ಬೆಂಗಳೂರು: ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಗೆ (Karnataka Assembly Elction 2023) ಇನ್ನೇನು ಐದಾರು ತಿಂಗಳು ಬಾಕಿ ಇದ್ದು, ಕಾಂಗ್ರೆಸ್ (Congress) ಸರ್ವಸನ್ನದ್ಧವಾಗಿದೆ. ಸಿದ್ದರಾಮೋತ್ಸವ ಬಳಿಕ ರಣೋತ್ಸಾಹದಲ್ಲಿರುವ ಅದರಲ್ಲೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಅದೇ ಜೋಷ್ನಲ್ಲಿ ಬಸ್ಯಾತ್ರೆಗೆ (siddaramaiah Bus Yatra) ಮುಹೂರ್ತ ಫಿಕ್ಸ್ ಮಾಡಿದ್ದು, ಇದೇ ಜನವರಿ 3ರಿಂದ ಸಿದ್ದರಾಮಮಯ್ಯನವರ ಬಸ್ ಯಾತ್ರೆ ಆರಂಭವಾಗಲಿದೆ.
ಬಸವಕಲ್ಯಾಣದಿಂದ ಆರಂಭವಾಗಲಿರುವ ಸಿದ್ದು ಬಸ್ ಯಾತ್ರೆ, ಉತ್ತರ ಕರ್ನಾಟಕದ ಪ್ರಮುಖ10ರಿಂದ 12 ಜಿಲ್ಲೆಗಳಲ್ಲಿ ಸಂಚರಿಸಲಿದೆ. ಈ ಹಿಂದೆ ಲಿಂಗಾಯತ ಧರ್ಮ ವಿಭಜಕ ಎಂಬ ಹಣೆ ಪಟ್ಟಿ ಹೋಗಲಾಡಿಸಲು ಬಸವಕಲ್ಯಾಣದ ಅನುಭವ ಮಂಟಪದಿಂದಲೇ ಆರಂಭಿಸಲಿದ್ದಾರೆ. ಇದಕ್ಕೆ ಈಗಾಗಲೇ ಹೈಟೆಕ್ ಬಸ್ ಸಿದ್ಧವಾಗಿದೆ.
ಸಿದ್ದರಾಮಯ್ಯ ಉತ್ತರ ಕರ್ನಾಟಕದಿಂದ ಪ್ರಾರಂಭ ಮಾಡಿದರೆ ಡಿ.ಕೆ.ಶಿವಕುಮಾರ್ ದಕ್ಷಿಣ ಕರ್ನಾಟಕ ಭಾಗದಿಂದ ಬಸ್ ಯಾತ್ರೆ ಮಾಡುವ ಸಾಧ್ಯತೆ ಇದ್ದು, ಇದಕ್ಕೆ ಈಗಾಗಲೇ ಹೈಟೆಕ್ ಬಸ್ ಸಹ ರೆಡಿಯಾಗಿದೆ. ಆದ್ರೆ, ಸದ್ಯ ವಿದೇಶ ಪ್ರವಾಸದಲ್ಲಿ ಡಿಕೆ ಶಿವಕುಮಾರ್ ಕೂಡ ಜನವರಿಯಲ್ಲಿ ತಮ್ಮ ಬಸ್ ಯಾತ್ರೆ ಶುರುಮಾಡುವ ಸಾಧ್ಯತೆಗಳಿವೆ.
ಚಿತ್ರದುರ್ಗದಲ್ಲಿಐಕ್ಯತಾ ಸಮಾವೇಶ
ಬಿಜೆಪಿಯ ನವಶಕ್ತಿ ಸಮಾವೇಶಕ್ಕೆ ಪ್ರತಿಯಾಗಿ ಐಕ್ಯತಾ ಸಮಾವೇಶ ನಡೆಸಲು ಕಾಂಗ್ರೆಸ್ ನಿರ್ಧರಿಸಿದೆ. ಮೊದಲಿಗೆ ಜನವರಿ 6ರಂದು ಚಿತ್ರದುರ್ಗದಲ್ಲಿಸಮಾವೇಶ ಆಯೋಜಿಸಲು ಭಾನುವಾರ ಡಾ ಜಿ ಪರಮೇಶ್ವರ್ ಕರೆದಿದ್ದ ಹಿರಿಯ ಕಾಂಗ್ರೆಸಿಗರ ಸಭೆ ನಿರ್ಧರಿಸಿದೆ. ಆ ಬಳಿಕ ಬೆಂಗಳೂರಿನಲ್ಲಿ ಮತ್ತೊಂದು ಐಕ್ಯತಾ ಸಮಾವೇಶ ನಡೆಸಲು ಬಯಸಲಾಗಿದೆ.
ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿನಡೆಯಲಿರುವ ವಿಧಾನಮಂಡಲ ಅಧಿವೇಶನದ ಮಧ್ಯೆ ಬಿಡುವಿನ ದಿನದಂದು ಶಿವಮೊಗ್ಗದಲ್ಲಿ ಹಿಂದುಳಿದ ವರ್ಗಗಳ ಸಮಾವೇಶ ಆಯೋಜಿಸಲಾಗುತ್ತಿದ್ದು, ನಂತರ ಚಿತ್ರದುರ್ಗದಲ್ಲಿ ಪರಿಶಿಷ್ಟ ಪಂಗಡವನ್ನು ಗುರಿಯಾಗಿಸಿಕೊಂಡು ಐಕ್ಯತಾ ಸಮಾವೇಶವನ್ನು ನಡೆಸಲಾಗುತ್ತಿದೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 3:36 pm, Fri, 9 December 22