ಜಗದೀಶ್ ಶೆಟ್ಟರ್ ಸೋಲಿಸಲು ಹುಬ್ಬಳ್ಳಿಗೆ ನಾಗಪುರ ತಂಡ ಆಗಮನ: ಬಿಜೆಪಿಗೆ ಟಾಂಗ್ ಕೊಟ್ಟ ಮಾಜಿ ಸಿಎಂ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಕೂಡಲ ಸಂಗಮಕ್ಕೆ ಹೋಗುವ ಹಿನ್ನಲೆ ಹುಬ್ಬಳ್ಳಿ ಏರಪೋರ್ಟ್ಗೆ ಬಂದಿದ್ದರು. ಹಲವು ವಿಷಯಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ಲಿಂಗಾಯತ ಸಮುದಾಯ ವಿಚಾರದ ಬಗ್ಗೆಯೂ ಚರ್ಚೆ ಆಗಿದೆ. ನಾಳೆ ಹಾನಗಲ್ ಪ್ರಚಾರಕ್ಕೆ ಆಹ್ವಾನಿಸಿದ್ದಾರೆ, ನಾನು ಹೋಗುತ್ತೇನೆ ಎಂದು ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ (Congress) ನಾಯಕ ಜಗದೀಶ್ ಶೆಟ್ಟರ್ (Jagadish Shettar) ಅವರನ್ನು ಸೋಲಿಸಲು ಬಿಜೆಪಿ (BJP) ರಣತಂತ್ರಗಳನ್ನು ಎಣೆಯುತ್ತಿದೆ. ಅಲ್ಲದೇ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರ ಮೇಲೆ ಕಣ್ಣಿಡಲು ನಾಗಪುರದಿಂದ ತಂಡ ಆಗಮಿಸಿದೆ ಎನ್ನಲಾಗುತ್ತಿದೆ. ಈ ವಿಚಾರವಾಗಿ ಮಾತನಾಡಿದ ಜಗದೀಶ್ ಶೆಟ್ಟರ್ ಅವರು ಹೊರಗಿನವರು ಸಕ್ಸಸ್ಫುಲ್ ಆಗಿ ಚುನಾವಣೆ ಮಾಡಲು ಆಗಲ್ಲ. ಹೊರಗಿನವರು ಬಂದು ಸ್ಟಡಿ ಮಾಡಲು ಸಾಧ್ಯವಿಲ್ಲ. ನಾಗಪುರದಿಂದ ವಿಶೇಷ ತಂಡ ಬಂದಿದೆಯೋ ಇಲ್ಲವೋ ಗೊತ್ತಿಲ್ಲ. ನಾಗಪುರದಲ್ಲಿ ಬಿಜೆಪಿಯವರು ಪದವೀಧರ ಚುನಾವಣೆಯಲ್ಲಿ ಯಾಕೆ ಸೋತರು? ಎಂದು ಬಿಜೆಪಿ ನಾಯಕರಿಗೆ ಪ್ರಶ್ನಿಸಿದ್ದಾರೆ.
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಸ್ವಾಗತಿಸಿ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಕೂಡಲ ಸಂಗಮಕ್ಕೆ ಹೋಗುವ ಹಿನ್ನಲೆ ಹುಬ್ಬಳ್ಳಿ ಏರಪೋರ್ಟ್ಗೆ ಬಂದಿದ್ದರು. ಹಲವು ವಿಷಯಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ಲಿಂಗಾಯತ ಸಮುದಾಯ ವಿಚಾರದ ಬಗ್ಗೆಯೂ ಚರ್ಚೆ ಆಗಿದೆ. ನಾಳೆ ಹಾನಗಲ್ ಪ್ರಚಾರಕ್ಕೆ ಆಹ್ವಾನಿಸಿದ್ದಾರೆ, ನಾನು ಹೋಗುತ್ತೇನೆ ಎಂದು ತಿಳಿಸಿದರು.
ಇದನ್ನೂ ಓದಿ: ಧಾರವಾಡ ಜಿಲ್ಲೆಯಲ್ಲಿ ಮತ್ತೋರ್ವ ಪ್ರಭಾವಿ ಬಿಜೆಪಿ ನಾಯಕನನ್ನು ಸೆಳೆದ ಕಾಂಗ್ರೆಸ್, ವಿನಯ್ ಕುಲಕರ್ಣಿಗೆ ಕೊಂಚ ರಿಲೀಫ್
ನಾನು ನನ್ನ ರಾಜಕಾರಣದಲ್ಲಿ ನೆಗೆಟಿಪ್ ಕ್ಯಾಂಪೇನ್ ಎದುರಿಸಿದ್ದೇನೆ. ಸಾಮಾಜಿಕ ಜಾಲತಾಣದಲ್ಲಿ ಬರೆದರೇ ಏನ ಆಗಲ್ಲ. ಅಲ್ತಾಫ್ ಕಿತ್ತೂರ ಬಂಡಾಯವೆದ್ದಿರುವ ವಿಚಾರವಾಗಿ ಮಾತನಾಡಿದ ಅವರು ಅವರ ಜೊತೆ ನಾನು ಮಾತನಾಡುತ್ತೇನೆ, ವರಿಷ್ಠರು ಮಾತನಾಡುತ್ತಾರೆ. ಜನರ ಆಶೀರ್ವಾದ ನನ್ನ ಮೇಲೆ ಇದೆ ಎಂದರು.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:55 pm, Sun, 23 April 23