ಅಯೋಧ್ಯೆಯ ಜನರಿಗೆ ಅನ್ಯಾಯ ಮಾಡಿದ್ದೇ ಬಿಜೆಪಿ ಸೋಲಿಗೆ ಕಾರಣ: ಅಖಿಲೇಶ್ ಯಾದವ್

ನಿಜ ಹೇಳಬೇಕೆಂದರೆ ಉತ್ತರ ಪ್ರದೇಶದಲ್ಲಿ ಬಿಜೆಪಿ ಇನ್ನೂ ಹೆಚ್ಚಿನ ಸ್ಥಾನಗಳನ್ನು ಕಳೆದುಕೊಳ್ಳುತ್ತಿತ್ತು. ನಾನು ಅಯೋಧ್ಯೆಯ ಜನತೆಗೆ ಕೃತಜ್ಞತೆ ಸಲ್ಲಿಸುತ್ತೇನೆ. ನೀವು ಆಗಾಗ ಅಯೋಧ್ಯೆಯ ನೋವನ್ನು ನೋಡಿರಬಹುದು. ಅವರ ಜಮೀನಿಗೆ ಸೂಕ್ತ ಪರಿಹಾರ ನೀಡಿಲ್ಲ, ಅನ್ಯಾಯ ಮಾಡಿದ್ದಾರೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಹೇಳಿದ್ದಾರೆ.

ಅಯೋಧ್ಯೆಯ ಜನರಿಗೆ ಅನ್ಯಾಯ ಮಾಡಿದ್ದೇ ಬಿಜೆಪಿ ಸೋಲಿಗೆ ಕಾರಣ: ಅಖಿಲೇಶ್ ಯಾದವ್
ಅಖಿಲೇಶ್ ಯಾದವ್Image Credit source: X/ @yadavakhilesh ·
Follow us
|

Updated on: Jun 06, 2024 | 4:17 PM

ಲಖನೌ  ಜೂನ್ 06: ಉತ್ತರ ಪ್ರದೇಶದಲ್ಲಿ ತಮ್ಮ ಪಕ್ಷದ ಯಶಸ್ಸಿಗೆ ಕಾರಣರಾಗಿರುವ ಸಮಾಜವಾದಿ ಪಕ್ಷದ (Samajwadi Party) ಮುಖ್ಯಸ್ಥ ಅಖಿಲೇಶ್ ಯಾದವ್ (Akhilesh Yadav), ಫೈಜಾಬಾದ್ (ಅಯೋಧ್ಯೆ) ನಲ್ಲಿ ಬಿಜೆಪಿಯ ಆಘಾತಕಾರಿ ಸೋಲಿನ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಜನವರಿಯಲ್ಲಿ ಅಯೋಧ್ಯೆಯಲ್ಲಿ (Ayodhya) ರಾಮ ಮಂದಿರ ಉದ್ಘಾಟನೆ ನಡೆದ ಕಾರಣ ಈ ಕ್ಷೇತ್ರದಲ್ಲಿ ಬಿಜೆಪಿ (BJP) ಸುಲಭ ಗೆಲುವು ಸಾಧಿಸಲಿದೆ ಎಂದು ಚುನಾವಣಾ ಪಂಡಿತರು ಭವಿಷ್ಯ ನುಡಿದಿದ್ದರು ಆದರೆ, ಅಚ್ಚರಿಯ ಬೆಳವಣಿಗೆ ಎಂದರೆ ಚುನಾವಣಾ ಫಲಿತಾಂಶ ಪ್ರಕಟವಾದಾಗ ಅಖಿಲೇಶ್ ಯಾದವ್ ಅವರ ಪಕ್ಷ ಸಮಾಜವಾದಿ ಪಾರ್ಟಿ ಇಲ್ಲಿ ಬಿಜೆಪಿಗಿಂತ ಮೇಲುಗೈ ಸಾಧಿಸಿತು.

ನಿಜ ಹೇಳಬೇಕೆಂದರೆ ಉತ್ತರ ಪ್ರದೇಶದಲ್ಲಿ ಬಿಜೆಪಿ ಇನ್ನೂ ಹೆಚ್ಚಿನ ಸ್ಥಾನಗಳನ್ನು ಕಳೆದುಕೊಳ್ಳುತ್ತಿತ್ತು. ನಾನು ಅಯೋಧ್ಯೆಯ ಜನತೆಗೆ ಕೃತಜ್ಞತೆ ಸಲ್ಲಿಸುತ್ತೇನೆ. ನೀವು ಆಗಾಗ ಅಯೋಧ್ಯೆಯ ನೋವನ್ನು ನೋಡಿರಬಹುದು. ಅವರ ಜಮೀನಿಗೆ ಸೂಕ್ತ ಪರಿಹಾರ ನೀಡಿಲ್ಲ, ಅನ್ಯಾಯ ಮಾಡಿದ್ದಾರೆ, ಮಾರುಕಟ್ಟೆ ಬೆಲೆಗೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಿಲ್ಲ, ಅವರ ಮೇಲೆ ಸುಳ್ಳು ಕೇಸುಗಳನ್ನು ಹಾಕಿ ಬಲವಂತವಾಗಿ ಅವರ ಭೂಮಿಯನ್ನು ಕಿತ್ತುಕೊಂಡಿದ್ದೀರಿ.ಪವಿತ್ರವಾದ ವಿಷಯಕ್ಕಾಗಿ ಬಡವರನ್ನು ನಾಶ ಮಾಡಿದ್ದೀರಿ. ಅದಕ್ಕಾಗಿಯೇ ಅಯೋಧ್ಯೆ ಮತ್ತು ಅಕ್ಕಪಕ್ಕದ ಜನರು ಬಿಜೆಪಿ ವಿರುದ್ಧ ಮತ ಚಲಾಯಿಸಿದ್ದಾರೆ ಎಂದು ನಾನು ಭಾವಿಸುತ್ತೇನೆ ಎಂದು ಅಖಿಲೇಶ್ ಹೇಳಿದ್ದಾರೆ.

ಏತನ್ಮಧ್ಯೆ, ಸಮಾಜವಾದಿ ಪಕ್ಷದ ನೂತನ ಸಂಸದ ಅವಧೇಶ್ ಪ್ರಸಾದ್ ಸಿಂಗ್, ರಾಮನ ಘನತೆಯನ್ನು ನಾಶಪಡಿಸಿದ್ದರಿಂದ ಬಿಜೆಪಿ ಸೋತಿದೆ ಎಂದು ಹೇಳಿದ್ದಾರೆ. “ಭಾರತೀಯ ಜನತಾ ಪಕ್ಷ ಅಯೋಧ್ಯೆಯ ಹೆಸರಿನಲ್ಲಿ ರಾಜಕೀಯ ಮಾಡಿದೆ. ಬಿಜೆಪಿಯು ‘ಮರ್ಯಾದಾ ಪುರುಷೋತ್ತಮ ರಾಮ’ನ ಘನತೆಯನ್ನು ನಾಶಪಡಿಸಿದೆ. ಹಣದುಬ್ಬರವಿದೆ, ಅವರ (ಬಿಜೆಪಿ) ಆಡಳಿತದಲ್ಲಿ ಉದ್ಯೋಗವಿಲ್ಲ, ಅವರು ನಮ್ಮ ಯೋಧರು, ರೈತರಿಗೆ ಅಗೌರವ ಮಾಡಿದ್ದಾರೆ” ಎಂದು ಸಿಂಗ್ ಹೇಳಿದ್ದಾರೆ.

ಅವಧೇಶ್ ಪ್ರಸಾದ್ ಅವರು ಅಯೋಧ್ಯೆ ಚುನಾವಣಾ ಕ್ಷೇತ್ರದಲ್ಲಿ ಬಿಜೆಪಿಯ ಎರಡು ಬಾರಿ ಸಂಸದರಾಗಿದ್ದ ಲಲ್ಲು ಸಿಂಗ್ ಅವರನ್ನು 54,567 ಮತಗಳ ಸುಂದರ ಅಂತರದಿಂದ ಸೋಲಿಸಿದ್ದಾರೆ.

ಇದನ್ನೂ ಓದಿ: ಉತ್ತರ ಪ್ರದೇಶದ 16 ಕ್ಷೇತ್ರಗಳಲ್ಲಿ ಬಿಜೆಪಿ ದಡ ಸೇರಲು ನೆರವಾದ ಬಿಎಸ್‌ಪಿ ಅಭ್ಯರ್ಥಿಗಳು! ಹೇಗೆಂಬ ಮಾಹಿತಿ ಇಲ್ಲಿದೆ

ಸಾರ್ವತ್ರಿಕ ಚುನಾವಣೆ ಫಲಿತಾಂಶ ಹೊರಬೀಳುವ ಮುನ್ನವೇ ಬಿಜೆಪಿಯ ಭದ್ರಕೋಟೆ ಎಂದು ಪರಿಗಣಿಸಲಾಗಿದ್ದ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. 2014 ಮತ್ತು 2019ರಲ್ಲಿ ರಾಜ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದ್ದ ಬಿಜೆಪಿ 80 ಸ್ಥಾನಗಳ ಪೈಕಿ ಕೇವಲ 33ರಲ್ಲಿ ಮಾತ್ರ ಗೆಲ್ಲಲು ಸಾಧ್ಯವಾಯಿತು.

ಏತನ್ಮಧ್ಯೆ, ಅಖಿಲೇಶ್ ಯಾದವ್ ಅವರ ಚಿಕ್ಕಪ್ಪ ಶಿವಪಾಲ್ ಯಾದವ್ ಕೂಡಾ ರಾಮಮಂದಿರ ಚುನಾವಣೆಯಲ್ಲಿ ಬಿಜೆಪಿಗೆ ಲಾಭ ತಂದಕೊಡಲಿಲ್ಲ ಎಂದು ಹೇಳಿದ್ದಾರೆ. ಇಂದು ಉತ್ತರ ಪ್ರದೇಶದಲ್ಲಿ ಚುನಾವಣೆ ನಡೆದರೆ ಅಖಿಲೇಶ್ ಯಾದವ್ ನೇತೃತ್ವದ ಸರ್ಕಾ ರಚನೆಯಾಗಲಿದೆ. ಅತಿ ದೊಡ್ಡ ರಾಮ ಭಕ್ತನನ್ನು ಜನ ದಾಖಲೆಯ ಮತಗಳಿಂದ ಆಯ್ಕೆ ಮಾಡಿದ್ದಾರೆ ಎಂದು ಶಿವಪಾಲ್ ಯಾದವ್ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ