
Gokak Assembly Election Results 2023: ಬೆಳಗಾವಿ ಜಿಲ್ಲೆಯ ಗೋಕಾಕ (Gokak Constituency) ವಿಧಾನಸಭಾ ಕ್ಷೇತ್ರದಲ್ಲಿ ರಮೇಶ್ ಜಾರಕಿಹೊಳಿ ಗೆದ್ದು ಬೀಗಿದ್ದಾರೆ. ಈ ಬಾರಿ ಆಮ್ ಆದ್ಮಿ ಪಕ್ಷದ (ಎಎಪಿ) ಅಭ್ಯರ್ಥಿ ಜಾನ್ಸ್ ಕುಮಾರ್ ಮಾರುತಿ ಕರೆಪ್ಪಗೋಳ ಮತ್ತು ಕಾಂಗ್ರೆಸ್‌ನ ಮಹಾಂತೇಶ ಕಡಾಡಿ ಕಣದಲ್ಲಿದ್ದಾರೆ. ಗೋಕಾಕ ವಿಧಾನಸಭಾ ಕ್ಷೇತ್ರದಲ್ಲಿ 2,38,221 ಮತದಾರರಿದ್ದು, ಈ ಪೈಕಿ 1,16,816 ಪುರುಷ, 1,20,085 ಮಹಿಳಾ ಮತದಾರರಿದ್ದಾರೆ. ಕರ್ನಾಟಕದ ಗೋಕಾಕ ವಿಧಾನಸಭಾ ಕ್ಷೇತ್ರವು ಬೆಳಗಾವಿ ಜಿಲ್ಲೆಯ ವ್ಯಾಪ್ತಿಗೆ ಬರುತ್ತದೆ. ಹಾಲಿ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಅವರು ಆಮ್ ಆದ್ಮಿ ಪಕ್ಷದ (ಎಎಪಿ) ಅಭ್ಯರ್ಥಿ ಜಾನ್ಸ್ ಕುಮಾರ್ ಮಾರುತಿ ಕರೆಪ್ಪಗೋಳ ಮತ್ತು ಕಾಂಗ್ರೆಸ್‌ನ ಮಹಾಂತೇಶ ಕಡಾಡಿ ವಿರುದ್ಧ ಕಣಕ್ಕಿಳಿದಿದ್ದಾರೆ.ಗೋಕಾಕ ವಿಧಾನಸಭಾ ಕ್ಷೇತ್ರದಲ್ಲಿ 2,38,221 ಮತದಾರರಿದ್ದು, ಈ ಪೈಕಿ 1,16,816 ಪುರುಷ, 1,20,085 ಮಹಿಳಾ ಮತದಾರರಿದ್ದಾರೆ.
2019 ರ ಕರ್ನಾಟಕ ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿಯ ಜಾರಕಿಹೊಳಿ ರಮೇಶ್ ಲಕ್ಷ್ಮಣರಾವ್ ಅವರು ಕಾಂಗ್ರೆಸ್‌ನ ಲಖನ್ ಲಕ್ಷ್ಮಣರಾವ್ ಜಾರಕಿಹೊಳಿ ಮತ್ತು ಜನತಾ ದಳ (ಜಾತ್ಯತೀತ) ನಾಯಕ ಅಶೋಕ್ ನಿಂಗಯ್ಯಸ್ವಾಮಿ ಪೂಜಾರಿಯವರನ್ನು ಸೋಲಿಸಿದರು. 2018 ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕ ಜಾರಕಿಹೊಳಿ ರಮೇಶ್ ಲಕ್ಷ್ಮಣರಾವ್ ಅವರು ಬಿಜೆಪಿ ಅಭ್ಯರ್ಥಿ ಅಶೋಕ್ ನಿಂಗಯ್ಯಸ್ವಾಮಿ ಪೂಜಾರಿ ಮತ್ತು ಜೆಡಿಎಸ್‌ನ ಕರೆಪ್ಪ ಲಕ್ಕಪ್ಪ ತಳವಾರ ವಿರುದ್ಧ ಗೆದ್ದಿದ್ದರು. 2013ರ ಹಣಾಹಣಿಯಲ್ಲಿ ಕಾಂಗ್ರೆಸ್‌ನ ಹುರಿಯಾಳಾಗಿದ್ದ ರಮೇಶ್ ಜಾರಕಿಹೊಳಿ ಜೆಡಿಎಸ್‌ನ ಅಶೋಕ್ ನಿಂಗಯ್ಯಸ್ವಾಮಿ ಪೂಜಾರಿ ಅವರನ್ನು ಸೋಲಿಸಿದ್ದರು.
Published On - 2:08 am, Sat, 13 May 23