Karnataka Assembly Election 2023: ಬಿಜೆಪಿ ಕೋರ್​ ಟೀಂ ಸಭೆ: ರಾಜಧಾನಿಯಲ್ಲಿ ಬೀಡುಬಿಟ್ಟ ಹಾಲಿ, ಮಾಜಿ ಶಾಸಕರು ಹಾಗೂ ಬೆಂಬಲಿಗರು

ಬೆಂಗಳೂರು ಉತ್ತರ ತಾಲೂಕಿನ ಆಲೂರಿನಲ್ಲಿ ಇಂದು ಮತ್ತು ನಾಳೆ (ಏ.1 ಮತ್ತು 2) ಎರಡು ದಿನ ಕಾಲ ಬಿಜೆಪಿ ಕೋರ್​ ಕಮಿಟಿ ಸಭೆ ನಡೆಯಲಿದೆ. ಸಭೆಯಲ್ಲಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಸಿದ್ಧವಾಗಿ ಕೇಂದ್ರ ನಾಯಕರ ಕೈ ಸೇರಲಿದೆ. ಹೈಕಮಾಂಡ್​​ ಅಂತಿಮ ಪಟ್ಟಿ ಸಿದ್ಧಗೊಳಿಸಿ, ಬಿಡುಗಡೆ ಮಾಡುತ್ತದೆ.

Karnataka Assembly Election 2023: ಬಿಜೆಪಿ ಕೋರ್​ ಟೀಂ ಸಭೆ: ರಾಜಧಾನಿಯಲ್ಲಿ ಬೀಡುಬಿಟ್ಟ ಹಾಲಿ, ಮಾಜಿ ಶಾಸಕರು ಹಾಗೂ ಬೆಂಬಲಿಗರು
ಕೋರ್​ ಟೀಂ ಸಭೆಗೆ ಆಗಮಿಸಿದ ಸಿಎಂ ಬೊಮ್ಮಾಯಿ
Follow us
ವಿವೇಕ ಬಿರಾದಾರ
|

Updated on:Apr 01, 2023 | 12:05 PM

ನೆಲಮಂಗಲ: ರಾಜ್ಯ ಸಾರ್ವತ್ರಿಕ ಚುನಾವಣೆ (Karnataka Assembly Election) ದಿನಾಂಕ ಘೋಷಣೆಯಾಗಿದೆ. ಪ್ರಮುಖ ಮೂರು ರಾಜಕೀಯ ಪಕ್ಷಗಳು ಅಖಾಡದಲ್ಲಿ ಗುದ್ದಾಡಲು ಸಿದ್ಧವಾಗಿವೆ. ಕಾಂಗ್ರೆಸ್ (Congress) ​ಮತ್ತು ಜೆಡಿಎಸ್ (JDS) ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಎರಡನೇ ಪಟ್ಟಿ ಬಿಡುಗಡೆಗೆ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿವೆ. ಆದರೆ ಬಿಜೆಪಿ (BJP) ವಿಭಿನ್ನವಾಗಿದ್ದು, ಹಾಲಿ, ಮಾಜಿ ಶಾಸಕರ ಮತ್ತು ಕ್ಷೇತ್ರಗಳಲ್ಲಿನ ಮುಖಂಡರ, ಪರವಾಗಿ ಅಲೆ ಹೇಗಿದೆ ಎಂದು ಪರೀಕ್ಷಿಸಿ ಕೊನೆಗೆ ಟಿಕೆಟ್​ ಫೈನಲ್​​ ಮಾಡಲಿದೆ. ಈ ಸಂಬಂಧ ನಿನ್ನೆ ವಿಧಾನಸಭಾ ಕ್ಷೇತ್ರಗಳಲ್ಲಿ ಮುಖಂಡರ ಅಗ್ನಿಪರೀಕ್ಷೆ ನಡೆದಿದ್ದು, ಕಾರ್ಯರ್ತರು, ಸ್ಥಳೀಯ ನಾಯಕರು, ತಮ್ಮ ನೆಚ್ಚಿನ ನಾಯಕರಿಗೆ ಗೌಪ್ಯ ಮತದಾನ ಮಾಡಿ ಇವರಿಗೆ ಟಿಕೆಟ್​ ನೀಡಿ ಎಂದಿದ್ದಾರೆ. ಇನ್ನು ಮತಪೆಟ್ಟಿಗೆ ರಾಜ್ಯ ನಾಯಕರ ಕೈ ತಲುಪಿದ್ದು, ಬೆಂಗಳೂರು ಉತ್ತರ ತಾಲೂಕಿನ ಆಲೂರಿನಲ್ಲಿ ಇಂದು ಮತ್ತು ನಾಳೆ (ಏ.1 ಮತ್ತು 2) ಎರಡು ದಿನ ಕಾಲ ನಡೆಯುತ್ತಿರುವ ಕೋರ್​ ಕಮಿಟಿ ಸಭೆಯಲ್ಲಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಸಿದ್ಧವಾಗಿ ಕೇಂದ್ರ ನಾಯಕರ ಕೈ ಸೇರಲಿದೆ. ಹೈಕಮಾಂಡ್​​ ಅಂತಿಮ ಪಟ್ಟಿ ಸಿದ್ಧಗೊಳಿಸಿ, ಬಿಡುಗಡೆ ಮಾಡುತ್ತದೆ. ಬೆಂಗಳೂರು ಉತ್ತರ ತಾಲೂಕಿನ ಆಲೂರಿನ ಖಾಸಗಿ ಹೋಟೆಲ್ ಇಂದಿನಿಂದ ಎರಡು ದಿನಗಳ ಕಾಲ ಬಿಜೆಪಿ ಕೋರ್​ ಕಮಿಟಿ ಸಭೆ ನಡೆಯಲಿದೆ. ಸಭೆಯಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್​​​​, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್​ ಕುಮಾರ್​ ಕಟೀಲು ಭಾಗಿಯಾಗಿದ್ದಾರೆ.

ಇದನ್ನೂ ಓದಿ: ಓರ್ವ ಶಾಸಕನ ಬಂಧನ, ಇನ್ನೊಬ್ಬರಿಗೆ ಆದಾಯಕ್ಕಿಂತ ಹೆಚ್ಚು ಆಸ್ತಿಗಳಿಕೆ ಕೇಸ್; ಇಬ್ಬರು ಶಾಸಕರ ಸಂಕಷ್ಟದ ಸ್ಟೋರಿ ಇಲ್ಲಿದೆ

ಜಿಲ್ಲಾವಾರು ಬಿಜೆಪಿ ಕೋರ್​ ಕಮಿಟಿ ಸಭೆಯಲ್ಲಿ ಸಮಾಲೋಚನೆ

ಇಂದು 20 ಜಿಲ್ಲೆಗಳ ಬಿಜೆಪಿ ಮುಖಂಡರ ಜೊತೆ ಸಭೆ ನಡೆಯಲಿದೆ. ನಾಲ್ಕು ಜಿಲ್ಲೆಗಳ ಒಂದೊಂದು ತಂಡವಾಗಿ ಒಟ್ಟು 5 ಸಭೆ ನಡೆಸಲಾಗುತ್ತದೆ

1. ತುಮಕೂರು, ಮಧುಗಿರಿ, ದಾವಣಗೆರೆ, ಚಿತ್ರದುರ್ಗ. 2. ಹುಬ್ಬಳ್ಳಿ ದಾರವಾಡ – ದಾರವಾಡ ಗ್ರಾಮಾಂತರ – ಗದಗ – ಹಾವೇರಿ 3. ಬಾಗಲಕೋಟೆ – ವಿಜಯಪುರ – ಬೆಳಗಾವಿ ನಗರ – ಗ್ರಾಮಾಂತರ 4. ಚಿಕ್ಕೋಡಿ – ರಾಯಚೂರು – ಕೊಪ್ಪಳ – ಬಳ್ಳಾರಿ 5. ವಿಜಯನಗರ – ಉತ್ತರ ಕನ್ನಡ – ಶಿವಮೊಗ್ಗ – ಚಿಕ್ಕಮಗಳೂರು

ಬೆಂಗಳೂರಲ್ಲಿ ಬೀಡು ಬಿಟ್ಟ ಶಾಸಕರು ಮತ್ತು ಬೆಂಬಲಿಗರು

ಸಿಲಿಕಾನ್​ ಸಿಟಿಯಲ್ಲಿ ಬೀಡು ಬಿಟ್ಟ ರಾಯಚೂರು ಬಿಜೆಪಿ ಶಾಸಕ ಶಿವರಾಜ್ ಪಾಟೀಲ್

ರಾಯಚೂರು ಬಿಜೆಪಿ ಶಾಸಕ ಶಿವರಾಜ್ ಪಾಟೀಲ್ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಅವಹೇಳನಕಾರಿಯಾಗಿ ಮಾತನಾಡಿರುವ 3 ನಿಮಿಷ 19 ಸೆಕೆಂಡ್​ ಆಡಿಯೋ ವೈರಲ್ ಆಗಿದ್ದು, ಈ ಸಂಬಂಧ ಶಿವರಾಜ್​ ಪಾಟೀಲ್​ ಅವರಿಗೆ ಟಿಕೆಟ್​ ಕೈ ತಪ್ಪುವ ಸಾಧ್ಯತೆ ಇದೆ. ನಿನ್ನೆ ಬಿಜೆಪಿ ಅಭಿಮತ ಸಂಗ್ರಹಣೆ ವೇಳೆ ಶಾಸಕರ ವಿರುದ್ಧ ಮತದಾನವಾಗಿತ್ತು. ಕ್ಷೇತ್ರದ ಮುಖಂಡರು ಪರ್ಯಾಯ ಅಭ್ಯರ್ಥಿಗಳ ಆಯ್ಕೆಗೆ ಸಲಹೆ ನೀಡಿದ್ದಾರೆ. ಈ ಹಿನ್ನೆಲೆ ಶಾಸಕ ಶಿವರಾಜ್ ಪಾಟೀಲ್ ಬೆಂಗಳೂರಿನಲ್ಲಿ ಬೀಡು ಬಿಟ್ಟಿದ್ದು, ಟಿಕೆಟ್​ಗಾಗಿ ಮನವಿ ಸಾಧ್ಯತೆ ಇದೆ. ಈ ವೇಳೆ ಆಡಿಯೋ ಬಗ್ಗೆ ಸ್ಪಷ್ಟನೆ ನೀಡಲಿದ್ದಾರೆ. ಇನ್ನು ಶಿವರಾಜ್ ಪಾಟೀಲ್ ಆಡಿಯೋ ಬಗ್ಗೆ ರಾಯಚೂರು ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಹೋಟೆಲ್​ ಬಳಿ ಜಮಾಯಿಸಿದ ಕುಂದಗೋಳ ಕ್ಷೇತ್ರ ಟಿಕೆಟ್​​ ಆಕಾಂಕ್ಷಿ ಬೆಂಬಲಿಗರು

ಧಾರವಾಡ ಜಿಲ್ಲೆ ಕುಂದಗೋಳ ಕ್ಷೇತ್ರದ ಟಿಕೆಟ್​ ಆಕಾಂಕ್ಷಿ ಎಂಆರ್​ ಪಾಟೀಲ್​ ಬೆಂಬಲಿಗರು ಬೆಂಗಳೂರು ಉತ್ತರ ತಾಲೂಕಿನ ಆಲೂರಿನ ಖಾಸಗಿ ಹೋಟೆಲ್ ಬಳಿ ಜಮಾಯಿಸಿದ್ದಾರೆ. ಎಂ‌ಆರ್ ಪಾಟೀಲ್‌ಗೆ ಟಿಕೆಟ್ ನೀಡುವಂತೆ ವರಿಷ್ಟರಿಗೆ ಒತ್ತಾಯಿಸಲಿದ್ದಾರೆ.

ಬೆಳಗಾವಿ ಜಿಲ್ಲಾ ಬಣ ರಾಜಕಾರಣದ ಫೈಟ್ ರಾಜಧಾನಿಗೆ ಶಿಪ್ಟ್​​​

ಬೆಳಗಾವಿ ಜಿಲ್ಲಾ ಬಣ ರಾಜಕಾರಣದ ಫೈಟ್ ರಾಜಧಾನಿಗೆ ಶಿಪ್ಟ್ ಆಗಿದೆ. ಇಂದು ಕೋರ್ ಕಮಿಟಿ ಸಭೆಯಲ್ಲಿ ರಮೇಶ್ ಜಾರಕಿಹೊಳಿ, ಲಕ್ಷ್ಮಣ ಸವದಿ ಬಣ ಬಡಿದಾಟ ಚರ್ಚೆಯಾಗಲಿದೆ. ಜಿಲ್ಲಾ ಬಿಜೆಪಿಯಲ್ಲಿ ಗುಂಪುಗಾರಿಕೆ ಇರುವುದನ್ನು ಬಾಲಚಂದ್ರ ಜಾರಕಿಹೊಳಿ ಒಪ್ಪಿಕೊಂಡಿದ್ದರು.

ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:04 pm, Sat, 1 April 23