ಅಧಿಕಾರಕ್ಕೆ ಬರಲು ವೀರಶೈವ ಲಿಂಗಾಯತ ಸಮುದಾಯನ್ನು ಮೆಟ್ಟಿಲಾಗಿಸಿಕೊಂಡು ಮರೆತ ಕಾಂಗ್ರೆಸ್​: ಬಿವೈ ವಿಜಯೇಂದ್ರ ಕಿಡಿ

ಅಧಿಕಾರಕ್ಕೆ ಬರಲು ವೀರಶೈವ ಲಿಂಗಾಯತ ಸಮುದಾಯವನ್ನು ಕಾಂಗ್ರೆಸ್ ಮೆಟ್ಟಿಲಾಗಿಸಿಕೊಂಡು ಈಗ ಮರೆತಿದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ, ಶಾಸಕ ಬಿ.ವೈ.ವಿಜಯೇಂದ್ರ ಟ್ವೀಟ್​  ಮಾಡುವ ಮೂಲಕ ಕಿಡಿಕಾರಿದ್ದಾರೆ.

ಅಧಿಕಾರಕ್ಕೆ ಬರಲು ವೀರಶೈವ ಲಿಂಗಾಯತ ಸಮುದಾಯನ್ನು ಮೆಟ್ಟಿಲಾಗಿಸಿಕೊಂಡು ಮರೆತ ಕಾಂಗ್ರೆಸ್​: ಬಿವೈ ವಿಜಯೇಂದ್ರ ಕಿಡಿ
ಬಿ.ವೈ.ವಿಜಯೇಂದ್ರ

Updated on: May 19, 2023 | 3:26 PM

ಬೆಂಗಳೂರು: ಅಧಿಕಾರಕ್ಕೆ ಬರಲು ವೀರಶೈವ ಲಿಂಗಾಯತ ಸಮುದಾಯ (veerashaiva Lingayat community) ವನ್ನು ಕಾಂಗ್ರೆಸ್ ಮೆಟ್ಟಿಲಾಗಿಸಿಕೊಂಡು ಈಗ ಮರೆತಿದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ, ಶಾಸಕ ಬಿ.ವೈ.ವಿಜಯೇಂದ್ರ ಟ್ವೀಟ್​  ಮಾಡುವ ಮೂಲಕ ಕಿಡಿಕಾರಿದ್ದಾರೆ. ವೀರಶೈವ ಲಿಂಗಾಯತ ಸಮುದಾಯದ ಹಿರಿಯ ನಾಯಕರೂ ಮೌನ ತಾಳಿದ್ದು, ವೀರಶೈವ ಲಿಂಗಾಯತ ಸಮುದಾಯದ 39 ಶಾಸಕರು ಗೆದ್ದಿದ್ದರೂ ಉನ್ನತ ಸ್ಥಾನ ಕೇಳುವಲ್ಲಿ ಗಟ್ಟಿ ಧ್ವನಿ ಕೇಳಿಸುತ್ತಿಲ್ಲ. ಈಗ ಕಾಂಗ್ರೆಸ್ ಪಕ್ಷದ ಮುಖವಾಡ ಶಾಶ್ವತವಾಗಿ ಕಳಚಿ ಬಿದ್ದಿದೆ. ಸಮುದಾಯವನ್ನು ಕಾಂಗ್ರೆಸ್​ ರಾಜಕೀಯವಾಗಿ ಬಳಸಿಕೊಂಡಿದೆ ಎಂದು ಹೇಳಿದರು.

ಲಿಂಗಾಯತ ಸಮುದಾಯಕ್ಕೆ ನ್ಯಾಯ ಕೊಡದೆ ವಂಚಿಸಿದೆ. ಕರ್ನಾಟಕದ ಜನತೆಗೆ ಶೀಘ್ರದಲ್ಲೇ ಕಾಂಗ್ರೆಸ್​ನ ಸುಳ್ಳುಗಳ ಅರಿವಾಗಲಿದೆ. ಬಿಜೆಪಿ ಒಂದೇ ಎಲ್ಲಾ ಸಮುದಾಯಗಳಿಗೂ ನ್ಯಾಯ ಒದಗಿಸಿದೆ. ಬಸವಣ್ಣನ ಆಶಯಗಳಿಗೆ ತಕ್ಕಂತೆ ನ್ಯಾಯ ಒದಗಿಸುವ ಪಕ್ಷವಾಗಿದೆ. ರಾಜ್ಯದ ಜನತೆ ಮತ್ತೆ ಬಿಜೆಪಿಯನ್ನು ಬೆಂಬಲಿಸುವ ವಿಶ್ವಾಸ ಇದೆ ಎಂದಿದ್ದಾರೆ.

ಇದನ್ನೂ ಓದಿ: Vijayanand Kashappanavar; ಲಿಂಗಾಯತ ಸಮುದಾಯಕ್ಕೆ ಉಪಮುಖ್ಯಮಂತ್ರಿ ಸ್ಥಾನ ಬೇಕು, ನಾನೂ ಸಚಿವ ಸ್ಥಾನದ ಆಕಾಂಕ್ಷಿ: ವಿಜಯಾನಂದ ಕಾಶಪ್ಪನವರ್

ಡಿ.ಕೆ.ಶಿವಕುಮಾರ್ ನಿವಾಸಕ್ಕೆ ಬೋವಿ ಸಮಾಜದ ಸ್ವಾಮೀಜಿ ಭೇಟಿ

ನಿಯೋಜಿತ ಡಿಸಿಎಂ ಡಿ.ಕೆ.ಶಿವಕುಮಾರ್ ನಿವಾಸಕ್ಕೆ ಬೋವಿ ಸಮಾಜದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಭೇಟಿ ನೀಡಿ ಅಭಿನಂದನೆ ಸಲ್ಲಿಸಿದ್ದಾರೆ. ಈ ವೇಳೆ ಬೋವಿ ಸಮುದಾಯದ ಶಾಸಕರಿಗೆ ಸಂಪುಟದಲ್ಲಿ ಸ್ಥಾನ ನೀಡುವಂತೆ ಮನವಿ ಮಾಡಿದ್ದಾರೆ. ನಮ್ಮ ಸಮುದಾಯದಿಂದ 3 ಜನ ಶಾಸಕರಿದ್ದಾರೆ. ಹೀಗಾಗಿ ಸಚಿವ ಸ್ಥಾನ ಕೊಡುವಂತೆ ಕೇಳಿದ್ದೇನೆ.

ಇದನ್ನೂ ಓದಿ: ಖಾತೆ ಕ್ಯಾತೆ ಶುರು: ತಮ್ಮ ಸಮುದಾಯದ ಶಾಸಕರ ಪರ ಸ್ವಾಮೀಜಿಗಳ ಬ್ಯಾಟಿಂಗ್

ಬಸವಣ್ಣನವರ ಪಾಲನೆ ಸಂಪುಟದಲ್ಲಿ ಹಾಗಬೇಕು. ಸಾಮಾಜಿಕ ನ್ಯಾಯದಡಿ ನಮ್ಮ ಸಮುದಾಯಕ್ಕೂ ಮಂತ್ರಿಗಿರಿ ಕೊಡಬೇಕು. ಸಾಮಾಜಿಕ ನ್ಯಾಯದಡಿ ಕೊಡುತ್ತೇವೆ ಅಂತಾ ಡಿಕೆ ಶಿವಕುಮಾರ್ ಹೇಳಿದ್ದಾರೆ. ಸಚಿವ ಸ್ಥಾನ ಕೊಡುವ ವಿಶ್ವಾಸವಿದೆ. ನಮ್ಮ ಸಮುದಾಯದ ಪರವಾಗಿ ಸ್ವಾಮೀಜಿಗಳು ಕೇಳುವುದು ತಪ್ಪಿಲ್ಲ ಎಂದರು.

ಕಾಂಗ್ರೆಸ್ ಹೈಕಮಾಂಡ್‌ಗೆ ಈಗ ಲಿಂಗಾಯತ ‌ಸ್ವಾಮೀಜಿ ಒತ್ತಡ

ಸಿಎಂ ಸ್ಥಾನವನ್ನು ನಮ್ಮ ಸಮುದಾಯದವರಿಗೆ ನೀಡಬೇಕು ಎಂದು ಸ್ವಾಮೀಜಿಗಳು ಕಾಂಗ್ರೆಸ್​ ಹೈ ಕಮಾಂಡ್​ಗೆ ಒತ್ತಾಯ ಮಾಡಿದ್ದವು. ಒಕ್ಕಲಿಗ, ಕುರುಬ ಮತ್ತು ಲಿಂಗಾಯತ ‌ಸ್ವಾಮೀಜಿ ಕೂಡ ಒತ್ತಡ ಹಾಕಿದ್ದರು. ಲಿಂಗಾಯತ ಸಮುದಾಯಕ್ಕೆ ಸಿಎಂ ಹುದ್ದೆ ನೀಡುವಂತೆ ಎಂ.ಬಿ.ಪಾಟೀಲ್ ಪರ‌ ನಾಗನೂರು ರುದ್ರಾಕ್ಷಿಮಠದ ಡಾ. ಅಲ್ಲಮಪ್ರಭು ಸ್ವಾಮೀಜಿ ಬೇಡಿಕೆ ಇಟ್ಟಿದ್ದರು. ಈ ಕುರಿತಾಗಿ ವಿಡಿಯೋ ಹೇಳಿಕೆ ಒಂದನ್ನು ಸಹ ಬಿಡುಗಡೆ ಮಾಡಿದ್ದರು.

ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:25 pm, Fri, 19 May 23

Gangadhar Saboji

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More
Follow Us