Vaibhav Suryavanshi: ವೈಭವ್ ಸೂರ್ಯವಂಶಿ ಓದುತ್ತಿರುವ ಸ್ಕೂಲ್​ ಮತ್ತು ಅಲ್ಲಿನ ಫೀಸ್ ಎಷ್ಟು ಗೊತ್ತಾ?

14 ವರ್ಷದ ವೈಭವ್ ಸೂರ್ಯವಂಶಿ 2025ರ ಐಪಿಎಲ್ ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ 1.1 ಕೋಟಿ ರೂಪಾಯಿಗೆ ಖರೀದಿಯಾದರು. ಪ್ರಸ್ತುತ ಕ್ರಿಕೆಟ್ ಲೋಕದ ಮನೆ ಮಾತಾಗಿದ್ದಾರೆ. ಕ್ರಿಕೆಟ್ ಜಗತ್ತಿನಲ್ಲಿ ಯಶಸ್ಸು ಗಳಿಸಿದ್ದರೂ ಕೂಡ ಸೂರ್ಯವಂಶಿ ಸರಳ ಜೀವನ ನಡೆಸುತ್ತಿದ್ದಾರೆ. ಇದಕ್ಕೆ ಉತ್ತಮ ನಿದರ್ಶನವೆಂದರೆ ಅವರ ಶಾಲಾ ಶುಲ್ಕ. ಇವರ ಸ್ಕೂಲ್​ ಫೀಸ್ ಕೇಳಿದ್ರೆ ನೀವು ಶಾಕ್​ ಆಗುವುದಂತೂ ಖಂಡಿತಾ.

Vaibhav Suryavanshi: ವೈಭವ್ ಸೂರ್ಯವಂಶಿ ಓದುತ್ತಿರುವ ಸ್ಕೂಲ್​ ಮತ್ತು ಅಲ್ಲಿನ ಫೀಸ್ ಎಷ್ಟು ಗೊತ್ತಾ?
Vaibhav Suryavanshi School Name, Fees Structure

Updated on: Jun 01, 2025 | 1:02 PM

2025 ರ ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಕಣಕ್ಕಿಳಿದು ಸಿಡಿಲಬ್ಬರದ ಶತಕ ಸಿಡಿಸಿ ದಾಖಲೆ ನಿರ್ಮಿಸಿದ್ದ 14 ವರ್ಷದ ವೈಭವ್ ಸೂರ್ಯವಂಶಿ ಪ್ರಸ್ತುತ ಕ್ರಿಕೆಟ್ ಲೋಕದ ಮನೆ ಮಾತಾಗಿದ್ದಾನೆ. 14 ವರ್ಷದ ಯುವ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿ ಕ್ರಿಕೆಟ್​​​ ಜೊತೆಗೆ ತನ್ನ ಶಿಕ್ಷಣವನ್ನು ಮುಂದುವರಿಸುತ್ತಿದ್ದಾನೆ. ದೊಡ್ಡ ಮಟ್ಟದಲ್ಲಿ ಹೆಸರು ಗಳಿಸಿರುವ ಸೂರ್ಯವಂಶಿಯ ಶಾಲಾ ಶುಲ್ಕ ಕೇಳಿದ್ರೆ ನೀವೂ ಶಾಕ್​ ಆಗುವುದಂತೂ ಖಂಡಿತಾ.

ಹರಾಜಿನಲ್ಲಿ 1.1 ಕೋಟಿಗೆ ಖರೀದಿ:

2025 ರ ಐಪಿಎಲ್ ಮೆಗಾ ಹರಾಜಿನಲ್ಲಿ, ರಾಜಸ್ಥಾನ್ ರಾಯಲ್ಸ್ ತಂಡವು ವೈಭವ್ ಅವರನ್ನು 1.1 ಕೋಟಿ ರೂ.ಗಳ ಬೃಹತ್ ಬೆಲೆಗೆ ಖರೀದಿಸಿತು. ಇಷ್ಟು ಚಿಕ್ಕ ವಯಸ್ಸಿನಲ್ಲಿ ಇಷ್ಟೊಂದು ದೊಡ್ಡ ಬಿಡ್ ವೈಭವ್ ಅವರನ್ನು ರಾತ್ರೋರಾತ್ರಿ ಸ್ಟಾರ್ ಆಗಿ ಮಾಡಿತು.

ಬಹಳ ಚಿಕ್ಕ ವಯಸ್ಸಿನಲ್ಲಿಯೇ ಕ್ರಿಕೆಟ್ ಜಗತ್ತನ್ನು ಪ್ರವೇಶಿಸಿದ ವೈಭವ್. 9 ನೇ ವಯಸ್ಸಿನಲ್ಲಿ, ಪಾಟ್ನಾದ ಜೆನೆಕ್ಸ್ ಕ್ರಿಕೆಟ್ ಅಕಾಡೆಮಿಯಲ್ಲಿ ತರಬೇತುದಾರ ಮನೀಶ್ ಓಜಾ ಅವರ ಅಡಿಯಲ್ಲಿ ತರಬೇತಿಯನ್ನು ಪ್ರಾರಂಭಿಸಿದನು. ಜನವರಿ 2024 ರಲ್ಲಿ, ಅಂದರೆ ಕೇವಲ 12 ನೇ ವಯಸ್ಸಿನಲ್ಲಿ, ವೈಭವ್ ಬಿಹಾರ ಪರ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಇಷ್ಟು ಚಿಕ್ಕ ವಯಸ್ಸಿನಲ್ಲಿ ಈ ಸ್ಥಾನವನ್ನು ಸಾಧಿಸುವುದು ದೊಡ್ಡ ವಿಷಯ.

ಇದನ್ನೂ ಓದಿ: ವಿದೇಶದಲ್ಲಿ MBBS ಓದುವ ಭಾರತೀಯರ ಗಮನಕ್ಕೆ, ಈ ವಿಷ್ಯ ಗೊತ್ತಿಲ್ಲದಿದ್ದರೆ ಮೋಸ ಹೋಗುವುದು ಗ್ಯಾರಂಟಿ

ವೈಭವ್ ಸೂರ್ಯವಂಶಿ ಸ್ಕೂಲ್​:

ವೈಭವ್ ಬಿಹಾರದ ಸಮಷ್ಟಿಪುರ ಜಿಲ್ಲೆಯ ತಾಜ್‌ಪುರ ಗ್ರಾಮದಲ್ಲಿರುವ ಡಾ. ಮುಕ್ತೇಶ್ವರ ಸಿನ್ಹಾ ಮಾಡೆಸ್ಟಿ ಶಾಲೆಯಲ್ಲಿ 8 ನೇ ತರಗತಿಯ ವಿದ್ಯಾರ್ಥಿ. ವೈಭವ್ ಅಷ್ಟು ದೊಡ್ಡ ಸ್ಟಾರ್ ಆಗಿದ್ದರೂ, ಅವನ ಶಾಲಾ ಶುಲ್ಕಗಳು ತುಂಬಾ ಸಾಮಾನ್ಯ. ಶಾಲೆಯ ವೆಬ್‌ಸೈಟ್ ಪ್ರಕಾರ, ಅವರ ಒಟ್ಟು ವಾರ್ಷಿಕ ಶುಲ್ಕ 5,300 ರೂ. ಇದರಲ್ಲಿ ರೂ. 2100 ಬೋಧನಾ ಶುಲ್ಕ, ರೂ. 800 ಪರೀಕ್ಷಾ ಶುಲ್ಕ ಮತ್ತು ರೂ. 2400 ಚಟುವಟಿಕೆ ಶುಲ್ಕ ಸೇರಿವೆ.

ಶಿಕ್ಷಣ ಸಂಬಂಧಿತ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:02 pm, Sun, 1 June 25

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us