ಶಿಮ್ಲಾ: ಹಿಮಾಚಲ ಪ್ರದೇಶದ (Himachal Pradesh)ಹೋರಾಟದಲ್ಲಿ ಕಾಂಗ್ರೆಸ್ (Congress) ಮೇಲುಗೈ ಸಾಧಿಸಿದೆ. 68 ಸದಸ್ಯರ ಬಲ ಹೊಂದಿರೋ ಹಿಮಾಚಲ ಪ್ರದೇಶದಲ್ಲಿ ಅಧಿಕಾರ ಹಿಡಿಯಲು ಬೇಕಾಗಿರೋ ಮ್ಯಾಜಿಕ್ ಸಂಖ್ಯೆ 35. ಆದ್ರೆ, ಕಾಂಗ್ರೆಸ್ ಬರೋಬ್ಬರಿ 40 ಕ್ಷೇತ್ರದಲ್ಲಿ ಗೆದ್ದು ಸರಳ ಬಹುಮತ ಪಡೆದುಕೊಂಡಿದ್ದು, ಅಧಿಕಾರದ ಗದ್ದುಗೆ ಏರಲು ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ರಚನೆ ಮಾಡಲು ಕಾಂಗ್ರೆಸ್ ನಾಯಕರು ಹಿಮಾಚಲ ಪ್ರದೇಶದ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರಳೇಕರ್ ಅವರನ್ನು ಭೇಟಿ ಮಾಡಿ ಚರ್ಚಿಸಿದರು. ಮತ್ತೊಂದೆಡೆ ಹೆಚ್ಪಿಸಿಸಿ ಅಧ್ಯಕ್ಷೆ ಪ್ರತಿಭಾ ಸಿಂಗ್ ಅವರನ್ನು ಸಿಎಂ ಮಾಡುವಂತೆ ಅವರ ಅಭಿಮಾನಿಗಳಿಂದ ಕಾಂಗ್ರೆಸ್ ಕಚೇರಿ ಮುಂದೆ ದೊಡ್ಡ ಹೈಡ್ರಾಮವೇ ನಡೆದಿದೆ.
Himachal Pradesh Congress in-charge Rajiv Shukla and party observers Bhupesh Baghel and BS Hooda meet Governor Rajendra Vishwanath Arlekar at Raj Bhawan in Shimla pic.twitter.com/LoW9EuzYF0
— ANI (@ANI) December 9, 2022
ಭೂಪೇಶ್ ಬಘೇಲ್, ಭೂಪಿಂದರ್ ಸಿಂಗ್ ಹೂಡಾ ರಾಜೀವ್ ಶುಕ್ಲಾ ಅವರು ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರಳೇಕರ್ ಅವರನ್ನು ಭೇಟಿ ಮಾಡಿ ಸರ್ಕಾರ ರಚನೆ ಮಾಡುವ ಬಗ್ಗೆ ಸಮಾಲೋಚನೆ ಮಾಡಿದರು. ಆದ್ರೆ, ಯಾರು ಮುಖ್ಯಮಂತ್ರ ಅಭ್ಯರ್ಥಿ ಎನ್ನುವುದು ಮಾತ್ರ ಇನ್ನೂ ಕಗ್ಗಂಟಾಗಿಯೇ ಉಳಿದಿದೆ. ಸಿಎಂ ರೇಸ್ನಲ್ಲಿ ಅರ್ಧ ಡಜನ್ ಹೆಸರುಗಳು ಇವೆ. ಈ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಹುದ್ದೆಗೆ ಭಾರೀ ಪೈಪೋಟಿ ಶುರುವಾಗಿದೆ.
ಸಿಎಂ ರೇಸ್ನಲ್ಲಿರುವವರು
ಮುಖ್ಯಮಂತ್ರಿ ಹುದ್ದೆಗೆ ಸುಖ್ವಿಂದರ್ ಸಿಂಗ್ ಸುಖು ಹಾಗೂ ಪ್ರತಿಭಾ ಸಿಂಗ್ ಅವರ ಹೆಸರುಗಳು ಮುಂಚೂಣಿಯಲ್ಲಿವೆ. ಇವರಿಬ್ಬರಿಗೆ ಮುಕೇಶ್ ಅಗ್ನಿಹೋತ್ರಿ ಸಹ ಪೈಪೋಟಿ ನೀಡುತ್ತಿದ್ದಾರೆ. ಸುಖ್ವಿಂದರ್ ಸಿಂಗ್ ಸುಖು ಸಿಎಂ ಆಗಲು ಪ್ರತಿಭಾ ಸಿಂಗ್ ವಿರೋಧ ಇದೆ. ಇದರಿಂದ ತಮಗೆ ಸಿಎಂ ಕುರ್ಚಿ ಸಿಗದಿದ್ದರೂ ಪರವಾಗಿಲ್ಲ ತಮ್ಮ ಆಪ್ತ ಮುಕೇಶ್ ಅಗ್ನಿಹೋತ್ರಿ ಪರ ಬ್ಯಾಟಿಂಗ್ ಮಾಡುವ ಸಾಧ್ಯತೆಗಳಿವೆ. ಇನ್ನು ಈ ಮೂವರ ಮಧ್ಯೆ ಆಶಾ ಕುಮಾರಿ ಮತ್ತು ಕೌಲ್ ಸಿಂಗ್ ಠಾಕೂರ್ ಅವರೂ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಗಳಾಗಿದ್ದಾರೆ.
ಶಿಮ್ಲಾದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ
ಬಿಜೆಪಿಗೆ ತೀವ್ರ ಪೈಪೋಟಿ ನೀಡುವ ಮೂಲಕ ಹಿಮಾಚಲದಲ್ಲಿ ಗೆದ್ದು ಬೀಗಿರುವ ಕಾಂಗ್ರೆಸ್, ಇಂದು(ಡಿಸೆಂಬರ್ 09) ಶಿಮ್ಲಾದಲ್ಲಿ ಸಂಜೆ 6 ಗಂಟೆಗೆ ಶಾಸಕಾಂಗ ಪಕ್ಷದ ಸಭೆ ಕರೆದಿದೆ. ಸಭೆಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ (ಮುಖ್ಯಮಂತ್ರಿ ಅಭ್ಯರ್ಥಿ) ಆಯ್ಕೆ ನಡೆಯಲಿದ್ದು, ಯಾರು ಮುಖ್ಯಮಂತ್ರಿ ಅಭ್ಯರ್ಥಿಯಾಗಲಿದ್ದಾರೆ ಎನ್ನುವುದು ತೀವ್ರ ಕುತೂಹಲ ಮೂಡಿಸಿದೆ.
ಶಿಮ್ಲಾಗೆ ಹಿಮಾಚಲ ಕೈ ಉಸ್ತುವಾರಿಗಳ ಆಗಮನ
ಹಿಮಾಚಲ ಪ್ರದೇಶ ಸಿಎಂ ಸ್ಥಾನಕ್ಕೆ ಕೈ ಪಾಳಯದಲ್ಲಿ ಪೈಪೊಟಿ ಶುರುವಾಗಿದೆ. ಮುಖ್ಯಮಂತ್ರಿ ಹುದ್ದೆಗೆ ಐದಾರು ಹೆಸರುಗಳು ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ ಓರ್ವ ಸಿಎಂ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಹಿಮಾಚಲ ಪ್ರದೇಶ ಉಸ್ತುವಾರಿಗಳಾದ ಭೂಪೇಂದ್ರ ಬಘೆಲ್ ಹಾಗೂ ರಾಜೀವ್ ಶುಕ್ಲಾ ಶಿಮ್ಲಾಗೆ ಆಗಮಿಸಿದ್ದು, ಸಂಜೆ ನಡೆಯುವ ಶಾಸಕಾಂಗ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಅಲ್ಲದೇ ಅದಕ್ಕೂ ಮುನ್ನ ಹಿಮಚಾಲ ಪ್ರದೇಶ ಕಾಂಗ್ರೆಸ್ ಅಧ್ಯಕ್ಷೆ ಪ್ರತಿಭಾ ಸಿಂಗ್ ಹಾಗೂ ಸುಕುವಿಂದರ್ ಸುಖು ಜೊತೆ ಚರ್ಚೆ ಮಾಡಿದ್ದಾರೆ. ಇದರ ಮಧ್ಯೆ ಪ್ರತಿಭಾ ಸಿಂಗ್ ಅವರನ್ನು ಸಿಎಂ ಎಂದು ಘೋಷಿಸುವಂತೆ ಬೆಂಬಲಿಗರ ಒತ್ತಾಯಿಸುತ್ತಿದ್ದಾರೆ.
ಇದನ್ನೂ ಓದಿ: ಹಿಮಾಚಲ ಪ್ರದೇಶದಲ್ಲಿ ಬಿಜೆಪಿಗೆ ಮುಳುವಾದ ಬಂಡಾಯ; ಲೆಕ್ಕಾಚಾರ ತಪ್ಪಿಸಿದ ರೆಬೆಲ್ ಮತ
ಹೆಚ್ಪಿಸಿಸಿ ಅಧ್ಯಕ್ಷೆ ಪ್ರತಿಭಾ ಸಿಂಗ್ ಹೇಳಿದ್ದೇನು?
ಸಿಎಂ ಕುರ್ಚಿಗಾಗಿ ಪೈಪೋಟಿ ಶುರುವಾಗಿರವ ಬಗ್ಗೆ ಶಿಮ್ಲಾದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಹೆಚ್ಪಿಸಿಸಿ ಅಧ್ಯಕ್ಷೆ ಪ್ರತಿಭಾ ಸಿಂಗ್, ಹಿಮಾಚಲ ಪ್ರದೇಶದಲ್ಲಿ ವೀರಭದ್ರ ಸಿಂಗ್ ಹೆಸರಿನಲ್ಲಿ ಪಕ್ಷ ಗೆದ್ದಿದೆ. ಪಕ್ಷ ವೀರಭದ್ರ ಸಿಂಗ್ ಕುಟುಂಬವನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಸೋನಿಯಾ ಗಾಂಧಿ ನನಗೆ ಜವಾಬ್ದಾರಿ ನೀಡಿದ್ದರು. ನನ್ನನ್ನು ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದರು. ಹಿಮಾಚಲ ಪ್ರದೇಶದ ಎಲ್ಲಾ 68 ಕ್ಷೇತ್ರಗಳಿಗೆ ಭೇಟಿ ನೀಡಬೇಕು. ರಾಜ್ಯದಲ್ಲಿ ಪಕ್ಷವನ್ನು ಗೆಲ್ಲುವಂತೆ ನೋಡಿಕೊಳ್ಳಲು ಸೂಚಿಸಿದ್ದರು. ನಾನು ಆ ಕೆಲಸವನ್ನು ಅತ್ಯಂತ ಪ್ರಾಮಾಣಿಕತೆಯಿಂದ ಮಾಡಿದ್ದೇನೆ. ಅದರ ಫಲಿತಾಂಶ ಇಂದು ನಮ್ಮೆಲ್ಲರ ಮುಂದಿದೆ ಎಂದು ಪರೋಕ್ಷವಾಗಿ ತಮಗೆ ಸಿಎಂ ಸ್ಥಾನ ನೀಡಬೇಕು ಹೇಳಿದರು.
#WATCH | Himachal Pradesh Congress Chief Pratibha Virbhadra Singh’s supporters raise slogans in her support outside the Congress office in Shimla pic.twitter.com/SXe1aAalAQ
— ANI (@ANI) December 9, 2022
ಒಟ್ಟಿನಲ್ಲಿ ಸರಳ ಬಹುಮತದೊಂದಿಗೆ ಅಧಿಕಾರಕ್ಕೇರಲು ಸಜ್ಜಾಗಿರುವ ಕಾಂಗ್ರೆಸ್ನಲ್ಲಿ ಈಗ ಸಿಎಂ ಪೈಪೋಟಿ ಶುರುವಾಗಿದ್ದು, ಅವರ ಬಿಟ್ಟು, ಇವರ ಬಿಟ್ಟು ಮತ್ಯಾರು ಸಿಎಂ ಕುರ್ಚಿ ಅಲಂಕರಿಸುತ್ತಾರೆ ಎನ್ನುವುದನ್ನು ಕಾದುನೋಡಬೇಕಿದೆ.
Published On - 5:46 pm, Fri, 9 December 22