ಹಿಮಾಚಲ ಪ್ರದೇಶದಲ್ಲಿ ಬಿಜೆಪಿಗೆ ಮುಳುವಾದ ಬಂಡಾಯ; ಲೆಕ್ಕಾಚಾರ ತಪ್ಪಿಸಿದ ರೆಬೆಲ್ ಮತ

ಬಂಡಾಯವೆದ್ದ ಅಭ್ಯರ್ಥಿಗಳು ಸ್ಪರ್ಧಿಸಿದ್ದ ಕನಿಷ್ಠ ಒಂಬತ್ತು ಸ್ಥಾನಗಳನ್ನು ಬಿಜೆಪಿ ಕಳೆದುಕೊಂಡಿದೆ.ಇದರಲ್ಲಿ ಇಬ್ಬರು ಗೆದ್ದಿದ್ದಾರೆ. ಮೊದಲಿಗೆ ಡೆಹ್ರಾದಿಂದ ಹೋಶಿಯಾರ್ ಸಿಂಗ್ ಅವರು ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಬಿಜೆಪಿ ತೊರೆದಿದ್ದು, ಅವರು ಸುಮಾರು 14,000 ಮತಗಳಿಂದ ಗೆದ್ದಿದ್ದಾರೆ.

ಹಿಮಾಚಲ ಪ್ರದೇಶದಲ್ಲಿ ಬಿಜೆಪಿಗೆ ಮುಳುವಾದ ಬಂಡಾಯ; ಲೆಕ್ಕಾಚಾರ ತಪ್ಪಿಸಿದ ರೆಬೆಲ್ ಮತ
ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಪ್ರಚಾರ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Dec 09, 2022 | 8:38 AM

ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ (Himachal Pradesh Assembly Election) ಕಾಂಗ್ರೆಸ್ ಅಧಿಕಾರಕ್ಕೆ ಮರಳಿದ್ದು, ಒಂದೇ ಅವಧಿಗೆ ಒಂದು ಸರ್ಕಾರ ಎಂಬ ರಾಜ್ಯದ ದಶಕಗಳ ಹಿಂದಿನ ‘ಸಂಪ್ರದಾಯ’ವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಈ ಆವರ್ತಕ ಮಾದರಿಯನ್ನು ಮುರಿಯಲು ಬಿಜೆಪಿ(BJP) ಸಾಕಷ್ಟು ಪ್ರಯತ್ನಿಸಿತು. ಪಕ್ಷದ ಮುಖ್ಯಸ್ಥ ಜೆಪಿ ನಡ್ಡಾ ಇಲ್ಲಿ ಸುಮಾರು 50 ರ್ಯಾಲಿಗಳನ್ನು ನಡೆಸಿದರು. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಐದು ರ್ಯಾಲಿಗಳನ್ನು ನಡೆಸಿದರು, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು 20 ರ್ಯಾಲಿಗಳನ್ನು ನಡೆಸಿದರು. ಅಷ್ಟೇ ಅಲ್ಲ ಕೇಂದ್ರ ಸಚಿವ ಅನುರಾಗ್ ಠಾಕೂರ್ ಕಣ್ಣೀರು ಕೂಡಾ ಹಾಕಿದ್ದರು. ಆದರೆ ಬಂಡಾಯದಿಂದಾಗಿ ಬಿಜೆಪಿ ಸೋತಿತು. 68 ಸ್ಥಾನಗಳ ಪೈಕಿ 21ರಲ್ಲಿ ಸ್ಪರ್ಧಿಸಿದ್ದ ಪಕ್ಷದ ಬಂಡಾಯವೇ ಬಿಜೆಪಿಗೆ ಹಿನ್ನಡೆಯಾಗಿದೆ. ಬಂಡಾಯವೆದ್ದ ಅಭ್ಯರ್ಥಿಗಳು ಸ್ಪರ್ಧಿಸಿದ್ದ ಕನಿಷ್ಠ ಒಂಬತ್ತು ಸ್ಥಾನಗಳನ್ನು ಬಿಜೆಪಿ ಕಳೆದುಕೊಂಡಿದೆ.ಇದರಲ್ಲಿ ಇಬ್ಬರು ಗೆದ್ದಿದ್ದಾರೆ. ಮೊದಲಿಗೆ ಡೆಹ್ರಾದಿಂದ ಹೋಶಿಯಾರ್ ಸಿಂಗ್ ಅವರು ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಬಿಜೆಪಿ ತೊರೆದಿದ್ದು, ಅವರು ಸುಮಾರು 14,000 ಮತಗಳಿಂದ ಗೆದ್ದಿದ್ದಾರೆ. ನಾಲಗಢದಿಂದ ಕೆಎಲ್ ಠಾಕೂರ್ ಕೂಡಾ ಗೆದ್ದಿದ್ದಾರೆ. ಬಂಡಾಯಗಾರರಿಂದಾಗಿ ಮತಕ್ಕೆ ಕತ್ತರಿ ಬಿದ್ದಿದ್ದು, ಇನ್ನು ಹಲವು ಸೀಟುಗಳಲ್ಲಿ ಬಿಜೆಪಿ ಸೋತಿದೆ.

ಉದಾಹರಣೆಗೆ, ಕಿನ್ನೌರ್‌ನಲ್ಲಿ ಕಾಂಗ್ರೆಸ್‌ನ ಜಗತ್ ಸಿಂಗ್ ನೇಗಿ ಗೆದ್ದರು. ಆದರೆ ಬಿಜೆಪಿ ಬಂಡಾಯಗಾರ ತೇಜವಂತ್ ಸಿಂಗ್ ನೇಗಿ ಬಿಜೆಪಿ ಮತಗಳನ್ನು ಕಡಿತಗೊಳಿಸಿದ ಕಾರಣ ಅಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಲಾಭವಾಯಿತು. ಅದೇ ರೀತಿ ಇಂದೋರಾದಲ್ಲಿ ಕಾಂಗ್ರೆಸ್‌ನ ಮಲೇಂದರ್ ರಾಜನ್ ಗೆದ್ದಿದ್ದಾರೆ. ಇಲ್ಲಿ ಬಿಜೆಪಿ ಬಂಡಾಯಗಾರ ಮನೋಹರ್ ಧಿಮಾನ್ 4,422 ಮತಗಳನ್ನು ಪಡೆದಿದ್ದಾರೆ. ಬಂಡಾಯಗಾರರು ಪಡೆದ ಮತಗಳನ್ನೇ ನೋಡಿದರೆ ಬಿಜೆಪಿಗೆ ಎಲ್ಲಿ ಹೇಗೆ ಹೊಡೆತ ಬಿತ್ತು ಎಂಬುದನ್ನು ಊಹಿಸಬಹುದು. ಪ್ರತಿ ಕ್ಷೇತ್ರವು ಸರಾಸರಿ ಒಂದು ಲಕ್ಷಕ್ಕಿಂತ ಕಡಿಮೆ ಒಟ್ಟು ಮತಗಳನ್ನು ಹೊಂದಿರುವ ರಾಜ್ಯದಲ್ಲಿ ಬಂಡಾಯಗಾರರ ಮತಗಳು ಬಿಜೆಪಿಯ ಲೆಕ್ಕಾಚಾರಕ್ಕೆ ಬ್ರೇಕ್ ಹಾಕಿವೆ.

ಇದನ್ನೂ ಓದಿ
Image
ಹಿಮಾಚಲ ಪ್ರದೇಶದಲ್ಲಿ ಖಾತೆ ತೆರೆಯದ ಆಮ್ ಆದ್ಮಿ ಪಕ್ಷ, ಕೆಲವು ಕ್ಷೇತ್ರಗಳಲ್ಲಿ ಸಿಕ್ಕಿದ್ದು ನೋಟಾಗಿಂತಲೂ ಕಡಿಮೆ ಮತ
Image
ಭರವಸೆ ಈಡೇರಿಸಲಾಗುವುದು: ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಗೆಲುವು ನಂತರ ರಾಹುಲ್ ಗಾಂಧಿ ಭರವಸೆ
Image
Assembly Election Results 2022 ಗುಜರಾತ್​ನಲ್ಲಿ ಕಾಂಗ್ರೆಸ್ ಸೋಲು, ಹಿಮಾಚಲ ಪ್ರದೇಶದಲ್ಲಿ ಗೆಲುವು: ಇಲ್ಲಿದೆ ಖರ್ಗೆ ಮಾತು

ಬಂಡಾಯ ಸಮಸ್ಯೆಯಲ್ಲಿಯೂ ಮೂರು ಬಣಗಳಿವೆ. ಒಂದು ನಡ್ಡಾ ನೇತೃತ್ವದ್ದು. ಇನ್ನೊಂದು ಅನುರಾಗ್ ಠಾಕೂರ್ ಅವರದ್ದು. ಮೂರನೆಯದು ಮುಖ್ಯಮಂತ್ರಿ ಜೈರಾಮ್ ಠಾಕೂರ್ ಅವರದ್ದು. ಪಕ್ಷವು ರಾಜ್ಯದಲ್ಲಿ ಜೈರಾಮ್ ಠಾಕೂರ್ ಅವರನ್ನು ತಮ್ಮ ಸಿಎಂ ಅಭ್ಯರ್ಥಿ ಎಂದು ಘೋಷಿಸಿತ್ತು. ಇಲ್ಲಿ ಅನುರಾಗ್ ಠಾಕೂರ್ ಅವರನ್ನು ಸಂಭಾವ್ಯ ಸವಾಲಾಗಿ ಪರಿಗಣಿಸಲಾಯಿತು. ಅನುರಾಗ್ ಠಾಕೂರ್ ಅವರ ಅಪ್ಪ, ಮಾಜಿ ಮುಖ್ಯಮಂತ್ರಿ ಪ್ರೇಮ್ ಕುಮಾರ್ ಧುಮಾಲ್ ಅವರ ಕಠಿಣ ಪರಿಶ್ರಮವನ್ನು ಪ್ರಶಂಸಿಸಿದ ಠಾಕೂರ್ ಸಾರ್ವಜನಿಕವಾಗಿ ಕಣ್ಣೀರು ಹಾಕಿದರು. ಧುಮಾಲ್ ನಿವೃತ್ತಿ ಹೊಂದುತ್ತಿದ್ದಾರೆ ಎಂದು ಬಿಜೆಪಿ ಅವರಿಗೆ ಟಿಕೆಟ್ ಕೊಟ್ಟಿರಲಿಲ್ಲ. ಬಿಜೆಪಿಗೆ ಬಂಡಾಯಗಾರರನ್ನು ಓಲೈಸುವ ಅಗತ್ಯವಿದ್ದಲ್ಲಿ ಧುಮಾಲ್ ಅವರನ್ನು ಸಂಭಾವ್ಯ ವಿಂಗ್‌ಮ್ಯಾನ್‌ನಂತೆ ನೋಡಲಾಯಿತು. ಒಟ್ಟಾರೆಯಾಗಿ, ಕಾಂಗ್ರೆಸ್ 40 ಸ್ಥಾನಗಳನ್ನು ಗೆದ್ದಿದೆ.ಬಿಜೆಪಿಗೆ ಸಿಕ್ಕಿದ್ದು 25 ಸೀಟುಗಳು. ಆಮ್ ಆದ್ಮಿ ಪಕ್ಷ ಇಲ್ಲಿ ಖಾತೆ ತೆರೆದಿಲ್ಲ.