಬಳ್ಳಾರಿ ಜಿಲ್ಲೆಯ ದುರ್ಗಪ್ಪ ಚೆನ್ನದಾಸರ ಉಡುಪಿಯ ಬನ್ನಂಜೆ ಬಾಬು ಅಮೀನ್ ಬಾಗಲಕೋಟೆಯ ಮಲ್ಲಿಕಾರ್ಜುನ ರಾಚಪ್ಪ ಮುದಕವಿ ಧಾರವಾಡದ ವೆಂಕಪ್ಪ ಗೋವಿಂದಪ್ಪ ಭಜಂತ್ರಿ ಹಾವೇರಿ ಜಿಲ್ಲೆಯ ಮಹಾರುದ್ರಪ್ಪ ವೀರಪ್ಪ ಇಟಗಿ
ಸಂಗೀತ ಕ್ಷೇತ್ರ: ಕೋಲಾರ ಜಿಲ್ಲೆಯ ಸಿ. ತ್ಯಾಗರಾಜು (ನಾದಸ್ವರ) ದಕ್ಷಿಣ ಕನ್ನಡ ಜಿಲ್ಲೆಯ ಹೆರಾಲ್ಡ್ ಸಿರಿಲ್ ಡಿಸೋಜಾ
ಸಿನಿಮಾ:
ದೇವರಾಜ್- ಬೆಂಗಳೂರು
ಶಿಲ್ಪಕಲಾ ಕ್ಷೇತ್ರ: ಚಿಕ್ಕಬಳ್ಳಾಪುರ ಜಿಲ್ಲೆಯ ಡಾ.ಜಿ. ಜ್ಞಾನಾನಂದ ಕೊಪ್ಪಳ ಜಿಲ್ಲೆಯ ವೆಂಕಣ್ಣ ಚಿತ್ರಗಾರ
ಸಂಕೀರ್ಣ ಕ್ಷೇತ್ರ: ವಿಜಯನಗರ ಜಿಲ್ಲೆಯ ಡಾ.ಬಿ. ಅಂಬಣ್ಣ ಬಳ್ಳಾರಿ ಜಿಲ್ಲೆಯ ಕ್ಯಾ. ರಾಜಾರಾವ್ ಕೊಪ್ಪಳ ಜಿಲ್ಲೆಯ ಗಂಗಾವತಿ ಪ್ರಾಣೇಶ್
ವಿಜ್ಞಾನ ತಂತ್ರಜ್ಞಾನ ಕ್ಷೇತ್ರ: ಬೆಂಗಳೂರಿನ ಡಾ.ಹೆಚ್.ಎಸ್. ಸಾವಿತ್ರಿ ಬೆಂಗಳೂರಿನ ಪ್ರೊ.ಜಿ.ಯು. ಕುಲಕರ್ಣಿ
ಸಮಾಜಸೇವೆ ಕ್ಷೇತ್ರ: ಬಾಗಲಕೋಟೆಯ ಸೂಲಗಿತ್ತಿ ಯಮುನವ್ವ (ಸಾಲಮಂಟಪಿ) ಮೈಸೂರು ಜಿಲ್ಲೆಯ ಮದಲಿ ಮಾದಯ್ಯ ಬೆಂಗಳೂರಿನ ಮುನಿಯಪ್ಪ ದೊಮ್ಮಲೂರು ಬೆಳಗಾವಿ ಜಿಲ್ಲೆಯ ಬಿ.ಎಲ್.ಪಾಟೀಲ್ ಅಥಣಿ ಮಂಡ್ಯ ಜಿಲ್ಲೆಯ ಡಾ.ಜೆ.ಎನ್.ರಾಮಕೃಷ್ಣೇಗೌಡ
ವೈದ್ಯಕೀಯ ಕ್ಷೇತ್ರ: ದಾವಣಗೆರೆ ಜಿಲ್ಲೆಯ ಡಾ.ಸುಲ್ತಾನ್ ಬಿ. ಜಗಳೂರು ಧಾರವಾಡ ಜಿಲ್ಲೆಯ ಡಾ.ವ್ಯಾಸ ದೇಶಪಾಂಡೆ (ವೇದವ್ಯಾಸ) ಬೆಂಗಳೂರಿನ ಡಾ.ಎ.ಆರ್.ಪ್ರದೀಪ್ (ದಂತ ವೈದ್ಯಕೀಯ) ದಕ್ಷಿಣ ಕನ್ನಡ ಜಿಲ್ಲೆಯ ಡಾ.ಸುರೇಶ್ ರಾವ್ ಧಾರವಾಡದ ಡಾ.ಶಿವನಗೌಡ ರಾಮನಗೌಡರ್ ಬೆಂಗಳೂರಿನ ಡಾ. ಸುದರ್ಶನ್
ಕ್ರೀಡಾ ಕ್ಷೇತ್ರ: ಕೊಡಗು ಜಿಲ್ಲೆಯ ರೋಹನ್ ಭೋಪಣ್ಣ ಬೆಂಗಳೂರಿನ ಕೆ. ಗೋಪಿನಾಥ್ (ವಿಶೇಷ ಚೇತನ) ಉಡುಪಿ ಜಿಲ್ಲೆಯ ರೋಹಿತ್ ಕುಮಾರ್ ಕಟೀಲು ಬೆಂಗಳೂರಿನ ಎ. ನಾಗರಾಜು (ಕಬಡ್ಡಿ)
ಶಿಕ್ಷಣ ಕ್ಷೇತ್ರ: ಮೈಸೂರಿನ ಸ್ವಾಮಿ ಲಿಂಗಪ್ಪ ಶಿವಮೊಗ್ಗ ಜಿಲ್ಲೆಯ ಪ್ರೊ.ಪಿ.ವಿ. ಕೃಷ್ಣ ಭಟ್ ಧಾರವಾಡದ ಶ್ರೀಧರ್ ಚಕ್ರವರ್ತಿ
ಕೃಷಿ ಕ್ಷೇತ್ರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಡಾ.ಸಿ. ನಾಗರಾಜ್ ಬೀದರ್ ಜಿಲ್ಲೆಯ ಗುರುಲಿಂಗಪ್ಪ ಮೇಲ್ದೊಡ್ಡಿ ತುಮಕೂರು ಜಿಲ್ಲೆಯ ಶಂಕರಪ್ಪ ಅಮ್ಮನಘಟ್ಟ
ಪರಿಸರ ಕ್ಷೇತ್ರ: ಉತ್ತರ ಕನ್ನಡ ಜಿಲ್ಲೆಯ ಮಹಾದೇವ ವೇಳಿಪ ದಕ್ಷಿಣ ಕನ್ನಡ ಜಿಲ್ಲೆಯ ಬೈಕಂಪಾಡಿ ರಾಮಚಂದ್ರ
ಪತ್ರಿಕೋದ್ಯಮ ಕ್ಷೇತ್ರ: ಮೈಸೂರಿನ ಪಟ್ನಂ ಅನಂತಪದ್ಮನಾಭ ಉಡುಪಿ ಜಿಲ್ಲೆಯ ಯು.ಬಿ. ರಾಜಲಕ್ಷ್ಮೀ
ಯೋಗ ಕ್ಷೇತ್ರ: ಶಿವಮೊಗ್ಗ ಜಿಲ್ಲೆಯ ಭ.ಮ. ಶ್ರೀಕಂಠ ಬೆಂಗಳೂರಿನ ಡಾ.ರಾಘವೇಂದ್ರ ಶೆಣೈ
10 ಸಂಘ ಸಂಸ್ಥೆಗಳಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಸ್ವಾತಂತ್ರ್ಯದ ಅಮೃತ ಮಹೋತ್ಸವ ರಾಜ್ಯ ಪ್ರಶಸ್ತಿ-2021: ಗದಗ ಜಿಲ್ಲೆಯ ವೀರೇಶ್ವರ ಪುಣ್ಯಾಶ್ಯಮ ಅಂಧ ಮಕ್ಕಳ ಶಾಲೆ ದಾವಣಗೆರೆ ಜಿಲ್ಲೆ ಕರ್ನಾಟಕ ಹಿಮೋ ಫೀಲಿಯಾ ಸೊಸೈಟಿ ಕಲಬುರಗಿ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ರಾಮಕೃಷ್ಣಾಶ್ರಮ ಹುಬ್ಬಳ್ಳಿಯ ಆಲ್ ಇಂಡಿಯಾ ಜೈನ್ ಯುತ್ ಫೆಡರೇಷನ್ ಹಾವೇರಿಯ ಉತ್ಸವ ರಾಕ್ ಗಾರ್ಡನ್ ಬೆಂಗಳೂರಿನ ಅದಮ್ಯ ಚೇತನ ಸಂಸ್ಥೆ ಬೆಂಗಳೂರಿನ ಸ್ಟೆಪ್ ಒನ್ ಸಂಸ್ಥೆ ಬೆಂಗಳೂರಿನ ಬನಶಂಕರಿ ಮಹಿಳಾ ಸಮಾಜ ವಿಜಯಪುರದ ಅನುಗ್ರಹ ಕಣ್ಣಿನ ಆಸ್ಪತ್ರೆಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ.
ಇದನ್ನೂ ಓದಿ: ಸಮುದ್ರದಾಳದಲ್ಲಿ ಹಾರಾಡಿದ ಕನ್ನಡ ಧ್ವಜ; ನೇತ್ರಾಣಿ ಅಡ್ವೇಂಚರ್ ಸಂಸ್ಥೆಯಿಂದ ವಿಶೇಷ ರೀತಿಯಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಣೆ
ಹತ್ತು ಸಾವಿರಕ್ಕೂ ಹೆಚ್ಚು ಮಹಿಳೆಯರಿಗೆ ಹೆರಿಗೆ ಮಾಡಿಸಿದ ವೃದ್ಧೆಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ