AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಲ್ಲಿಕಾರ್ಜುನ ಖರ್ಗೆ ಕುಟುಂಬ ಹತ್ಯೆಗೆ ಸಂಚು ಆರೋಪ: ಬಿಜೆಪಿ ಅಭ್ಯರ್ಥಿ ವಿರುದ್ಧ FIR ದಾಖಲು

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಂಬದ ಹತ್ಯೆಗೆ ಸಂಚು ಆರೋಪಿಸಿ, ಚುನಾವಣಾ ಸಿಬ್ಬಂದಿ ಕರ್ಣ ಕುಮಾರ್ ದೂರಿನ ಮೇರೆಗೆ ಚಿತ್ತಾಪುರ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್ ವಿರುದ್ಧ ಎಫ್​ಐಆರ್ (FIR)ದಾಖಲಾಗಿದೆ. ​

ಮಲ್ಲಿಕಾರ್ಜುನ ಖರ್ಗೆ ಕುಟುಂಬ ಹತ್ಯೆಗೆ ಸಂಚು ಆರೋಪ: ಬಿಜೆಪಿ ಅಭ್ಯರ್ಥಿ ವಿರುದ್ಧ FIR ದಾಖಲು
ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕ್​ ಖರ್ಗೆ
ಕಿರಣ್ ಹನುಮಂತ್​ ಮಾದಾರ್
| Edited By: |

Updated on:May 07, 2023 | 11:41 AM

Share

ಕಲಬುರಗಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆ(Mallikarjun Kharge) ಯವರನ್ನ ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋಲಿಸಿರುವ ಬಿಜೆಪಿ ನಾಯಕರು, ಈ ಬಾರಿ ಅವರ ಪುತ್ರ ಪ್ರಿಯಾಂಕ್ ಖರ್ಗೆ(Priyank Kharge)ರನ್ನು ಚಿತ್ತಾಪುರ ಕ್ಷೇತ್ರದಲ್ಲಿ ಸೋಲಿಸಲು ಪಣತೊಟ್ಟು ಕೆಲಸ ಮಾಡುತ್ತಿದ್ದಾರೆ. ಆದ್ರೆ, ಚಿತ್ತಾಪುರ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್ ಮಾತನಾಡಿದ್ದಾರೆನ್ನಲಾಗಿರುವ ಅದೊಂದು ಆಡಿಯೋ ಇದೀಗ ತೀರ್ವ ಸಂಚಲನ ಸೃಷ್ಟಿಮಾಡಿದೆ. ಈ ಕುರಿತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಂಬದ ಹತ್ಯೆಗೆ ಸಂಚು ಆರೋಪಿಸಿ, ಚುನಾವಣಾ ಸಿಬ್ಬಂದಿ ಕರ್ಣ ಕುಮಾರ್ ದೂರಿನ ಮೇರೆಗೆ ಚಿತ್ತಾಪುರ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್ ವಿರುದ್ಧ ಎಫ್​ಐಆರ್(FIR)ದಾಖಲಾಗಿದೆ. ​ಐಪಿಸಿ ಸೆಕ್ಷನ್ 504, 506ರಡಿ ದೂರು ದಾಖಲಿಸಿಕೊಂಡಿದ್ದಾರೆ.

ಹೌದು ಕಳೆದ ಕೆಲ ತಿಂಗಳಿಂದ ಖರ್ಗೆ ಕುಟುಂಬದ ಬಗ್ಗೆ ಬಹಿರಂಗವಾಗಿ ಅನೇಕ ಹೇಳಿಕೆ ನೀಡುವ ಮೂಲಕ ಸುದ್ದಿಯಲ್ಲಿದ್ದಿದ್ದು, ಜಿಲ್ಲೆಯ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್, ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಿಯಾಂಕ್ ಖರ್ಗೆ ವಿರುದ್ದ ಅನೇಕ ಆರೋಪಗಳನ್ನು ಮಾಡುವದರ ಜೊತೆಗೆ ಅವರ ವಿರುದ್ದ ತೊಡೆ ತಟ್ಟುವ ಕೆಲಸವನ್ನು ಮಾಡಿದ್ದರು. ಇದೇ ಕಾರಣದಿಂದಲೇ ಅನೇಕ ಆಕಾಂಕ್ಷಿಗಳಿದ್ದರು ಕೂಡ ಅವರೆಲ್ಲರನ್ನು ಬಿಟ್ಟು ಬಿಜೆಪಿ ಹೈಕಮಾಂಡ್, ಚಿತ್ತಾಪುರ ಕ್ಷೇತ್ರದ ಬಿಜೆಪಿ ಟಿಕೆಟ್​ನ್ನು ಮಣಿಕಂಠ ರಾಠೋಡ್​ಗೆ ನೀಡಿತ್ತು. ಈ ಹಿಂದೆ ನಾನು ಪ್ರಿಯಾಂಕ್ ಖರ್ಗೆರನ್ನು ಶೂಟ್ ಮಾಡಲು ಕೂಡಾ ಸಿದ್ದ ಅಂತ ಹೇಳಿದ್ದ ಮಣಿಕಂಠ ರಾಠೋಡ್ ವಿಡಿಯೋ ಎಲ್ಲಡೆ ವೈರಲ್ ಆಗಿತ್ತು. ಆದ್ರೆ, ಇದೀಗ ಖರ್ಗೆ ಕುಟುಂಬವನ್ನು ಸಾಪ್ ಮಾಡಿಬಿಡ್ತಿದ್ದೇ ಎಂದು ಹೇಳಿರುವ ಆಡಿಯೋವೊಂದು ದೊಡ್ಡ ಮಟ್ಟದಲ್ಲಿ ಸಂಚಲನ ಮೂಡಿಸಿದೆ.

ಇದನ್ನೂ ಓದಿ:ಚಿತ್ತಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್ ಮೇಲೆ 40 ಪ್ರಕರಣ; ಪ್ರಿಯಾಂಕ್ ಖರ್ಗೆ ಸುಳ್ಳು ಪ್ರಕರಣ ದಾಖಲು ಆರೋಪ

ಆಡಿಯೋದಲ್ಲೇನಿದೆ?

ರವಿ ಎನ್ನುವ ವ್ಯಕ್ತಿಯ ಜೊತೆ ಮಣಿಕಂಠ ರಾಠೋಡ್ ಮಾತನಾಡಿದ್ದಾನೆ ಎಂದು ಹೇಳಲಾಗುತ್ತಿರುವ ಆಡಿಯೋವನ್ನ ಕಾಂಗ್ರೆಸ್ ನಾಯಕರು ನಿನ್ನೆ(ಮೇ.6) ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ರವಿ ಅನ್ನೋನ ಜೊತೆ ಮಾತನಾಡಿದ್ದಾರೆ ಎಂದು ಹೇಳಲಾಗುತ್ತಿರುವ ಆಡಿಯೋದಲ್ಲಿ, ‘ನನ್ನ ಬಳಿ ಖರ್ಗೆ ಅವರ ನಂಬರ್ ಇಲ್ಲ, ನಂಬರ್ ಇದ್ದಿದ್ದರೆ ಅವರನ್ನು ಮತ್ತು ಅವರ ಹೆಂಡತಿ ಮಕ್ಕಳನ್ನು ಸಾಪ್ ಮಾಡ್ತೇನೆ, ಅದಕ್ಕೆ ಅವರ ನಂಬರ್ ಇಲ್ಲ ಎಂದು ಹೇಳುತ್ತಾರೆ. ಇನ್ನು ಮಣಿಕಂಠ ರಾಠೋಡ್ ಮೇಲೆ ನಲವತ್ತಕ್ಕೂ ಹೆಚ್ಚು ಕೇಸ್​‘ಗಳಿವೆ. ರೌಡಿಶೀಟರ್​ ಪಟ್ಟಿಯಲ್ಲಿರುವ ಮಣಿಕಂಠ ರಾಠೋಡ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಅವರ ಕುಟುಂಬದವರ ಹತ್ಯೆಗೆ ಸಂಚು ರೂಪಸಿದ್ದಾನೆ ಎಂದು ಆರೋಪಿಸಿದ್ದಾರೆ.

ಬೆಂಗಳೂರಿನಲ್ಲಿ ಈ ಆಡಿಯೋ ಬಿಡುಗಡೆ ಮಾಡಿರುವ ಎಐಸಿಸಿ ಕಾರ್ಯದರ್ಶಿ ರಣದೀಪ್ ಸುರ್ಜೇವಾಲಾ, ಇಂತಹದೊಂದು ಗಂಭೀರ ಆರೋಪ ಮಾಡಿದ್ದಾರೆ. ಇನ್ನು ಈ ಬಗ್ಗೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಕಲಗುರ್ತಿಯಲ್ಲಿ ಪ್ರಚಾರ ಸಭೆಯಲ್ಲಿ ಮಾತನಾಡಿರುವ ಪ್ರಿಯಾಂಕ್ ಖರ್ಗೆ ನಮ್ಮ ತಾಯಿ, ನಮ್ಮ ಮನೆಯವರು ಹತ್ಯೆಯಾಗುವಂತಹ ತಪ್ಪು ಏನು ಮಾಡಿದ್ದಾರೆ. ಇಂತಹ ಅನೇಕ ಮಣಿಕಂಠ ರಾಠೋಡ್​ರನ್ನು ನಾನು ನೋಡಿದ್ದೇನೆ. ಯಾರಿಗೂ ಹೆದರುವುದಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ:IT Raid: ಹಾವೇರಿ, ಕಲಬುರಗಿ ಜಿಲ್ಲೆಯ ಕಾಂಗ್ರೆಸ್​ ಮುಖಂಡರ ಮನೆ ಮೇಲೆ ಐಟಿ ದಾಳಿ

ಇತ್ತ ಕಾಂಗ್ರೆಸ್ ನಾಯಕರು, ಬಿಜೆಪಿ ಅಭ್ಯರ್ಥಿ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಬಗ್ಗೆ ತನಿಖೆ ಮಾಡಬೇಕು. ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ರೆ, ಇತ್ತ ಬಿಜೆಪಿ ನಾಯಕರು ಆಡಿಯೋ ಆರೋಪವನ್ನು ಅಲ್ಲಗಳೆದಿದ್ದಾರೆ. ನಕಲಿ ಆಡಿಯೋ ಇಟ್ಟುಕೊಂಡು, ಸೋಲಿನ ಭಯದಿಂದ ಈ ರೀತಿಯ ಆರೋಪ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಇನ್ನು ಸ್ವತಃ ಚಿತ್ತಾಪುರ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್, ಆಡಿಯೋ ಬಗ್ಗೆ ತನಿಖೆ ಮಾಡಬೇಕು ಎಂದು ಆಗ್ರಹಿಸಿ ಕಲಬುರಗಿ ಸೈಬರ್ ಪೊಲೀಸ್​ರಿಗೆ ದೂರು ನೀಡಿದ್ದಾನೆ.

ಪ್ರಜಾಪ್ರಭುತ್ವದಲ್ಲಿ ತಮ್ಮ ವಿಚಾರಗಳನ್ನು, ತಮ್ಮ ಪಕ್ಷದ ವಿಚಾರಗಳನ್ನು ಹೇಳಿ ಮತ ಕೇಳಬೇಕು. ಆದ್ರೆ, ಚುನಾವಣೆಯ ಸಮಯದಲ್ಲಿಯೇ ಇದೀಗ ಎಐಸಿಸಿ ಅಧ್ಯಕ್ಷ ಖರ್ಗೆ ಮತ್ತು ಅವರ ಕುಟುಂಬದ ಹತ್ಯೆಗೆ ಸಂಚು ರೂಪಿಸಿದ್ದಾರೆ ಅನ್ನೋ ವಿಚಾರ ಇದೀಗ ಗಂಭೀರ ಸ್ವರೂಪ ಪಡೆದಿದೆ. ಆದ್ರೆ, ಆಡಿಯೋ ಬಗ್ಗೆ ತನಿಖೆ ನಡೆದಾಗ ಮಾತ್ರ ಸತ್ಯಾಸತ್ಯತೆ ಗೊತ್ತಾಗಲಿದೆ.

ವರದಿ: ಸಂಜಯ್,ಟಿವಿ9 ಕಲಬುರಗಿ

ಇನ್ನಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:55 am, Sun, 7 May 23