Karnataka Politics: ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ: ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರ್ಪಡೆ ಹಿಂದಿದೆ ರಾಯರೆಡ್ಡಿ ಗೆಲುವಿನ ತಂತ್ರ..!

ಲಕ್ಷ್ಮಣ ಸವದಿ ಬಿಜೆಪಿ​ ಪಕ್ಷಕ್ಕೆ ಮತ್ತು ಎಂಎಲ್​ಸಿ ಸ್ಥಾನಕ್ಕೆ ರಾಜಿನಾಮೆ ನೀಡಲು ನಿರ್ಧರಿಸಿದ್ದಾರೆ. ಈ ಹಿನ್ನೆಲೆ ರಾಜ್ಯ ಕಾಂಗ್ರೆಸ್​ ನಾಯಕರು ಲಕ್ಷ್ಮಣ ಸವದಿ ಅವರಿಗೆ ಗಾಳ ಹಾಕಿ, ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಲಕ್ಷ್ಮಣ ಸವದಿ ಪಕ್ಷ ಸೇರ್ಪಡೆ ಹಿಂದೆ ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಕೈವಾಡವೂ ಇದೆ.

Karnataka Politics: ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ: ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರ್ಪಡೆ ಹಿಂದಿದೆ ರಾಯರೆಡ್ಡಿ ಗೆಲುವಿನ ತಂತ್ರ..!
ಬಸವರಾಜ ರಾಯರೆಡ್ಡಿ (ಎಡಚಿತ್ರ) ಲಕ್ಷ್ಮಣ ಸವದಿ (ಬಲಚಿತ್ರ)
Follow us
ವಿವೇಕ ಬಿರಾದಾರ
| Updated By: Ganapathi Sharma

Updated on:Apr 14, 2023 | 4:45 PM

ಕೊಪ್ಪಳ: ರಾಜ್ಯ ವಿಧಾನಸಭೆ ಚುನಾವಣೆ (Karnataka Assembly Election) ಸಂಬಂಧ ಭಾರತೀಯ ಜನತಾ ಪಾರ್ಟಿ (BJP) ಮೊದಲ ಪಟ್ಟಿಯಲ್ಲಿ 189 ಮತ್ತು ಎರಡನೇ ಪಟ್ಟಿಯಲ್ಲಿ 23 ಜನ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿತ್ತು. ಮೊದಲ ಪಟ್ಟಿಯಲ್ಲಿಯೇ ಅಥಣಿ (Athani) ವಿಧಾನಸಭಾ ಕ್ಷೇತ್ರದ ಟಿಕೆಟ್​ ಘೋಷಣೆಯಾಗಿದ್ದು ಹಾಲಿ ಶಾಸಕ ಮಹೇಶ್​ ಕುಮಟಳ್ಳಿಯವರಿಗೆ (Mahesh Kumatalli) ಒಲಿದಿದೆ. ಟಿಕೆಟ್​ ಕೈ ತಪ್ಪುವ ಸುಳಿವು ತಿಳಿದಿದ್ದ ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ (Laxman Savadi) ಅವರು ತನಗೆ ಟಿಕೆಟ್​ ನೀಡುವಂತೆ ಕೇಂದ್ರ ನಾಯಕರ ಮೇಲೆ ಒತ್ತಡ ಹೇರುತ್ತಿದ್ದರೂ, ಪ್ರಯೋಜನವಾಗಲಿಲ್ಲ. ಇದರಿಂದ ಅಸಮಾಧಾನಗೊಂಡು ಬಂಡಾಯವೆದ್ದ ಅವರು ಪಕ್ಷಕ್ಕೆ ಮತ್ತು ಎಂಎಲ್​ಸಿ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಈ ಹಿನ್ನೆಲೆ ರಾಜ್ಯ ಕಾಂಗ್ರೆಸ್ (Congress)​ ನಾಯಕರು ಲಕ್ಷ್ಮಣ ಸವದಿ ಅವರಿಗೆ ಗಾಳ ಹಾಕಿ, ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಲಕ್ಷ್ಮಣ ಸವದಿ ಪಕ್ಷ ಸೇರ್ಪಡೆ ಹಿಂದೆ ಮಾಜಿ ಸಚಿವ ಬಸವರಾಜ ರಾಯರೆಡ್ಡಿ (Basavaraj Rayareddy) ಕೈವಾಡವೂ ಇದೆ.

ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರ್ಪಡೆ ಹಿಂದಿದೆ ರಾಯರೆಡ್ಡಿ ಗೆಲುವಿನ ತಂತ್ರ

ಲಕ್ಷ್ಮಣ ಸವದಿ ಗಾಣಿಗ ಸಮುದಾಯದ ಪ್ರಬಲ ನಾಯಕರಾಗಿದ್ದಾರೆ. ಅಲ್ಲದೇ ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಅವರ ಸಂಬಂಧಿ ಕೂಡ ಆಗಿದ್ದಾರೆ. ಬಸವರಾಜ ರಾಯರೆಡ್ಡಿ ಬಿಜೆಪಿಯ ದೊಡ್ಡ ನಾಯಕನನ್ನು ಆಪರೇಷನ್ ಮಾಡೋದಲ್ಲದೇ, ತಮ್ಮ ಗೆಲುವನ್ನು ಸುಲಭ ಮಾಡಿಕೊಂಡರಾ ಎಂಬ ಪ್ರಶ್ನೆ ಉದ್ಭವವಾಗಿದೆ. ಲಕ್ಷ್ಮಣ ಸವದಿಯವರನ್ನು ಕಾಂಗ್ರೆಸ್​ಗೆ ಕೆರೆ ತರುವ ಹಿಂದೆ ಬಸವರಾಜ ರಾಯರೆಡ್ಡಿಯವರ ಗೆಲುವಿನ ತಂತ್ರವಿದೆ. ಕಾಂಗ್ರೆಸ್​ ಅಭ್ಯರ್ಥಿ ಬಸವರಾಜ ರಾಯರೆಡ್ಡಿ ಯಲಬುರ್ಗಾದಿಂದ ಸ್ಪರ್ಧಿಸುತ್ತಿದ್ದು, ಸದ್ಯ ಕ್ಷೇತ್ರದಲ್ಲಿ ಗಾಣಿಗ ಸಮೂದಾಯ 40 ಸಾವಿರ ಮತಗಳಿವೆ. ಹಿಗಾಗಿ ಲಕ್ಷ್ಮಣ ಸವದಿ ಅವರು ತಮ್ಮ ಪಕ್ಷಕ್ಕೆ ಬಂದ್ರೆ ಗಾಣಿಗ ಸಮುದಾಯ ಮತಗಳನ್ನು ಸೆಳೆಯಲು ಸುಲಭವಾಗುತ್ತದೆ. ಇದರಿಂದ ತಮ್ಮ ಗೆಲುವು ಸುಲಭ ಎಂದು ಬಸವರಾಜ ರಾಯರೆಡ್ಡಿ ಆಪರೇಷನ್ ಮಾಡಿಸಿದರು ಎನ್ನಲಾಗುತ್ತಿದೆ.

ಇದನ್ನೂ ಓದಿ: ವರುಣಾ ರಣತಂತ್ರ: ಬಿಎಸ್​ ಯಡಿಯೂರಪ್ಪ ಆಪ್ತ ಕಾಪು ಸಿದ್ದಲಿಂಗಸ್ವಾಮಿಯನ್ನ ಭೇಟಿಯಾದ ವಿ ಸೋಮಣ್ಣ

ಆಪರೇಷನ್​ ಆಗಿದ್ದು ಹೇಗೆ?

ಬಸವರಾಜ ರಾಯರೆಡ್ಡಿಯವರು ಮೊದಲು ವಿಪಕ್ಷ ನಾಯಕ ಸಿದ್ದರಾಮಯ್ಯ ಆಪ್ತ ಶಾಸಕ ರಾಘವೇಂದ್ರ ಹಿಟ್ನಾಳ್​ ಅವರಿಗೆ ಗಾಣಿಗ ಸಮುದಾಯ ಅತಿ ದೊಡ್ಡ ಮತ ಬುಟ್ಟಿ ಬಗ್ಗೆ ಮಾಹಿತಿ ನೀಡಿದ್ದಾರೆ. ಕಳೆದ ವಾರ ಸಿದ್ದರಾಮಯ್ಯನವರಿಗೆ ಮನವರಿಕೆ ಮಾಡಿಸುವಲ್ಲಿ ರಾಘವೇಂದ್ರ ಹಿಟ್ನಾಳ್​ ಅವರು ಯಶಸ್ವಿಯಾಗಿದ್ದಾರೆ. ಕೇವಲ ಯಲಬುರ್ಗಾ ಅಷ್ಟೆ ಅಲ್ಲದೇ ಕೊಪ್ಪಳ, ಕುಷ್ಟಗಿ, ಗಂಗಾವತಿ ಕ್ಷೇತ್ರದ ಮೇಲೂ ಲಕ್ಷ್ಮಣ ಸವದಿ ಅವರ ಪ್ರಭಾವ ಬೀರುವ ಸಾಧ್ಯತೆ ಇದೆ. ಮೂರು ಕ್ಷೇತ್ರಗಳಲ್ಲಿಯೂ ಗಾಣಿಗ ಸಮೂದಾಯ 15 ಸಾವಿರಕ್ಕೂ ಹೆಚ್ಚು ಮತಬ್ಯಾಂಕ್ ಇದೆ.

ಹೀಗಾಗಿಯೇ ಖುದ್ದು ಕೊಪ್ಪಳ ಕೈ ನಾಯಕರು ಉತ್ಸುಕತೆ ತೋರಿಸಿದರು ಎನ್ನಲಾಗುತ್ತಿದೆ. ಅಲ್ಲದೇ ಕೊಪ್ಪಳ ಜಿಲ್ಲೆಯಲ್ಲಿ ಲಕ್ಷ್ಮಣ ಸವದಿ‌ ಹಿಡಿತ ಹೊಂದಿದ್ದಾರೆ. ಕಳೆದ ಬಾರಿ ಸಚಿವ ಹಾಲಪ್ಪ ಆಚಾರ್ ಅವರ ಗೆಲುವಿನಲ್ಲಿ ಲಕ್ಷ್ಮಣ ಸವದಿಯವರು ಮಹತ್ತರವಾದ ಪಾತ್ರವಹಿಸಿದ್ದರು.

ಶಾಸಕ ರಮೇಶ್ ಜಾರಕಿಹೊಳಿ ಹಣಿಯಲು ಸವದಿ ಅಸ್ತ್ರ

ಶಾಸಕ ರಮೇಶ್​ ಜಾರಕಿಹೊಳಿ 2019 ರಲ್ಲಿ ಕಾಂಗ್ರೆಸ್​ ತೊರೆದು ಬಿಜೆಪಿ ಸೇರುವ ಮೂಲಕ ಬೆಳಗಾವಿಯಲ್ಲಿ ಕಾಂಗ್ರೆಸ್​​ಗೆ ಮಗ್ಗಲು ಮುಳ್ಳಾಗಿದ್ದಾರೆ. ಈಗಾಗಲೇ ರಮೇಶ್​ ಜಾರಕಿಹೊಳಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ​​ ವಿರುದ್ಧ ನಿಗಿ ನಿಗಿ ಕೆಂಡ ಕಾರುತ್ತಿದ್ದು, ಈ ಬಾರಿ ಶತಾಯಗತಾ ಕಾಂಗ್ರೆಸ್​ ಅನ್ನು ಅಧಿಕಾರದಿಂದ ದೂರವಿಡಲು ಟೊಂಕ್​ ಕಟ್ಟಿ ನಿಂತಿದ್ದಾರೆ.

ಇದಕ್ಕೆ ಪ್ರತಿಯಾಗಿ ಡಿಕೆ ಶಿವಕುಮಾರ್​ ಲಕ್ಷ್ಮಣ ಸವದಿ ಅಸ್ತ್ರ ಪ್ರಯೋಗಿಸಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಹೌದು ಲಕ್ಷ್ಮಣ ಸವದಿ ಬಿಜೆಪಿಗೆ ಗುಡ್​ ಬೈ ಹೇಳಿದ್ದು, ಕಾಂಗ್ರೆಸ್​ ಸೇರುವುದು ಬಹುತೇಕ ಖಚಿತವಾಗಿದೆ. ಇನ್ನು ಲಕ್ಷ್ಮಣ ಸವದಿ ಮತ್ತು ಸತೀಶ್​ ಜಾರಕಿಹೊಳಿ ಮಧ್ಯೆ ವೈಮನಸ್ಸು ಇದ್ದು, ಟಿಕೆಟ್​ ವಂಚಿತನಾಗಲು ಇವರು ಒಬ್ಬರು ಕಾರಣ ಎಂದು ಹೇಳಲಾಗುತ್ತಿದೆ. ಹೀಗಾಗಿ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಲು ಡಿಕೆ ಶಿವಕುಮಾರ್​ ಮುಂದಾಗಿದ್ದಾರೆ.

ಬೆಳಗಾವಿಯಲ್ಲಿ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಮತ್ತು ಬೆಳಗಾವಿ ಗ್ರಾಮಾಂತರ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​​ ಆಪ್ತರನ್ನು ಒಗ್ಗೂಡಿಸಿ ಮತದಾರರನ್ನು ಪಕ್ಷದತ್ತ ಸೆಳೆದುಕೊಳ್ಳುವುದು. ಸತೀಶ್​ ಜಾರಕಿಹೊಳಿ ವಿರೋಧಿ ಅಲೆ ಎಬ್ಬಿಸಿ ಬೆಳಗಾವಿ ರಾಜಕಾರಣದಿಂದ ಸತೀಶ್​ ಜಾರಕಿಹೊಳಿ ಹಿಂದೆ ಸರಿಯುವಂತೆ ಡಿಕೆ ಶಿವಕುಮಾರ್ ಪ್ಲಾನ್​ ಮಾಡಿದ್ದಾರೆ ಎನ್ನಲಾಗುತ್ತಿದೆ​.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:18 pm, Fri, 14 April 23

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ