ತಳ್ಳಾಟ ನೂಕಾಟದಿಂದ ಕೋಪಗೊಂಡ ಸಿದ್ದರಾಮಯ್ಯ, ಕಾರ್ಯಕರ್ತನಿಗೆ ಕಪಾಳಮೋಕ್ಷ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಕಾರ್ಯಕರ್ತನಿಗೆ ಕಪಾಳಮೋಕ್ಷ ಮಾಡಿದ್ದಾರೆ. ಇದೀಗ ಈ ವಿಡಿಯೋ ಫುಲ್ ವೈರಲ್ ಆಗಿದೆ.
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಕಾಂಗ್ರೆಸ್ ಕಾರ್ಯಕರ್ತನಿಗೆ(Congress Worker) ಕಪಾಳಮೋಕ್ಷ ಮಾಡಿರುವ ಪ್ರಸಂಗ ನಡೆದಿದೆ. ಮಹಿಳಾ ಕಾರ್ಯಕರ್ತೆಯನ್ನು ತಳ್ಳಿದ್ದಕ್ಕೆ ಕೋಪಗೊಂಡ ಸಿದ್ದರಾಮಯ್ಯ, ದಾವಣಗೆರೆ ಜಿಲ್ಲೆ ಹರಿಹರ ಮೂಲದ ಕಾರ್ಯಕರ್ತನಿಗೆ ಕಪಾಳಕ್ಕೆ ಹೊಡೆದಿದ್ದಾರೆ. ಈ ಬಾರಿಯೂ ಸಹ ಶಾಸಕ ರಾಮಪ್ಪ ಅವರಿಗೆ ಟಿಕೆಟ್ ನೀಡಬೇಕೆಂದು ದಾವಣಗೆರೆ ಜಿಲ್ಲೆ ಹರಿಹರ ಮೂಲದ ಕಾರ್ಯಕರ್ತರು ಇಂದು (ಮಾರ್ಚ್ 24) ಬೆಂಗಳೂರಿನ ಸಿದ್ದರಾಮಯ್ಯ ನಿವಾಸಕ್ಕೆ ಭೇಟಿ ನೀಡಿ ಆಗ್ರಹಿಸಿದರು. ಈ ವೇಳೆ ತಳ್ಳಾಟ ನೂಕಾಟದಿಂದ ಸಿಟ್ಟಿಗೆದ್ದ ಸಿದ್ದರಾಮಯ್ಯ, ಕಾರ್ಯಕರ್ತನ ಕೆನ್ನೆಗೆ ಬಾರಿಸಿದ್ದಾರೆ. ಇದೀಗ ಈ ವಿಡಿಯೋ ಫುಲ್ ವೈರಲ್ ಆಗಿದೆ.
ಇದನ್ನೂ ಓದಿ: ಕ್ಷೇತ್ರ ಗೊಂದಲ ನಡುವೆ ಸಿದ್ದರಾಮಯ್ಯ ಮತ್ತೊಂದು ಮೆಗಾ ಪ್ಲ್ಯಾನ್, ಆಪ್ತರ ಮೂಲಕ ಹೈಕಮಾಂಡ್ಗೆ ಸಂದೇಶ
ಕಾರ್ಯಕರ್ತನಿಗೆ ಸಿದ್ದರಾಮಯ್ಯ ಕಪಾಳಮೋಕ್ಷ ಮಾಡಿದ್ಯಾಕೆ?
ದಾವಣಗೆರೆ ಜಿಲ್ಲೆಯ ಹರಿಹರ ಕ್ಷೇತ್ರದ ಶಾಸಕ ರಾಮಪ್ಪ ಮತ್ತೆ ಅದೇ ಕ್ಷೇತ್ರದಿಂದ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಮುಂದಾಗಿದ್ದಾರೆ. ಇದರಿಂದ ಅವರ ಬೆಂಬಲಿಗರು ಇಂದು ಬೆಂಗಳೂರಿನ ಸಿದ್ದರಾಮಯ್ಯನವರ ನಿವಾಸಕ್ಕೆ ತೆರಳಿ ತಮ್ಮ ನಾಯಕನಿಗೆ ಟಿಕೆಟ್ ನೀಡಬೇಕೆಂದು ಒತ್ತಾಯಿಸಿದ್ದಾರೆ. ಈ ವೇಳೆ ರಾಮಪ್ಪ ಬೆಂಬಲಿಗರನ್ನು ಸಮಾಧಾನಗೊಳಿಸಲು ಯತ್ನಿಸಿದ ಸಿದ್ದರಾಮಯ್ಯ, ಟಿಕೆಟ್ ಆಮೇಲೆ ನೋಡೋಣ, ಸರ್ವೆ ರಿಪೋರ್ಟ್ ಬರಲಿ ಎಂದಿದ್ದಾರೆ.
ಆದರೂ ಸುಮ್ಮನಾಗದ ಶಾಸಕ ರಾಮಪ್ಪ ಅಭಿಮಾನಿಗಳು ಸಿದ್ದರಾಮಯ್ಯ ಅವರನ್ಜು ಸುತ್ತುವರೆದರು. ಈ ವೇಳೆ ತಳ್ಳಾಟ ಹಾಗೂ ನೂಕಾಟ ಉಂಟಾಗಿದೆ. ತಮ್ಮ ನಾಯಕನಿಗೇ ಕಾಂಗ್ರೆಸ್ ಟಿಕೆಟ್ ನೀಡಬೇಕೆಂದು ಪಟ್ಟು ಹಿಡಿದರು. ಇದರಿಂದ ಭಾರೀ ತಳ್ಳಾಟ ಹಾಗೂ ನೂಕಾಟ ಉಂಟಾಗಿದ್ದು, ಈ ಸಂದರ್ಭದಲ್ಲಿ ಮಹಿಳಾ ಕಾರ್ಯಕರ್ತೆಯನ್ನು ತಳ್ಳಿದ್ದಕ್ಕೆ ಕೋಪಗೊಂಡ ಸಿದ್ದರಾಮಯ್ಯ, ಕಾರ್ಯಕರ್ತನೋರ್ವನ ಕಾಪಾಳಕ್ಕೆ ಹೊಡೆದಿದ್ದಾರೆ.
Published On - 12:37 pm, Fri, 24 March 23