Gujrat Elections: ನರೇಂದ್ರ ಮೋದಿ ಮಾದರಿಯಲ್ಲಿ ‘ವಿಕ್ಟಿಂ ಕಾರ್ಡ್’ ಚಲಾಯಿಸಲು ಮುಂದಾದ ಕೇಜ್ರಿವಾಲ್

ದೆಹಲಿ ಮುಖ್ಯಮಂತ್ರಿ ಮತ್ತು ಆಪ್​ ನಾಯಕ ಅರವಿಂದ ಕೇಜ್ರಿವಾಲ್ ಅವರ ಕಾರ್ಯಶೈಲಿ ಪ್ರಧಾನಿ ನರೇಂದ್ರ ಮೋದಿಯವರಂತೆಯೇ ಇದೆ.

Gujrat Elections: ನರೇಂದ್ರ ಮೋದಿ ಮಾದರಿಯಲ್ಲಿ ‘ವಿಕ್ಟಿಂ ಕಾರ್ಡ್' ಚಲಾಯಿಸಲು ಮುಂದಾದ ಕೇಜ್ರಿವಾಲ್
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್
Follow us
TV9 Web
| Updated By: Digi Tech Desk

Updated on:Sep 02, 2022 | 12:51 PM

ಪ್ರಧಾನಿ ನರೇಂದ್ರ ಮೋದಿಯವರು ಈ ಬಾರಿ ಸ್ವಾತಂತ್ರ್ಯ ದಿನಾಚರಣೆ ವೇಳೆ ಕೆಂಪುಕೋಟೆಯಲ್ಲಿ ಬಿಜೆಪಿಯ ಮುಂದಿನ ರಾಜಕೀಯ ಹೋರಾಟದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಭ್ರಷ್ಟಾಚಾರ ಮತ್ತು ಕುಟುಂಬ ರಾಜಕಾರಣದ ವಿರುದ್ಧ ಹೋರಾಟಕ್ಕೆ ಕರೆ ನೀಡಿದ್ದಾರೆ. ಮುಂದಿನ ಚುನಾವಣೆಗಳಲ್ಲಿ ಬಿಜೆಪಿಗೆ ಎದುರಾಗಿ ನಿಂತು ತೀವ್ರ ಪ್ರತಿರೋಧ ಒಡ್ಡುವ ಸಾಧ್ಯತೆಯಿದ್ದ ಆಮ್ ಆದ್ಮಿ ಪಕ್ಷಕ್ಕೆ ‘ಭ್ರಷ್ಟ’ ಹಣೆಪಟ್ಟಿ ಕಟ್ಟಿದ್ದಾರೆ. ಉಳಿದ ಪ್ರಾದೇಶಿಕ ಪಕ್ಷಗಳ ಕುಟುಂಬ ರಾಜಕೀಯವನ್ನೇ ದೊಡ್ಡದಾಗಿಸಿ ‘ಗೆಲುವಿನ ಗೋಲ್’ ಹೊಡೆಯುವ ತಂತ್ರ ಹೂಡಿದ್ದಾರೆ.

ದೆಹಲಿ ಮುಖ್ಯಮಂತ್ರಿ ಮತ್ತು ಆಪ್​ ನಾಯಕ ಅರವಿಂದ ಕೇಜ್ರಿವಾಲ್ ಅವರ ಕಾರ್ಯಶೈಲಿ ಪ್ರಧಾನಿ ನರೇಂದ್ರ ಮೋದಿಯವರಂತೆಯೇ ಇದೆ. 2014ರ ಲೋಕಸಭಾ ಚುನಾವಣೆಯಲ್ಲಿ ‘ಗುಜರಾತ್ ಮಾಡೆಲ್’ ತೋರಿಸಿ ರಾಜಕೀಯವಾಗಿ ಯಶಸ್ಸು ಪಡೆದಂತೆಯೇ, ಅರವಿಂದ್ ಕೇಜ್ರಿವಾಲ್ ಪ್ರತಿ ಚುನಾವಣೆಯಲ್ಲಿ ‘ದೆಹಲಿ ಮಾಡೆಲ್’ ಮುಂದಿಡುತ್ತಿದ್ದಾರೆ. ಪಂಜಾಬ್ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಭರ್ಜರಿ ಗೆಲುವಿನ ಬಳಿಕ ಕೇಜ್ರಿವಾಲ್ ಹುಮ್ಮಸ್ಸು ಹೆಚ್ಚಾಗಿದೆ.‌ ರಾಷ್ಟ್ರ ರಾಜಕೀಯದಲ್ಲಿ ಮೋದಿ‌ ವಿರುದ್ಧ ನಾನೇ ಪ್ರಬಲ ಪ್ರತಿಸ್ಪರ್ಧಿ ಎಂದು ಬಿಂಬಿಸಿಕೊಳ್ಳುವ ಪ್ರಯತ್ನ ಶುರುಮಾಡಿದ್ದಾರೆ. ಅವಕಾಶ ಸಿಕ್ಕಾಗಲೆಲ್ಲ ಆಮ್ ಆದ್ಮಿ ಪಕ್ಷದ ನಾಯಕರು ಇದೇ ಘೋಷಣೆಯನ್ನು ಮುಂದಿಡುತ್ತಿದ್ದಾರೆ. ರಾಷ್ಟ್ರರಾಜಕೀಯದಲ್ಲಿ ಬಿಜೆಪಿಗೆ ಆಮ್ ಆದ್ಮಿ ಪಕ್ಷವೊಂದೇ ಪ್ರಬಲ ಪೈಪೋಟಿ ನೀಡಲಬಲ್ಲದು ಎಂಬ ಸಂದೇಶ ರವಾನೆ ಮಾಡುತ್ತಿದ್ದಾರೆ‌. ಮುಂದಿನ ಲೋಕಸಭಾ ಚುನಾವಣೆಗೂ ಮುನ್ನ ನಡೆಯಲಿರುವ ಗುಜರಾತ್ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಪ್ರದರ್ಶನ ಹೇಗಿರಲಿದೆ ಎನ್ನುವುದರ ಮೇಲೆ ಕೇಜ್ರಿವಾಲ್ ಅವರ ಭವಿಷ್ಯ ನಿರ್ಧಾರವಾಗಲಿದೆ.

ಬಿಜೆಪಿಗೆ ಪೈಪೋಟಿ ನೀಡಲು ಮುನ್ನುಗುತ್ತಿರುವ ಆಮ್ ಆದ್ಮಿ ಪಕ್ಷದ ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಜಾರಿ ನಿರ್ದೇಶನಲಾಯದ ಕಸ್ಟಡಿಯಲ್ಲಿದ್ದರೆ, ಅಬಕಾರಿ ನೀತಿ ಹಗರಣ ಆರೋಪದ‌ ಮೇಲೆ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಯಾವುದೇ ಸಮಯದಲ್ಲಿ ಬಂಧನಕ್ಕೊಳಗಾಗುವ ಆತಂಕವಿದೆ. ಆದರೆ ದೆಹಲಿಯ ಸರಕಾರ ಅಬಕಾರಿ ನೀತಿಯ ನಿಜವಾದ ‘ಮಾಸ್ಟರ್ ಮೈಂಡ್’ ಅರವಿಂದ್ ಕೇಜ್ರಿವಾಲ್ ಎಂದು ಬಿಜೆಪಿ ನಾಯಕರು ಆರೋಪಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಅರವಿಂದ್ ಕೇಜ್ರಿವಾಲ್ ಕೂಡ ಸಿಬಿಐ ಅಥವಾ ಇಡಿ ರಡಾರ್ ವ್ಯಾಪ್ತಿಗೆ ಸಿಗುವ ಸಾಧ್ಯತೆ ಇದೆ.

ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ನಡೆದ ಬಹುತೇಕ ಅದೇ ‘ಆಕ್ಷನ್ ರಿಪ್ಲೇ’ಗಳು ಅರವಿಂದ‌ ಕೇಜ್ರೀವಾಲ್ ಅವರ ರಾಜಕೀಯ ಜೀವನದಲ್ಲಿಯೂ ನಡೆಯುತ್ತಿದೆ. ಆಗಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಮತ್ತು ಅವರ ಅತ್ಯಂತ ವಿಶ್ವಾಸಾರ್ಹ ಮಿತ್ರ ಅಮಿತ್ ಶಾ ಅವರು ಕೇಂದ್ರ ತನಿಖಾ ಸಂಸ್ಥೆಗಳ ನಿರಂತರ ತನಿಖೆಗಳನ್ನು ಎದುರಿಸುತ್ತಿದ್ದರು. ಮುಖ್ಯಮಂತ್ರಿಯಾಗಿದ್ದಾಗ ನರೇಂದ್ರ ಮೋದಿ ಅವರನ್ನು ಎಂಟು ಗಂಟೆಗಳ ಕಾಲ ಪ್ರಶ್ನಿಸಲಾಗಿತ್ತು. ಪರಮಮಿತ್ರ ಅಮಿತ್ ಶಾ ಜೈಲಿಗೆ ಹೋಗಬೇಕಾಯಿತು. ಆ ಸಮಯದಲ್ಲಿ ಯುಪಿಎ ಸರ್ಕಾರ ತನ್ನ ನಾಯಕರಿಗೆ ಉದ್ದೇಶಪೂರ್ವಕವಾಗಿ ಕಿರುಕುಳ ನೀಡುತ್ತಿದೆ ಎಂದು ಬಿಜೆಪಿ ಆರೋಪಿಸುತ್ತಿತ್ತು. ಮೋದಿ ಮತ್ತು ಅಮಿತ್ ಶಾ ಅವರ ಮೇಲಿನ ಕೇಂದ್ರಿಯ ಸಂಸ್ಥೆಗಳ ಕಣ್ಗಾವಲು ಜನಪ್ರಿಯತೆಗೆ ಕಾರಣವಾಗಿತ್ತು. ಈಗ ಕೇಜ್ರಿವಾಲ್ ಮೋದಿ‌ ಸ್ಥಾನದಲ್ಲಿ ಇದ್ದು ಮನಿಶ್‌ ಸಿಸೋಡಿಯಾ ಅಮಿತ್ ಶಾ ಸ್ಥಾನದಲ್ಲಿದ್ದಾರೆ. ಅಂದು ಇಬ್ಬರು ನಾಯಕರು ಗುಜರಾತ್ ನಲ್ಲಿ ಹೂಡಿದ್ದ ಜನಪ್ರಿಯತೆ ತಂತ್ರವನ್ನೇ ಇಬ್ಬರು ಆಮ್ ಆದ್ಮಿ ಪಕ್ಷದ ನಾಯಕರು ಮರು ಚಾಲ್ತಿಗೆ ತರುತ್ತಿದ್ದಾರೆ.

ಸಧ್ಯ ನರೇಂದ್ರ ಮೋದಿ ಅವರು ಎಲ್ಲಾ ರಾಜಕೀಯ ಹೊಡೆತಗಳನ್ನು ಎದುರಿಸಿ 2014 ರಲ್ಲಿ ದೇಶದ ಪ್ರಧಾನಿ ಹುದ್ದೆಗೇರಿದರು. ಅಂದಿನಿಂದ ಇಲ್ಲಿಯವರೆಗೆ ಅವರು ದೇಶದ ಜನರ ಮೊದಲ ಆಯ್ಕೆಯಾಗುವಲ್ಲಿ ಯಶಸ್ವಿಯಾಗಿದ್ದಾರೆ. ಮೋದಿಯವರ ಮಿತ್ರ ಅಮಿತ್ ಶಾ ಪಕ್ಷದ ಅತ್ಯುನ್ನತ ಹುದ್ದೆಗೆ ಏರಿದ್ದಲ್ಲದೆ, ದೇಶದ ಗೃಹ ಸಚಿವರಾಗುವ ಮೂಲಕ ಅನೇಕ ಐತಿಹಾಸಿಕ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಗುಜರಾತ್ ಸಿಎಂ ಆಗಿದ್ದ ವೇಳೆ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ಮೇಲೆ ಅಂದಿನ ಕೇಂದ್ರ ಸರ್ಕಾರ ಕೈಗೊಂಡ ಕ್ರಮ ಅವರನ್ನು ಹೆಚ್ಚು ಜನಪ್ರಿಯಗೊಳಿಸಿತ್ತು. ‘ವಿಕ್ಟಿಂ ಕಾರ್ಡ್’ ಚಲಾಯಿಸಿ ಅದೇ ಜನಪ್ರಿಯತೆಯನ್ನು ಮೆಟ್ಟಿಲು ಮಾಡಿಕೊಂಡು ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾದ್ದರು. ಈಗ ಅರವಿಂದ್ ಕೇಜ್ರಿವಾಲ್ ಕೂಡ ಈಗ ‘ವಿಕ್ಟಿಂ ಕಾರ್ಡ್’ ಚಲಾವಣೆ ಮಾಡ್ತಿದ್ದಾರೆ. ಮೋದಿ, ಅಮಿತ್ ಶಾ ಅವರು ಅಂದು ಸಹಾನೂಭೂತಿ ಲಾಭ ಪಡೆದಂತೆ ಕೇಜ್ರಿವಾಲ್ ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆಯೇ? ಎಂಬ ಚರ್ಚೆ ಶುರುವಾಗಿದೆ.

ಮೋದಿಯನ್ನು ಅನುಕರಿಸಿದ ದೆಹಲಿ‌ ಸಿಎಂ ಕೇಜ್ರಿವಾಲ್

ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್ ಮೋದಿ‌ ಹೂಡಿದ್ದ ತಂತ್ರಗಳನ್ನೇ ಅನುಸರಿಸುತ್ತಿದ್ದಾರೆ. ಅರವಿಂದ್ ಕೇಜ್ರಿವಾಲ್ ಅವರ ಕಾರ್ಯಶೈಲಿಯು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಪಕ್ಕಾ ಹೊಂದಿಕೆಯಾಗುತ್ತದೆ. ಮೋದಿಯವರು ‘ಗುಜರಾತ್ ಮಾಡೆಲ್‌’ ಮೂಲಕ ರಾಜಕೀಯವಾಗಿ ತಮ್ಮನ್ನು ತಾವು ಬಿಂಬಿಸಿಕೊಂಡಂತೆ, ಅರವಿಂದ್ ಕೇಜ್ರಿವಾಲ್ ಪ್ರತಿ ಚುನಾವಣೆಯಲ್ಲೂ ‘ದೆಹಲಿ ಮಾಡೆಲ್‌’ ಅನ್ನು ರಾಜಕೀಯ ಮಾರುಕಟ್ಟೆಯಲ್ಲಿಟ್ಟು ಮಾರಲು ಪ್ರಯತ್ನಿಸುತ್ತಿದ್ದಾರೆ. ತಮ್ಮ ರಾಜಕೀಯ ಏಳಿಗೆಗಾಗಿ ತಮ್ಮದೇ ಪಕ್ಷದ ಹಲವು ನಾಯಕರನ್ನು ಸೈಡ್ ಲೈನ್ ಮಾಡಿದ್ದಾರೆ. ಈ ಆರೋಪ ಇಬ್ಬರು ನಾಯಕರ ಮೇಲೆ ಇದೆ. ಆಯಾ ಪಕ್ಷದಲ್ಲಿ ಇಬ್ಬರೂ ನಾಯಕರ ಸ್ಥಾನವು ಪ್ರಶ್ನಾತೀತ. ಇಡೀ ಪಕ್ಷವನ್ನೇ ಅವರು ಆವರಿಸಿಕೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು ಹಿಂದುತ್ವದ ಜತೆಗೆ ಯುವಜನತೆಗೆ ರಾಷ್ಟ್ರೀಯತೆಯ ಹುಚ್ಚು ಹಿಡಿಸುವ ಮೂಲಕ ಪ್ರತಿ ಚುನಾವಣೆಯಲ್ಲಿ ಶಕ್ತಿಯನ್ನಾಗಿ ಮಾಡಿಕೊಂಡು ಲಾಭ ಪಡೆದಿದ್ದಾರೆ. ಅದೇ ರೀತಿ ಅರವಿಂದ್ ಕೇಜ್ರಿವಾಲ್ ಕೂಡ ಎಲ್ಲದರಲ್ಲೂ ರಾಷ್ಟ್ರೀಯತೆಯನ್ನೇ ಬಂಡವಾಳ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ರಾಜ್ಯವೊಂದರ ಮುಖ್ಯಮಂತ್ರಿಯಾಗಿದ್ದರೂ ಇಡೀ ಭಾರತವನ್ನು ವಿಶ್ವದಲ್ಲಿಯೇ ನಂಬರ್ ಒನ್ ಮಾಡುವ ಯೋಜನೆಗೆ ಚಾಲನೆ ನೀಡಿದ ಭಾರತದ ಮೊದಲ ನಾಯಕ ನಾನೇ ಎಂದು ಹೇಳಿಕೊಂಡಿದ್ದಾರೆ. ನರೇಂದ್ರ ಮೋದಿಯವರಂತೆ ತ್ರಿವರ್ಣ ಧ್ವಜ ಹಾರಿಸುವ ವಿಚಾರದಲ್ಲಿ ಅಥವಾ ಹಿಂದುತ್ವದ ವಿಚಾರದಲ್ಲಿ ಎಲ್ಲೆಡೆ ನಾಯಕತ್ವ ವಹಿಸಲು ಪ್ರಯತ್ನಿಸುತ್ತಿದ್ದಾರೆ.

ಅರವಿಂದ್ ಕೇಜ್ರಿವಾಲ್ ಪ್ಲಾನ್ ವರ್ಕೌಟ್ ಆಗುತ್ತಾ..?

ಆಮ್ ಆದ್ಮಿ ಪಕ್ಷದ ನಾಯಕರನ್ನು ಕೇಂದ್ರ ತನಿಖಾ‌‌ ಸಂಸ್ಥೆಗಳು ಟಾರ್ಗೆಟ್ ಮಾಡುತ್ತಿರುವುದನ್ನು ಎತ್ತಿ ತೋರಿಸುವ ಮೂಲಕ ಅರವಿಂದ್ ಕೇಜ್ರಿವಾಲ್ ಜನರ ಸಹಾನೂಭೂತಿ ಗಿಟ್ಟಿಸಲು ನೋಡುತ್ತಿದ್ದಾರೆ. ‘ವಿಕ್ಟಿಂ‌ಂ ಕಾರ್ಡ್’ ಪ್ಲೇ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ. ಈ ಮೂಲಕ ಗುಜರಾತ್, ಹಿಮಾಚಲ ಪ್ರದೇಶದಲ್ಲಿ ಆಮ್ ಆದ್ಮಿ ಪಕ್ಷವನ್ನು ಅಗ್ರೆಸ್ಸಿವ್ ಆಗಿ ತೆಗೆದುಕೊಂಡು ಹೋಗ್ತಿದ್ದಾರೆ. ಇದೀಗ ಗುಜರಾತ್ ಚುನಾವಣಾ ಪ್ರಚಾರದ ಅಖಾಡಕ್ಕೆ ಮನೀಶ್ ಸಿಸೋಡಿಯಾ ಅವರನ್ನು ಕರೆತಂದಿದ್ದು, ಅರವಿಂದ್ ಕೇಜ್ರಿವಾಲ್ ಅವರು ಮನೀಶ್ ಸಿಸೋಡಿಯಾ ಅವರೊಂದಿಗೆ ಗುಜರಾತ್‌ನಲ್ಲಿ ಪದೇ ಪದೇ ಪತ್ರಿಕಾಗೋಷ್ಠಿಗಳನ್ನು ನಡೆಸುವ ಮೂಲಕ ಜನರನ್ನು ಸೆಳೆಯಲು ಪ್ರಯತ್ನಿಸುತ್ತಿದ್ದಾರೆ.

ಕೇಂದ್ರೀಯ ತನಿಖಾ ಸಂಸ್ಥೆಗಳು ಮೋದಿ‌, ಅಮಿತ್ ಶಾ ಅವರನ್ನು‌‌ ಟಾರ್ಗೆಟ್ ಮಾಡಿದಾಗಲೇ‌ ಅವರಿಬ್ಬರು‌ ದೊಡ್ಡ ರಾಜಕೀಯ ಶಕ್ತಿಯಾಗಿ ಹೊರಹೊಮ್ಮಿದ್ದು. ಕಾರ್ಯಕರ್ತರ ಸೈನ್ಯದ ಜತೆಗೆ ರಾಷ್ಟ್ರೀಯ ಸ್ವಯಂಸೇವಕ ಸಂಘ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರಿಗೆ ದೊಡ್ಡ ಶಕ್ತಿಯಾಗಿ ನಿಂತಿತ್ತು.‌ ಆದರೆ ಈ ವಿಚಾರದಲ್ಲಿ ಅರವಿಂದ್ ಕೇಜ್ರಿವಾಲ್ ಏಕಾಂಗಿಯಾಗಿದ್ದಾರೆ. ಅವರ ಬಳಿ ಬಿಜೆಪಿಗಿಂತ ಕಡಿಮೆ ಕಾರ್ಯಕರ್ತರ ತಂಡವಿದೆ. ರಾಷ್ಟ್ರಮಟ್ಟದಲ್ಲಿ ಅವರನ್ನು ಸಮರ್ಥಿಸಿಕೊಳ್ಳುವ ರಾಷ್ಟ್ರಮಟ್ಟದ ನಾಯಕರ ಕೊರತೆಯೂ ಇದೆ. ಭ್ರಷ್ಟಾಚಾರ ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಪುರಾವೆ ಸಿಕ್ಕರೆ ಮತ್ತು ಅವರ ನಾಯಕರ ವಿರುದ್ಧ ಕ್ರಮ ಕೈಗೊಂಡರೆ, ಆಮ್ ಆದ್ಮಿ ಪಕ್ಷಕ್ಕೆ‌ ದೊಡ್ಡ ಹೊಡೆತ ಬೀಳಲಿದೆ.

ಮೋದಿಯವರು ಈ ಬಾರಿ ಸ್ವಾತಂತ್ರ್ಯ ದಿನಾಚರಣೆ ವೇಳೆ ಕೆಂಪುಕೋಟೆಯಲ್ಲಿ ಬಿಜೆಪಿಯ ಮುಂದಿನ ರಾಜಕೀಯ ಹೋರಾಟದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಭ್ರಷ್ಟಾಚಾರ ಮತ್ತು ಕುಟುಂಬ ರಾಜಕಾರಣದ ವಿರುದ್ಧ ಹೋರಾಟಕ್ಕೆ ಕರೆ ನೀಡಿದ್ದಾರೆ. ಮುಂದಿನ ಚುನಾವಣೆಗಳಲ್ಲಿ ಬಿಜೆಪಿಗೆ ಎದುರಾಗಿ ನಿಲ್ಲುವ ಆಮ್ ಆದ್ಮಿ ಪಕ್ಷಕ್ಕೆ ‘ಭ್ರಷ್ಟ’ ಎನ್ನುವ ಹಣೆಪಟ್ಟಿ ಕಟ್ಟಿದ್ದರೆ, ಉಳಿದ ಪ್ರಾದೇಶಿಕ ಪಕ್ಷಗಳ ವಿರುದ್ಧ ಕುಟುಂಬ ರಾಜಕಾರಣದ ದಾಳ ಉರುಳಿಸಿದ್ದಾರೆ.

ವರದಿ: ಹರೀಶ್

Published On - 10:11 am, Fri, 2 September 22

ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ