ಪದ್ಮನಾಭ ನಗರದ ಕಾಂಗ್ರೆಸ್​ ಬಿ ಫಾರಂ ಎಕ್ಸ್​ಕ್ಲೂಸಿವ್ ಮಾಹಿತಿ, ಟಿಕೆಟ್​ ಹಂಚಿಕೆಯಲ್ಲಿ ಮತ್ತೆ ಟ್ವಿಸ್ಟ್ ಕಾದಿದ್ಯಾ?

ಕನಕಪುರಕ್ಕೆ ಬಂದ ಆರ್ ಅಶೋಕ್​ ಕಟ್ಟಿಹಾಕಲು ಡಿಕೆ ಶಿವಕುಮಾರ್​ ರಣತಂತ್ರ ಹೆಣೆದಿದ್ದಾರೆ. ಪದ್ಮನಾಭ ನಗರದ ಕಾಂಗ್ರೆಸ್​ ಬಿ ಫಾರಂ ಎಕ್ಸ್​ಕ್ಲೂಸಿವ್ ಮಾಹಿತಿ ಇಲ್ಲಿದೆ.

ಪದ್ಮನಾಭ ನಗರದ ಕಾಂಗ್ರೆಸ್​ ಬಿ ಫಾರಂ ಎಕ್ಸ್​ಕ್ಲೂಸಿವ್ ಮಾಹಿತಿ, ಟಿಕೆಟ್​ ಹಂಚಿಕೆಯಲ್ಲಿ ಮತ್ತೆ ಟ್ವಿಸ್ಟ್ ಕಾದಿದ್ಯಾ?

Updated on: Apr 18, 2023 | 10:10 AM

ಬೆಂಗಳೂರು: ಈ ಬಾರಿಯ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ (Karnataka Assembly Elections 2023) ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್(DK Shivakumar) ಅವರನ್ನು ಕಟ್ಟಿಹಾಕಲು ಬಿಜೆಪಿ(BJPP ಭರ್ಜರಿ ಪ್ಲ್ಯಾನ್ ಮಾಡಿದೆ. ಅದರಂತೆ ಬಿಜೆಪಿಯ ಇಬ್ಬರು ಪ್ರಭಾವಿ ನಾಯಕರಾದ ವಿ. ಸೋಮಣ್ಣ ಹಾಗೂ ಆರ್ ಅಶೋಕ್ (R Ashok) ಅವರನ್ನು ಎರಡು ಕ್ಷೇತ್ರಗಳಲ್ಲಿ ಕಣಕ್ಕಿಳಿಸಿದೆ. ಡಿಕೆ ಶಿವಕುಮಾರ್​ ವಿರುದ್ಧ ಕನಕಪುರದಲ್ಲಿ (Kanakapura) ಅಶೋಕ್ ಸ್ಪರ್ಧೆ ಮಾಡಿದರೆ, ಸಿದ್ದರಾಮಯ್ಯ ವಿರುದ್ಧ ವರುಣಾದಲ್ಲಿ ಸೋಮಣ್ಣ ಅಖಾಡಕ್ಕಿಳಿದಿದ್ದಾರೆ. ಆದರೆ ಇದೇ ಸಂದರ್ಭದಲ್ಲಿ ಬಿಜೆಪಿಗೆ ತಿರುಗೇಟು ನೀಡಲು ಕಾಂಗ್ರೆಸ್ ಕೂಡಾ ಚಿಂತನೆ ನಡೆಸುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ಈಗಾಗಲೇ ಪದ್ಮನಾಭ ನಗರದ(Padmanabhanagar) ಕಾಂಗ್ರೆಸ್​ ಅಭ್ಯರ್ಥಿಗೆ ನೀಡಲಾಗಿದ್ದ ಬಿ ಫಾರಂ ಅನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಾಪಸ್ ಪಡೆದುಕೊಂಡಿದ್ದಾರೆ. ಇದು ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿದೆ. ಟಿಕೆಟ್ ಹಂಚಿಕೆಯಲ್ಲಿ ಮತ್ತೆ ಟ್ವಿಸ್ಟ್ ಕಾದಿದೆಯಾ? ಪದ್ಮನಾಭ ನಗರದ ಬಿ ಫಾರಂ ವಿತರಣೆಯ ಎಕ್ಸಕ್ಲೂಸಿವ್ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: Karnataka Assembly Elections 2023: ಪದ್ಮನಾಭನಗರದಲ್ಲಿ ಆರ್ ಅಶೋಕ್ ಸೋಲಿಸಲು ಡಿಕೆ ಶಿವಕುಮಾರ್ ಸರ್ವ ತಂತ್ರ

ಪದ್ಮನಾಭನಗರದಲ್ಲಿ ಆರ್‌. ಅಶೋಕ್ ವಿರುದ್ಧ ರಘುನಾಥ ನಾಯ್ಡು ಅವರು ಕಾಂಗ್ರೆಸ್ ಅಭ್ಯರ್ಥಿ ಆಗಿದ್ದು. ಅವರಿಗೆ ಗುರುವಾರ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸ್ವಲ್ಪ ಹೊತ್ತು ಕಾಯಿಸಿ ಕೊನೆಗೆ ಬಿಫಾರಂ ಕೊಡಲಾಗಿತ್ತು. ಅಲ್ಲದೇ ಡಿಕೆ ಶಿವಕುಮಾರ್ ರಘುನಾಥ ನಾಯ್ಡುಗೆ ಬಿ ಫಾರಂ ವಿತರಿಸಿ ಫೋಟೋ ತೆಗೆಸಿಕೊಂಡಿದ್ದರು. ಬಳಿಕ ಕವರ್ ನಲ್ಲಿದ್ದ ಬಿ ಫಾರಂ ವಾಪಸ್ ಪಡೆದುಕೊಂಡು ಕಳುಹಿಸಿದ್ದಾರೆ ಎನ್ನುವ ಮಾಹಿತಿ ಇದೀಗ ಟಿವಿ9ಗೆ ಲಭ್ಯವಾಗಿದೆ.

ಅಲ್ಲದೇ ಏಪ್ರಿಲ್ 18 ರಂದು ರಾತ್ರಿ ಬಂದು ಬಿ ಫಾರಂ ಮತ್ತೆ ತೆಗೆದುಕೊಂಡು ಹೋಗುವಂತೆ ಸೂಚನೆ ನೀಡಿ ಕಳಹಿಸಿದ್ದರು ಎನ್ನಲಾಗಿದ್ದು. ಅದರಂತೆ ರಘುನಾಥ ನಾಯ್ಡು ಏಪ್ರಿಲ್ 19 ರಂದು ನಾಮ ಪತ್ರ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಆದ್ರೆ, ಸದ್ಯ ಬಿ ಫಾರಂ ಇನ್ನೂ ಕೈಗೆ ಸಿಗದಿದ್ದಕ್ಕೆ ಗೊಂದಲಕ್ಕೀಡಾಗಿದ್ದಾರೆ.

ಇನ್ನು ಕೊನೆಯ ಗಳಿಗೆಯಲ್ಲಿ ಅಭ್ಯರ್ಥಿ ಬದಲಾವಣೆಯ ಸಾಧ್ಯತೆಗಳು ಕೂಡಾ ಅಲ್ಲಗಳೆಯುವಂತಿಲ್ಲ. ಕನಕಪುರದಲ್ಲಿ ಡಿಕೆ ತಮಗೆ ಟಕ್ಕರ್ ಕೊಡಲು ಸಜ್ಜಾಗಿರುವ ಆರ್‌. ಅಶೋಕ್‌ ಅವರನ್ನು ಪದ್ಮನಾಭನಗರದಲ್ಲಿ ಕಟ್ಟಿಹಾಕಲು ಡಿಕೆ ಸಹೋಹರರು ಚಿಂತನೆ ನಡೆಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಸಂಸದ ಡಿಕೆ ಸುರೇಶ್ ಅವರನ್ನು ಅಖಾಡಕ್ಕೆ ಇಳಿಸುವ ಬಗ್ಗೆ ಚರ್ಚೆಗಳು ಕೂಡಾ ನಡೆಯುತ್ತಿದ್ದು, ಒಂದು ವೇಳೆ ಹೈಕಮಾಂಡ್ ಅಸ್ತು ಎಂದರೆ ಕೊನೆಯ ಕ್ಷಣದಲ್ಲಿ ಪದ್ಮನಾಭನಗರದಲ್ಲಿ ಅಭ್ಯರ್ಥಿ ಬದಲಾವಣೆಯಾಗುವುದು ಖಚಿತ.

ಈ ವರೆಗೆ ಕನಕಪುರದಲ್ಲಿ ಡಿಕೆ ಶಿವಕುಮಾರ್​ ಸ್ಪರ್ಧೆ ಮಾಡಿದರೂ ಕ್ಷೇತ್ರದ ಎಲ್ಲಾ ಜವಾಬ್ದಾರಿಯನ್ನು ಸಹೋದರ ಡಿಕೆ ಸುರೇಶ್ ನೋಡಿಕೊಂಡು ಬರುತ್ತಿದ್ದಾರೆ. ಈ ಕಾರಣಕ್ಕಾಗಿ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರಕ್ಕೆ ಡಿಕೆ ಶಿವಕುಮಾರ್ ಹೆಚ್ಚಾಗಿ ಹೋಗುತ್ತಿರಲಿಲ್ಲ. ಆದ್ರೆ, ಈ ಬಾರಿ ಬಿಜೆಪಿ ಪ್ರಬಲ ನಾಯಕ ಆರ್. ಅಶೋಕ್ ಅವರನ್ನು ಕನಕಪುರ ಅಖಾಡಕ್ಕಿಳಿಸಿದ್ದು, ಇದಕ್ಕೆ ತಿರುಗೇಟು ನೀಡಲು ಡಿಕೆ ಸಹೋದರರು ಪ್ರತಿತಂತ್ರ ರೂಪಿಸುತ್ತಿದ್ದಾರೆ.

ಇನ್ನಷ್ಟು ಕರ್ನಾಟಕ ವಿಧನಸಭಾ ಚುನಾವಣೆಯ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಕರ್ನಾಟಕ ರಾಜ್ಯ ರಾಜಕಾರಣದ ಕ್ಷಣ ಕ್ಷಣದ ಅಪ್ಡೇಟ್ಸ್​ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

Ramesh B Jawalagera

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More
Follow Us