ಭವಾನಿ ರೇವಣ್ಣ ಸ್ಪರ್ಧೆಯಿಂದ ಜೆಡಿಎಸ್ ಪಕ್ಷದ ಮೇಲೆ ಆಗುವ ಲಾಭ-ನಷ್ಟ
ಭವಾನಿ ರೇವಣ್ಣ ಹಾಸನ ಕ್ಷೇತ್ರದ ಟಿಕೆಟ್ಗೆ ಪಟ್ಟು ಹಿಡಿದಿರೋದು ಪಕ್ಷದ ಮೇಲೆ ಸಾಕಷ್ಟು ಪರಿಣಾಮ ಬೀರಲಿದ್ದು, ಪಕ್ಷದ ಮೇಲೆ ಆಗುವ ಲಾಭ-ನಷ್ಟದ ಲೆಕ್ಕಾಚಾರ ನಡೆದಿದೆ.
ಹಾಸನ: ಮಾಜಿ ಸಚಿವ ಹೆಚ್. ಡಿ. ರೇವಣ್ಣ ಪತ್ನಿ, ಪಂಚಾಯತ್ ಸದಸ್ಯೆ ಭವಾನಿ ರೇವಣ್ಣ ಹಾಸನದಿಂದ ಸ್ಪರ್ದಿಸೋಕೆ ಟಿಕೆಟ್ಗಾಗಿ ಪಟ್ಟು ಹಿಡಿದಿದ್ದಾರೆ. ಈ ವಿಚಾರ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಇನ್ನು ಭವಾನಿ ರೇವಣ್ಣ ಅವರಿಗೆ ಟಿಕೆಟ್ ನೀಡಲು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ನಿರಾಕರಿಸುತ್ತಿದ್ದಾರೆ. ಈ ವಿಚಾರವಾಗಿ ಕುಮಾರಸ್ವಾಮಿಯವರು ತಮ್ಮ ಪತ್ನಿಯನ್ನು ರಾಜಕೀಯಕ್ಕೆ ತರುವುದಾದರೆ ತಾನ್ಯಾಕೆ ಬೇಡ ಅನ್ನೋದು ಭವಾನಿ ರೇವಣ್ಣ ಅವರ ವರಸೆಯಾಗಿದೆ. ಈ ವಿಚಾರವಾಗಿ ರೇವಣ್ಣ ಪುತ್ರರು ಹೆಚ್.ಡಿ ಕುಮಾರಸ್ವಾಮಿ ಅವರಿಗೆ ಟಾಂಗ್ ಕೊಟ್ಟಿದ್ದಾರೆ.
ಭವಾನಿ ರೇವಣ್ಣ ಸ್ಪರ್ಧೆಯಿಂದ ಜೆಡಿಎಸ್ ಪಕ್ಷದ ಮೇಲೆ ಆಗುವ ಲಾಭ-ನಷ್ಟ
ಭವಾನಿ ರೇವಣ್ಣ ಹಾಸನ ಕ್ಷೇತ್ರದ ಟಿಕೆಟ್ಗೆ ಪಟ್ಟು ಹಿಡಿದಿರೋದು ಪಕ್ಷದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ.
1. ಜಿಲ್ಲೆಯಲ್ಲಿ ಪಕ್ಷದ ಕಾರ್ಯಕರ್ತರ ನಡುವೆ ಒಂದೇ ಕುಟುಂಬದ ಎಲ್ಲರಿಗೂ ಅದಿಕಾರಸಿಕ್ಕಿದೆ ಬೇರೆಯವರಿಗೆ ಅವಕಾಶವೇ ಇಲ್ಲವೇ ಎನ್ನುವ ಮನಸ್ಥಿತಿ ಶುರುವಾಗುತ್ತೆ.
2. ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಒಕ್ಕಲಿಗರ ಸಂಖ್ಯೆ 1.2 ಲಕ್ಷ ಇದರಲ್ಲಿ 65 ಸಾವಿರ ದಾಸಗೌಡರಿದ್ದರೆ, 50 ಸಾವಿರದಷ್ಟು ಮುಳ್ಳುಗೌಡರಿದ್ದಾರೆ ದಿವಂಗತ ಶಾಸಕ ಎಚ್.ಎಸ್.ಪ್ರಕಾಶ್ ದಾಸಗೌಡ ಜನಾಂಗದವರು ಅವರ ಮಗ ಸ್ವರೂಪ್ಗೆ ಟಿಕೆಟ್ ಕೈ ತಪ್ಪಿದರೇ ಸಹಜವಾಗಿ ದಾಸಗೌಡರ ಮತಗಳು ಗಣನೀಯವಾಗಿ ವಿಭಜನೆಯಾಗಿ ಮತ್ತೋರ್ವ ದಾಸಗೌಡ ಅಭ್ಯರ್ಥಿ ಬಿಜೆಪಿಯ ಪ್ರೀತಂಗೌಡಗೆ ಪ್ಲಸ್ ಆಗುವ ಸಾಧ್ಯತೆಯೇ ಹೆಚ್ಚು. ದಾಸಗೌಡರ ಹುಡುಗನಿಗೆ ರೇವಣ್ಣ ಕುಟುಂಬ ಅನ್ಯಾಯ ಮಾಡಿತು ಎನ್ನೋ ಅಪವಾದಕ್ಕೆ ತುತ್ತಾಗೋ ಆತಂಕವಿದೆ.
3. ರಾಜ್ಯಕ್ಕೆ ಒಂದು ಹೈಕಮಾಂಡ್ ಆದರೆ ಹಾಸನಕ್ಕೆ ರೇವಣ್ಣ ಕುಟುಂಬವೇ ಹೈಕಮಾಂಡ್ ಎನ್ನುವ ಹಣೆಪಟ್ಟಿ ಬರುತ್ತೆ.
4. ಪಕ್ಷದ ವರಿಷ್ಠ ಕುಮಾರಸ್ವಾಮಿ ಹೇಳಿದ ಬಳಿಕವೂ ಹಠಕ್ಕೆ ಬಿದ್ದರೆ ಕುಮಾರಸ್ವಾಮಿಯವರನ್ನು ಇಷ್ಟಪಡುವ ಕಾರ್ಯಕರ್ತರು ಜೆಡಿಎಸ್ದ ದೂರವಾಗುವ ಆತಂಕ ಎದುರಾಗಿದೆ.
5. ಸ್ವರೂಪ್ಗೆ ಟಿಕೇಟ್ ಕೈ ತಪ್ಪಿದರೇ ಸ್ವರೂಪ್ ಜೊತೆಗಿರುವ ಯುವಪಡೆ ಜೆಡಿಎಸ್ನಿಂದ ದೂರವಾಗುವ ಆತಂಕ.
6. ಕುಟುಂಬ ರಾಜಕಾರಣ ಎನ್ನುವ ಆರೋಪ ಪಕ್ಷಕ್ಕೆ ಮತ್ತಷ್ಟು ಅಂಟಿಕೊಳ್ಳುವ ಭೀತಿ ಇದೆ.
7 ರಾಜ್ಯ ನಾಯಕರು ಸ್ವರೂಪ್ಗೆ ಟಿಕೇಟ್ ಕೊಡಲು ಸಿದ್ದವಿದ್ದರೂ ಭವಾನಿ ಹಠದಿಂದ ಸ್ವರೂಪ್ಗೆ ಟಿಕೇಟ್ ಕೈ ತಪ್ಪಿದ ಅಪವಾದದ ಆರೋಪ ಬರಬಹುದು.
8. ಚುನಾವಣೆಗೂ ಮುನ್ನವೇ ಪಕ್ಷದಲ್ಲಿ ಟಿಕೇಟ್ ಕಚ್ಚಾಟ ಪಕ್ಷದ ವರ್ಚಸ್ಸಿಗೆ ಧಕ್ಕೆ ತರಲಿದೆ, ಪಕ್ಷದ ಕಾರ್ಯಕರ್ತರು ಗೊಂದಲಕ್ಕೆ ಸಿಲುಕುತ್ತಾರೆ.
9. ಜೆಡಿಎಸ್ ಭದ್ರಕೋಟೆಯಾಗಿರುವ ಹಾಸನದಲ್ಲಿ ಟಿಕೆಟ್ ಹಂಚಿಕೆಯ ಈ ಹೈಡ್ರಾಮ ಪಕ್ಷಕ್ಕೆ ಡ್ಯಾಮೇಜ್ ಮಾಡುತ್ತೆ. ಕಾರ್ಯಕರ್ತರ ನಡುವೆ ವಿಭಾಗವಾಗಿ ಗುಂಪುಗಳಾಗಬಹುದು.
ಹಾಸನದಿಂದ ಭವಾನಿ ರೇವಣ್ಣ ಅಭ್ಯರ್ಥಿಯಾದರೆ ಪಕ್ಷಕ್ಕಾಗುವ ಲಾಭಗಳು
1. ಹಾಸನದಿಂದ ಭವಾನಿ ರೇವಣ್ಣ ಅಭ್ಯರ್ಥಿ ಆದರೆ ಕ್ಷೇತ್ರದ ಹಾಲಿ ಶಾಸಕ ಪ್ರೀತಂಗೌಡ ವಿರುದ್ಧ ಪ್ರಭಲ ಅಭ್ಯರ್ಥಿಯಾಗಲಿದ್ದಾರೆ.
2. ಸಂಘಟನೆ, ಹಣಕಾಸು, ಚತುರತೆಯಲ್ಲಿ ನಿಪುಣನಾಗಿರುವ ಪ್ರೀತಂಗೌಡ ವಿರುದ್ಧ ಸ್ವರೂಪ್ಗಿಂತ ಭವಾನಿ ರೇವಣ್ಣ ಹೆಚ್ಚು ಸೂಕ್ತ ಅಭ್ಯರ್ಥಿ ಎನ್ನುವ ಮಾತಿದೆ.
3. ಸ್ವರೂಪ್ ಅಭ್ಯರ್ಥಿಯಾದರೆ ಈಗ ನಡೆದಿರುವ ಬೆಳವಣಿಗೆಗಳಿಂದ ರೇವಣ್ಣ ಕುಟುಂಬ ಬೆಂಬಲಿಸುವ ಎಲ್ಲರೂ ಹಿಂದೆ ಸರಿಯುತ್ತಾರೆ, ಆಗ ಪಕ್ಷಕ್ಕೆಹೆಚ್ಚು ನಷ್ಟವಾಗುತ್ತದೆ.
4. ಭವಾನಿ ರೇವಣ್ಣ ಅಭ್ಯರ್ಥಿಯಾದರೆ ಪಕ್ಷದ ಎಲ್ಲಾ ಹಂತದ ನಾಯಕರು ಒಗ್ಗಟ್ಟಿನಿಂದ ಕೆಲಸ ಮಾಡುತ್ತಾರೆ ಪಕ್ಷದ ಗೆಲುವಿಗೆ ಇದು ಸಹಕಾರಿಯಾಗುತ್ತೆ.
5. ಸಂಸದ ಪ್ರಜ್ವಲ್ ಸೇರಿ, ವಿಧಾನಪರಿಷತ್ ಸದಸ್ಯ ಸೂರಜ್, ಮಾಜಿ ಸಚಿವ ರೇವಣ್ಣರ ಬಲದಿಂದ ಭವಾನಿ ಗೆಲುವಿಗೆ ಹೆಚ್ಚು ನೆರವಾಗುತ್ತೆ.
6. ಕಳೆದುಕೊಂಡಿರೋ ಕ್ಷೇತ್ರ ಮರು ವಶಕ್ಕೆ ಪಕ್ಷದ ಕಾರ್ಯಕರ್ತರು ಬಿನ್ನಾಭಿಪ್ರಾಯ ಮರೆತು ಒಂದಾಗಬಹುದು.
7. ಜಿಲ್ಲೆಯಲ್ಲಿ ಮೊಟ್ಟ ಮೊದಲ ಮಹಿಳಾ ಅಭ್ಯರ್ಥಿಗೆ ಟಿಕೇಟ್ ಕೊಟ್ಟಿದ್ದಾರೆ ಎನ್ನುವ ವಿಚಾರ ಮಹಿಳೆಯರ ಸಂಘಟನೆಗೆ ನೆರವಾಗಬಹುದು. ಮಹಿಳೆಯರ ಮತ ಹೆಚ್ಚಾಗಿ ಜೆಡಿಎಸ್ ಕಡೆಗೆ ಬದಲಾಗಲು ಸಹಕಾರಿ ಆಗಬಹುದು.
8. ಸಂಘಟನಾ ಚತುರೆಯಾಗಿರುವ, ರಾಜಕೀಯವಾಗಿ ಸಾಕಷ್ಟು ಅನುಭವ ಹೊಂದಿರುವ ಭವಾನಿ ರೇವಣ್ಣ ಪಕ್ಷಕ್ಕೆ ಒಂದು ಒಳ್ಳೆ ಆಸ್ತಿಯಾಗಬಹುದು.
Published On - 9:23 am, Sun, 29 January 23