ಮೈತ್ರಿ ಸರ್ಕಾರ ಪತನವನ್ನು ಸಿದ್ದರಾಮಯ್ಯ ಹಣೆಗೆ ಕಟ್ಟಿದ ಸುಧಾಕರ್ಗೆ ಕುಕ್ಕಿದ ಹಳ್ಳಿಹಕ್ಕಿ
ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರ ಬೀಳಲು ಸಿದ್ದರಾಮಯ್ಯ ಕಾರಣ ಎಂಬ ಬಿಜೆಪಿ ನಾಯಕ ಡಾ. ಕೆ ಸುಧಾಕರ್ ಹೇಳಿಕೆಗೆ ಹಳ್ಳಿಹಕ್ಕಿ ಹೆಚ್.ವಿಶ್ವನಾಥ್ ತಿರುಗೇಟು ನೀಡಿದ್ದಾರೆ.
ಮೈಸೂರು: ‘ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಪತನಕ್ಕೆ ಸಿದ್ದರಾಮಯ್ಯ ಪ್ರೇರಣೆ’( Coalition Government Collapse) ಎಂದು ಮಾಜಿ ಸಚಿವ ಸುಧಾಕರ್(Dr k Sudhakar) ಮಾಡಿದ್ದ ಟ್ವೀಟ್ಗೆ ಹಳ್ಳಿಹಕ್ಕಿ ಹೆಚ್.ವಿಶ್ವನಾಥ್(H vishwanath) ತಿರುಗೇಟು ನೀಡಿದ್ದಾರೆ. ಸುಧಾಕರ್ ಆರೋಪ ಸತ್ಯಕ್ಕೆ ದೂರವಾದದ್ದು. ಚುನಾವಣೆ ಸಂದರ್ಭದಲ್ಲಿ ಹೇಳಿದ್ದರೆ ಗೌರವ ಇರುತ್ತಿತ್ತು. ಸೋತು ಸುಣ್ಣ ಆದ ಮೇಲೆ ಈ ರೀತಿ ಹೇಳುತ್ತಿರುವುದು ನಗೆ ಪಾಟಲು. ಮಾಜಿ ಸಚಿವ ಸುಧಾಕರ್ ಜೊತೆ ಬಿಜೆಪಿ ಸರ್ವನಾಶದತ್ತ ಬಂದಿದೆ. ಡಾ.ಕೆ.ಸುಧಾಕರ್ರನ್ನು ದುಡ್ಡು ಇಲ್ಲದ ಯುವಕ ಸೋಲಿಸಿದ್ದಾನೆ. ಸಿದ್ದರಾಮಯ್ಯ ಪ್ರೇರಣೆ ಇದ್ದಿದ್ದರೆ ಅವತ್ತೇ ಸುಧಾಕರ್ ಹೇಳಬೇಕಿತ್ತು ಎಂದು ಮೈಸೂರಿನಲ್ಲಿ ಸುಧಾಕರ್ಗೆ ಎಂಎಲ್ಸಿ ಹೆಚ್.ವಿಶ್ವನಾಥ್ ತಿರುಗೇಟು ನೀಡಿದ್ದಾರೆ.
ಸೋತು ಸುಣ್ಣ ಆದ ಮೇಲೆ ಈ ರೀತಿ ಹೇಳುತ್ತಿರುವುದು ನಗು ತರಿಸುತ್ತಿದೆ. ಚುನಾವಣೆ ಸಂದರ್ಭದಲ್ಲಿ ಹೇಳಿದ್ದರೆ ಗೌರವ ಇರುತಿತ್ತು. ಸುಧಾಕರ್ ಜೊತೆ ಬಿಜೆಪಿ ಪಕ್ಷವೇ ಸರ್ವನಾಶದತ್ತ ಬಂದಿದೆ. ಈಗ ಏನೋ ಸತ್ಯ ಹೇಳುತ್ತಿದ್ದೇನೆ ಅಂತಾ ಪೋಸು ಕೊಡ್ತಿದ್ದಾರೆ. ನಿಮ್ಮನ್ನು ಯುವಕ ದುಡ್ಡು ಇಲ್ಲದವನು ಸೋಲಿಸಿದ್ದಾನೆ. ರಾಜಕಾರಣಕ್ಕೆ ಹೊಸಬ ಬರೀ ಮಾತಿನಲ್ಲೇ ಸೋಲಿಸಿದ್ದಾನೆ. ಸುಧಾಕರ್ ಆರೋಪ ಸತ್ಯಕ್ಕೆ ದೂರವಾದ ವಿಚಾರ. ನಾನೇ 17 ಜನರ ನಾಯಕನಾಗಿದ್ದೇ. ಸಿದ್ದರಾಮಯ್ಯ ಪ್ರೇರಣೆ ಇದ್ದಿದ್ದರೆ ಅವತ್ತೇ ಹೇಳಬೇಕಿತ್ತು ಎಂದು ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ಮೈತ್ರಿ ಸರ್ಕಾರ ಬೀಳಲು ಸಿದ್ದರಾಮಯ್ಯ ಕಾರಣವೆಂದು ಪ್ರಮಾಣ ಮಾಡಿ ಹೇಳುವಿರೇ; ಸುಧಾಕರ್ಗೆ ಎಂಟಿಬಿ ನಾಗರಾಜ್ ಪ್ರಶ್ನೆ
ಸುಧಾಕರ್ ಆರೋಪವೇನು?
JDS-ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ನಮ್ಮ ಸಮಸ್ಯೆ ಬಗ್ಗೆ, ನಮಗೆ ಆಗುತ್ತಿದ್ದ ಅನ್ಯಾಯಗಳ ಬಗ್ಗೆ ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದ ಸಿದ್ದರಾಮಯ್ಯ ಬಳಿ ಪ್ರಸ್ತಾಪ ಮಾಡುತ್ತಿದ್ದೆವು. ಸಿದ್ದರಾಮಯ್ಯ ಆಗ ಈ ಸರ್ಕಾರದಲ್ಲಿ ನನ್ನ ಮಾತು ನಡೆಯುತ್ತಿಲ್ಲ. ನನ್ನ ಕ್ಷೇತ್ರ, ಜಿಲ್ಲೆಯ ಕೆಲಸಗಳೇ ಆಗುತ್ತಿಲ್ಲ ಎಂದು ಹೇಳುತ್ತಿದ್ದರು. 2019ರ ಲೋಕಸಭಾ ಚುನಾವಣೆವರೆಗೂ ಸಹಿಸಿಕೊಳ್ಳಿ. ಲೋಕಸಭಾ ಚುನಾವಣೆ ಮುಗಿದ ಬಳಿಕ ಮೈತ್ರಿ ಸರ್ಕಾರ ಇರಲ್ಲ. ಹೆಚ್ಡಿ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಇರಲು ಬಿಡಲ್ಲ ಎಂದು ಹೇಳ್ತಿದ್ದರು. ಸಿದ್ದರಾಮಯ್ಯ ಶಾಸಕರಿಗೆ ಸಮಾಧಾನ ಹೇಳಿ ಕಳುಹಿಸುತ್ತಿದ್ದರು. ಕಾರ್ಯಕರ್ತರು, ಮುಖಂಡರನ್ನು ಉಳಿಸಿಕೊಳ್ಳಲು ರಿಸ್ಕ್ ತೆಗೆದುಕೊಂಡ್ವಿ. ರಾಜೀನಾಮೆ ನೀಡಿ ಮತ್ತೆ ಜನರಿಂದ ಆರಿಸಿ ಬಂದು ಮಂತ್ರಿಗಳಾದೆವು. ನಮ್ಮ ಈ ನಡೆಯಲ್ಲಿ ಸಿದ್ದರಾಮಯ್ಯ ಪ್ರೇರಣೆ ಇದೆ. ಇದನ್ನು ಪರೋಕ್ಷ ಅಥವಾ ಅಪರೋಕ್ಷ ಪಾತ್ರ ಇಲ್ಲ ಎನ್ನಲು ಸಾಧ್ಯವೇ? ಎಂದು ಟ್ವೀಟ್ ಮೂಲಕ ಸಿದ್ದರಾಮಯ್ಯ ವಿರುದ್ಧ ಡಾ.ಸುಧಾಕರ್ ಆರೋಪ ಮಾಡಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ